Saturday, November 5, 2011

"ಸ್ಕ್ಯಾನಿಂಗ್ ರಿಪೋರ್ಟ್!!!"

ಅವನು ಸುಮಾರು ಇಪ್ಪತ್ತೆರಡರ ಯುವಕ.ಹಲವು ದಿನಗಳಿಂದ ಇದ್ದಕ್ಕಿದ್ದಂತೆ ಎಡಗಡೆ ಪಕ್ಕೆಯ ಭಾಗದಲ್ಲಿ ವಿಪರೀತ ನೋವು ಬರುತ್ತಿದೆ ಎಂದು ಹೇಳಿಕೊಂಡು ನಮ್ಮ ಆಸ್ಪತ್ರೆಗೆ ಬಂದ.ಮೂತ್ರ ಪರೀಕ್ಷೆಯಲ್ಲಿ ಕೆಲವು ಬದಲಾವಣೆಗಳು ಕಂಡು ಬಂದಿದ್ದರಿಂದ ಅವನ ಕಿಡ್ನಿ ಯಲ್ಲಿ ಏನಾದರೂ ಕಲ್ಲುಗಳಿವೆಯೇ(Renal calculi) ಎಂದು ನೋಡಲು ಅವನನ್ನು ಶಿವಮೊಗ್ಗೆಯ ಸ್ಕ್ಯಾನಿಂಗ್ ಸೆಂಟರ್ ಒಂದಕ್ಕೆ 'ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್' ಗಾಗಿ ಕಳಿಸಿದೆವು.ಯುವಕ ಮಾರನೇ ದಿನ ಸ್ಕ್ಯಾನಿಂಗ್ ರಿಪೋರ್ಟ್ ತೆಗೆದುಕೊಂಡು ಬಂದ.ನಾವು ಅಂದುಕೊಂಡಿದ್ದಂತೆ ಅವನ ಎಡಗಡೆಯ ಕಿಡ್ನಿಯಲ್ಲಿ ಸಣ್ಣ ಸಣ್ಣ ಹರಳುಗಳಿದ್ದವು. ಆ ರಿಪೋರ್ಟ್ ಪ್ರಿಂಟ್ ಆಗಿದ್ದ format ನಲ್ಲಿತ್ತು.ಅದರಲ್ಲಿ ಎಲ್ಲಿ ತೊಂದರೆ ಇದೆಯೋ ಅದರ ಬಗ್ಗೆ ಬರೆದು ಮಿಕ್ಕ ಕಾಲಂ ಗಳಲ್ಲಿ normal ಎಂದು ಬರೆದು ಕಳಿಸುವುದು ಅವರ  ರೂಢಿ.ಆದರೆ ಈ ರೀತಿ routine ಆಗಿ ಕಾಲಂ ಗಳನ್ನು ತುಂಬಿ ಕಳಿಸಿದರೆ ಆಗುವ ಆಭಾಸವನ್ನು ನೀವೇ ನೋಡಿ. ಅದರಲ್ಲಿದ್ದ ಮಿಕ್ಕ ಕಾಲಂ ಗಳ ರಿಪೋರ್ಟ್ ಈ ರೀತಿ ಇತ್ತು:
Rt.Kidney;normal
Liver;normal,
Gall bladder:normal
UTERUS(ಗರ್ಭಕೋಶ): NORMAL
OVARIES(ಅಂಡಾಶಯಗಳು): NORMAL
ಗಂಡಸೊಬ್ಬನ ಸ್ಕ್ಯಾನಿಂಗ್ ರಿಪೋರ್ಟಿನಲ್ಲಿ ಗರ್ಭ ಕೋಶ ಮತ್ತು ಅಂಡಾಶಯಗಳು NORMAL ಎಂದು ರಿಪೋರ್ಟ್!!ಅವನ ಈ ರಿಪೋರ್ಟ್ ನೋಡಿ ನಮ್ಮ ಮಹಿಳಾ ವೈಧ್ಯಾಧಿಕಾರಿಗಳು ಬಿದ್ದು,ಬಿದ್ದು ನಗುತ್ತಿದ್ದರು.ನಾನೂ ನಗುತ್ತಲೇ ನನ್ನ ಚೇಂಬರ್ ಗೆ ಹೋದೆ.
 

18 comments:

  1. ಹೇಮು;ನಾವು ಸ್ಕ್ಯಾನಿಂಗ್ ಸೆಂಟರ್ ಅವರನ್ನು ಕಾರಣ ಕೇಳಿದರೆ ನೀವು ಹೇಳಿದ ರೀತಿ ರಿಪೋರ್ಟ್ ಕೊಡಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  2. ಹಹ್ಹಾಹ್ಹಾ! ಗರ್ಭಾಶಯವು normal ಇರುವ ಯುವಕ abnormal ಅನ್ನಿ!

    ReplyDelete
  3. ಸುನಾತ್ ಸರ್;ಗರ್ಭಾಶಯ ನಾರ್ಮಲ್ ಇರುವವನ ಡೆಲಿವರಿ ಕೂಡ ನಾರ್ಮಲ್!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಪ್ರದೀಪ್ ರಾವ್:ಪ್ರತ್ಕ್ರಿಯೆಗೆ ಧನ್ಯವಾದಗಳು :D

    ReplyDelete
  5. ವಸಂತ್;ಸ್ವಲ್ಪ ಅಜಾಗರೂಕತೆ ಎಂತಹ ಆಭಾಸಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ವೈದ್ಯಲೋಕದ ವಿಸ್ಮಯಗಳು :-)

    ReplyDelete
  7. @ಸಂತಸಜಾಯ್;ಹ....ಹಾ..ಹಾ....!ಹಾಗನ್ನಬಹುದು.ನನ್ನ ಬ್ಲಾಗಿಗೆ ಸ್ವಾಗತ.ಬರುತ್ತಿರಿ.ನಮಸ್ಕಾರ.

    ReplyDelete
  8. ಅಭಾಸ ಸ್ಕ್ಯಾನು ಪುರಾಣಂ!
    ಒಳ್ಳೆ ಕಚಗುಳಿಗೆ ಧನ್ಯವಾದಗಳು.
    ಹ್ಹಹ್ಹಹ್ಹಾ...

    ಕೆಲವು ಅಭಾಸ ಸ್ಯಾಂಪಲ್ಲುಗಳು :
    ನಂಜಪ್ಪ ಹೆರಿಗೆ ಆಸ್ಪತ್ರೆ
    ದೇವರಿಗೆ ಮಹಿಮೆ
    ಆನಂದ 'ವಿಲ್ಲಾ'
    ರೂಪ 'ವಿಲ್ಲಾ'

    ReplyDelete
  9. ಬದರಿ;"ರೂಪ ವಿಲ್ಲಾ"ಎನ್ನುವ ಮನೆಯ ಬೋರ್ಡಿನ ಕೆಳಗೆ ಯಾರೋ ಕಿಡಿಗೇಡಿಗಳು 'ಪರವಾಗಿಲ್ಲಾ'ಎಂದು ಬರೆದಿದ್ದರಂತೆ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಹಹಹಹ ...ಡಾಕ್ಟ್ರೇ...ಪಾಪ ಅವರು ನೀವು ಯಾರೋ ಬೇರೆಯವರ ಬಗ್ಗೆ ಕೇಳಿದ್ದನ್ನು ಈ ಹುಡುಗನ ಬಗ್ಗೆ ಮಿಕ್ಸ್ ಅಪ್ ಮಾಡಿ ಬರೆದು ಕಳ್ಸಿದ್ರೋ ಹ್ಯಾಗೆ...ಸದ್ಯ...ಪ್ರಗ್ನೆನ್ಸಿ ಸಸ್ಪೆಕ್ಟೆಡ್ ಅಂತ ಇನ್ನೇನೋ ಬರೀಲಿಲ್ಲಲ್ಲಾ...???

    ReplyDelete
  11. ಅಜಾದ್ ಸರ್;ಹ....ಹ..ಹಾ !ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. It is common error in USG report.Nothing funny.

    ReplyDelete
  13. daaktar saar ee lekhana haasyavaagiddaroo, yochisabekaada vichaaragalive. aadare kelagina kaament nodi nagubantu.haagu vishaadavaayitu.[suragange.blogspot.com said...

    It is common error in USG report.Nothing funny.] janara aarogyada bagge neediruva tappu reportannu idu kaaman annuva janara manobhaava badalaagabeku.

    ReplyDelete
  14. @suragange.blogspot.com:If you think that a report saying 'a male is having female organs' is a common error in a report and there is nothing funny,I am surprised.I have no comments.

    ReplyDelete
  15. ಬಾಲೂ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete

Note: Only a member of this blog may post a comment.