ಕೃಷ್ಣಾ ssss-----------!
ಇಗೋ ನನ್ನೆಲ್ಲಾ ಬುದ್ಧಿ ಶಕ್ತಿ ,
ಮಂತ್ರ, ತಂತ್ರ ,ಯುಕ್ತಿ !
ಎಲ್ಲಾ ನಿನಗೇ ಸಮರ್ಪಣೆ!
ನಿನ್ನಲ್ಲಿ ನನ್ನದಿಷ್ಟೇ ಪ್ರಾರ್ಥನೆ !
ಪಾರ್ಥನಿಗೆ ಸಾರಥಿಯಾದಂತೆ,
ನನ್ನ ಮನೋರಥದ ತೇಜಿಯ
ಇಗೋ ---,ನೀನೇ ಹಿಡಿ!
ಮನದ ಉದ್ಯಾನದಲಿ ಸದಾ
ಆನಂದದ ಕೊಳಲನೂದುತಿರು!
ದುರಾಚಾರದ ,ದುರಾಲೋಚನೆಗಳ
ಕಾಳಿಂಗ, ಹೆಡೆ ಎತ್ತಿದರೆ ,
ಮರ್ದಿಸಿ ,ನಾಟ್ಯವಾಡು!
ಕರ್ತವ್ಯ ನೆನಪಿಸುವ
ಗೀತಾಚಾರ್ಯನಾಗು !
ಕೃಷ್ಣಾ ssss-------,ನಿನ್ನಲ್ಲಿ ,
ನನ್ನದಿಷ್ಟೇ ಪ್ರಾರ್ಥನೆ!
ಕತ್ತಲೆಯಿಂದ ಬೆಳಕಿನೆಡೆಗೆ ,
ನಡೆಸೆನ್ನನು ದೇವನೆ!
ಚನ್ನಾಗಿದೆ ಕವನ (ಪ್ರಾರ್ಥನೆ) ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು :)
ReplyDeleteಚನ್ನಾಗಿದೆ , good one
ReplyDeleteದೊಡ್ಡ ಮನಿ ಮಂಜು ಅವರಿಗೆ ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.
ReplyDeleteಪರಾಂಜಪೆ ಸರ್;ಧನ್ಯವಾದಗಳು.
ReplyDeleteಪ್ರಾರ್ಥನೆ ಚೆನ್ನಾಗಿದೆ.
ReplyDeleteಮನಮುಕ್ತಾ ಮೇಡಂ;ಧನ್ಯವಾದಗಳು.
ReplyDeleteಚೆನ್ನಾಗಿದೆ ಸಾರ್.
ReplyDeleteಹೇ ಕೃಷ್ಣಾ ಕಾರ್ಗಲ್ಲಿನಲ್ಲಿ ಕುಳಿತು ಊದಿದ್ದೇ ಕೊಳಲಪ್ಪಾ ! ಬಹಳ ಆಕರ್ಷಣೆ ನಮ್ಮ ಆ ಕೃಷ್ಣನದು ಮತ್ತು ಈ ಕೃಷ್ಣನದು, ನಿನ್ನ ನೋಡಿ ಧನ್ಯನಾದೇನೋ ಹೇ ಪಾಂಡುರಂಗ ನಿಮಗೆ ಧನ್ಯವಾದ ಹೇಳಿದೆ ನನ್ನಂತರಂಗ
ReplyDeleteಗುಬ್ಬಚ್ಚಿ ಸತೀಶ್;ಧನ್ಯವಾದಗಳು.
ReplyDeleteಭಟ್ಟರೇ;ನಮ್ಮೆಲ್ಲಾ ಬ್ಲಾಗಿಗರ ಸ್ನೇಹ ಮತ್ತಷ್ಟು ವೃದ್ಧಿಯಾಗಲಿ,ಎಲ್ಲರ ಅಭಿವೃದ್ಧಿಯಾಗಲಿ ಎಂದು ಆ ಕೃಷ್ಣನಲ್ಲಿ ನನ್ನ ಪ್ರಾರ್ಥನೆ.ಧನ್ಯವಾದಗಳು.ನಮಸ್ಕಾರ.
ReplyDeleteMurthy Sir,
ReplyDeleteSundara kavana,ista aitu...
Janmaastamiya shubhashayagalu sir....
ಅಶೋಕ್;ಧನ್ಯವಾದಗಳು.ನಿಮಗೂ ಜನ್ಮಾಷ್ಟಮಿಯ ಶುಭಾಶಯಗಳು.
ReplyDeleteಚೆಂದದ ಕವನ. ಕತ್ತಲೆಯಿಂದ ಬೆಳಕಿನೆಡೆ ನಮ್ಮನ್ನೂ ಒಯ್ಯಿ ಅನ್ನುವ ಸಂದೇಶ ತೀರಾ ಆಪ್ತವಾಗಿದೆ.
ReplyDeleteಚೆನ್ನಾಗಿದೆ ಸಾರ್. ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು...
ReplyDeleteಸೀತಾರಾಂ;ಸರ್ ಧನ್ಯವಾದಗಳು.
ReplyDeleteಪ್ರಗತಿ ಹೆಗಡೆ ಮೇಡಂ;ನಿಮಗೂ ಮತ್ತು ಮನೆಯವರಿಗೂ ಹಬ್ಬದ ಶುಭಾಶಯಗಳು.
ReplyDeleteನಮಸ್ಕಾರ ವಸಂತ್ .ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು.
ReplyDeleteಆ ಕೃಷ್ಣ ಈ ಕವನ ಓದುವಂತಾಗಿದ್ದರೆ-ಛೆ
ReplyDeleteಅದರ ಕತೆಯೇ ಬೇರಿತ್ತು ಬಿಡಿ
ಚನ್ನಾಗಿದೆ ಕೊಳಲಿನ
ನುಡಿ
ಮುರ್ತಿ ಸರ್,
ReplyDelete"ಕೊಳಲು" ಬ್ಲೊಗ್ ಒಡೆಯನಿಂದ " ಕೊಳಲ ಒಡೆಯನಿಗೆ ಬರೆದ ಪ್ರಾರ್ಥನೆ ತುಂಬಾ ಚೆನ್ನಾಗಿದೆ........ ಈ ಪ್ರಾರ್ಥನೆ ಎಲ್ಲರ ಪರವಾಗಿ ಇರಲಿ ಸರ್.....
ಶರ್ಮ ತಲವಾಟರಿಗೆ ನಮಸ್ಕಾರ .ನಿಮ್ಮ ಕಾಮೆಂಟ್ ನೋಡಿ ತುಂಬಾ ಖುಷಿಯಾಯಿತು.ಧನ್ಯವಾದಗಳು.
ReplyDeleteದಿನಕರ್;ಈ ಪ್ರಾರ್ಥನೆ ಎಲ್ಲರ ಪರವಾಗಿಯೇ.ಧನ್ಯವಾದಗಳು.
ReplyDeleteಪ್ರಾರ್ಥನೆಯ ಕರೆ ಆ ದೇವನಿಗೆ ತಲುಪುವಂತಿದೆ..ಚೆನ್ನಾಗಿದೆ.
ReplyDeleteನಾರಾಯಣ್ ಭಟ್ ;ಪ್ರತ್ಕ್ರಿಯೆಗೆ ಧನ್ಯವಾದಗಳು.ನಾರಾಯಣನ ಮೆಚ್ಚಿಗೆ ಇದೆ ಎಂದೆರೆ ಸಾರ್ಥಕವಾದಂತೆ.ನಮಸ್ಕಾರ.
ReplyDeleteಕೊಳಲಿನ ನಾದದಂತೆ ಕೃಷ್ಣನ ಈ ಪ್ರಾರ್ಥನೆ , ಮಧುರವಾಗಿದೆ.
ReplyDeleteಡಾಕ್ಟ್ರೆ,
ReplyDeleteಕೃಷ್ಣನ ಕೊಳಲಿನ ನಾದದಲ್ಲಿ ಹೊರ ಹೊಮ್ಮಿದ ಕವನ ತುಂಬಾ ಚೆನ್ನಾಗಿದೆ...ನಿಮಗೆ ಜನ್ಮಾಷ್ಟಮಿಯ ಶುಭಾಶಯಗಳು.
ಬಾಲೂ ಸರ್ ;ಪ್ರಾರ್ಥನೆಯನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಶಿವೂ ಅವರೆ;ನಮಸ್ಕಾರ.ನಿಮಗೂ ಜನ್ಮಾಷ್ಟಮಿಯ ಶುಭಾಶಯಗಳು.ಆ ಭಗವಂತನು ನಿಮ್ಮೆಲ್ಲಾ ಆಶಯಗಳನ್ನು ಪೂರ್ಣಗೊಳಿಸಲಿ.ಧನ್ಯವಾದಗಳು.
ReplyDeletechenaagide sir.. a krishna nimma yella asayagalellavanu kalpisali.. ಜನ್ಮಾಷ್ಟಮಿಯ ಶುಭಾಶಯಗಳು :)
ReplyDeleteಪ್ರವೀಣ್;ನಿಮ್ಮೆಲ್ಲರ ಅಭಿಲಾಷೆಗಳು ಪೂರ್ಣಗೊಳ್ಳಲಿ ಎಂದು ಭಗವಂತನಲ್ಲಿ ನನ್ನ ಪ್ರಾರ್ಥನೆ.ಧನ್ಯವಾದಗಳು.
ReplyDeleteಕವನ ಚೆನ್ನಾಗಿದೆ.
ReplyDeleteಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಶಶಿ ಮೇಡಂ;ಬಜ್ನಲ್ಲಿ ನಿಮ್ಮ ಗಾದೆಗಳು ತುಂಬಾ ಚೆನ್ನಾಗಿರುತ್ತವೆ.ಧನ್ಯವಾದಗಳು.
ReplyDeleteVery nice.
ReplyDeleteI also want to take part in your prayer.
Very nice
bhshe;thank you.
ReplyDelete