Monday, September 20, 2010

"ಮರಳಿನ ಆಟ"

ಒಂದು ಸುಂದರ ಸಂಜೆ.ಮನೆಯ ಬಾಲ್ಕನಿಯಲ್ಲಿ ನಿಂತಿದ್ದೆ.ರಸ್ತೆಯ ಪಕ್ಕ ಹಾಕಿದ್ದ ಮರಳಿನ ರಾಶಿಯಲ್ಲಿ ಕೆಲ ಮಕ್ಕಳು ಖುಷಿಯಿಂದ ಆಟವಾಡುತ್ತಿದ್ದರು.ಕೈಯಮೇಲೆ ,ಕಾಲುಗಳ ಮೇಲೆ ಮರಳು  ಗುಪ್ಪೆಗಳನ್ನು ಕಟ್ಟಿ ,ಕೈಗಳಿಂದ ತಟ್ಟಿ ತಟ್ಟಿ ,ಮನೆ ,ಗುಡಿ ಗೋಪುರ ,ಕೋಟೆ ಕೊತ್ತಲಗಳನ್ನು ಕಟ್ಟಿದರು!ಎಲ್ಲಿಂದಲೋ ಬಣ್ಣ ಬಣ್ಣದ ಹೂವುಗಳನ್ನು ತಂದು ಅಲಂಕಾರ ಮಾಡಿದರು.ಕೈ ,ಕೈ ಹಿಡಿದು ಅವುಗಳ ಸುತ್ತ ಕುಣಿದಾಡಿದರು!ಕತ್ತಲಾಯಿತು.ಮನೆಗೆ ಮರಳುವ ಸಮಯ ಬಂತು.ಯಾವುದೇ ಅಳುಕಿಲ್ಲದೆ ,ಕಟ್ಟಿದಷ್ಟೇ ಸಂಭ್ರಮದಿಂದ ಎಲ್ಲವನ್ನೂ ಕೆಡಿಸಿ ಸಂತೋಷದಿಂದ ಮನೆಗೆ ಓಡಿದರು.ನಮ್ಮ ಬದುಕೂ ಹೀಗೇ ಅಲ್ಲವೇ?ಕರೆ ಬಂದಾಗ ,ನಾವು ಕಟ್ಟಿಕೊಂಡ ಆಸ್ತಿ ಪಾಸ್ತಿ,ಮನೆ ಮಠ,ಹಣ ವಸ್ತು ,ಒಡವೆ ,ಸಂಬಂಧಗಳು ಎಲ್ಲವನ್ನೂ ಬಿಟ್ಟು ಹೋಗಬೇಕಲ್ಲವೇ?ಮಕ್ಕಳ ಮರಳು ಆಟದಲ್ಲಿ ನಮಗೊಂದು ಪಾಠವಿದೆ ಅನಿಸುವುದಿಲ್ಲವೇ?ಅವರ ಹಾಗೇ ಬದುಕಿನ ಆಟವನ್ನು ಸಂತೋಷದಿಂದ ಆಡಿ,ಯಾವುದಕ್ಕೂ ಅಂಟಿಕೊಳ್ಳದೆ ,ನಿಶ್ಚಿಂತೆಯಿಂದ ಎಲ್ಲವನ್ನೂ ಬಿಟ್ಟು ಹೋಗಲು ಸಾಧ್ಯವಾಗುವಂತಿದ್ದರೆ ! ಬದುಕಿನ ಸಂತೋಷ, ಸಂತೋಷವಾಗಿ ಬದುಕುವುದರಲ್ಲಿಯೇ ಇದೆಯಲ್ಲವೇ!ಎನಿಸಿ ,ಒಳಗೆ ಹೋಗಿ ಮನೆಯ ದೀಪ ಬೆಳಗಿಸಿದೆ.

56 comments:

  1. ಡಾಕ್ಟ್ರೇ,

    ಇಂದು ಮುಂಜಾನೆ ಬದುಕಿಗೆ ಎಂಥ ಒಳ್ಳೆಯ ಪಾಠ ಅಲ್ವಾ..ಬರಹ ಸೂಪರ್..

    ReplyDelete
  2. ಶಿವು;ನಿಮ್ಮ ಪ್ರೋತ್ಸಾಹ ಪೂರಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  3. ನಿಮ್ಮ ಈ ಪುಟ್ಟ ಬರಹದಲ್ಲಿ ಅಡಗಿರುವ ನೀತಿಯನ್ನು ಇ೦ದಿನ ಬದುಕಿನ ರೀತಿಗೆ ಹೋಲಿಸಿದಾಗ ನಿಚ್ಚಳವಾಗಿ ಕಾಣುವುದು ವೈರುಧ್ಯ. ಮಕ್ಕಳ ಆಟವನ್ನು ಬದುಕಿನೊ೦ದಿಗೆ ಹೋಲಿಸಿ ನೀವು ಕೊಟ್ಟ ಒಳನೋಟ ಅತ್ಯಪೂರ್ವ.

    ReplyDelete
  4. santa-sharana-avadhootaru heliddannumakkalu madi torisiddare.makkala maralina ata - beledavara balina atavagabeku.

    ReplyDelete
  5. ಡಾಕ್ಟ್ರೇ,
    ಆಟದಲ್ಲಿಯೇ ಪಾಠ ಚೆನ್ನಾಗಿ ತಿಳಿ ಹೇಳಿದ್ದೀರ....
    ನಿಮ್ಮ ಮಾತು ನಿಜ....

    ReplyDelete
  6. ನಾಲ್ಕಾರೇ ಸಾಲುಗಳಲ್ಲಿ ಬದುಕಿನಲ್ಲಿ ಅತ್ಯವಶ್ಯಕವಾಗಿ ಆಲೋಚಿಸಿ,ರೂಢಿಸಿಕೊಳ್ಳಬೇಕಾದ೦ತಹ ಅ೦ಶವನ್ನು, ಮಕ್ಕಳ ಆಟವನ್ನು ಉದಾಹರಿಸುವುದರೊ೦ದಿಗೆ ಸರಳವಾಗಿ ತಿಳಿಸಿದ್ದೀರಿ.ತು೦ಬಾ ಹಿಡಿಸಿತು. ಧನ್ಯವಾದಗಳು.

    ReplyDelete
  7. ನಾಲ್ಕು ಸಾಲುಗಳಲ್ಲಿ ಬದುಕುವ ರೀತಿ ತಿಳಿಸಿದ್ದೀರಿ. ನಾನು ಕೂಡ ರಸ್ತೆಯ ಅಕ್ಕ-ಪಕ್ಕ ಹಾಕಿದ್ದ ಮರಳಿನ ರಾಶಿಯಲ್ಲಿ ಕಾಲುಗಳ ಮೇಲೆ ಮರಳು ಗುಪ್ಪೆಗಳನ್ನು ಕಟ್ಟಿ ಆಟವಾಡುತ್ತಿದ್ದೆ.

    ReplyDelete
  8. ನಮಸ್ತೆ ಸರ್,
    ಆಟದಲ್ಲಿ ಚೆಂದದ ಪಾಠ.. 'ಬದುಕಿನ ಒಂದು ಪಾಠ' ಹೇಳಿದ್ದಿರಿ..
    ತುಂಬಾ ಖುಷಿಯಾಯಿತು..
    ನಿಮಗೆ ನನ್ನ ನಮನಗಳು..
    -ಅನಿಲ್

    ReplyDelete
  9. ಕೃಷ್ಣಮೂರ್ತಿಯವರೆ,
    ನೀವು ಕೇವಲ ದೇಹದ ಡಾಕ್ಟರ ಅಲ್ಲ, ಆತ್ಮದ ಡಾಕ್ಟರ್ ಸಹ ಹೌದು. ಜೀವನದ ಹಿತನೀತಿಯನ್ನು ಸುಂದರವಾಗಿ ತಿಳಿಸಿದ್ದೀರಿ.

    ReplyDelete
  10. ಪರಾಂಜಪೆಯವರೇ;ಬದುಕನ್ನು ಸರಳೀಕರಣ ಗೊಳಿಸಿಕೊಂಡಷ್ಟೂ ಬದುಕು ಹೆಚ್ಚು ಸುಂದರವಾಗುತ್ತದೆ.ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಷ್ಟೇ.ಧನ್ಯವಾದಗಳು.

    ReplyDelete
  11. ಹೇಮಚಂದ್ರ;ನೀವು ಹೇಳಿದ್ದಕ್ಕೆ ನನ್ನ ಸಹಮತವಿದೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ಸವಿಗನಸು ಮಹೇಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಮನಮುಕ್ತಾ ಮೇಡಂ;ಬದುಕು ಸರಳವಾಗಿದ್ದಷ್ಟೂ ಆನಂದ ಹೆಚ್ಚು.ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

    ReplyDelete
  14. ಸುಮ ಮೇಡಂ;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  15. ಹರೀಶ್;ಮಕ್ಕಳ ಮನಸು ಸರಳ.ಅದಕ್ಕೇ ಅವರ ಬದುಕೂ ಸುಂದರ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ಅನಿಲ್;ನಮಸ್ಕಾರ.ಬದುಕನ್ನು ಇದ್ದ ಹಾಗೇ ಸ್ವೀಕರಿಸುವುದನ್ನು ನಾವು ಕಲಿಯಬೇಕಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ಸುನಾಥ್ ಸರ್;ನನಗೆ ಅನಿಸಿದ್ದನ್ನು ಎಲ್ಲರ ಜೊತೆ ಹಂಚಿಕೊಂಡಿದ್ದೇನೆ.ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.

    ReplyDelete
  18. Those kids have put in just few minutes.

    We put in hours, days, months and years building something and invest so much of time, money, energy. Being detached while doing all this is possible only for the ones who are real 'yogi's' in their life.

    For normal human beings, till they achieve the realization, pain is an inevitable companion!

    ReplyDelete
  19. Sir,even i played with sand, also seen others playing. but never saw it, the way you saw....


    Hats off to you ...

    ReplyDelete
  20. ಅಧ್ಯಾತ್ಮಲೋಕದಲ್ಲಿ ಈ ಕಪ್ಪೆಗೂಡಿನ ಆಟಕ್ಕೆ ವಿಶೇಷ ಮಹತ್ವವಿದೆ. ಜಗತ್ತಿನ ಸೃಷ್ಟಿ, ಸ್ಥಿತಿ, ಲಯವನ್ನು ಭಗವ೦ತನ ಆಡುವ ಕಪ್ಪೆಗೂಡಿನ ಆಟಕ್ಕೆ ಹೋಲಿಸುತ್ತಾರೆ. ಉತ್ತಮ ವಿಚಾರದ ಲಯವನ್ನು ಹರಿಯ ಬಿಟ್ಟ ಡಾ. ಅವರಿಗೆ ವ೦ದನೆಗಳು.

    ಅನ೦ತ್

    ReplyDelete
  21. Bhashe madame;It is all in the mind.If you think you can live like that,you can.If you think it is rather difficult,probably you are right!Regards.

    ReplyDelete
  22. Uday;thanks for your kind compliments.Regards.

    ReplyDelete
  23. ಅನಂತ್ ಸರ್;ನಿಜಕ್ಕೂ ನನಗೆ ಈ ವಿಷಯ ತಿಳಿದಿರಲಿಲ್ಲ!ಹೊಸ ವಿಷಯ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  24. ಮುದ್ದು ಮಕ್ಕಳ ಮರಳಿನ ಆಟದ ಮೂಲಕ ತೆರೆದಿಟ್ಟಿದ್ದೀರಿ ಜೀವನದ ಪಾಠ. ಧನ್ಯವಾದಗಳು ಸರ್.

    ReplyDelete
  25. ಪ್ರಭಾಮಣಿ ನಾಗರಾಜ್ ಮೇಡಂ;ನಿಮ್ಮ ಪ್ರೋತ್ಸಾಹ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  26. ಡಾಕ್ಟರ್‍, ನಾವು ದೊಡ್ಡವರಾಗಿ ಹಾಳಾಗಿದ್ದೇವೆ....! ಬಾಲ್ಯ ಮತ್ತೆ ಬರುವುದಿಲ್ಲ...

    ಮನುಷ್ಯ ಬೆಳೆದಂತೆ ಆತನ ಆಸೆಗಳೂ ಬೆಳೆಯುತ್ತವೆ. ಅಲ್ಲಿದೆ ನಮ್ಮ ಮನೆ, ಇಲ್ಲಿರುವುದು ಸುಮ್ಮನೆ... ಆದರೂ ಆಸೆಗಳಿಗೆ ಕೊನೆ ಇಲ್ಲದ ಬದುಕು ಇದು.
    ಉತ್ತಮ ಬರಹ ಧನ್ಯವಾದಗಳು.
    ನಿಮ್ಮ ಮೈಲ್ ಐಡಿ ಕೊಡಿರಿ.

    ReplyDelete
  27. "ಆಡುವ ಮಕ್ಕಳು ಮನೆಯ ಕಟ್ಟಿದರು
    ಆಟ ಸಾಕೆಂದು ಮುರಿದು ಓಡುವ ಹಾಗೆ
    ಇರಬೇಕು ಸಂಸಾರದಲಿ
    "ದಾಸರ ಪದ ನೆನಪಾಯ್ತು

    ReplyDelete
  28. ಜಿತೇಂದ್ರ ಅವರೆ;ನಮ್ಮ ಅಹಂಕಾರ ಬೆಳೆದಂತೆ ಎಲ್ಲದನ್ನೂ ನನ್ನದು ಎನ್ನುವ ಮಮಕಾರ ಬೆಳೆಸಿಕೊಂಡು ಬದುಕಿಗೆ ಅಂಟಿಕೊಂಡು ಅವಸ್ಥೆ ಪಡುತ್ತೇವೆ.ಸ್ವಲ್ಪ ಆಧ್ಯಾತ್ಮಿಕ ದೃಷ್ಟಿ ಬೆಳೆಸಿಕೊಂಡರೆ ಬದುಕು ಸಹನೀಯ ವಾಗುತ್ತದೋ ಏನೋ!
    ನನ್ನ e-mail,I.D.; dtkmurthy @gmail.com.ನಮಸ್ಕಾರ.

    ReplyDelete
  29. ಶಿವರಾಂ ಭಟ್;ಮೊದಲಿಗೆ ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ದಾಸರ ಪದ ನೆನಪಿಸಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  30. howdu sir kelavondu sanna vicharagalu kelavu sala grahisalu aguvudilla... uttama ,tilidukolluva baravanige

    ReplyDelete
  31. ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  32. ಉತ್ತಮ ವಿಚಾರ. ನಾನಂತೂ ಮರಳಿನಲ್ಲಿ ಕಪ್ಪೆ ಗೂಡು ಕಟ್ಟಿ ತಲೆಮೇಲೆ ಮರಳು ಹಾಕಿಕೊಂಡು ಬಾಲ್ಯ ಕಳೆದವನು . ಪಾಪ ಇಂದಿನ ಮಕ್ಕಳನ್ನು ನೋಡಿದರೆ ಅಯ್ಯೋ ಅನ್ನಿಸುತ್ತೆ. ಅತಿಯಾದ ಭಯ ಅವರಲ್ಲಿ ಹುಟ್ಟಲು ತಂದೆ ತಾಯಿಗಳು ಕಾರಣವಾಗಿ ಇದು ಮಾಡಬೇಡ ಅದು ಮಾಡಬೇಡ ಅಂಥಾ ಮಕ್ಕಳನ್ನು ಪರಿಸರದಿಂದ ದೂರ ಇಟ್ಟು ಅವರ ಬಾಲ್ಯ ವನ್ನು ಕಿತ್ತುಕೊಳ್ಳುತ್ತಿದ್ದಾರೆ.ಆಲ್ವಾ !!!!

    ReplyDelete
  33. ಡಾಕ್ಟ್ರೆ...

    ಎಂಥಾ ಮರುಳಯ್ಯಾ..
    ಇದು..
    ಎಂಥಾ ಮರಳು..!!

    ಕಹಿ ಸತ್ಯವನ್ನು ಸುಂದರವಾಗಿ ಹೇಳಿದ್ದೀರಿ...

    ಅಭಿನಂದನೆಗಳು...

    ReplyDelete
  34. ಬಾಲೂ ಸರ್;ಮುಂದಿನಜೀವನದ ಬಗೆಗಿನ ಅತಿಯಾದ ಆತಂಕದಿಂದ ಜೀವಿಸುವ ಆನಂದವನ್ನು ಕಳೆದು ಕೊಳ್ಳುತ್ತಿದ್ದೆವೆಯೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  35. ಪ್ರಕಾಶಣ್ಣ;ಮಕ್ಕಳ ಮರಳಿನ ಆಟ,ನಮ್ಮ ಮರುಳಿನ ಆಟ ಎರಡೂ ಒಂದೇ ರೀತಿಯಿಲ್ಲವೇ? ನೀವು ಮಾಡುತ್ತಿರುವಂತೆ ಮರಳಿನ ಜೊತೆ ಬಾಂಧವ್ಯ ಎಂಬ ಇಟ್ಟಿಗೆ,ಪ್ರೀತಿ ಎಂಬ ಸಿಮೆಂಟು ಸೇರಿಸಿ ನೋಡಬೇಕು!

    ReplyDelete
  36. ವಸಂತ್;ಸಾಮಾನ್ಯವಾಗಿ ನಾವು ಯಾವುದನ್ನೂ ಸರಿಯಾಗಿ ಗಮನಿಸುವುದೇ ಇಲ್ಲ.ಹಾಗೇ ನೋಡಿದರೆ ಪ್ರತಿಯೊಂದರಿಂದಲೂ ನಾವು ಕಲಿಯುವುದು ಬೇಕಾದಷ್ಟಿದೆ.
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  37. ಮೂರ್ತಿ ಸರ್,
    ನಾನು ತುಂಬಾ ಸಲ ಮಕ್ಕಳು ಹೀಗೆ ಮಾಡಿದ್ದನ್ನ ನೋಡಿದ್ದೇನೆ.....ಆದರೆ ನಾನು ಅದಕ್ಕೆ ಕಾರಣ ಹುಡುಕಿರಲಿಲ್ಲ... ನೋಡಿ ಸುಮ್ಮನಿರುತ್ತಿದ್ದೆ..... ಎಂಥಾ ಅರ್ಥವಿದೆಯಲ್ಲ ಸರ್ ಇದಕ್ಕೆ..... ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ.... ಕಾಲನ ಕರೆ ಬಂದಾಗ ಎಲ್ಲಾ ಕೆಲಸ ಬಿಟ್ಟು ಹೊರಡಲೇ ಬೇಕು..... ನಿಮ್ಮ ಅನುಭವದ ಮಾತುಗಳಿಗೆ ನನ್ನ ಸಲಾಮ್...... ಜೀವನವನ್ನು ನೀವು ನೋಡುವ ದ್ರಷ್ಟಿಕೋನಕ್ಕೆ ನನ್ನದೊಂದು ಸಲಾಮ್....

    ReplyDelete
  38. ಸರ್,

    ಬಹುಷಃ ಮರಳಿನಗೂಡು ಕಟ್ಟುವಾಗ ಯಾವುದೇ ನಿರೀಕ್ಷೆ-ಒತ್ತಡ ಇರಲಿಕ್ಕಿಲ್ಲಾ..
    ಆದರೆ ನಾವುಗಳೆಲ್ಲಾ ಬದುಕು ಕಟ್ಟುವುದು ವ್ಯಾಮೋಹ-ಬಂಧನಗಳಿಂದ...

    ಜೀವನವನ್ನು ಸರಳವಾಗಿ ನೋಡುವ ನಿಮ್ಮ ಒಳಗಣ್ಣಿಗೆ ನಮನ

    ReplyDelete
  39. ದಿನಕರ್;ಜೀವನದಲ್ಲಿ ಈ ಕ್ಷಣದಲ್ಲಿ ಕೊರಗದೆ ಆನಂದವಾಗಿರುವುದು ಸಾಧ್ಯವಾದರೆ ಅದೇ ಜೀವನದ ಸಾರ್ಥಕತೆಎನಿಸುತ್ತದೆ.ಮಕ್ಕಳಮನಸ್ಥಿತಿಹಾಗಿರುತ್ತದೆ.ಬೆಳೆಯುತ್ತಿದ್ದಂತೆ ಅದನ್ನು ಎಲ್ಲೋ ಕಳೆದುಕೊಂಡುಬಿಡುತ್ತೇವೆ.ಅದಕ್ಕೇ ಬಾಲ್ಯದ ದಿನಗಳನ್ನು ಎಲ್ಲರೂ
    ಕೊಂಡಾಡುವುದು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  40. ಅಪ್ಪ,ಅಮ್ಮ;ನಮಸ್ಕಾರ.ನಾವೆಲ್ಲಾ (ನನ್ನನ್ನೂ ಸೇರಿಸಿ)ಬದುಕಿನಲ್ಲಿ ವ್ಯಾಮೋಹ,ನಿರೀಕ್ಷೆಗಳನ್ನು ಇಟ್ಟುಕೊಂಡೆ ಬದುಕನ್ನು ಕಟ್ಟಿಕೊಂಡವರು.ಇದು ಒಪ್ಪ ಬೇಕಾದ ಸತ್ಯ.ಈ ರೀತಿಯ ಬದುಕಿನಿಂದ ಬರುವಂತಹ ಪ್ರತಿಫಲಗಳನ್ನೂ ಅನುಭವಿಸಬೇಕಾಗುತ್ತದೆ.ಅದಕ್ಕೇ ಸುತ್ತಲೂ ನೋವು,ನಿರಾಶೆ,ಹತಾಶೆಗಳನ್ನೂ ಕಾಣುತ್ತಿದ್ದೇವೆ.ಮಕ್ಕಳ ಆಟದಂತಹ ಮನಸ್ಥಿತಿ ಬೆಳೆಸಿಕೊಂಡರೆ ಬದುಕು ಹೆಚ್ಚು ಸಹನೀಯವಾಗಬಹುದೇನೋ!

    ReplyDelete
  41. ಮೂರ್ತಿ ಸರ್,

    ಎಷ್ಟೊಂದು ಅರ್ಥಪೂರ್ಣ ಬರಹ, ಆಸೆ ಎನ್ನುವುದು ಯಾರನ್ನೂ ಬಿಡುವುದಿಲ್ಲ, ಬಂದಾಗ ಏನು ತಂದಿಲ್ಲ, ಹೋಗುವಾಗ ಏನನ್ನು ಕೊಂಡೊಯ್ಯುವುದಿಲ್ಲ ಎಂದು ತಿಳಿದೂ ಸಹ ನಾವು ಎಷ್ಟೊಂದು ಆಸೆ ಪಡ್ತೀವಿ. ಮಕ್ಕಳ ಈ ಆಟದ ಉದಾಹರಣೆ ಬಹಳ ಚೆನ್ನಾಗಿದೆ.

    ReplyDelete
  42. ಅಶೋಕ್;ಮಕ್ಕಳಂತೆ ನಾವೂ ಜೀವನದಲ್ಲಿ ಯಾವುದಕ್ಕೂ ಅಂಟಿಕೊಳ್ಳದೆ ಈ ಕ್ಷಣದಲ್ಲಿ ಸಂತೋಷದಿಂದ ಬದುಕುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!ಅಲ್ಲವೇ ಸರ್?ನಮಸ್ಕಾರ.

    ReplyDelete
  43. GurugaLe, naanu swalpa kalasada ottaDadalli blogs visit maadoke aagilla, dayavittu kshame irali, tamma ee lekhana bahala arthapoorna, dhanyavaadagalu

    ReplyDelete
  44. ಭಟ್ ಸರ್;ನಿಮ್ಮ ವಿಶ್ವಾಸ ಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಎಲ್ಲಾ ಸಮಯದಲ್ಲೂ ಎಲ್ಲರ ಬ್ಲಾಗಿಗೆ ಬರಲಾಗುವುದಿಲ್ಲ.ಕೆಲವೊಮ್ಮೆ ಕೆಲಸದ ಒತ್ತಡವಿರುವುದು ಎಲ್ಲರಿಗೂ ತಿಳಿದ ವಿಷಯ.ಬಿಡುವಾದಾಗ ಬನ್ನಿ ಸರ್.ನಮಸ್ಕಾರ.

    ReplyDelete
  45. ತರುಣ್;ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  46. appa, ee baraha tumba chennagi moodi bandide .... mattu tumba arthagarbitha vagide.

    ReplyDelete
  47. ಪಲ್ಲವಿ ಕಂದಾ;ನಿನ್ನ ಕಾಮೆಂಟ್ ಓದಿ ,ತುಂಬಾ ಖುಷಿ ಆಯ್ತು.ಆಗಾಗ ನಿನ್ನ ಪ್ರತಿಕ್ರಿಯೆ ಕೂಡ ಬಂದರೆ ಸಂತೋಷವಾಗುತ್ತೆ.

    ReplyDelete
  48. ಸರ್, ದಿನಕರ್ ಅವರು ಹೇಳಿದ ಹಾಗೆ ಪ್ರತಿಯೊಂದನ್ನು ನೀವು ನೋಡುವ ದೃಷ್ಟಿಕೋನ ಅಮೋಘವಾಗಿದೆ... ನಿಮ್ಮ ಯೋಚನಾಲಹರಿಗೆ ಅಭಿನಂದನೆಗಳು...

    ReplyDelete
  49. ಪ್ರಗತಿ ಮೇಡಂ;ಜೀವನವನ್ನು ಅದು ಇದ್ದಂತೆ,ಬಂದದ್ದನ್ನು ಬಂದಂತೆ ಸ್ವೀಕರಿಸುವತ್ತ ನನ್ನ ಪ್ರಯತ್ನ.ಅದರಲ್ಲೇ ಆನಂದವಿದೆಯೆಂಬ ನಂಬಿಕೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  50. ಗುರುಗಳೇ,
    ಅರ್ಥಪೂರ್ಣ ಲೇಖನ,
    ಹುಟ್ಟು ಸಾವಿನ ನಡುವೆ
    ಮೂರು ದಿನದ ಬಾಳ್ವೆ,
    ಬರುವಾಗ ನೀನೇನು ತರುವೆ,
    ಹೋಗುವಾಗ ಏನು ಕೊಂಡೊಯ್ಯುವೆ
    ಮತ್ಯಾಕೆ ಕೂಡಿಡುವ ಗೊಡವೆ?
    ಅಲ್ವಾ ಸರ್,
    ಮಕ್ಕಳ ಈ ಆಟ ನಿಜವಾಗಿಯೂ ನಮಗೆ ಒಂದು ಸಂದೆಶವಾಗಬೇಕು!

    ReplyDelete
  51. ಪ್ರವೀಣ್;ನಿಮ್ಮ ಮನದಾಳದ ಮಾತುಗಳು ಯಾವಾಗಲೂ ಸಂತಸ ನೀಡುತ್ತವೆ.ನಿಮ್ಮ ಬಾಳೂ ಸದಾ ಸಂತಸಮಯವಾಗಿರಲೆಂಬ ಹಾರೈಕೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  52. ಸರ್
    ಆಟದಲ್ಲಿಯೇ ಒಳ್ಳೆ ನೀತಿ ಪಾಠ ಹೇಳಿದಿರಿ
    ಚೆನ್ನಾಗಿದೆ ಓದಿ ಸಂತೋಷ ಆಯ್ತು

    ReplyDelete
  53. ಮೂರ್ತಿ ಸರ್,
    ತುಂಬ ತುಂಬ ಅರ್ಥ ಪೂರ್ಣ ಲೇಖನ ,,
    ಕೆಲಸದ ಒತ್ತಡದ ಕಾರಣ ಯಾರು ಬ್ಲಾಗ್ ಸಹ ನೋಡಲು ಆಗುತ್ತಿಲ್ಲ ,,, ಜೊತೆಗೆ ಏನನ್ನು ಬರೆಯಲು ಕೂಡ..

    ReplyDelete
  54. ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಿರಾ...

    ReplyDelete

Note: Only a member of this blog may post a comment.