Thursday, January 5, 2012

"ಜಾಯೆತೋ.....ಜಾಯೇ..ಕಹಾಂ ? "

ಬ್ಲಾಗ್ ಲೋಕದಿಂದ ವಿಮುಖನಾಗುತ್ತಿದ್ದೇನೆಯೇ?ಗೊತ್ತಿಲ್ಲ.ದಿನಕ್ಕೊಂದು ಬರಹವನ್ನು ಶೃಷ್ಟಿ ಮಾಡುತ್ತಿದ್ದ ಮನಸ್ಸು ಏಕೋ ಮಂಕಾಗಿದೆ !ಬ್ಲಾಗಿನ ಬರಹ ಪೋಸ್ಟ್ ಮಾಡಿ ಮೂರು ವಾರವಾಯಿತು.ಅದಕ್ಕೂ ಹಿಂದಿನ ಎರಡು ಬರಹಗಳೂ ಹಳೆಯ ಸರಕೇ!
ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಹೆಚ್ಚು ಹೆಚ್ಚು ನಿರಮ್ಮಳವಾಗಿ ಇರಬೇಕೆಂದುಕೊಂಡಷ್ಟೂ, ದಿನ ನಿತ್ಯದ ಜಂಜಾಟಗಳಿಂದ,ಸ್ವಾರ್ಥಿಗಳ ನಡವಳಿಕೆಯಿಂದ ಮನಸ್ಸು ಮುದುಡಿಹೋಗಿ,ಸೃಜನ ಶೀಲತೆ ಕಮ್ಮಿಯಾಗಿದೆ. 'ಜಾಯೆತೋ ಜಾಯೆ ಕಂಹಾ..... 'ಎನ್ನುವ ಹಳೆಯ ಹಿಂದಿ ಹಾಡೊಂದು ಪದೇ ಪದೇ ನೆನಪಾಗುತ್ತಿದೆ. ಒಂದು ರೀತಿಯ ಅತಂತ್ರ ಸ್ಥಿತಿ ! ಇದು ಪ್ರತಿ ಯೊಬ್ಬರ, ಪ್ರತಿನಿತ್ಯದ ಅನುಭವ!ಅಲ್ಲವೇ?ಈ ಚಕ್ರವ್ಯೂಹದಿಂದ ಹೊರ ಬರುವುದನ್ನು ನಾವೇ ಕಂಡು ಕೊಳ್ಳಬೇಕು.ನಿಮ್ಮೆಲ್ಲರ ಪ್ರೀತಿ ,ಆದರ,ಸ್ನೇಹ ಮತ್ತು ಶುಭ ಹಾರೈಕೆ ಮತ್ತೆ ನನ್ನ ಬರಹಕ್ಕೆ ಹೊಸ ಕಸುವನ್ನೂ,ಚೈತನ್ಯವನ್ನೂ ತುಂಬಲಿ.ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲಾಗುತ್ತಿಲ್ಲ.ಕ್ಷಮೆ ಇರಲಿ.ನಮಸ್ಕಾರ.

19 comments:

  1. ನಮಗೂ ಅದೇ ಆಶ್ಚರ್ಯ
    why lion is so silent? It must be roaring ಅಂತಾ!

    ಬ್ಲಾಗುಗಳ ರಾಜನಿಗೆ ಎಲ್ಲೋ ಯಾರಿಂದಲೋ ಮನಸಿಗೆ ತೀವ್ರ ಬೇಸರ ಆಗಿದೆ ಎನ್ನುವ ಅನುಮಾನ Dr. DTK Fans Clubಗೂ ಬಂದಿತ್ತು.

    ಆದ್ಯಾತ್ಮ ಪಠನದಿಂದ ಬಲು ಬೇಗ ನಿಮಗೆ ಮನೋ ಚೈತನ್ಯ ದೊರೆಯಲಿ.

    ಮತ್ತೆ ಕೊಳಲು ನಮ್ಮಂತ ಗೋವುಗಳಿಗೂ ಗೋಪಿಕೆಯರಿಗೂ ದಾರಿ ದೀಪವಾಗಲಿ.

    ಅಂದಹಾಗೆ ತಮ್ಮ ಹಿಂದಿ ಅಮರ ಗೀತೆಗೆ ನನ್ನ ರಫೀ ಸಾಬರ ಕನ್ನಡ counter:
    "ನೀನೆಲ್ಲಿ ಅಲೆವೆ ದೂರ?"

    ReplyDelete
  2. doctor sir, happy new year..this type of feeling was there in me too. however i shrugged off and has posted new blog, plz visit.

    ReplyDelete
  3. ಮುರಳಿಯ ನಾಧವಿಲ್ಲದೆ ಬ್ಲಾಗ್ ಲೋಕ ಮಂಕಾಗಿದೆ. ಯಾಕೋ ಕಳೆದ ವರ್ಷದ ಅಂತ್ಯದಲ್ಲಿ ಬೇಸರದ ಅಪಶ್ರುತಿ ಹೊರಟಿತ್ತು. ಹೊಸ ವರುಷದ ೨೦೧೨ ರಲ್ಲಿ "ಜಾಯೆ ತೋ ಜಾಯೆ ಕಹಾ " ಹಾಡಿನಿಂದಾ ರಫಿಯಂತೆ ಜೋರಾಗಿ "ಯಾಹೂ" ಅಂತಾ ಉಲ್ಲಾಸದಿಂದ ಹಾಡುವಂತಾಗಲಿ. ಡಾಕ್ಟರ್ ಸರ್ ತಮಗೆ ಶುಭಾಶಯಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. EEGINA ATANTRA STHITHIYE MUNDE NIMMANNU GATTIGOLISUVADU.CHINTE BEDA. BAREYALEBEKEMBA HATHA BEDA. NIMMA JOTHEGIDDENE.

    ReplyDelete
  5. ಹೊಸ ವರ್ಷದಿ ಮನದ ಕಹಿಯೆಲ್ಲಾ ಮರೆಯಾಗಿ
    ಹೊಸ ಆನಂದ ನವ ಉತ್ಸಾಹ ಮನದಿ ಹೊಮ್ಮಲಿ
    ಮನದಿ ಮೂಡಿದ ಆ ಹುರುಪು ಬ್ಲಾಗ್ನಲ್ಲಿ ಹರಿದು
    ಓದುಗರಾದ ನಮ್ಮ ಚೈತನ್ಯವನೂ ಜಾಗ್ರತಗೊಳಿಸಲಿ.
    ಹೊಸ ವರ್ಷದ ಶುಭಾಷಯಗಳು ಸರ್ :)

    ReplyDelete
  6. ಮೂರ್ತಿ ಸರ್.....
    ನಾನು ನಿಮ್ಮ ಬರಹಗಳ ಅಭಿಮಾನಿ, ನಿಮ್ಮ ಬ್ಲಾಗ್ ನಲ್ಲಿ ಮೊದಲಿನ ಹಾಗೆ ಬರಹಗಳು ಬರುತ್ತಿಲ್ಲ ಎಂಬುದನ್ನು ನೋಡಿದ್ದೇನೆ....ಸರ್....ನಾನು ಇದೇ ತರಹದ ಪರಿಸ್ಥಿತಿಯನ್ನು ಅನುಭವಿಸಿದವ.....ಈಗ ಎಲ್ಲವನ್ನು ಮರೆತಿದ್ದೇನೆ......ನಿಮ್ಮ ನೋವು ಏನು ಎಂಬುವುದು ಅರ್ಥವಾಗದಿದ್ದರೂ ಅದನ್ನು ಮರೆಯುವಲ್ಲಿ ನಾವೆಲ್ಲಾ ನಿಮ್ಮ ಜೊತೆಗಿರುತ್ತೇವೆ.......ಅದು ಅಲ್ಲದೆ ನಿಮ್ಮ 'ಬರಹ' ಗಳೇ ಇಂತಹ ನೋವನ್ನು ಮರೆಯಲು ನಿಮಗೆ ನೆರವಾಗುತ್ತದೆ.......ಹೊಸ ವರುಷ ನಿಮಗೆ, ಹೊಸ ಹರುಷ ಹುರುಪು ಕೊಡಲಿ.....ನಿಮ್ಮ ಬ್ಲಾಗ್ ಮೊದಲಿಗಿಂತ ಹೆಚ್ಚ್ಹು ಬೆಳಗಲಿ........

    ನನ್ನ ಬ್ಲಾಗ್ ಗೂ ಬನ್ನಿ ಸರ್............ಹೊಸ ವರ್ಷದ ಹಾರ್ದಿಕ ಶುಭಾಶಯಗಳು...

    ReplyDelete
  7. ಡಾಕ್ಟ್ರೆ...

    ನಮಗೆಲ್ಲ ಖುಷಿ ಕೊಡುವ ನೀವೇ ಹೀಗಾದರೆ ಹೇಗೆ...??

    ನೀವು ಲವಲವಿಕೆಯಿಂದಿರಿ...
    ಎಲ್ಲವೂ ಸರಿಯಾಗುತ್ತದೆ...

    ಸಮಸ್ಯೆ ಏನು?

    ದಯವಿಟ್ಟು ದಯವಿಟ್ಟು ಹೇಳಿ..

    ಮಧ್ಯದಲ್ಲಿ ಶಸ್ತ್ರ ಸನ್ಯಾಸ ಮಾಡಬೇಡಿ...

    ನಾವೆಲ್ಲ ನಿಮ್ಮ ಜೊತೆಗಿದ್ದೇವೆ... ಜೈ ಜೈ ಜೈ ಹೋ !!

    ReplyDelete
  8. ಹೊಸ ವರ್ಷದ ಶುಭಾಶಯಗಳು ಸರ್.
    ಸಂಕ್ರಾಂತಿ ಹತ್ತಿರವಿದೆ.
    ಎಲ್ಲವೂ ಬದಲಾಗುತ್ತದೆ :)
    take your time and come back with a roar :)
    ಸ್ವರ್ಣಾ

    ReplyDelete
  9. ಕೃಷ್ಣಮೂರ್ತಿಯವರೆ,
    ಎಲ್ಲರದೂ ಒಂದೇ ಒಕ್ಕೊರಲ ಮನವಿ: Cheer up and come back! ಹೊಸ ವರ್ಷದ ಶುಭಾಶಯಗಳು.

    ReplyDelete
  10. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಶರಣು.ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  11. ಏಳು-ಬೀಳುಗಳು ಬಾಳಿನುದ್ದಕ್ಕೂ ಇವೆ... ತಾವು ಇದರಿಂದ ಬೇಗ ಹೊರಬರುವಿರಿ ಮತ್ತು ಮೊದಲಿನ ಲಯ ಕಂಡುಕೊಳ್ಳುವಿರಿ ಎಂಬ ಭರವಸೆ ಇದೆ...

    ReplyDelete
  12. ಡಾಕ್ಟ್ರೆ ,ನೀವೇ ಹೀಗೆಂದರೆ ಹೇಗೆ? ನಮಗಂತೂ ನಿಮ್ಮ ಬರಹದ ಟಾನಿಕ್ಕು ಬೇಕೇ ಬೇಕು ನೋಡಿ...

    ReplyDelete
  13. Sir, nandu ade kathe aagide, blog bareyoke manasse barta illa, ivattu ashte ondu blog haakidini, time adaaga odi
    neevu blog barita iri, nillisabedi :)

    ReplyDelete
  14. ಇದು ನನ್ನ ಅನಿಸಿಕೆ ಕೂಡ. ಹೊಸ ವರುಷದಲ್ಲಿ ಮತ್ತಷ್ಟು ಉತ್ಸಾಹ ತು೦ಬಲಿ, ನವ ನವೀನ ವಿಚಾರಗಳೇ ಸರಕಾಗಲಿ...! ಎ೦ದು ಹಾರೈಸುತ್ತೇನೆ. ಸ೦ಕ್ರಮಣದ ಶುಭಾಶಯಗಳು ಡಾ.

    ಅನ೦ತ್

    ReplyDelete
  15. ನಮ್ಮ ಕ೦ಪ್ಯೂಟರ್ ತೊ೦ದರೆಯಿ೦ದಾಗಿ ಓದಿ ಪ್ರತಿಕ್ರಿಯಿಸಲಾಗಿರಲಿಲ್ಲ ಸರ್, ಒಮ್ಮೊಮ್ಮೆ ಈ ರೀತಿಯ ಶೂನ್ಯ ಭಾವ ಆವರಿಸುತ್ತದೆ. ಆದರೆ ನಿಮ್ಮ೦ಥಾ ಕ್ರಿಯಾಶೀಲರು ಬೇಗ ಚೇತರಿಸಿಕೊಳ್ಳಬೇಕು ಸರ್. ನಿಮ್ಮ ಅನುಭವದ ಸಾರ ನಮಗೆ ಮಾರ್ಗದರ್ಶಕ. ನಿಧಾನವಾಗಿ ತಿಳಿಸುತ್ತಿದ್ದೇನೆ, `ಹೊಸ ವರ್ಷದ ಶುಭಾಶಯಗಳು.'

    ReplyDelete
  16. ಡಾಕ್ಟ್ರೇ,
    ನನಗೂ ಹಾಗೆ ಆಗಿ ಎರಡು ತಿಂಗಳಿಂದ ಹೊರಗಿದ್ದೆ. ಈಗ ಸ್ವಲ್ಪ ಚೈತನ್ಯ ಬಂದಂತೆ ಆಗಿದೆ. ನೀವು ಬ್ಲಾಗ್ ಲೋಕದಲ್ಲಿರಬೇಕು. ಮತ್ತೆ ಬರೆಯಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ಮೊದಲು ಎಲ್ಲರ ಲೇಖನ ಓದಲು ಪ್ರಾರಂಭಿಸಿದ್ದೇನೆ.

    ReplyDelete
  17. AADHYATMVE HAAGE SIR, NAMMANNU SHODHISI BIDUTTADE.

    AADHYTMADA VICHRAVAGI NIMMA ANISIKEGALANNU NAMAGAGI

    PRAKATISI. BIDODUNTE SIR? NANDANA AANANDAVAGALI.

    ReplyDelete

Note: Only a member of this blog may post a comment.