೧)ಕಾಡಿನಲ್ಲಿ ಹುಲಿಯೊಂದರ ಮದುವೆ ನಡೆಯುತ್ತಿತ್ತು.ಮದುವೆಗೆ ಹುಲಿಗಳ ಬಾರಾತ್ ಹೋಗುತ್ತಿತ್ತು.ಬ್ಯಾಂಡ್ ನ ತಾಳಕ್ಕೆ ತಕ್ಕಂತೆ ಹುಲಿಗಳೆಲ್ಲಾ ಕುಣಿಯುತ್ತಿದ್ದವು.ಅವುಗಳ ಮಧ್ಯೆ ಆ ಎಲ್ಲಾ ಹುಲಿಗಳಿಗಿಂತ ಜೋರಾಗಿ ,ಹೆಚ್ಚು ಜೋಶ್ ನಿಂದ ಇಲಿಯೊಂದು ಡ್ಯಾನ್ಸ್ ಮಾಡುತ್ತಿತ್ತು.ಯಾರೋ ಒಬ್ಬರು ಇಲಿಯನ್ನು ಕೇಳಿದರು "ಹುಲಿಗಳ ಬಾರಾತ್ ನಲ್ಲಿ ನಿನ್ನಂತಹ ಇಲಿಗೇನು ಕೆಲಸ?ಹುಲಿಗೂ ,ಇಲಿಗೂ ಎಲ್ಲಿಯ ಸಂಬಂಧ?". ಅದಕ್ಕೆ ಇಲಿ "ಇದು ಸೂಕ್ಷ್ಮ ವಿಷಯ.ನಿಮಗೆಲ್ಲಾ ಅರ್ಥವಾಗೊಲ್ಲಾ ಬಿಡಿ"ಎಂದು ಹಾರಿಕೆಯ ಉತ್ತರ ನೀಡಿತು. ಪ್ರಶ್ನೆ ಕೇಳಿದವರು 'ಪರವಾಗಿಲ್ಲಾ ಹೇಳು,ಅರ್ಥ ಮಾಡಿಕೊತೀವಿ"ಎಂದು ಬಲವಂತ ಮಾಡಿದರು.ಅದಕ್ಕೆ ಇಲಿ "ನಾನೂ ಮದುವೆ ಮಾಡಿಕೊಳ್ಳುವ ಮುಂಚೆ ಹುಲಿಯಾಗೇ ಇದ್ದೆ ,ನಂತರವಷ್ಟೇ ಇಲಿಯಾದೆ "ಎಂದು ತನ್ನ ನೃತ್ಯ ಮುಂದುವರಿಸಿತು!
೨)ಬಾರ್ ಒಂದೊರಲ್ಲಿ ಕುಡುಕನೊಬ್ಬ ತನ್ನ ಮಿತ್ರನಿಗೆ ಹೇಳುತ್ತಿದ್ದ "ನಿನ್ನೆ ರಾತ್ರಿ ಹನ್ನೆರಡು ಗಂಟೆಗೆ ಮನೆ ಹತ್ತಿರ ಹೋದಾಗ ಅದೇ ಸಮಯಕ್ಕೆ ಕಳ್ಳನೊಬ್ಬ ನನ್ನ ಮನೆಗೆ ನುಗ್ಗಿದ"."ಕಳ್ಳನಿಗೆ ಏನಾದರೂ ಸಿಕ್ಕಿತೆ ?"ಮಿತ್ರನ ಪ್ರಶ್ನೆ. ಅದಕ್ಕಿವನ ಉತ್ತರ "ಓಹೋ ಸಿಗದೇ ಏನು! ಚೆನ್ನಾಗಿಯೇ ಸಿಕ್ಕಿದೆ .ಒದೆ ತಿಂದು ಆಸ್ಪತ್ರೆ ಸೇರಿದ್ದಾನೆ.ನನ್ನ ಹೆಂಡತಿ ಅವನನ್ನು ನಾನು ಎಂದು ತಪ್ಪು ತಿಳಿದು ಸಿಟ್ಟು ತೀರಿಸಿಕೊಂಡಳು !!.......ಪಾಪ ...ನನ್ನ ಬದಲು ಅವನು ಸಿಕ್ಕಿ ಹಾಕಿಕೊಂಡ.ಸಧ್ಯ ನಾನು ಬಚಾವಾದೆ "ಎಂದು ನಿಟ್ಟುಸಿರು ಬಿಟ್ಟು ಮತ್ತೊಂದು ಪೆಗ್ ಏರಿಸಿದ.
Channagide ... daktre..
ReplyDeleteNimma jokininda; I started my work with a hearty laugh...
nice jokes
ReplyDeleteನಗು ನಗುತ್ತಾ ಓದಿದೆ ನಿಮ್ಮ ಲೇಖನ !!! ಖುಷಿಯಾಗಿದೆ ನನ್ನ ಮನ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ನವಿರಾದ ಹಾಸ್ಯ ಪ್ರಸ೦ಗಗಳು. ಅಭಿನ೦ದನೆಗಳು ಸರ್.
ReplyDeleteಅನ೦ತ್
ha ha good jokes!
ReplyDeleteಮನಸಾರೆ ನಕ್ಕಿದ್ದಾಯಿತು ಡಾಕ್ಟ್ರೆ!
ReplyDeleteಹಹಹ್ಹಾ.....ನವಿರಾದ ಹಾಸ್ಯ...ಸೂಪರ್...
ReplyDeleteಸೂಪರ್ ಕಥೆ..ತುಂಬಾ ಚಿಕ್ಕ ಕಥೆ...ಚೆನ್ನಾಗಿದೆ..tiger ಕಥೆ ಸೂಪರ್..
ReplyDeleteನಿಮ್ಮವ,
ರಾಘು.
doctor sir, nice to see this post. enjoyed it
ReplyDeleteವೈದ್ಯರ ಜೊತೆ ಗುದ್ದಾಡುವುದರಲ್ಲಿ ನಗುವಿದೆ! ಅದು ಗಂಧದೊಡನೆ ಗುದ್ದಾಟವೇ ಸರಿ.
ReplyDeleteವೈದ್ಯರೊಬ್ಬರು ಹೇಳಿದರಂತೆ " ನಿಮ್ಮ ಬೊಜ್ಜಿನ ಸಮಸ್ಯೆ ನಿವಾರಣೆಯಾಗಲು ದಿನಾಲೂ ರಾತ್ರಿ ಎರಡು ಚಪಾತಿ ತಿನ್ನುವುದನ್ನು ರೂಢಿಸಿಕೊಳ್ಳಿ"
ರೋಗಿ ಪ್ರಶ್ನಿಸಿದ " ಸರ್, ಚಪಾತಿ ಊಟಕ್ಕೂ ಮೊದಲೋ ಅಥವಾ ಊಟದ ನಂತರವೋ ? "
--
ನಮಸ್ಕಾರ
ಸೂಪರ್ ಜೋಕುಗಳು.
ReplyDeleteದಿನ ನಿತ್ಯದ ಜಂಜಾಟದ ಬದುಕಿನಲ್ಲಿ ಈ ನಗೆ ಹನಿಗಳು ನಿಮ್ಮ ಮನಸ್ಸನ್ನು ಸ್ವಲ್ಪ ಹಗುರಾಗಿಸಿದರೆ ಅಷ್ಟೇ ಸಾಕು.ಓದಿ ,ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.
ReplyDeleteha ha ha.. sooper :)
ReplyDeleteoffcinalli oduttidde....
ReplyDeletenakku nakku saakaaytu....
ellaru .."'yaake'' endu keLtaa idru...
heLide..
avaru nakkaru...
tumbaa chennaagide sir..
ಅಯ್ಯೋ ಪಾಪ., ಮಾಡಿದ್ದೆಲ್ಲಾ ತಪ್ಪು ಅರಗಿಸಿಕೊಂಡಿದ್ದ ಕಳ್ಳನಿಗೆ ಒಳ್ಳೆಯ ಶಿಕ್ಷೆ ಆಗಿದೆ.
ReplyDeletenice haasya
ReplyDeleteand laasya