Wednesday, May 16, 2012
"ಕೋತಿಗಳು ಮಾತ್ರ ನೆನಪಾಗ ಬಾರದು!!!"
ಕಾಶಿಯಲ್ಲಿ ಒಬ್ಬ ಮಹಾ ವಿಧ್ವಾಂಸನಿದ್ದ .ವೇದ ಶಾಸ್ತ್ರ ಪುರಾಣಗಳೆಲ್ಲಾ ,ಅವನ ನಾಲಿಗೆಯ ತುದಿಯಲ್ಲಿದ್ದವು.ಆದರೂ ಹೆಚ್ಚಿನ ಆಧ್ಯಾತ್ಮ ಸಾಧನೆಗಾಗಿ,ಸತ್ಯದ ಸಾಕ್ಷಾತ್ಕಾರಕ್ಕಾಗಿ ಟಿಬೆಟ್ಟಿನಲ್ಲಿದ್ಧ ಬೌದ್ಧ ಗುರುವನ್ನು ಹುಡುಕಿ ಹೊರಟ.ಗುರುವನ್ನು ಕಂಡು ಹೆಚ್ಚಿನ ಆಧ್ಯಾತ್ಮ ಸಾಧನೆಯ ತನ್ನ ಇಂಗಿತವನ್ನು ತಿಳಿಸಿದ.ಗುರು ಅದಕ್ಕೆ ಒಪ್ಪಿ 'ಬುದ್ಧಂ ಶರಣಂ ಗಚ್ಚಾಮಿ,ಧರ್ಮಂ ಶರಣಂ ಗಚ್ಚಾಮಿ ,ಸಂಗಂ ಶರಣಂ ಗಚ್ಚಾಮಿ' ಎನ್ನುವ ಮಂತ್ರವನ್ನು ಮೂರು ಬಾರಿ ಹೇಳಿದರೆ ಸಾಕೆಂದೂ,ಅದರಿಂದ ಉನ್ನತ ಆಧ್ಯಾತ್ಮ ಸಾಧನೆ ಸಾಧ್ಯವೆಂದು ತಿಳಿಸಿದ.ಪಂಡಿತನಿಗೆ'ಆಧ್ಯಾತ್ಮ ಸಾಧನೆ ಇಷ್ಟು ಸುಲಭವೇ?!! ಅದಕ್ಕೋಸ್ಕರ ತಾನು ಇಷ್ಟೆಲ್ಲಾ ಕಷ್ಟ ಪಟ್ಟು ಗುರುವನ್ನು ಹುಡುಕಿ ಕೊಂಡು ಇಷ್ಟು ದೂರ ಬರಬೇಕಾಯಿತೆ?!!'ಎನಿಸಿ ಧ್ಯಾನಕ್ಕೆ ಕುಳಿತು ಕೊಂಡ.ಗುರು 'ಆದರೆ ಇಲ್ಲೊಂದು ಸಣ್ಣ ತೊಂದರೆ ಇದೆ.ಧ್ಯಾನ ಮಾಡುವಾಗ ಯಾವುದೇ ಕಾರಣಕ್ಕೂ ಕೋತಿಗಳು ಮಾತ್ರ ನೆನಪಾಗ ಬಾರದು.ಕೋತಿಗಳು ನೆನಪಾದರೆ ಮತ್ತೆ ಧ್ಯಾನವನ್ನು ಶುರುಮಾಡಬೇಕು'ಎಂದ.ವಿಧ್ವಾಂಸ 'ತನ್ನಂತಹ ಮಹಾ ಪಂಡಿತನಿಗೆ ಕೋತಿಗಳು ಏಕೆ ನೆನಪಾಗುತ್ತವೆ ?ಗುರುಗಳು ಎಲ್ಲೋ ತಮಾಷೆ ಮಾಡುತ್ತಿರಬೇಕು"ಎಂದುಕೊಂಡು ಧ್ಯಾನಕ್ಕೆ ಕುಳಿತ.ಸ್ವಲ್ಪ ಹೊತ್ತಿನಲ್ಲಿಯೇ ಕೋತಿಗಳು ನೆನಪಾದವು.ಮತ್ತೆ ಮೊದಲಿನಿಂದ ಧ್ಯಾನ ಶುರು ಮಾಡಿದ.ಮತ್ತೆ ಕೋತಿಗಳು ನೆನಪಾದವು.ಬರ ಬರುತ್ತಾ ಮನಸ್ಸಿನ ತುಂಬೆಲ್ಲಾ ಕೋತಿಗಳೇ ತುಂಬಿ ಹೋದವು.ಕುಂತಲ್ಲಿ ನಿಂತಲ್ಲಿ ಕೋತಿಗಳ ಧ್ಯಾನವಾಯಿತು.ಕನಸಿನಲ್ಲೂ ಬರೀ ಕೋತಿಗಳೇ!!! ಪಂಡಿತನಿಗೆ ಮನಸ್ಸಿನ ಶಾಂತಿಯೇ ಇಲ್ಲದಂತಾಗಿ ಅಲ್ಲಿಂದ ಮೊದಲು ಬಿಡಿಸಿಕೊಂಡು ಹೋದರೆ ಸಾಕಾಗಿತ್ತು.ಅಂಜಲೀ ಬದ್ಧನಾಗಿ ಗುರುವಿನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ.ಅದಕ್ಕೆ ಗುರು ಆಧ್ಯಾತ್ಮ ಸಾಧನೆಗೆ ಮನಸ್ಸಿನ ಹತೋಟಿ ಮೊದಲ ಮೆಟ್ಟಿಲೆಂದೂ,ಅದನ್ನು ಸಾಧಿಸುವ ರೀತಿಯನ್ನು ಹಂತ ಹಂತವಾಗಿ ಕಲಿಯ ಬೇಕೆಂದೂ,ಅದಕ್ಕೆ ಸಾಕಷ್ಟು ತಾಳ್ಮೆ ,ಶ್ರದ್ಧೆ ಮತ್ತು ಸಾಧನೆ ಬೇಕೆಂದು ತಿಳಿಸಿದ.ವರ್ಷಗಳ ಸಾಧನೆಯ ನಂತರ ಪಂಡಿತನಿಗೆಆಧ್ಯಾತ್ಮದ ಅರಿವಿನಸಾಕ್ಷಾತ್ಕಾರವಾಯಿತು.ಆಧ್ಯಾತ್ಮದ ಮೊದಲ ಹಂತವೇ ಮನಸ್ಸಿನ ನಿಗ್ರಹ!ಅಲ್ಲವೇ?ನಿಮ್ಮ ಅಭಿಪ್ರಾಯ ತಪ್ಪದೇ ತಿಳಿಸಿ.
(ಸಾಧಾರಿತ)
Subscribe to:
Post Comments (Atom)
ಕೃಷ್ಣ ಮೂರ್ತಿಗಳೇ ಬಹಳ ಸುಂದರ ನಿರೂಪಣೆ. ಈ ಮನಸ್ಸು ಎಂಬುದೇ ಒಂದು ಕೋತಿ. ವಿಷಯಗಳೆಂಬ ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಹಾರುವ ಪ್ರವೃತ್ತಿ ಅದರದು. ಆಧ್ಯಾತ್ಮ ಸಾಧನೆಗೆ ಸೂಕ್ತ ಪರೀಕ್ಷೆ.
ReplyDeleteತಿರು ಸರ್;ಬ್ಲಾಗಿಗೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.ಮನಸ್ಸು ವಿಚಿತ್ರ!ಬೇಡ ಎನ್ನುವುದನ್ನು ಮಾಡಿಯೇ ತೀರುತ್ತೆ !!
DeleteAVU VANARA NAAVU BAREE NARA.VA ENDARE NARANA HINDE PRATYAKSHA
ReplyDeleteಹೇಮಚಂದ್ರ;ಬೇಡ ಎಂದಿದ್ದನ್ನು ಮಾಡುವುದೇ ಮನಸ್ಸಿನ ಗುಣವಲ್ಲವೇ?ಪ್ರತಿಕ್ರಿಯೆಗೆ
Deleteಧನ್ಯವಾದಗಳು.
ನೀವು ಹೇಳಿದ್ದು ಸರಿ
ReplyDeleteಸುಬ್ರಮಣ್ಯ;ಪ್ರತಿಕ್ರಿಯೆಗೆ ಧನ್ಯವಾದಗಳು.
Deleteಡಾಕ್ಟ್ರೆ: ಮನಸ್ಸೆಂಬ ಮರ್ಕಟ ಎನ್ನುವುದಕ್ಕೆ ಈ ಕತೆಗಿಂತ ಉತ್ತಮ ಉದಾಹರಣೆ ಬೇಕೇ...ಚೆನ್ನಾಗಿ ಬರೆದಿದ್ದೀರಿ.
ReplyDeleteಶಿವು;ಮನಸ್ಸು ಮೊದಲೇ ಮರ್ಕಟ.ಅದಕ್ಕೇ ಮರ್ಕಟವನ್ನು ನೆನೆಯಬೇಡ ಎಂದು ಸಲಹೆ ಕೊಟ್ಟರೆ ಅದು ಪಾಲಿಸುತ್ತದೆಯೇ?ಪ್ರತಿಕ್ರಿಯೆಗೆ ಧನ್ಯವಾದಗಳು.
Deleteನಮಸ್ಕಾರ ಸ್ವಾಮೀ ನಿಮ್ಮ ಲೇಖನ ಕಣ್ಣು ತೆರೆಸುವಂತಿದೆ , ಮನಸೆಂಬ ಹುಚ್ಚು ಕುದುರೆ ಬಗ್ಗೆ ಒಳ್ಳೆಯ ಲೇಖನ ಬರೆದಿದ್ದೀರಿ , ಹೌದು ಮನಸ್ಸಿನ ಮೇಲೆ ಹತೋಟಿ ಇಲ್ಲದ ಮಾನವರಿಗೆ ಜೀವನದಲ್ಲಿ ಕೋತಿ ಗಳೇ ಕಾಣೋದು.ಜೈ ಹೋ ಸಾರ್.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಡಾಕ್ಟ್ರೆ...
ReplyDeleteತುಂಬಾ ಅರ್ಥ ಪೂರ್ಣವಾದ ಕಥೆ...
ಎಷ್ಟು ಸರಳವಾಗಿ ಆಧ್ಯಾತ್ಮದ ಬಹುಮುಖ್ಯ ತತ್ವವನ್ನು ತಿಳಿಸಿದ್ದೀರಿ..
ತುಂಬಾ ಇಷ್ಟವಾಯಿತು... ಜೈ ಹೋ !!
simple and good story
ReplyDeletemanavemba arkatada nigraha avshya,
ReplyDelete