ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ
ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!
This comment has been removed by the author.
ReplyDeleteಸರ್....
ReplyDeleteಹೇಳಬೆಕಾಗಿದ್ದನ್ನು ತುಂಬಾ ಸೊಗಸಾಗಿ ಹೇಳಿದ್ದೀರಿ.....
ಮುಳ್ಳುಗಳ ತುಲನೆ ಚನ್ನಾಗಿದೆ.. ಹೋಲಿಕೆ...
ಗಂಟೆಯ ಮುಳ್ಳು !
ಧಡಿಯ !ನಿಧಾನಿ
ಮನೆಯ ಪ್ರಧಾನಿಯ ಸಾಲುಗಳು ಖುಷಿ ಕೊಡ್ತು...
ತುಂಬಾ ಇಷ್ಟಪಟ್ಟೆ......
ಮೊದಲು ತಡವಾಗಿ ಪ್ರತಿಕ್ರಿಯೆ ಬರೆಯುತ್ತಿರುವುದಕ್ಕಾಗು ಕ್ಷಮೆ ಇರಲಿ. ಇಲ್ಲಿ ತುಂಬಾ net ಸಮಸ್ಯೆ ಇತ್ತು.
ReplyDeleteಹೋಲಿಕೆ ಸಮರ್ಥವಾಗಿ ಮೂಡಿ ಬಂದಿದೆ ಸಾರ್, ನಿಮ್ಮ ಮಾತಿನಂತೆ ಸಂಸಾರ - ನಿಮಿಷಕ್ಕೊಂದು ರೀತಿ! ಹೌದು ನಿಜವಾದ ಮಾತು.
ಲಘು ಬರಹದಲ್ಲಿ ಹೇಗೋ - ಕಾವ್ಯದಲ್ಲೂ ನಿಮ್ಮ ಛಾಪು ಅನನ್ಯ.
ಗಡಿಯಾರ ನಮ್ಮ ಗಾಡಿಯನ್ನು ವಿಸ್ತರಿಸುತ್ತಾ, ನವೀಕರಣಗೊಳಿಸುತ್ತಾ ಹೋಗುವ ಸುಂದರ ಸಾಧನ. ಅದರ ಬಗ್ಗೆ ಬರೆದಿರುವ ಸಾಲುಗಳು ಸೂಪರ್
ReplyDeleteಗಡಿಯಾರದೊಳಗಿನ ಮುಳ್ಳು ತಿರುಗುವಂತೆ ದಿನ-ಜೀವನ ಚೆನ್ನಾಗಿದೆ ಸರ್ ಕವನ
ReplyDelete