ಒಬ್ಬಾತ ಒಂದು ಗಿಳಿಯನ್ನು ಕೊಂಡು ಕೊಳ್ಳಲು ಪಕ್ಷಿಗಳನ್ನು ಮಾರುತ್ತಿದ್ದವನ ಬಳಿ ಹೋದ.ಸುಂದರವಾಗಿದ್ದ ಗಿಳಿಯೊಂದನ್ನು ಇಷ್ಟಪಟ್ಟ.ಆದರೆ ಅದರ ಬೆಲೆ ಒಂದು ಸಾವಿರ ರೂಪಾಯಿ ,ಸ್ವಲ್ಪ ಹೆಚ್ಚಿನಿಸಿತು.ಆತ,ಅಂಗಡಿಯಾತನನ್ನು 'ಈ ಗಿಳಿ ಇಷ್ಟೊಂದು ಬೆಲೆ ಬಾಳುವಂತದ್ದೇ?ಎಂದು ಕೇಳಿದ.ಆ ಅಂಗಡಿಯವನು 'ಆ ಗಿಳಿಯನ್ನೇ ಕೇಳಿ ಬಿಡಿ'ಎಂದ.ಗಿರಾಕಿ ಗಿಳಿಗೆ ಅದೇ ಪ್ರಶ್ನೆ ಹಾಕಿದ.ಅದಕ್ಕೆ ಆ ಗಿಳಿ "ಸಂಶಯವೇ ಬೇಡ"ಎಂದಿತು.ಗಿಳಿ ನೀಡಿದ ಜಾಣ ಉತ್ತರದಿಂದ ಗಿರಾಕಿ ಬಹಳ ಪ್ರಭಾವಿತನಾದ.ಹಿಂದೆ ಮುಂದೆ ನೋಡದೆ ಸಾವಿರ ರೂಪಾಯಿ ಕೊಟ್ಟು ಗಿಳಿಯನ್ನು ಖರೀದಿಸಿದ.ಅಂತಹ ಜಾಣ ಮಾತನಾಡುವ ಗಿಳಿಯನ್ನು ಖರೀದಿಸಿದ ತನ್ನ ಜಾಣ್ಮೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡ.ಅದನ್ನು ತನ್ನ ಹೆಂಡತಿ ಮಕ್ಕಳಿಗೆ ತೋರಿಸುವ ಆತುರದಿಂದ ಮನೆಗೆ ಬಂದ.ಎಲ್ಲರ ಮುಂದೆ ಗಿಳಿಯನ್ನು ಮಾತನಾಡಿಸಲು ಶುರುಮಾಡಿದ.ಗಿಳಿಯನ್ನು"ನಿನ್ನ ಹೆಸರೇನು ಜಾಣಮರಿ ?"ಎಂದ.ಅದಕ್ಕೆ ಗಿಳಿ "ಸಂಶಯವೇ ಬೇಡ"ಎಂದು ಉತ್ತರಿಸಿತು.ಗಿರಾಕಿ ನಿರಾಸೆಯಿಂದ "ನಿನಗೆ ಬೇರೇನೂ ಮಾತಾಡಲು ಬರುವುದಿಲ್ಲವೇ?"ಎಂದ.
ಅದಕ್ಕೆ ಗಿಳಿ "ಸಂಶಯವೇ ಬೇಡ "ಎಂದು ಉತ್ತರಿಸಿತು.ಗಿರಾಕಿಗೆ ತಾನು ಮೋಸ ಹೋದದ್ದು ತಿಳಿಯಿತು.ತಲೆಯ ಮೇಲೆ ಕೈ ಹೊತ್ತು ಕುಳಿತ.ಸಿಟ್ಟಿನಿಂದ ಗಿಳಿಗೆ"ನಿನ್ನಂತಹ ಸಾಮಾನ್ಯ ಗಿಳಿಯೊಂದಕ್ಕೆ ಸಾವಿರ ರೂಪಾಯಿ ತೆತ್ತ ನಾನು ನಿಜಕ್ಕೂ ಮೂರ್ಖನೆ ಸರಿ!"ಎಂದ.ತಟ್ಟನೆ ಗಿಳಿಯಿಂದ ಉತ್ತರ ಬಂತು,"ಸಂಶಯವೇ ಬೇಡ!!!"
(ಸಾಧಾರಿತ)
ಹಾಸ್ಯದ ಜೊತೆಯಲ್ಲಿ ಸ೦ದೇಶವೂ ಇದೆ - "ಸಂಶಯವೇ ಬೇಡ!!!"
ReplyDeleteಆಭಿನ೦ದನೆಗಳು ಸರ್.
ಅನ೦ತ್
NAVELLA GINIGALAGA BEKU-EE JAGATTINALLI BADUKALU
ReplyDeletehha.. hha.. bareda riti chennaagide/... samshayave beDa..
ReplyDeleteಹಾಸ್ಯ ಚೆನ್ನಾಗಿದೆಯೇ ? ಸಂಶಯವೇ ಬೇಡ
ReplyDeleteಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.ಪ್ರತಿಕ್ರಿಯೆ ಚೆನ್ನಾಗಿದೆ.ಸಂಶಯವೇ ಬೇಡ!!
ReplyDeleteಹಾಸ್ಯ ಚೆನ್ನಾಗಿದೆ.ಸಂಶಯವೇ ಬೇಡ!!
ReplyDeleteಕತೆ ಚೆನ್ನಾಗಿದೆ....ಸಂಶಯವೇ ಬೇಡ
ReplyDeleteಚೆನ್ನಾಗಿದೆ
ReplyDeleteEllara baduku giliya tanda manushyanante ;;sanshayave beda''
ReplyDeleteನಗುವನ್ನು ಉಕ್ಕಿಸುತ್ತದೆ;ಸಂಶಯವೇ ಬೇಡ!
ReplyDeleteಸಂಶಯಪಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ..ಅಲ್ಲವೇ? ಕತೆಯ ಮರ್ಮ ಚೆನ್ನಾಗಿದೆ.
ReplyDeleteಕೃಷ್ಣಮೂರ್ತಿಯವರೆ..
ReplyDeleteಕೊನೆಯ ಪ್ರಶ್ನೆಯ ಉತ್ತರ ಮಸ್ತ್ !!
ಹಿಂದೆ ಮುಂದೆ ನೋಡದೆ ವ್ಯವಹಾರ ಮಾಡಿದ್ದಕ್ಕೆ ಇದು ನೀತಿ ಪಾಠ..
ಹಾಸ್ಯದ ಮೂಲಕ ನೀತಿಯಿದೆ..
ಧನ್ಯವಾದಗಳು..
ಈ ಕಥೆ ಓದಿದೆ ಮೇಲೆ ನನ್ನಂತವರ ಕಥೆಯೂ ಇದರಲ್ಲಿದೆ ಅನಿಸಿತು ಡಾಕ್ತ್ರೇ!
ReplyDeleteಮನೆಯಲ್ಲೇ ಮಾತಾಡುವ ಗಿಣಿಗಳನ್ನು ಇಟ್ಟುಕೊಂಡು, ಮಾತಾಡಲಾರದೇ. ಎಲ್ಲೋ ಮಾತಾಡುವ ಗಿಣಿಯನ್ನು ಕೊಂಡುತಂದ ಈ ಅವಿವೇಕಿಯಂತ ಬದುಕು ನಮ್ಮದು.
ಸರ್,
ReplyDeleteಸಂಶಯವೇ ಬೇಡ ಕತೆ ತುಂಬಾ ನೀತಿಯುಕ್ತವಾಗಿದೆ. ಆತುರಪಟ್ಟರೆ ಏನಾಗುವುದು ಎನ್ನುವುದಕ್ಕೆ ಉತ್ತಮ ಉದಾಹರಣೆ..
ಹ್ಹಾ ಹ್ಹಾ! ತುಂಬಾ ಚೆನ್ನಾಗಿದೆ ಎಂಬುದರಲ್ಲಿ ಸಂಶಯವೇ ಬೇಡ!
ReplyDeletesuper....ಸಂಶಯವೇ ಬೇಡ
ReplyDeletemasth sir...
ReplyDeleteಓದಿ ,ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ ಎಲ್ಲಾ ಬ್ಲಾಗಿಗರಿಗೂ ಮತ್ತೊಮ್ಮೆ ಅನಂತ ಧನ್ಯವಾದಗಳು.ಬರುತ್ತಿರಿ .ನಮಸ್ಕಾರ.
ReplyDeleteha ha ha... ಸಂಶಯವೇ ಬೇಡ..!!!
ReplyDeleteಡಾಕ್ಟ್ರೇ,
ReplyDeleteನಾನು ಬಹಳ ಸೊಗಸಾಗಿದೆ ಕಥೆ ಎನ್ನುತ್ತಿದ್ದೆ.,
ಸಂಶಯವೇ ಬೇಡ ಎಂದೆನ್ನುತ್ತಿದೆ ನಿಮ್ಮ ಗಿಳಿ..
krishnamoorti,sir,chutukuchataaki..chennaagide.samshayave...beda..!!
ReplyDeletegood one.
ReplyDeletePlease visit my blog
suragange.blogspot.com