Thursday, November 3, 2011

"ಎಲೇಲೆ ರಸ್ತೇ!ಏನೀ ಅವ್ಯವಸ್ಥೆ?!"

ಪಾಪಿ ಚಿರಾಯು !
ಈ ಕೆಟ್ಟ ರಸ್ತೆಯ ಹಾಗೆ !
ಒಂದು ಕಡೆಯಿಂದ 
ಮರಮ್ಮತ್ತು ನಡೆಯುತ್ತಿದ್ದಂತೆ 
ಮತ್ತೊಂದು ಕಡೆಯಿಂದ 
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ 
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ 
ಜಲ್ಲಿ ಕಲ್ಲಿನ ಹಿಂದೆ 
ಕೋಟಿಗಟ್ಟಲೆ ಹಣದ 
ಲೂಟಿಯ ಕಥೆ!
ಟಾರಿನಂತೆಯೇ 
ಕೊತ ಕೊತನೆ ಕುದಿವವರ  
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ !
ಇದ್ದ  ಬದ್ದ 
ಇಂಚಿಂಚು ಜಾಗವನ್ನೂ 
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ 
ಹಳ್ಳ ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು 
ಧರಣಿ ಕೂತಿವೆಯೇ ಹೇಗೆ !?
ಎಷ್ಟು ಹೇಳಿದರೂ ಅಷ್ಟೇ!
ಎಷ್ಟು ಹಳಿದರೂ ಅಷ್ಟೇ !
ಇದು ತೀರದ, ಮುಗಿಯದ 
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ 
ಬವಣೆಗಳ ಹಾಗೆ !!!

17 comments:

  1. waav....

    tumbaa chennaagi barediddiri.....

    ishta aaytu.....

    summane manassige banda vishayada bagge bareyodu bere...
    vishayada bagge bareyodu bere alvaa sir...

    tumbaa chennaagide....

    ReplyDelete
  2. ತಾಕಬೇಕಾದವರ ಮರ್ಮಕ್ಕೆ ತಾಕಬಲ್ಲ ಕವನ ಕೊಟ್ಟಿದ್ದೀರಿ ಸರ್,

    ರಸ್ತೆಯ ಅವನತಿಯ ಸ್ಪಶ್ಃತ ಚಿತ್ರಣ ಇಲ್ಲಿದೆ. ಭಾಷೆಯು ಸರಳ ಗುಳಿಗೆಯಂತೆ ಓದಿಸಿಕೊಂಡು ಹೋಗುತ್ತಾ, ಚಿಂತನೆಗೆ ಹಚ್ಚುತ್ತೆ. ನಿಮ್ಮ ಇತ್ತೀಚಿನ ಕವನಗಳಲ್ಲಿ ಅತ್ಯುತ್ತಮ ಕವನವಿದು.

    ಇಂತಹ ಪರಮ ದರಿಧ್ರ ರಸ್ತೆಯಲ್ಲಿ ಕಾರು ಚಲಾಯಿಸುತ್ತಾ, ಹಳ್ಳ ದಿಣ್ಣೆಗಳಲ್ಲಿ ಎಗರೆಗರಿ ಬೀಳುತ್ತಾ, ಅವ್ಯವಸ್ಥೆಯ ಬಗ್ಗೆ ಅದೆಷ್ಟು ಬೈದುಕೊಂಡಿರೋ ಅಷ್ಟೂ ಇಲ್ಲಿ ವೈದ್ಯವಾಗಿದೆ.

    ರಾಜ ಕಾಲುವೆಗಳನ್ನು ಒತ್ತುವರಿ ಮಾಡಿ ಬೆಂಗಳೂರನ್ನೂ ಹದಗೆಡೆಸುತ್ತಿದ್ದಾರೆ.

    ಸಿಂಪ್ಲೀ ಸೂಪರ್ರೂ...

    ReplyDelete
  3. ದಿನಕರ್;ಇಂತಹ ರಸ್ತೆಗಳಲ್ಲಿ ದಿನ ನಿತ್ಯ ಸಂಚರಿಸಬೇಕಾದ ನಮ್ಮನಿಮ್ಮಂಥವರ ಅವಸ್ಥೆಯನ್ನು ಯಾರಿಗೆ ಹೇಳುವುದು? ಯಾರಿಗೆ ಹೇಳೋಣಾ ನಮ್ಮ ಪ್ರಾಬ್ಲಮ್ಮು? ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಬದರಿ;ಇಂತಹ ರಸ್ತೆಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಮೂಳೆಮತ್ತು ಕೀಲುಗಳ ತೊಂದರೆ ಕಾಣಿಸಿಕೊಳ್ಳುವುದು ಖಂಡಿತಾ.ಎರಡು ದಿನ ಪ್ರಯಾಣಿಸಿದ್ದಕ್ಕೇ ಮೈಯೆಲ್ಲಾ ನುಜ್ಜು ಗುಜ್ಜಾಗಿದೆ.ಇನ್ನು ದಿನ ನಿತ್ಯ ಪ್ರಯಾಣ ಮಾಡುವವರನ್ನು ಆ ಧನ್ವಂತರಿಯೇ ಕಾಯಬೇಕು!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಡಾಕ್ಟ್ರೆ ಸೂಪರ್ರಾಗಿ ನಮ್ಮ ಪ್ರಬ್ಲಾಮ್ಮನ್ನ ಹೇಳಿದಿರಿ ನೋಡಿ..
    ಇದು ತೀರದ, ಮುಗಿಯದ
    ಕರ್ಮ ಕಾಂಡ !
    ನಮ್ಮೆಲ್ಲರ ಬದುಕಿನ
    ಬವಣೆಗಳ ಹಾಗೆ !

    ReplyDelete
  6. ಮೌನ ರಾಗ ಮೇಡಂ;ನಾವು ಕೆಟ್ಟ ರಸ್ತೆಬಗ್ಗೆ ಬರೆಯುವುದು ನಿಲ್ಲಿಸಿ ನುಣುಪಾದ ಸುಂದರ ರಸ್ತೆಯ ಬಗ್ಗೆ ಬೇಗ ಬರೆಯುವಂತಾಗಲಿ ಎನ್ನುವ ಹಾರೈಕೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಕೃಷ್ಣಮೂರ್ತಿಯವರೆ,
    ನಿಮ್ಮ ಕವನ ಹಾಗು ಚಿತ್ರ ಇವು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿವೆ. ಪರಿಸ್ಥಿತಿ ಸುಧಾರಿಸಲು ಸಾಧ್ಯವೆ?

    ReplyDelete
  8. ಸುನಾತ್ ಸರ್;ಪರಿಸ್ಥಿತಿ ಸುಧಾರಿಸಲು ಸಾಧ್ಯ ಎಂದು ನಂಬೋಣ.ಪ್ರತಿಕ್ರಿಯೆಗೆ ಧನ್ಯವಾದಗಳು ಸರ್.ನಮಸ್ಕಾರ.

    ReplyDelete
  9. NAMMA HOLASU RAJAKEEYADA ONDU BHAGA EE RASTE.
    JATHEGEE MADHYAMA VARGADAVARA JEEVANADA DAARIYOO HEEGEYE.CHENNAGIDE

    ReplyDelete
  10. JEEVANADA PAYANADA RASTEYOO HEEGEYE ALLAVE? SUDHARANEGE PRAYATNISONA

    ReplyDelete
  11. ಹೆಮಚಂದ್ರ;ನೀವು ಹೇಳುತ್ತಿರುವುದು ಸರಿಯಾಗಿದೆ.ನಮ್ಮ ಮಧ್ಯಮ ವರ್ಗದವರ ಬದುಕಿನ ದಾರಿಯೂ ಹಳ್ಳ ಹಿಡಿದಿದೆ.ಸರಿ ಹೋಗುತ್ತದೆ ಎಂಬ ಆಶಾವಾದವಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. change maaDi bareda riti mattU suppar...........

    ReplyDelete
  13. ಪ್ರದೀಪ್ ರಾವ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. ಕೃಷ್ಣಮೂರ್ತಿ ಸರ್,

    ನಿಮ್ಮಂತಹ ವೈದ್ಯರು ರಸ್ತೆಗಳಿಗೂ ಇದ್ದರೆ ಎಷ್ಟು ಚೆನ್ನಾಗಿತ್ತು !
    ತುಂಬಾ ಮಾರ್ಮಿಕವಾದ ಕವನ

    ReplyDelete
  15. @ಅಪ್ಪ-ಅಮ್ಮ:ಕವನ ಇಷ್ಟಪಟ್ಟು ಓದಿ ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  16. ಈ ರಸ್ತೆಗಳೆಲ್ಲಾ ಕರ್ನಾಟಕದಲ್ಲೇ ಏಕೆ ಬಂದು ಬಿದ್ದಿವೆ ಅಂಥಾ ನನಗೆ ಯೋಚನೆ.

    ReplyDelete

Note: Only a member of this blog may post a comment.