Tuesday, November 6, 2012

"ಆತ್ಮ ಪ್ರಶಂಶೆ ಒಳ್ಳೆಯದಲ್ಲ"

ನಮ್ಮಲ್ಲಿ ಹಲವಾರು ಮಂದಿಗೆ ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ಒಂದು ಚಟವಾಗಿದೆ.ಇಂತಹ ಚಟವೊಂದು ತಮಗಿದೆ,ಅದರಿಂದ ಬೇರೆಯವರಿಗೆ ಕಿರಿ ಕಿರಿಯಾಗುತ್ತಿದೆ ಎನ್ನುವ ಅರಿವೂ ಅವರಿಗಿರುವುದಿಲ್ಲ.ಆತ್ಮ ಪ್ರಶಂಶೆ,ಆತ್ಮ ಹತ್ಯೆಗೆ ಸಮ ಎನ್ನುತ್ತದೆ ಮಹಾಭಾರತದ ಈ ಕಥೆ.ಕುರುಕ್ಷೇತ್ರದ ಪ್ರಮುಖ ಘಟ್ಟದಲ್ಲಿ ಅರ್ಜುನನಿಲ್ಲದೆ, ಅಭಿಮನ್ಯುವನ್ನು ಕಳೆದುಕೊಳ್ಳಬೇಕಾಯಿತು.ನೊಂದ ಯುಧಿಷ್ಟಿರ,ಅರ್ಜುನನಿಗೆ 'ಮಗನನ್ನು ರಕ್ಷಿಸದ ನಿನ್ನ ಗಾಂಡೀವಕ್ಕೆ ಧಿಕ್ಕಾರ'ಎಂದು ಬಿಟ್ಟ.ಅರ್ಜುನನಾದರೋ ತನ್ನ ಪರಮ ಪ್ರೀತಿಯ ಗಾಂಡೀವವನ್ನು ಹೀಯಾಳಿಸಿದವರನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಎಂದೋ ಪ್ರತಿಜ್ಞೆ ಮಾಡಿದ್ದ .ಇದಕ್ಕೆ ಕೃಷ್ಣ ಅರ್ಜುನನಿಗೆ ಒಂದು ಉಪಾಯ ಸೂಚಿಸಿದ.ಧರ್ಮಜನ ನಿಂದನೆ ಮಾಡು ,ಇದರಿಂದ ಅವನನ್ನು ಕೊಂದಂತೆ ಆಗುತ್ತದೆ ಎಂದ.ಜೀವ ತೆಗೆಯುವುದಕ್ಕಿಂತ ಇದು ಉತ್ತಮವೆಂದು ಅರ್ಜುನ ಒಲ್ಲದ ಮನಸ್ಸಿನಿಂದ ಅಣ್ಣನ ನಿಂದನೆ ಮಾಡಿದ.ಧರ್ಮರಾಯನಂತಹ ಅಣ್ಣನನ್ನು ನಿಂದನೆ ಮಾಡಬೇಕಾಯಿತಲ್ಲ ಎಂದು ಅರ್ಜುನ ನೊಂದು,ಆತ್ಮ ಹತ್ಯೆಗೆ ಸಿದ್ಧನಾದ.ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತೆ  ಕೃಷ್ಣ ಬರ ಬೇಕಾಯಿತು.ಅರ್ಜುನನಿಗೆ 'ನಿನ್ನನ್ನು ನೀನೇ ಹೊಗಳಿಕೋ.ಇದು ಅತ್ಮಹತ್ಯೆಗಿಂತ ಕಟುವಾದ ಶಿಕ್ಷೆ 'ಎಂದು ಸೂಚಿಸಿದ.ಅದರಂತೆ ಅರ್ಜುನ ತನ್ನನ್ನು ತಾನೇ ಹೊಗಳಿಕೊಂಡು ಸಧ್ಯದ ಸಂಕಷ್ಟದಿಂದ ಪಾರಾದ.ಪರನಿಂದೆ ಕೊಲೆಗೂ,ಆತ್ಮ ಪ್ರಶಂಶೆ ಆತ್ಮ ಹತ್ಯೆಗೂ ಸಮವೆಂಬುದು ಇದರ ಸಾರಾಂಶ.ಇನ್ನಾದರೂ ನಾವು ಪರ ನಿಂದನೆ ಮತ್ತು ಆತ್ಮ ಪ್ರಶಂಶೆಗಳಿಂದ ದೂರವಿರೋಣವೆ?ನಮಸ್ಕಾರ.
(ನವೆಂಬರ್ ೩,ಶನಿವಾರ ವಿಜಯಕರ್ನಾಟಕ ,ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.ಲೇಖಕರು;ಸ್ವಾಮಿ ಆನಂದ ಪೂರ್ಣ.)

11 comments:

  1. "ನಿನ್ನನ್ನು ನೀನೇ ಹೊಗಳಿಕೋ.ಇದು ಅತ್ಮಹತ್ಯೆಗಿಂತ ಕಟುವಾದ ಶಿಕ್ಷೆ". ನಿಜ ಎಳ್ಳು ಹೊತ್ತು ಬೆಟ್ಟವನ್ನೇ ಹೊತ್ತೀದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ಜನಕ್ಕೆ ಛಡಿಯೇಟು ಈ ಬರಹ.

    ಸ್ವಾಮಿ ಆನಂದ ಪೂರ್ಣರ ಇತರ ಕೃತಿಗಳನ್ನು ಸಂಗ್ರಹಿಸುತ್ತೇನೆ.

    ReplyDelete
    Replies
    1. ಮಹಾಭಾರತದಲ್ಲಿ ನಮ್ಮಲ್ಲಿ ಅರಿವು ಮೂಡಿಸುವ ಇನ್ನೆಷ್ಟು ಉಪ ಕಥೆಗಳಿವೆಯೋ!!ತಿಳಿದವರು ಹಂಚಿಕೊಂಡರೆ ಎಲ್ಲರಿಗೂ ಉಪಯೋಗವಾದೀತು.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

      Delete
  2. ಡಾಕ್ಟ್ರೆ ಬಹಳ ದಿನಗಳ ನಂತರ ನಿಮ್ಮ ಕೊಳಲ ಗಾನ ಸವಿಯುವ ಅವಕಾಶ ಪ್ರಾಪ್ತಿಯಾಯಿತು. ನವಿರಾದ ಲೇಖನ.ಮಹಾಭಾರತ ಒಂದು ಕ್ಷೀರ ಸಾಗರ..ಮೊಗೆದಷ್ಟು ಸಿಹಿ ಬರುವ ಕಡಲು...ಸೊಗಸಾಗಿದೆ.

    ReplyDelete
  3. ಶ್ರೀಕಾಂತ್;ನನಗೆ ಚೆಂದ ಅನಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ .ಅಷ್ಟೇ.ಬರುತ್ತಿರಿ.ನಮಸ್ಕಾರ.

    ReplyDelete
  4. ಡಾಕ್ಟ್ರೆ .. ಆತ್ಮ ಪ್ರಶಂಸೆ .. ಹೊಗಳು ಭಟ್ಟ ತನ .. ಪ್ರಚಾರ ಪ್ರಿಯತೆ .. ಹೆಚ್ಚುತ್ತಿರುವ ಕಾಲದಲ್ಲಿ .. ಲೇಖನ ಸಮಯೋಚಿತ.... ನನಗೊಂದು ಹೇಳಲು ಒಳ್ಳೆ ಸಂಗತಿ ಕೊಟ್ಟಿರಿ..

    ReplyDelete
  5. ಸರ್.......ತನ್ನನ್ನು ತಾನು ಹೊಗಳಿ ಕೊಳ್ಳುವುದಕ್ಕೂ...ಮತ್ತು..ಪರನಿಂದನೆ ಮಾಡುವುದು ಇಷ್ಟೊಂದು ಘೋರ ಪ್ರಮಾಣದ ಅಪರಾಧ ಎಂದು ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು.......ನಿಜ ಬದುಕಿಗೆ ಅರ್ಥ ನೀಡಿ ಮುನ್ನಡೆಸುವ ಇನ್ನಷ್ಟು ಇಂಥಹ ಉಪಕಥೆಗಳ ನಿರೀಕ್ಷೆಯಲ್ಲಿ ಇರುವೆ..............

    ReplyDelete
  6. ತನ್ನ ಬಣ್ಣಿಸಬೇಡ... ಇದಿರ ಅಳಿಯಲು ಬೇಡ... ಎಂದು ಬಸವಣ್ಣ ಇದಕ್ಕೆ ಅಲ್ಲವೇ ಹೇಳಿದ್ದು.... ಲೇಖನ ಸಮಯೋಚಿತವಾಗಿದೆ ಸರ್

    ReplyDelete
  7. ಡಾಕ್ಟ್ರೆ...

    ತಮ್ಮ ಮಾತು ನಿಜ....

    ಆತ್ಮ ಪ್ರಶಂಸೆ ಆತ್ಮಹತ್ಯೆಗೆ ಸಮಾನ.....

    ಬಹಳ ಸುಂದರವಾಗಿ ವಿವರಿಸಿದ್ದೀರಿ....

    ಮಹಾಭಾರತ ಎಂದೆಂದಿಗೂ ಪ್ರಸ್ತುತ... ಅಲ್ಲವಾ?

    http://ittigecement.blogspot.in/2012/09/blog-post.html

    ReplyDelete
  8. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.ನಮ್ಮ ಮಹಾ ಕಾವ್ಯಗಳಲ್ಲಿರುವ ಇಂತಹ ಸುಂದರ ಮಾರ್ಗದರ್ಶಿ ಕಥೆಗಳು ನಿಮಗೆ ತಿಳಿದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.ನಮಸ್ಕಾರ.

    ReplyDelete
  9. http://ittigecement.blogspot.in/2012/08/blog-post.html

    ReplyDelete

Note: Only a member of this blog may post a comment.