ಮುಲ್ಲಾ ನಾಸಿರುದ್ದೀನನ ಬುದ್ಧಿವಂತಿಕೆ ಮತ್ತು ಅವನ ಕೀರ್ತಿಯನ್ನು ಕಂಡು ಅವನ ಊರಿನ ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದರು.ಹೇಗಾದರೂ ಮಾಡಿ ಅವನನ್ನು ಅವಮಾನಿಸಬೇಕೆಂದು ಹೊಂಚು ಹಾಕುತ್ತಿದ್ದರು.ಇದು ಮುಲ್ಲಾನಿಗೂ ತಿಳಿದಿತ್ತು.ಅವನೂ ತಕ್ಕ ಪಾಠ ಕಲಿಸಲು ಸಮಯ ಕಾಯುತ್ತಿದ್ದ.ಎಲ್ಲರೂ ಸೇರಿ ಮುಲ್ಲಾನನ್ನು ಒಂದು ಪ್ರವಚನ ಕೊಡುವಂತೆ ಕೇಳಿಕೊಂಡರು.ಮುಲ್ಲಾ ಒಪ್ಪಿಕೊಂಡು ,ಹೇಳಿದ ಸಮಯಕ್ಕೆ ಹಾಜರಾಗಿ 'ನಾನು ಕೊಡುತ್ತಿರುವ ಪ್ರವಚನದ ವಿಷಯದ ಬಗ್ಗೆ ತಮಗೇನಾದರೂ ಗೊತ್ತಿದೆಯೇ?'ಎಂದು ಸಭೆಯಲ್ಲಿ ನೆರೆದ ಜನರನ್ನು ಕೇಳಿದ.ಸಭೆಯಲ್ಲಿದ್ದವರು ತಮಗೇನೂ ತಿಳಿಯದೆಂದರು.
'ಏನೂ ತಿಳಿಯದವರಿಗೆ ತಾನು ಹೇಳುವುದರಿಂದ ಏನೂ ಪ್ರಯೋಜನವಿಲ್ಲ'ಎಂದು ಮುಲ್ಲಾ ಮನೆಗೆ ಹೋಗಿಬಿಟ್ಟ. ಅವರೆಲ್ಲಾ ಮತ್ತೆ ಹೋಗಿ ಅವನನ್ನು ಮತ್ತೆ ಪ್ರವಚನ ಕೊಡುವಂತೆ ಒತ್ತಾಯಿಸಿದರು.ಸಭೆಯಲ್ಲಿ ಈ ಬಾರಿ ಮುಲ್ಲಾ ಮತ್ತದೇ ಪ್ರಶ್ನೆ ಕೇಳಿದ,'ನಾನು ಹೇಳುತ್ತಿರುವ ವಿಷಯದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ?'ಸಭೆಯಲ್ಲಿದ್ದ ಅರ್ಧ ಜನ ತಿಳಿದಿದೆ ಎಂದರೆ ,ಇನ್ನರ್ಧ ಜನ ತಿಳಿದಿಲ್ಲ'ವೆಂದರು.ಮುಲ್ಲಾ 'ಹಾಗಾದರೆ ತಿಳಿದವರು ತಿಳಿಯದೆ ಇದ್ದವರಿಗೆ ಹೇಳಿ,ನನಗೆ ಬೇರೆ ಕೆಲಸವಿದೆ'ಎಂದು ಹೊರ ನಡೆದ.ಅಂದಿನಿದ ಹೊಟ್ಟೆ ಉರಿ ಪಡುತ್ತಿದ್ದವರು ಅವನ ಸಹವಾಸವೇ ಬೇಡವೆಂದು ದೂರ ಸರಿದರು.
( ಆಧಾರ:ಸೂಫಿ ಕಥಾಲೋಕ -ಪ್ರೊ.ಬಿ.ಗಂಗಾಧರ ಮೂರ್ತಿ)
ಹ ಹಾ! ಇದನ್ನು ಕೇಳಿದ್ದೆ, ಮುಲ್ಲಾ ನಾಸಿರುದ್ದೀನನ ಚತುರತೆಯ ಬಗೆಗೆ ಓದಿ ಬಹಳ ಖುಷಿ ಯಾಯ್ತು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು ಸರ್, ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ReplyDeleteಹಹಹಾ ಒಳ್ಳೆ ಜಾಪಾಳ ಮಾತ್ರೆ ಮುಲ್ಲಾನಿಂದ.
ReplyDeleteಹೊಟ್ಟೆ ಕಿಚ್ಚು ಪಡುವವರಿಗೆ ಬುದ್ಧಿ ಕಲಿಸಲು ಒಂದೋ ಅವರನ್ನು ಎದುರಿಸಬೇಕು ಇಲ್ಲವೇ ಅವರಿಂದ ದೂರವಿರಬೇಕು.
ಒಳ್ಳೆಯ ಬರಹ ಸಾರ್.
:) ಸೂಪರ್ ಸರ್.
ReplyDeleteಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು
ಸ್ವರ್ಣಾ
ಜಾಣ್ಮೆ ಎಂದರೆ ಇದೆ....ಹಹ್ಹ..ಸೊಗಸಾದ ಕತೆ..ಧನ್ಯವಾದಗಳು...
ReplyDeleteಹೌದು.. ಐನ್ ಸ್ಟೀನರ ಮೂರು ಮಾತುಗಳಂತೆ.. ತುಂಬಾ ಬುದ್ಧಿವಂತ :))) ಧನ್ಯವಾದಗಳು.
ReplyDeletehahaha...Nice One sir.....nammodane hanchikondiddakke Dhanyavadagalu....
ReplyDeleteಡಾಕ್ಟ್ರೇ,
ReplyDeleteಹೊಟ್ಟೆ ಕಿಚ್ಚು ಪಡುವವರಿಗೆ ಇದು ಸಕ್ಕತ್ ಪಾಠ!