Sunday, May 15, 2011

" ಕಗ್ಗದ ಸಾಂತ್ವನ ನುಡಿಗಳು"

ಮನಸ್ಸಿಗೆ ಬೇಸರವಾದಾಗ,ಎಡಬಿಡದ ಚಿಂತೆಗಳು ಕಾಡಿದಾಗ,ಮುಂದೇನೆಂದು ದಾರಿ ಕಾಣದಾದಾಗ ಯಾರಾದರು ಹಿರಿಯರು ಧೈರ್ಯ ತುಂಬಿ,ಮಾರ್ಗದರ್ಶನ ನೀಡಿದರೆ,ಬದುಕಿನ ದಾರಿ ಸುಗಮವೆನಿಸುತ್ತದೆ.ಹೊಸ ಉತ್ಸಾಹದೊಂದಿಗೆ ಮುನ್ನಡೆಸುತ್ತದೆ ಅವರ ಮಾರ್ಗದರ್ಶನ.ಅಂತಹ ಮಾರ್ಗದರ್ಶನವನ್ನು ದಿವಂಗತ ಡಿ.ವಿ.ಜಿ.ಯವರು ತಮ್ಮ 'ಮಂಕು ತಿಮ್ಮನ ಕಗ್ಗ'ದ ಮೂಲಕ ನನ್ನಂತಹ ಕೋಟಿ, ಕೋಟಿ, ಜನರಿಗೆ ಹಲವಾರು ದಶಕಗಳಿಂದ ನೀಡುತ್ತಾ ಬಂದಿದ್ದಾರೆ.ಅವರ ಕೆಲ ಪದ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕಿನಿಸಿದೆ.ಇಗೋ ಅವರ ಕೆಲ  ಸುಂದರ ಕಗ್ಗದ ಪದ್ಯಗಳು;

೧) ಬಾಳ್ಕೆಯಲಿ ನೂರೆಂಟು ತೊಡಕು ತಿಣುಕು ಗಳುಂಟು 
ಕೇಳ್ಕೆ ಮಾಣ್ಕೆ ಗಳಿಗವು ಜಗ್ಗವೊಂದಿನಿತುಂ   
ಗೋಳ್ಕರದರೇನು ಫಲ ?ಗುದ್ದಾಡಲೇನು ಫಲ?
ಪಲ್ಕಿರಿದು ತಾಳಿಕೊಳೋ ಮಂಕು ತಿಮ್ಮ.

೨)ಸ್ಥೂಲ ಸೂಕ್ಷ್ಮ ವಿವೇಕ ರಹಿತೇಷ್ಟ ಬಂಧು ಜನ 
ಕಾಲ ದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು.
ಸಾಲವನು ನಿನ್ನಿಂದ ಸಲಿಸಿಕೊಳ ಬಂದವರು 
ತಾಳಿಮೆಯಿನವರೊಳಿರು- ಮಂಕು ತಿಮ್ಮ.
    (ಕಾಲದಂಷ್ಟ್ರ-ಯಮ ) 
೩) ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ 
ಕೊರತೆಯೊಂದನು ನೀನು ನೆನೆ ನೆನೆದು ಕೊರಗಿ 
ಧರೆಯೆಲ್ಲವನು ಶಪಿಸಿ ,ಮನದಿ ನರಕವ ನಿಲಿಸಿ 
ನರಳುವುದು ಬದುಕೇನೋ -ಮಂಕು ತಿಮ್ಮ.

೪) ಚಿಂತೆ ಸಂತಾಪಗಳು ಮನಸಿಗೆ ವಿರೇಚಕವೋ
ಸಂತಸೋತ್ಸಾಹಗಳೇ ಪಥ್ಯದುಪಚಾರ .
ಇಂತುಮಂತುಂ  ನಡೆಯುತಿರುವುದಾತ್ಮ ಚಿಕಿತ್ಸೆ 
ಎಂತಾದೊಡಂತೆ ಸರಿ ಮಂಕು ತಿಮ್ಮ.

೫) ತರಿದು ಬಿಡು ,ತೊರೆದು ಬಿಡು ,ತೊಡೆದು ಬಿಡು  ನೆನಹಿಂದ
ಕರೆ ಕರೆಯ ಬೇರುಗಳ ,ಮನದ ಗಂಟುಗಳ
ಉರಕೆ ಸೊಗಸೆನಿಸಿದಾ ಪ್ರೀತಿ ಹಾರಮುಂ ಒರ್ಮೆ 
ಉರುಳಪ್ಪುದಾತ್ಮಕ್ಕೆ -ಮಂಕು ತಿಮ್ಮ.

೬)ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು 
ಮಗುವು ನೀಂ ಪೆತ್ತರ್ಗೆ ,ಲೋಕಕೆ ಸ್ಪರ್ಧಿ 
ಹೆಗಲ ಹೊರೆ ಹುಟ್ತಿದೆಲ್ಲರಿಗುಂ ಇರುತಿರೆ ನಿನ್ನ
ರಗಳೆಗಾರಿಗೆ  ಬಿಡುವೋ-ಮಂಕು ತಿಮ್ಮ.

೭) ಇಳೆಯಿಂದ ಮೊಳಕೆಯೊಗೆವಂದು ತಮಟೆ ಗಳಿಲ್ಲ 
ಫಲ ಮಾಗುವಂದು ತುತ್ತೂರಿ  ದನಿಯಿಲ್ಲ 
ಬೆಳಕೀವ ಸೂರ್ಯ ಚಂದ್ರರೊಂದು ಸದ್ದಿಲ್ಲ 
ಹೊಲಿ ನಿನ್ನ ತುಟಿಗಳನು-ಮಂಕು ತಿಮ್ಮ.

೮)ಮುಂದೇನೋ, ಮತ್ತೇನೋ ,ಇಂದಿಗಾ ಮಾತೇಕೆ?
ಸಂದರ್ಭ ಬರಲಿ ,ಬಂದಾಗಲಾ ಚಿಂತೆ 
ಹೊಂದಿಸುವನಾರೋ ನಿನ್ನಾಳಲ್ಲ ಬೇರಿಹನು
ಇಂದಿಗಿಂದಿನ ಬದುಕು -ಮಂಕು ತಿಮ್ಮ.

೯) ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ 
ವರ ಯೋಗ ಸೂತ್ರವಿದು -ಮಂಕು ತಿಮ್ಮ.

೧೦) ಎಡರು ತೊಡರೆನಲೇಕೆ ? ಬಿಡಿಸು ಮತಿಗಾದನಿತ 
ದುಡಿ ಕೈಯಿನಾದನಿತು ,ಪಡು ಬಂದ ಪಾಡು.
ಬಿಡು ಮಿಕ್ಕುದನು ವಿಧಿಗೆ ;ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯಿದು- ಮಂಕು ತಿಮ್ಮ .

೧೧)ಸ್ಮಿತವಿರಲಿ  ವದನದಲಿ ,ಕಿವಿಗೆ ಕೇಳಿಸದಿರಲಿ 
ಹಿತವಿರಲಿ ವಚನದಲಿ ,ಋತವ ಬಿಡದಿರಲಿ .
ಮಿತವಿರಲಿ ಮನಸ್ಸಿನುದ್ವೇಗದಲಿ ಭೋಗದಲಿ 
ಅತಿ ಬೇಡವೆಲ್ಲಿಯುಂ- ಮಂಕು ತಿಮ್ಮ.

೧೨) ತಿರುಗಿಸಲಿ ವಿಧಿರಾಯನಿಚ್ಚೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ 
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರ ಚಿತ್ತ ನಿನಗಿರಲಿ -ಮಂಕು ತಿಮ್ಮ.

12 comments:

  1. ಕೃಷ್ಣಮೂರ್ತಿಯವರೆ...

    ಕಗ್ಗದ ಮಾತುಗಳು ತ್ರಿಕಾಲ ಸತ್ಯ...
    ಧರ್ಮಗ್ರಂಥದ ನುಡಿಯಂತಿದೆ...

    ಧನ್ಯವಾದಗಳು..

    ReplyDelete
  2. Houdu sir.. mana mududidaga.. nanage ivugale spoorthi...

    ReplyDelete
  3. ನಿಜ.. ಮನಸನ್ನು ಹದವಾಗಿಡಲು ಇಂತಹ ಕಗ್ಗಗಳೇ ಅತ್ಯವಶ್ಯಕ. ಧನ್ಯವಾದ.

    ReplyDelete
  4. KAGGA CHIRANJEEVI.PRATI SALAVOO HOSA HOSA ARTHA NEEDUVA CHINNADA GANI.SANTVANADA JOTEGE DHAIRYAVANNOO NEEDUVA SHAKTIYA AAKARA.

    ReplyDelete
  5. ಚಿ೦ತೆಗಳನ್ನು ಹೆಗಲಿಗೇರಿಸಿ ಕುಗ್ಗಿದ ಮನಸಿಗೆ ಕಗ್ಗದ ಆಶ್ರಯ ಚಿ೦ತನೆಗಳಲ್ಲಿ ತೊಡಗಿಸಿ ಒ೦ದಿಷ್ಟು ನಿರಾಳತೆಯನ್ನು ತು೦ಬುತ್ತದೆ. ಉತ್ತಮ ವಿಚಾರಗಳನ್ನು ನಿರೂಪಿಸಿದ ಡಾ. ಅವರಿಗೆ ಅಭಿನ೦ದನೆಗಳು.

    ಅನ೦ತ್

    ReplyDelete
  6. aparUpada maatugaLu sir...
    khushiyaayitu odi....

    hige bareyuttiri...

    ReplyDelete
  7. ನೆನ್ನೆ ದಿನ ಯಾವುದೋ ಯೋಚನೆಗಳಲ್ಲಿ ಸಿಕ್ಕಿ ತಲೆನೋವು ಬರಿಸಿಕೊಂಡಿದ್ದೆ.. ನಿಮ್ಮ ಬ್ಲಾಗನ್ನು ಓದಿದ ಮೇಲೆ ಸಮಾಧಾನವಾಯಿತು.. ಡಿ.ವಿ.ಜಿ. ಯವರು ತುಂಬ ಚೆನ್ನಾಗಿ ಹೇಳಿದ್ದಾರೆ ಮಂಕು ತಿಮ್ಮನ ಕಗ್ಗ ಪುಸ್ತಕ ಮನೆಯಲ್ಲಿ ಇತ್ತಾದರು ಅದನ್ನು ಓದಿರಲಿಲ್ಲ.. ಈಗ ಓದಬೇಕೆನಿಸುತ್ತಿದೆ..

    "ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
    ಹೊರ ಕೋಣೆಯಲಿ ಲೋಗರಾಟಗಳನಾಡು
    ವಿರಮಿಸೊಬ್ಬನೇ ಮೌನದೊಳಮನೆಯ ಶಾಂತಿಯಲಿ
    ವರ ಯೋಗ ಸೂತ್ರವಿದು -ಮಂಕು ತಿಮ್ಮ."

    ಈ ಸಾಲುಗಳು ತುಂಬಾ ಹಿಡಿಸಿದವು. ಧನ್ಯವಾದಗಳು.

    ReplyDelete
  8. kaggada saalugalendare nanage praana,
    tumba chennagive alva

    ReplyDelete
  9. ಮಂಕು ತಿಮ್ಮನ ಕಗ್ಗ ಎಲ್ಲರಿಗೂ ಸದಾ ಕಾಲ ಸ್ಫೂರ್ತಿ ದಾಯಕವಾಗಿರಲಿ.ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

    ReplyDelete
  10. ಡಾಕ್ಟ್ರೇ,
    ಮಂಕುತಿಮ್ಮ ಕಗ್ಗ ಆಗಾಗ ಓದುತ್ತಿರುತ್ತೇನೆ. ನನ್ನ ಬಳಿ ಮಂಕುತಿಮ್ಮನ ಕಗ್ಗದ ಪದ್ಯದ ಸಿಡಿಯನ್ನು ಗೆಳೆಯರಿಂದ ಪಡೆದುಕೊಂಡಿದ್ದೇನೆ. ಆಗಾಗ ಕೇಳುತ್ತಿರುತ್ತೇನೆ. ಆಗ ಮನಸ್ಸಿಗೆ ಒಂಥರ ಉಲ್ಲಾಸ ಮೂಡುತ್ತದೆ. ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು.

    ReplyDelete

Note: Only a member of this blog may post a comment.