Wednesday, June 6, 2012

"ಆಯ್ಕೆಗಳಿಲ್ಲದ ಅರಿವಿನ ಬದುಕು!!! "

ಆಧ್ಯಾತ್ಮಿಕ ಜಿಜ್ಞಾಸು ಒಬ್ಬ,'ಮನುಷ್ಯ ಸಂಪೂರ್ಣ ಸ್ವತಂತ್ರನೇ ಅಥವಾ ಅವನನ್ನು ಕರ್ಮ,ವಿಧಿ,ದೈವ,ಗ್ರಹಗತಿಗಳು,ಇವೆಲ್ಲಾ ಬಂಧಿಸಿವೆಯೇ' ಎಂದು ತಿಳಿದು ಕೊಳ್ಳಲು ಆಧ್ಯಾತ್ಮಿಕ ಅನುಭೂತಿ ಪಡೆದ ಜ್ಞಾನಿ ಗುರುವೊಬ್ಬರ ಬಳಿ ಬಂದು ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಉತ್ತರ ನೀಡಬೇಕೆಂದು ಬಿನ್ನವಿಸಿಕೊಂಡ. ಗುರು ಇದ್ದಕ್ಕಿದ್ದಂತೆ ಅವನನ್ನು ಎದ್ದು ನಿಲ್ಲುವಂತೆ ಹೇಳಿದ.ಜಿಜ್ಞಾಸುವಿಗೆ 'ಇವನೆಂತಹ ಗುರು!ತಾನೊಂದು ಸಾಮಾನ್ಯ ಪ್ರಶ್ನೆ ಕೇಳಿದರೆ ಉತ್ತರಿಸದೆ ,ಎದ್ದು ನಿಲ್ಲುವಂತೆ ಹೇಳುತ್ತಿದ್ದಾನಲ್ಲಾ !!'ಎಂದು ಕಸಿವಿಸಿಯಾಯಿತು.ಮುಂದೆನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಎದ್ದು ನಿಂತ. ಗುರು ಜಿಜ್ಞಾಸುವಿಗೆ ಒಂದು ಕಾಲನ್ನು ಮೇಲಕ್ಕೆ ಎತ್ತಿ ನಿಲ್ಲುವಂತೆ ಹೇಳಿದ.ಶಿಷ್ಯ ಅದರಂತೆಯೇ ತನ್ನ ಬಲಗಾಲನ್ನು ಮೇಲೆತ್ತಿ ಎಡಗಾಲಿನ ಮೇಲೆ ನಿಂತ.ಅದಕ್ಕೆ ಗುರು 'ಒಳ್ಳೆಯದು....,ಈಗ ನಿನ್ನ ಎಡಗಾಲನ್ನೂ ಮೇಲೆತ್ತು'ಎಂದ!ಶಿಷ್ಯನಿಗೆ 'ಇವನೆಂತಹ ವಿಚಿತ್ರ ಗುರು! 'ಎನಿಸಿತು.ಆದರೂ ಅದನ್ನು ತೋರ್ಪಡಿಸದೆ 'ಅದು ಹೇಗೆ ಸಾಧ್ಯ ಗುರುಗಳೇ?ನಾನು ಈಗ ನಿಂತಿರುವುದೇ ಎಡಗಾಲಿನ ಮೇಲಲ್ಲವೇ?'ಎಂದ.ಅದಕ್ಕೆ ಗುರು 'ನಿನ್ನ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಮೊದಲು ನೀನು ಸ್ವತಂತ್ರನಾಗಿದ್ದೆ.ನಾನು ನಿನ್ನನ್ನು ಯಾವುದಾದರೂ ಒಂದು ಕಾಲನ್ನು ಎತ್ತಲು ಹೇಳಿದಾಗ ನೀನು ಎಡಗಾಲನ್ನು ಎತ್ತಬಹುದಾಗಿತ್ತು.ಬಲಗಾಲನ್ನು ಎತ್ತಿದ್ದು ನಿನ್ನ ಆಯ್ಕೆಯಾಗಿತ್ತು.ಒಮ್ಮೆ ನೀನು ಆಯ್ಕೆ ಮಾಡಿದ ಮೇಲೆ,ಆ ಆಯ್ಕೆಗೆ ನೀನು ಬದ್ಧ.ಅದು ನಿನ್ನನ್ನು ಬಂಧಿಸುತ್ತದೆ.ಕರ್ಮ,ವಿಧಿ,ದೈವ,ಗ್ರಹಚಾರ,ಎಲ್ಲವನ್ನೂ ಬದಿಗಿಡು.ನಿನ್ನ ಆಯ್ಕೆಗಳೇ ನಿನ್ನನ್ನು ಬಂಧಿಸುತ್ತವೆ!"ಆಯ್ಕೆಗಳಿಲ್ಲದ ಅರಿವಿನ ಬದುಕು" ನಿನ್ನನ್ನು ಬಿಡುಗಡೆಯತ್ತ ಕರೆದೊಯ್ಯುತ್ತದೆ'ಎಂದ.ಜಿಜ್ಞಾಸುವಿಗೆ ಗುರುವಿನ ಜ್ಞಾನದ ಆಳ ಅರಿವಾಯಿತು.ವಿನಮ್ರತೆಯಿಂದ ಗುರುವಿಗೆ ನಮಿಸಿ ತನ್ನೂರಿನ ದಾರಿ ಹಿಡಿದ. (ಸಾಧಾರಿತ)

19 comments:

 1. ಒಳ್ಳೆಯ ಬರಹ ಸಾರ್.

  ಆದರೆ ಎಷ್ಟೋ ಬಾರಿ ಮನುಷ್ಯನಿಗೆ ತನ್ನದೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನಾದರೂ ಭಗವಂತ ಎಲ್ಲಿ ಕೊಡ್ತಾನೆ ಅಲ್ವೇ?

  ReplyDelete
  Replies
  1. ಈ ಲೇಖನದ ಉದ್ದೇಶ ಕೂಡ ಅದೇ ಅಲ್ಲವೇ ಬದರಿ?ನೀವು ಕೆಟ್ಟದ್ದು ,ಒಳ್ಳೆಯದು ಎನ್ನುವ ಲೇಬಲ್ ಹಚ್ಚದೇ,ಬಂದಿದ್ದನ್ನು ಹೆಚ್ಚು ಅರಿವಿನಿಂದ ಸ್ವೀಕರಿಸುತ್ತಾ ಹೋದಾಗಲೇ ನೋವಿನಿಂದ ಮುಕ್ತಿ!ಇದು ಜ್ಞಾನಿಗಳು ಹೇಳುವ ಮಾತು.ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 2. [ಆಯ್ಕೆಗಳಿಲ್ಲದ ಅರಿವಿನ ಬದುಕು" ನಿನ್ನನ್ನು ಬಿಡುಗಡೆಯತ್ತ ಕರೆದೊಯ್ಯುತ್ತದೆ]....
  ಸತ್ಯವಾದ ಮಾತು. ಉತ್ತಮ ಕಿರುಬರಹ.

  ReplyDelete
  Replies
  1. ಹರಿ ಹರ ಪುರ ಶ್ರೀಧರ್;ಇಂತಹ ಲೇಖನಗಳನ್ನು ನಿಮ್ಮ ವೇದಸುಧೆಯಲ್ಲಿ ಹಾಕ ಬಹುದೇ?ಹೌದಾದರೆ ಹೇಗೆಂಬುದನ್ನು ದಯವಿಟ್ಟು ತಿಳಿಸಿ.ಪ್ರತಿಕ್ರಿಯೆಗೆ ಧನ್ಯವಾದಗಳು.

   Delete
 3. sundaravaagi barediddeeri. chintanegondu chutuku..

  ReplyDelete
  Replies
  1. ವಿಜಯಶ್ರೀ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

   Delete
 4. ವಿಚಾರಾಧೀನಮಾಡುವ ಲೇಖನ ಡಾಕ್ಟ್ರೇ... ನಮಗೆ ಆಯ್ಕೆ ಮಾಡಿಕೊಳ್ಳುವ ಹಲವು ಅವಕಾಶಗಳು ಬರುತ್ತಿರುವಾಗ ಬುದ್ಧಿವಂತಿಕೆ ಹೆಚ್ಚು ಕೆಲ್ಸ ಮಾಡಬೇಕು ಅವಶ್ಯಕತೆಗಿಂತ. ತಕ್ಷಣಕ್ಕೆ ತಪ್ಪೆನಿಸುವ ನಿರ್ಧಾರ ಆಗಿನದ್ದಾದರೆ ಮುಂದೆ ಅದು ಹೆಚ್ಚು ಪ್ರಯೋಜನಕಾರಿಯಾಗಬಹುದು...

  ReplyDelete
  Replies
  1. ನಮ್ಮ ಸ್ಥಿತಿಗತಿ ಬಹಳಷ್ಟು ಸಲ ನಮ್ಮ ಆಯ್ಕೆಗಳ ಮೇಲೆಯೇ ಇರುತ್ತವೆ.ಹುಟ್ಟಿನಂತಹ ಕೆಲವು ಸಂದರ್ಭಗಳನ್ನು ಬಿಟ್ಟರೆ ಸುಮಾರು ಆಯ್ಕೆಗಳು ನಮ್ಮವೇ ಅಲ್ಲವೇ?ಉದಾಹರಣೆಗೇ ಒಬ್ಬ ಮದ್ಯಪಾನದಿಂದ ಅಥವಾ ಧೂಮಪಾನದಿಂದ ಅನಾರೋಗ್ಯಕ್ಕೆ ಒಳಗಾದರೆ ಆಯ್ಕೆ ಅವನದೇ ಆಗಿತ್ತಲ್ಲವೆ?ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

   Delete
 5. ಅರಿವಿಗೆ ಕೊನೆಯೇ ಇಲ್ಲಾ. ಅರಿತಷ್ಟೂ ಬದುಕು ಸರಳ ಸುಂದರ. ಅರಿವಿಗೆ ಬೇಕು ಪ್ರತಿ ಕ್ಷಣ ಎಚ್ಚರದ ಸ್ಥಿತಿ. ತುಂಬಾ ಸುಂದರವಾದ ಬರಹ ಸರ್.............

  ReplyDelete
 6. ಉಮಾ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬರವಣಿಗೆ ಶುರುಮಾಡಿ.ನಿಮ್ಮ ಬ್ಲಾಗಿನಲ್ಲೂ ಹೊಸ ಬರವಣಿಗೆಗಳು ಬರಲಿ.ನಿಮಗೂ ಭಟ್ಟರಿಗೂ ನಮಸ್ಕಾರಗಳು.

  ReplyDelete
 7. ವಾಹ್.. ನಿಮ್ಮ ಬ್ಲಾಗ್ ಬರಹಗಳು ಸದಾ ಬುದ್ಧಿ ಮಾತಿನವುಗಳೇ ಆಗಿರುತ್ತವೆ. ಅರಿವು ನಮ್ಮ ಕೊನೆಯವರೆಗು ಇರಬೇಕಾದ್ದು.. ಎಷ್ಟು ಸರಳವಾಗಿ ವಿವರಿಸಿದ್ದೀರಿ ಥಾಂಕ್ಯೂ ಸರ್.

  ReplyDelete
 8. ಸುಗುಣ ಮೇಡಂ;ನನ್ನ ಬ್ಲಾಗ್ ಬರಹ ಸಾಧ್ಯವಾಗಿರುವುದು ನಿಮ್ಮಂತಹ ಸಹೃದಯರ ನಿರಂತರ ಪ್ರೋತ್ಸಾಹದಿಂದ.ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 9. SAMPOORNA SWATANTRANADARE NILLALU NELE SIGUVADU KASHTA

  ReplyDelete
 10. baddategaliddare sthiravagirabahudu

  ReplyDelete
 11. ಹೇಮಚಂದ್ರ;ಈ ಘಟನೆ ಆಧ್ಯಾತ್ಮಿಕ ಸಾಧನೆಗೆ ಪೂರಕವಾಗುವ ವಿಚಾರ.ಆದರೆ ಸಾಂಸಾರಿಕ ವಿಚಾರದಲ್ಲಿ ಬದ್ಧತೆ ಬೇಕೇ ಬೇಕಲ್ಲವೇ.ಆದರೆ ವಿಪರ್ಯಾಸವೆಂದರೆ ಪರಿವಾರ್ಜಕ ಎನಿಸಿಕೊಂಡವರು ಸಂಸಾರಿಗಳಿಗಿಂತ ಹೆಚ್ಚು ಬಂಧನಗಳಿಗೆ ಒಳಗಾಗುತ್ತಿದ್ದಾರೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
  Replies
  1. ಹೇಮಚಂದ್ರ;ಈ ಘಟನೆಯಲ್ಲಿ ಇನ್ನೊಂದು ಪಾಠವಿದೆ.ಆಯ್ಕೆ ನಮ್ಮದೇ.ಆಯ್ಕೆ ಮಾಡಿದ ಮೇಲೆ ವಿಧಿ,ಗ್ರಹಚಾರಗಳನ್ನು ಹಳಿದು ಜವಾಬ್ದಾರಿಯನ್ನು ದಾಟಿಸುವಂತಿಲ್ಲ.ಸರಿಯಾದ ವಿವೇಚನೆಯಿಂದ ಆಯ್ಕೆಮಾಡಿ,ಬಂದ ಫಲವನ್ನು ಗೊಣಗದೆ ಅನುಭವಿಸಬೇಕು.THE LESSON HERE IS"CHOICELESS AWARENESS.YOU ACCEPT THE SITUATION AND THEN ACT.
   ACCEPTANCE IS NOT EASY AS THERE WILL BE LOT OF MENTAL RESISTANCE.

   Delete
 12. ಚೆನ್ನಾಗಿದೆ..
  ನಿಮ್ಮ ಬ್ಲಾಗಿನ ಹೆಸರನ್ನೋದಿದಾಗ "ಕೊಳಲು" ಅಂತ ಯಾಕಿಟ್ಟಿರಬಹುದು ಅಂತ ಒಮ್ಮೆ ಯೋಚಿಸಿದ್ದೆ.. ಆಮೇಲೆ ಆ ಕೃಷ್ಣನಿಗೆ ತನ್ನ ಭಾವವನ್ನು ಹರಿಸಲು ಅದು ಹೇಗೆ ನೆರವಾಗಿತ್ತೋ ಅದೇ ರೀತಿ ನಿಮ್ಮ ಆಲೋಚನಾ ಲಹರಿಯನ್ನು ಹರಿಸಲು ನೆರವಾಗೋ ಇದಕ್ಕೆ ಇದು ಸೂಕ್ತವಾದ ಹೆಸರು ಅಂತ Flash ಆಯಿತು :-)

  ReplyDelete
 13. ಪ್ರಶಸ್ತಿ;ನಿಮ್ಮೆಲ್ಲರಪ್ರೋತ್ಸಾಹಕನುಡಿಗಳೇ"ಕೊಳಲಿನ"ಉಸಿರು!ಬರುತ್ತಿರಿ.ನಮಸ್ಕಾರ.

  ReplyDelete