ನಾನು ಅಂದ್ರೆ ನೋವಿಗೆ
ಅದೇನೋ ನಲಿವು !!!!
ನನ್ನನ್ ಕಂಡ್ರೆ ಅದಕೆ
ಏನೋ ವಿಶೇಷ ಒಅವು !!!
ರಾತ್ರಿಯಲ್ಲಿ ಮಂಡಿಯಲ್ಲಿ
ಬಂದು ಮಲಗುತ್ತೇ !!!
ಬೆಳಗಾಗುತ್ಲೇ ಬೆನ್ನಲಿ ಎದ್ದು
ಹಲೋ ಎನ್ನುತ್ತೆ !!!
ಹಗಲಲ್ಲೆಲ್ಲಾ ಸಂದೀ ಸುತ್ತಿ
ಸಂಜೆ ಕತ್ತಲ್ಲಿ ಕೂರುತ್ತೆ !!!
ಕತ್ನಲ್ ಕೂತು ,ಸಲಿಗೆ ಕೊಟ್ರೆ
ತಲೇಗು ಏರುತ್ತೇ !!!
ಕಷ್ಟ ಅಂತ ಜೀವದ್ ಗೆಳೆಯನ್
ದೂರೋಕಾಗುತ್ತಾ ?
ನೀವೇ ಹೇಳಿ ನೋವಿನ ಮನಸನ್
ನೋಯ್ಸೋಕಾಗುತ್ತಾ?
ಬಾರೋ ನೋವೇ, ಮುಳ್ಳಿನ ಹೂವೇ!!!
ಕೂಡಿ ಬಾಳೋಣ .
ಕೈ ಕೈ ಹಿಡಿದು,ಕುಣಿಯುತ ನಲಿದು
ಎಲ್ಲರ ನಗಿಸೋಣ !!!
ನಗಿಸುತ ,ನಮ್ಮನೇಮರೆಯೋಣ !!!!
(2000 ನೇ ಇಸವಿಯ ಹಳೆಯ ಡೈರಿ ಒಂದರಲ್ಲಿ ಗೀಚಿದ ಸಾಲುಗಳಿವು.ಆಗ ತಾನೇ ಹೈದರಾಬಾದಿನಲ್ಲಿ ಡಿಸ್ಕ್ ಪ್ರೋಲ್ಯಾಪ್ಸ್ ಆಗಿ ಬೆನ್ನಿನ ಆಪರೇಶನ್ ಮಾಡಿಸಿಕೊಂಡಿದ್ದೆ.ಬೆನ್ನಿನ ನೋವಿನ ಜೊತೆಗೆ ಆಗಾಗ ಕುತ್ತಿಗೆ ನೋವು,ಮಂಡಿ ನೋವು ಮತ್ತು ಮೈಗ್ರೈನ್ ತಲೆ ನೋವೂ ಕಾಡುತ್ತಿತ್ತು. ರೋಗಿಗಳ ನೋವನ್ನು ನಿವಾರಿಸುವ ಹೊಡೆದಾಟ ದೊಂದಿಗೆ ನನ್ನ ನೋವುಗಳ ಜೊತೆಯೂ ಹೋರಾಡ ಬೇಕಿತ್ತು!!! ಆಗ ನೋವಿನೊಂದಿಗೆ ಯುದ್ಧ ವಿರಾಮ ಘೋಷಿಸಿ ,ರಾಜೀ ಸೂತ್ರ ಮಾಡಿಕೊಂಡೆ.ಆಗ ಬರೆದ ಪದ್ಯವಿದು .)

ನೋವು ಉಣ್ಣುತಲೆ, ನಕ್ಕು ನಗಿಸುವ ನಿಮ್ಮ ಮನೋಧರ್ಮಕೆ ನೂರು ನಮನಗಳು.
ReplyDeleteಬಾರೋ ನೋವೇ, ಮುಳ್ಳಿನ ಹೂವೇ!!!
ReplyDeleteಕೂಡಿ ಬಾಳೋಣ . - ನಾವು ಹೀಗೆ ಹೇಳಬೇಕಿದೆ ಹಹಹ
ಚೆನ್ನಾಗಿದೆ ನೋವಿನ ಒಲವು
ಅಂದಿನ ನಿಮ್ಮ ನೋವಿನ ಅಗಾಧತೆ ನಮಗೆ ಕಲ್ಪನೆಗೂ ಸಿಗಲಾರದು. ಅಂತ ನೋವನ್ನೂ ವಿಷಕಂಠನಂತೆ ನುಂಗಿಕೊಂಡು ಇಂತಹ ಕವನವನ್ನು ಇಂಪಾಗಿ ಬರೆದುಕೊಟ್ಟ ನಿಮಗೆ ಶರಣು.
ReplyDeleteಅದ್ಭುತ ಸರ್....
ReplyDeleteಕಲ್ಪನೆ ಇದೆಯಲ್ಲಾ.....
ಅದಕ್ಕೇಳ್ರೀ ... ಯಾರೀಗ್ ಬರ್ಬೇಕು ಇದೆಲ್ಲಾ...
ತುಂಬಾ ಚನ್ನಾಗಿದೆ.....
ಆಫೀಸಿನವರೆಲ್ಲಾ ಸೇರಿ ನಕ್ಕಾಯ್ತು ಈಗ ತಾನೇ....
ನೋವಿನ ಮನಸ್ಸಿಗೂ ನೋವಾಗುತ್ತೆ ಸೂಪರ್ ಪದಗಳು ಡಾಕ್ಟರ್.. ಪ್ರತಿ ಜೀವಿಯಲ್ಲೂ ನಗು ಉಕ್ಕಿಸಬಲ್ಲ ಜೀವಿಯೇ ನೋವಲ್ಲು ನಕ್ಕಾಗ ಅದಕ್ಕಿಂತ ಸಾರ್ಥಕ ಬಾಳು ಇನ್ನೊಂದಿಲ್ಲ.. ನಿಮ್ಮ ಚೈತನ್ಯಕ್ಕೆ ನನ್ನ ನಮಸ್ಕಾರಗಳು.. ಚಂದದ ಕವನ..
ReplyDeleteನೋವಿರಲಿ ನಲಿವಿರಲಿ ಸಹಬಾಳ್ವೆ ಜೀವನದಿ
ReplyDeleteಅದಕಲ್ಲವೆ ನಂಟು ಬೇವ ಜೊತೆ ಬೆಲ್ಲವೆಂದು