Saturday, January 14, 2012

"ದೃಷ್ಟಿಯಂತೆ .........ಶೃಷ್ಟಿ!!"

ಇಂದಿನ ಪ್ರಜಾವಾಣಿಯ 'ಭೂಮಿಕಾ'ದಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು'ವಿನಲ್ಲಿ 'ಸುಂದರ ಯೋಚನೆಗಳಿರಲಿ' ಎಂಬ ಬರಹ ಗಮನ ಸೆಳೆಯಿತು.ನಿಮಗೆಲ್ಲಾ ಹಾರ್ದಿಕ ಸಂಕ್ರಮಣದ ಶುಭಾಶಯಗಳನ್ನು ಕೋರುತ್ತಾ ಈ ಸುಂದರ ಬರಹದ ಕೆಲ ಪ್ರಮುಖ ಅಂಶಗಳನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

'ನಾವೆಲ್ಲಾ ನಮ್ಮ ಯೋಚನೆ,ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ.ನಮಗೆ ಜಗತ್ತು ಕೆಟ್ಟದ್ದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ,ಅದಕ್ಕೆ ನಮ್ಮ ಯೋಚನೆ ಕಾರಣ.ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ,ಆಗ ಜಗತ್ತು ಹೇಗೆ ಬದಲಾಗುತ್ತದೆ ನೋಡಿ.ಜಗತ್ತು ಸುಂದರ ಮತ್ತು ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ.ನಮ್ಮ ಸುತ್ತಲಿನ ಜಗತ್ತನ್ನು ಸುಂದರ ಗೊಳಿಸುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ.ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಗಳನ್ನು ಹೆಚ್ಚಿಸಿಕೊಳ್ಳಿ'ಎನ್ನುತ್ತಾರೆ ಲೇಖಕರು.

ಇದಕ್ಕೆ 'ಕ್ವಾಂಟಮ್ ಫಿಸಿಕ್ಸ್' ನಲ್ಲಿ 'observer effect' ಎನ್ನುತ್ತಾರೆ.'If you change the way you look at things ,the things you look at change' ಎನ್ನುವ ಒಂದು ಪ್ರಸಿದ್ಧ ಹೇಳಿಕೆ ಇದೆ.ಆದರೆ'ವರ್ಷಾನುಗಟ್ಟಲೆಯ ಅಭ್ಯಾಸಬಲ ದಿಂದ  ಜಗತ್ತನ್ನು ಸಂಶಯದಿಂದ ,ಎಚ್ಚರಿಕೆಯಿಂದ  ನೋಡುವ ನಮ್ಮ  ದೃಷ್ಟಿಕೋನವನ್ನು  ಸುಲಭದಲ್ಲಿ ಬದಲಾಯಿಸಲು ಸಾಧ್ಯವೇ?'ಎನ್ನುವ ಪ್ರಶ್ನೆ ಸಹಜವಾಗಿ  ಮೂಡುತ್ತದೆ.ನಮಗೆ ಹಿಂದೆ ಮೋಸ ಹೋದ ಅನುಭವ ಯಾರನ್ನೂ ಸುಲಭವಾಗಿ ನಂಬದಂತೆ ಮಾಡುತ್ತದೆ.ದಿನ ನಿತ್ಯದ ಬದುಕಿನಲ್ಲಿ ಕಣ್ಣೆದುರಿಗೇ ಮೋಸ ,ವಂಚನೆ ,ಕ್ರೌರ್ಯ ಕಾಣುತ್ತಿರುವಾಗ ಜಗತ್ತು ಸುಂದರವಾಗಿದೆ ಎಂದುಕೊಳ್ಳುವುದು ಹೇಗೆ ಸಾಧ್ಯ?ಇದು ಸತ್ಯಕ್ಕೆ ದೂರವಲ್ಲವೇ?ಎನ್ನುವ ಪ್ರಶ್ನೆ ಕಾಡುತ್ತದೆ. 
'ಯದ್ಭಾವಂ ತದ್ಭವತಿ'.'ದೃಷ್ಟಿಯಂತೆ ಶೃಷ್ಟಿ' ಎನ್ನುವುದನ್ನು ನಾವು ಮೊದಲು  ನಂಬಬೇಕು.ನನಗೆ ಪರಿಚಯವಿರುವ ಇಬ್ಬರು ಮಹಿಳೆಯರ ಅನುಭವವೇ ಇದಕ್ಕೆ ಸಾಕ್ಷಿ.ಒಬ್ಬ ಮಹಿಳೆ 'ನೂರಕ್ಕೆ ತೊಂಬತ್ತರಷ್ಟು ಆಟೋದವರು ಒಳ್ಳೆಯವರು,ಸಾಮಾನ್ಯವಾಗಿ ಮೋಸ ಮಾಡುವುದಿಲ್ಲ 'ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಎಂದೂ ತೊಂದರೆಯಾಗಿಲ್ಲ.ಒಳ್ಳೆಯ ಆಟೋದವರೇ ಸಿಗುತ್ತಾರೆ.ಆದರೆ ಅದೇ ಇನ್ನೊಬ್ಬರು ಬಹಳಷ್ಟು ಆಟೋದವರು ಮೋಸಮಾಡುತ್ತಾರೆ ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಅದೇ ರೀತಿಯವರು ಸಿಗುತ್ತಾರೆ.ಇದು ಬರೀ ಕಾಕ ತಾಳೀಯವೆಂದು ಹಗುರವಾಗಿ ತಳ್ಳಿ ಹಾಕುವಂತಿಲ್ಲ.ಮೊದಲಿಗೆ ಕಷ್ಟ ಸಾಧ್ಯವೆನಿಸಿದರೂ ನಾವು ನೋಡುವ ದೃಷ್ಟಿಯನ್ನು ಕ್ರಮೇಣ, ಪ್ರಯತ್ನ ಪೂರಕವಾಗಿ,ಬದಲಾಯಿಸಿ ಕೊಳ್ಳೋಣ.ಜಗತ್ತನ್ನು ಸುಂದರವೆಂದು ಕಾಣುವ ದೃಷ್ಟಿಯೂ ನಮಗೆ ಅಭ್ಯಾಸವಾಗಲಿ.ಒಂದು ಸುಂದರ ಜಗತ್ತನ್ನು ಶೃಷ್ಟಿ ಸೋಣ.'ಸರ್ವೇ ಜನಾಹ ಸುಖಿನೋ ಭವಂತು'.ಎಲ್ಲೆಲ್ಲೂ ಸುಖ ಮತ್ತು ಸಂತೋಷದ ಸಾಮ್ರಾಜ್ಯವೇ ರಾರಾಜಿಸಲಿ ಎಂದು ಪ್ರಾರ್ಥಿಸುತ್ತಾ ನಿಮ್ಮೆಲ್ಲರಿಗೂ ಸಂಕ್ರಾಂತಿಯು ಶುಭದಾಯಕವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ. 

23 comments:

  1. ಸರ್, ಸಂಕ್ರಮಣದ ಸಂಧರ್ಭದಲ್ಲಿ ಸುಂದರ ಜಗತ್ತನ್ನು ಕಾಣುವ ದೃಷ್ಟಿಯ ಕುರಿತು ನಿಮ್ಮ ಮಾರ್ಗದರ್ಶಕ ಲೇಖನ ಸಕಾಲಿಕ..ನನಗೆ ತುಂಬಾ ಹಿಡಿಸಿತು. ಈ ಸಂಕ್ರಮಣವು ಸರ್ವರಿಗೂ ಶುಭಾದಾಯಕವಾಗಲಿ ಎಂದು ನಿಮ್ಮೊಂದಿಗೆ ನಾನೂ ಹಾರೈಸುತ್ತೇನೆ.

    ReplyDelete
    Replies
    1. ಭಟ್ ಸರ್ ;ನಿಮಗೂ ಮತ್ತು ಮನೆಯವರಿಗೂ ಸಂಕ್ರಮಣದ ಶುಭಾಶಯಗಳು.ಸೂರ್ಯನ ಪಥಬದಲಾದಂತೆ ನಮ್ಮ ಮನಸ್ಸೂ ನೆಮ್ಮದಿಯತ್ತ ಪಥ ಬದಲಿಸಲಿ.

      Delete
  2. ಮೊದಲಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ .ಒಳ್ಳೆಯಲೆಖನದ ಬಾಗಿನ ನೀಡಿದ್ದೀರಿ , ಒಳ್ಳೆಯ ಆಲೋಚನೆ ಇದ್ದರೆ ನಮ್ಮ ಪರಿಸರ ಸುಂದರವಾಗಿರುತ್ತದೆ."ಎಳ್ಳು ಬೆಲ್ಲಾ ತಿಂದು ಒಳ್ಳೆಯ ಮಾತಾಡಿ" ಎಂಬುದು ಗಾದೆ ಆದರೆ ನೀವು ಪ್ರತಿ ಸಂಚಿಕೆಯಲ್ಲೂ ಒಳ್ಳೆಯ ಆಲೋಚನೆಯ ಲೇಖನ ಬರೆಯುತ್ತಿರುವ ಬಗ್ಗೆ ನಿಮ್ಮ ಬಗ್ಗೆ ನಮಗೆಲ್ಲಾ ಹೆಮ್ಮೆಯಿದೆ. ಮತ್ತೊಮ್ಮೆ ಶುಭಾಶಯಗಳು

    ReplyDelete
    Replies
    1. ಬಾಲೂ ಸರ್;ನಿಮಗೂ ಹಾಗೂ ಮನೆಯವರಿಗೂ ಹಬ್ಬದ ಶುಭಾಶಯಗಳು.ನಿಮ್ಮ ಬ್ಲಾಗ್ ಹೇಳುವಂತೆ 'ನಮ್ಮ ಮನಸ್ಸು ಸುಂದರವಾಗಿದ್ದರೆ ಜಗತ್ತೇ ಸುಂದರ'.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  3. ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು

    ReplyDelete
  4. ಪ್ರದೀಪ್;ಪ್ರತಿಕ್ರಿಯೆಗೆ ಧನ್ಯವಾದಗಳು.ಸಂಕ್ರಮಣದ ಶುಭಾಶಯಗಳು.

    ReplyDelete
  5. ಡಾಕ್ಟರ್ ಸರ್ ಬದಲಾವಣೆಯ ಪರ್ವ ಇದು.ಸಂಕ್ರಾಂತಿ ಶುಭಾಶಯ

    ReplyDelete
    Replies
    1. ದೇಸಾಯಿಯವರೇ;ತಮಗೂ ಸಂಕ್ರಾಂತಿಯ ಶುಭಾಶಯಗಳು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  6. ಕೃಷ್ಣಮೂರ್ತಿಯವರೆ,
    ಧರ್ಮರಾಯನ ಕಣ್ಣಿಗೆ ಎಲ್ಲರೂ ಒಳ್ಳೆಯವರಂತೆ ಕಾಣುತ್ತಿದ್ದರಂತೆ; ದುರ್ಯೋಧನನ ಕಣ್ಣಲ್ಲಿ ಎಲ್ಲರೂ ಕೆಟ್ಟವರು!
    ನಿಮ್ಮ ಲೇಖನಗಳ ಮೂಲಕ ಒಳಿತನ್ನು ಹರಡಲು ಪ್ರಯತ್ನಿಸುತ್ತಿರುವಿರಿ. ನಿಮಗೆ ಸಂಕ್ರಮಣದ ಶುಭಾಶಯಗಳು.

    ReplyDelete
    Replies
    1. ಸುನಾತ್ ಸರ್;ತಮ್ಮಂತಹ ಹಿರಿಯರ ಪ್ರೋತ್ಸಾಹ ಪೂರ್ವಕ ಪ್ರತಿಕ್ರಿಯೆ ಆಶೀರ್ವಾದದಂತೆ.ಅನಂತ ಧನ್ಯವಾದಗಳು.ತಮಗೂ ಸಂಕ್ರಮಣದ ಶುಭಾಶಯಗಳು.

      Delete
  7. ಸರ್ವೇ ಜನಾಹ ಸುಖಿನೋ ಭವಂತು....
    sankranthi ge olle maathugalu.....
    chennagide....

    ReplyDelete
    Replies
    1. ಮಹೇಶ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  8. ಚೆನ್ನಾಗಿದೆ ಸರ್.
    ಆಟೋದೊರನ್ನ ನಂಬೋದು ಸ್ವಲ್ಪ ಕಷ್ಟ :)
    ಪ್ರಯತ್ನಿಸಿತಿನಿ
    ಸ್ವರ್ಣಾ

    ReplyDelete
    Replies
    1. ಸ್ವರ್ಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

      Delete
    2. ಉತ್ತಮವಾದ ಲೇಖನ ಸರ್, ನಮ್ಮ ದೃಷ್ಟಿ ಹೇಗೋ ಹಾಗೆ ಜಗತ್ತು ಗೋಚರಿಸುತ್ತದೆ ಎನ್ನುವ ಅನಿಸಿಕೆಯೇ ಸು೦ದರ. ಬ್ಲಾಗ್ ನಲ್ಲಿ ಸಕ್ರಿಯರಾಗಿ ಅರ್ಥಪೂರ್ಣ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಬನ್ನಿ.

      Delete
    3. ಮೇಡಂ;ಅಭ್ಯಾಸ ಬಲದಿಂದ ರೂಢಿಸಿ ಕೊಂಡ ದೃಷ್ಟಿ ಬದಲಾಯಿಸಿಕೊಳ್ಳುವುದು ಕಷ್ಟ ಅನಿಸಿದರೂ,ಬೇರೆ ದಾರಿ ಇಲ್ಲ!ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  9. PUNARAGAMANAKKE SWAGATA.GAADI LINE MELE BANTHALLA.SURYA RATHAVANERIDANTHE BLOG MUNDUVAREYALI

    ReplyDelete
  10. ಹ..ಹ..ಹ!ಪ್ರತಿಕ್ರಿಯೆಗೆ ಧನ್ಯವಾದಗಳು ಹೇಮಚಂದ್ರ.

    ReplyDelete
  11. ನಾವು ಏನು ಕೊಡುತ್ತೇವೋ ಅದನ್ನೇ ಪಡೆದುಕೊಳ್ಳುತ್ತೇವೆ ಎನ್ನುವ ಸರಳ ಸತ್ಯವು ಇದರಿಂದ ಅರಿವಾಯಿತು ಸಾರ್.

    ಸಂಕ್ರಾಂತಿಗೆ ನಿಮ್ಮ ಕೊಳಲು ಅತ್ಯುತ್ತಮ ನೀತಿ ಬೋಧಕ ಬರಹವನ್ನು ಪರಿಚಯಿಸಿತು.

    ದ್ವಾಪರದ ಕೌರವನಿಗೆ ಜಗವೆಲ್ಲ ಸರಿಯಿಲ್ಲ ತಾನೊಬ್ಬ ಮಾತ್ರ ಸಭ್ಯ ಎನ್ನುವ ಪೊರೆಯಿದ್ದರೆ! ಧರ್ಮರಾಯನಿಗೆ ಜಗವೆಲ್ಲ ಸಭ್ಯರ ಸಂತೆ ತಾನೊಬ್ಬನೇ ಅಸಭ್ಯ ಎನ್ನುವ ದೃಷ್ಟಿಕೋನ...

    ReplyDelete
  12. ಬದರಿ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  13. Sir, nimma maatu nija

    yadbaavam tadhbavati 100% True

    habbada shubhaashayagalu tadavaagi

    ReplyDelete
  14. ಸರ್,
    ಈಗೀಗ ತುಂಬಾ ಕಡ್ಮೆ ಮಾಡಿದೀರ ಬರೆಯೋದು.. :(

    ನಿಮ್ಮ ಕೊಳಲಿನಲ್ಲಿ ನೂರಾರು ರಾಗ ಹೊರಡಿಸುತ್ತೀರ.. ತುಂಬಾ ಚೆನ್ನಾಗಿದೆ. ಯತ್ ಭಾವಂ ತತ್ ಭವತಿ..

    ReplyDelete
  15. ಡಾಕ್ಟ್ರೇ,
    ಸುನಾಥ್ ಸರ್ ಅಭಿಪ್ರಾಯವೇ ನನ್ನದು ಕೂಡ ನಾನು ಪ್ರಜಾವಾಣಿಯಲ್ಲಿ ಈ ಲೇಖನ ಓದಿದ್ದೆ. ಒಳ್ಳೆಯ ವಿಚಾರವನ್ನು ನೀವು ಹೀಗೆ ಹಂಚುವುದು ಖುಷಿಯಾಗುತ್ತದೆ.

    ReplyDelete

Note: Only a member of this blog may post a comment.