Saturday, June 9, 2012

"ಹೀಗೊಂದು ಝೆನ್ ಕಥೆ"

ಒಬ್ಬ ಝೆನ್ ಗುರುವಿದ್ದ.ಅವನೆಂದೂ ಪ್ರಚಲಿತವಿದ್ದ ಸಿದ್ಧ ಸೂತ್ರಗಳನ್ನು ಹೇಳುತ್ತಿರಲಿಲ್ಲ.ಅವನ ಮಾತುಗಳೆಲ್ಲಾ ಧ್ಯಾನದಲ್ಲಿ ಹೃದಯದಿಂದ ಬಂದ ಮಾತುಗಳಾಗಿರುತ್ತಿದ್ದವು.ಒಂದು ಬಾರಿ ಅವನು ಪ್ರವಚನ ನೀಡುತ್ತಿದ್ದಾಗ ವ್ಯಕ್ತಿಯೊಬ್ಬ ಎದ್ದು ನಿಂತು "ಇಲ್ಲಿರುವ ಎಲ್ಲರೂನಿನ್ನ ಅನುಯಾಯಿಗಳೇ.ಎಲ್ಲರೂ ನಿನ್ನ ಮಾತು ಕೇಳುವವರೇ .ಆದರೆ ನಾನು ನಿನ್ನ ಅನುಯಾಯಿಯಲ್ಲ.ನಾನು ನಿನ್ನ ಯಾವುದೇ ಮಾತನ್ನು ಕೇಳಲು ತಯಾರಿಲ್ಲ.ನಾನು ನಿನಗೆ ವಿಧೇಯನಾಗುವಂತೆ ಮಾಡಲು ಸಾಧ್ಯವೇ?"ಎಂದ. ಅದಕ್ಕೆ ಗುರು "ಖಂಡಿತಾ ಸಾಧ್ಯ.ಹೇಗೆ ಎಂದು ಹೇಳುತ್ತೇನೆ.ನನ್ನ ಬಳಿ ಬಾ"ಎಂದ.ಅದರಂತೆ ಆ ವ್ಯಕ್ತಿ ಜನರ ಗುಂಪಿನಿಂದ ಎದ್ದು ಗುರುವಿನ ಬಳಿ ಬಂದ ."ಈಗ ನನ್ನ ಎಡಕ್ಕೆ ಬಾ"ಎಂದ ಗುರು.ವ್ಯಕ್ತಿ ಎಡಕ್ಕೆ ಬಂದ."ಎಡಕ್ಕಿಂತ ಬಲಗಡೆ ಸರಿಯಾಗಿ ಕೇಳಿಸುತ್ತದೆ .ನೀನು ಬಲಗಡೆ ಬರುವುದೇ ಉತ್ತಮ"ಎಂದ ಗುರು.ಅದರಂತೆ ವ್ಯಕ್ತಿ ಬಲಕ್ಕೆ ಬಂದ.ಅದಕ್ಕೆ ಗುರು "ನೋಡು,ಇಲ್ಲಿಯವರೆಗೆ ನೀನು ಹೇಳಿದಂತೆ ಕೇಳುತ್ತಿದ್ದೀ.ಈಗ ಎಲ್ಲರ ಮಧ್ಯೆ ಹೋಗಿ ಕುಳಿತು ನಾನು ಹೇಳುವುದನ್ನು ಆಲಿಸು"ಎಂದ.ವ್ಯಕ್ತಿ ಮರು ಮಾತಿಲ್ಲದೆ ಎಲ್ಲರ ಮಧ್ಯೆ ಹೋಗಿ ಕುಳಿತ. (ಇಂದಿನ ವಿಜಯ ಕರ್ನಾಟಕದ 'ಭೋದಿ ವೃಕ್ಷ' ವಿಭಾಗದಲ್ಲಿ ಪ್ರಕಟವಾದ ಝೆನ್ ಕತೆ )

10 comments:

  1. ಹೌದಲ್ಲ ಸಾರ್.,
    ಇಂದಿನ ಬೋಗಸ್ ನಿತ್ಯಾನಂದನಂದ ನಂತಹ ಸ್ವಯಂ ಘೋಷಿತ ಗುರುಗಳ ಮದ್ಯೆ ಝೆನ್ ಕಥೆಗಳ ಅಂತಃಸತ್ವ ಜಗತ್ ದರ್ಶನ ಅನಿಸುತ್ತೆ.
    ಇಂತಹ ಕಥೆಗಳನ್ನು ನಮಗಾಗಿ ಹೊತ್ತು ತರುವ ನೀವೂ ಪ್ರಶಂಸನೀಯರೇ.
    ಅಂದಹಾಗೆ ವಿ.ಕ.ದ ಚೇತನಾ ತೀರ್ಥಹಳ್ಳಿಯವರೇ ಬೋಧೀವೃಕ್ಷದ ರೂವಾರಿ.

    ReplyDelete
    Replies
    1. ನಿತ್ಯಾನಂದನ ನಿತ್ಯ ರಗಳೆಗಳನ್ನು ಟಿ.ವಿ.ಯಲ್ಲಿ ನೋಡಿ ಮನಸ್ಸಿಗೆ ನಿತ್ಯ ನೋವುಂಟು ಮಾಡಿದೆ.ನಿಜವಾದ ಆಧ್ಯಾತ್ಮದ ಹೊಳಹುಗಳನ್ನು ಜನ ತಿಳಿದುಕೊಳ್ಳ ಬೇಕು.ಅದಕ್ಕೆ ನಮ್ಮೆಲ್ಲರ ಪ್ರಯತ್ನಗಳಾಗಬೇಕು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  3. arthapoornavagide sir


    suragange.blogspot.com

    ReplyDelete
  4. ದಯಾನಂದ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  5. ಝೆನ್ ಕಥೆಗಳು ಬಹಳ ಅರ್ಥ ಪೂರ್ಣವಾಗಿರುತ್ತವೆ ಸರ್, ಒಮ್ಮೆ ಓದಿದ್ದೆ. ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ಇ೦ಥಾ ಮೌಲ್ಯಯುತ ಕಥೆಗಳನ್ನು ನಿರೀಕ್ಷಿಸುತ್ತೇನೆ. ನನ್ನ ಬ್ಲಾಗ್ ಗೆ ಬನ್ನಿ.

    ReplyDelete
  6. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ?ಬರುತ್ತಿರಿ.ನಮಸ್ಕಾರ.

    ReplyDelete
  7. Chennagide .. Naanu kelavomme thats kanndadalli baruva Jen Kathegalannu odiddene ..

    http://kannada.boldsky.com/inspiration/the-stone-in-the-mind-003789.html

    U can find some more in this link ...

    ReplyDelete
  8. ಶ್ರೀಧರ್;ಪ್ರತಿಕ್ರಿಯೆಗೆ ಮತ್ತು ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು.ಬರುತ್ತಿರಿ .ನಮಸ್ಕಾರ.

    ReplyDelete
  9. ella swamigalu nityanandare annisuttide....
    ee zen kathe tumbaa maarmikavaagide

    ReplyDelete

Note: Only a member of this blog may post a comment.