Tuesday, November 1, 2011

"ಕನ್ನಡಮ್ಮನ ಅಳಲು"

ಇಂದು ಕನ್ನಡ ರಾಜ್ಯೋತ್ಸವ.ಎಲ್ಲೆಲ್ಲೂ ಕನ್ನಡದ ಕಲರವ!ಮನಸ್ಸುಖುಷಿಯಿಂದ  ಗರಿಗೆದರಿ ಹಾರಾಡುತ್ತದೆ.ಈ ನೆಲ ,ಈ ಜಲ,ಈ ಭಾಷೆಯ ವೈವಿಧ್ಯಮಯ ಸೊಗಡು, ನೆನಸಿಕೊಂಡರೆ ಮೈ ನವಿರೇಳುತ್ತದೆ!ಕನ್ನಡ ಸಾಹಿತ್ಯವಂತೂ ನನಗೆ ಅಚ್ಚುಮೆಚ್ಚು! ಆದರೂ ಕೆಲವೊಮ್ಮೆ ಅವಿದ್ಯಾವಂತ ಕನ್ನಡಿಗರ ಸ್ಥಿತಿ ನೋಡಿ ಮನ ಕಲಕುತ್ತದೆ.ಸುಮಾರು ಆರು ವರ್ಷಗಳ  ಹಿಂದೆ ನಡೆದ ಮನ ಮಿಡಿಯುವ ಘಟನೆಯೊಂದು ನೆನಪಿನ ಮೂಲೆಯೊಂದರಲ್ಲಿ ಉಳಿದುಬಿಟ್ಟಿದೆ.ಈ ದಿನ ಆ ಘಟನೆ ಮತ್ತೆ ,ಮತ್ತೆ ನೆನಪಾಗುತ್ತಿದೆ.ನನ್ನ ಬ್ಲಾಗಿನಲ್ಲಿ ಇದರ ಬಗ್ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದಿದ್ದೆ.ಈ ದಿನ ಮತ್ತೆ ಬರೆಯಬೇಕಿನಿಸಿದೆ.ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನನ್ನ ಟ್ರೈನಿಗಾಗಿ ಕಾಯುತ್ತಿದ್ದೆ.ಹಳ್ಳಿ ಹೆಂಗಸೊಬ್ಬಳು ತನ್ನ ಎರಡು ಮಕ್ಕಳನ್ನು ಕಟ್ಟಿಕೊಂಡು, ಕಂಡ ಕಂಡವರನ್ನು ,'ಯಪ್ಪಾ ನಿಮಗೆ ಕನ್ನಡ ತಿಳೀತೈತೇನ್ರಿ?'ಎಂದು ದೈನ್ಯದಿಂದ ಕೇಳುತ್ತಿದ್ದಳು.ನಾನು ಅವಳನ್ನು ಕನ್ನಡದಲ್ಲಿ ಮಾತಾಡಿಸಿದಾಗ ಅವಳ ಮುಖ ನಿಧಿ ಸಿಕ್ಕಂತೆ ಅರಳಿತು.'ಏನ್ಮಾಡೋದ್ರೀ ಯಪ್ಪಾ ,ಇಲ್ಲಿ ಯಾರಿಗೂ ಕನ್ನಡ ತಿಳೀವಲ್ತು!ಹೊಸಪೇಟಿ ಬಂಡಿ ಎಲ್ಲಿ ಬರತೈತ್ರೀ ?'ಎಂದಳು.ನಾನು ಅವಳಿಗೆ ಅವಳು ಹೋಗಬೇಕಾದ ಪ್ಲಾಟ್ ಫಾರಂ  ತೋರಿಸಿ ಬಂದೆ. 'ನಿನ್ನ  ಮಕ್ಳಿಗೆ ಪುಣ್ಯ ಬರಲಿರೀ ಯಪ್ಪಾ!'ಎಂದು ಬೀಳ್ಕೊಟ್ಟಳು.ಈ ಘಟನೆ ನಡೆದದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ!
ಇದನ್ನು' ಕನ್ನಡಮ್ಮನ ಅಳಲು'ಎನ್ನೋಣವೇ?ಈಗ ಸ್ಥಿತಿ ಸ್ವಲ್ಪ ಸುಧಾರಿಸಿರಬಹುದು.ಆದರೂ ,ಕನ್ನಡ ನಾಡು ,ನುಡಿ ಮತ್ತು ಕನ್ನಡ ಜನರಿಗಾಗಿ ನಾವೇನು ಮಾಡಬಹುದು ಎಂದು ಪ್ರತಿಯೊಬ್ಬರೂ ಯೋಚಿಸಬೇಕಾದ ಸಮಯ ಇದಲ್ಲವೇ?ಎಲ್ಲ ಕನ್ನಡಿಗರಿಗೂ ಶುಭವಾಗಲಿ ಎಂದು ಹಾರೈಸೋಣ.

10 comments:

  1. yaako bere Urige hogiddaaga kannaDa keLidare siguva santoshakke tukave bere alvaa saar...

    ReplyDelete
  2. ನಿಜ ಸಾರ್,
    ಬೆಂಗಳೂರಲ್ಲಿ ಕನ್ನಡಿಗನ ಅತಂತ್ರವನ್ನು ಸಮರ್ಥವಾಗಿ ಚಿತ್ರಿಸಿದ್ದೀರ. ಜೊತೆಗೆ ಘಟನೆಯಲ್ಲಿ ನೀವು ವಹಿಸಿದ ಪಾತ್ರವೂ ಶ್ಲಾಂಘನೀಯ.
    ಕನ್ನಡಿಗನಾಗಿ ನಮ್ಮ ಮುಂದಿನ ಕರ್ತವ್ಯಗಳೇನು ಎನ್ನುವುದು ಹಿರಿಯರಾದ ನಿಮ್ಮಿಂದ ಮಾರ್ಗದರ್ಶನವಾಗಲಿ.
    ಕನ್ನಡವೇ ಸತ್ಯ ಕನ್ನಡವೇ ನಿತ್ಯ.

    ReplyDelete
  3. ಕನ್ನಡಿಗರಿಗೇ ಕನ್ನಡದ ಬಗ್ಗೆ ಅಸಡ್ಡೆ.

    ReplyDelete
  4. ನಿಜ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರೇ ವಿರಳವಾಗಿದ್ದಾರೆ. ರಾಜ್ಯೋತ್ಸವದ ಶುಭಾಶಯಗಳು

    ReplyDelete
  5. ನಿಜಕ್ಕೂ ಇದು ಕನ್ನಡಮ್ಮನ ಅಳಲು ಸಾರ್... ಬೆಂಗಳೂರಿನಲ್ಲಿ ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ.. ಬದಲಿಗೆ ಕೆಟ್ಟುಹೋಗಿದೆ ಎಂಬುದು ನಿಜ.. ಎಲ್ಲಾ ಐ.ಟಿ ಬಂದಾಗಿನಿಂದ... ಮುಂದೆ ಎಂದಾದರೂ ಸಾಕಷ್ಟು ಕನ್ನಡಿಗರು ಇಲ್ಲದ ಕಾರಣ ಬೆಂಗಳೂರನ್ನು ಕರ್ನಾಟಕದಿಂದ ಬೇರ್ಪಡಿಸಿ Union Territory ಮಾಡುವ ದುಸ್ಸಾಹಸಕ್ಕೂ ಇಲ್ಲಿನ ಇತರೆ ರಾಜ್ಯದ ಜನ ಕೈಹಾಕಬಹುದು!

    ReplyDelete
  6. ಇದು ವಿಷಾದದ ಸಂಗತಿ.

    ReplyDelete
  7. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಬರುತ್ತಿರಿ ಬಂಧುಗಳೇ.ನಮಸ್ಕಾರ.

    ReplyDelete

Note: Only a member of this blog may post a comment.