Saturday, September 25, 2010

ಮೆಚ್ಚಿದ ಕವನ -"ಶೋಧನೆ"(ಡಾ.ಜಿ.ಎಸ್.ಎಸ್)

ನಾನು ಬಹುವಾಗಿ ಇಷ್ಟಪಟ್ಟ ಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು.ಬಹಳ ದಿನಗಳ ನಂತರ ಅವರ ಸಮಗ್ರ ಕವಿತೆಗಳನ್ನುಓದಲು ಕೈಗೆತ್ತಿಕೊಂಡೆ.ಅದರಲ್ಲಿ 'ದೀಪದ ಹೆಜ್ಜೆ'ಸಂಕಲನದಲ್ಲಿರುವ "ಶೋಧನೆ"ಕವಿತೆಇಷ್ಟವಾಯಿತು.ನಿಮ್ಮೊಡನೆಹಂಚಿಕೊಂಡಿದ್ದೇನೆ;
"ಶೋಧನೆ "
ನುಗ್ಗು ಎದೆಯೊಳಸುಳಿಯ ತಳದಾಳಕೆ 
ನೋವಿನಕ್ಷಯಪಾತ್ರೆಯ ಒಡಲಾಳಕೆ
ಬಿಡು ಒಳಗೆ ಬಿಡು ಪಾತಾಳ ಗರುಡ 
ಅದೋ ನೋಡ ನೋಡ 

ಯಾರು ಯಾರೋ ಸೇರಿ ಇರಿದ ಚೂರಿಯ ತುಣುಕು 
ಅಣುಕು ಮಿಣುಕು !
ನೂರಾನೆ ಕಾಲುಗಳು ನುಗ್ಗು ನುರಿ ಮಾಡಿರುವ 
ಬಿಂದಿಗೆಯ ಸರಕು !
ಎದೆಯ ಮಿದುವಾಸಿನಲಿ ಕಾವು ಪಡೆಯುತಲಿದ್ದ
ಮೊಟ್ಟೆಗಳ ಹೋಳು !
ಮುಗಿಲೊಳಾಡಿದ ಹಲವು ಪಾರಿವಾಳಗಳ ರೆಕ್ಕೆ 
ನೂರು ಸೀಳು !

ಹಲವು ಬಾಗಿಲೊಳಲೆದು ತಿರಿದು ತುಂಬಿದ ಪಾತ್ರೆ -
ಯೊಡಕು ರಾಶಿ,
ಅಯ್ಯೋ ಪರದೇಶಿ!
ನೂರು ಚೆಲುವೆಯ ಮೊಗವ ತನ್ನ ಎದೆಯೊಳು ಹಿಡಿದ 
ಕನ್ನಡಿಯ ಚೂರು 
ಬರಿ ಕೆಸರು ಕೆಸರು!
ಎನಿತೊ ಬೆಳಕನು ಹಿಡಿದು ಕಡೆದಿಟ್ಟ ವಿಗ್ರಹದ 
ಭಗ್ನಾವಶೇಷ 
ಮತ್ತೇನ್ ವಿಶೇಷ ?------

ಇನ್ನು ಏನೇನಿಹುದೋ!ಇರಲಿ ಬಿಡು ,ತೆಗೆದೆದೆಯ 
ಕಲಕಬೇಡ,
ಹಳೆಯ ನೆನಪಿನ ಕೊಳವ ,ಕದಡಬೇಡ .  

18 comments:

  1. ಆ೦ತರ್ಯದ ಶೋಧನೆಯನ್ನು ಪ್ರತಿಬಿ೦ಭಿಸುವ ಜಿ.ಎಸ್.ಎಸ್.ರವರ ಕವನವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
  2. ಗುರುಗಳೆ,
    ಶ್ರಿ, ಶಿವರುದ್ರಪ್ಪನವರ ಶೊಧನೆ ಕವನ ಸದಾ ಮನದಾಳದಲ್ಲಿ ಉಳಿಯುವಂತಹುದು. ಈ ಕವನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  3. ಸರ್,
    ಜಿ.ಎಸ್.ಎಸ್ ಕವನ ಈ ರೀತಿ ಪರಿಚಯಿಸಿದ್ದಕ್ಕಾಗಿ ಥ್ಯಾಂಕ್ಸ್

    ReplyDelete
  4. ಸರ್,
    ಶೋಧನೆಯನ್ನು ಇಷ್ಟು ಚೆನ್ನಾಗಿ ವರ್ಣಿಸಿದ ಕವನವನ್ನು ತಿಳಿಸಿಕೊಟ್ಟದ್ದಿಕ್ಕೆ ಧನ್ಯವಾದಗಳು.

    ReplyDelete
  5. ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆಯಿರಲಿ ಸಾರ್,
    ಶೋಧನೆ ಮತ್ತು ಕವಿ ಹೃದಯ ಒಂದಕ್ಕೊಂದು ಸದಾ ಮಿಳಿತಗೊಂಡಿರುತ್ತವೆ. ಜೆ.ಎಸ್.ಎಸ್ ಹಾಗೂ ಅವರ ಗುರು ಕುವೆಂಪು ಕಾವ್ಯದಲ್ಲೂ ಈ ಶೋಧ ಬೆಸೆದುಕೊಂಡಿವೆ. ಒಳ್ಳೆ ಕವನ ನೆನಪಿಸಿ, ರಾಷ್ಟ್ರಕವಿಯನ್ನು ಮತ್ತೊಮ್ಮೆ ಓದಲು ಮನಸ್ಸನ್ನು ಅಣಿಗೊಳಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  6. This comment has been removed by the author.

    ReplyDelete
  7. ಜಿ.ಎಸ್.ಎಸ್.ರವರ ಕವನ ನೆನಪಿಸಿದಕ್ಕಾಗಿ ಧನ್ಯವಾದಗಳು
    ಚೆಂದದ ಕವನ...

    ReplyDelete
  8. thanks for putting up such a wonderful, thought provoking poem and thus having introduced me to the world of GSS's poetry and kannada poetry in general.......

    ReplyDelete
  9. thaks sir istondu sudara vaada kvanavannu namagella parichayisidakke...

    ReplyDelete
  10. ಡಾಕ್ಟ್ರೆ...


    ನಾನೂ ಕೂಡ ಜಿ.ಎಸ್. ಅವರ ಅಭಿಮಾನಿ..

    ನೀವು ಸ್ವಾದ ಅನುಭವಿದ್ದಲ್ಲದೇ..
    ನಮಗೂ ಉಣ ಬಡಿಸಿದ್ದೀರಿ..

    ಈ ಕವಿತೆ ನಾನಂತೂ ಓದಿರಲಿಲ್ಲ...

    ಇಂಥಹ ಇನ್ನಷ್ಟು ಕವಿತೆಗಳನ್ನು ಪರಿಚಯಿಸಿ...
    ಧನ್ಯವಾದಗಳು...

    ReplyDelete
  11. ಜಿ.ಎಸ್.ಎಸ್. ನನ್ನ ಮೆಚ್ಚಿನ ಕವಿಯೂ ಹೌದು, ಅವರ ಕವಿತೆ ಉದ್ಧರಿಸಿದ್ದೀರಿ, ಓದಿ ಖುಷಿ ಆಯ್ತು. ನಿಮ್ಮ ಕಾವ್ಯಾಸಕ್ತಿ ಅನನ್ಯ

    ReplyDelete
  12. KAVANAVU ANUBHAVA MATTU ANUBHAAVAGALA SUNDARAMISHRANA.
    EE KAVANAVU SARVAKALIKA.

    ReplyDelete
  13. ನಿಮ್ಮ ಅಭಿರುಚಿಯನ್ನ ನಮ್ಮ ಜೊತೆ ಹಂಚಿದಕ್ಕೆ ಧನ್ಯವಾದಗಳು.

    ReplyDelete
  14. ಡಾ. ಮೂರ್ತಿ ಸರ್,
    ಡಾ ಶಿವರುದ್ರಪ್ಪನವರ ಕವಿತೆ ತಿಳಿಸಿ ನಮಗೂ ಓದುವಂತೆ ಮಾಡಿದ್ದೀರಾ ಸರ್.... ತುಂಬಾ ಧನ್ಯವಾದ..... ಎಷ್ಟು ಅರ್ಥವಿದೆಯಲ್ವಾ ಸರ್.....

    ReplyDelete
  15. ಶಿವರುದ್ರಪ್ಪನವರ ಸುಂದರ ಕವನ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  16. Tadavagi pratikriyisuttiruvudakke kshame irali....istu sundara kavanavannu parichayisiddakke dhanyavaadagalu...

    ReplyDelete

Note: Only a member of this blog may post a comment.