Friday, December 13, 2013

"ಬದುಕೇ.......ಮನ್ನಿಸಿಬಿಡು ನನ್ನ !!!!"

ಬದುಕೇ .....,ಮನ್ನಿಸಿ ಬಿಡು ನನ್ನ !!!
ನರ ನರಳಿ ಬದುಕಿದ್ದು......,
ಬದುಕಿಯೂ .......ಸತ್ತದ್ದು !!!
ನಿದ್ರೆ ಇಲ್ಲದೇ ವ್ಯರ್ಥ ಚಿಂತೆಯಲಿ 
ರಾತ್ರಿ ಎಲ್ಲಾ ಹೊರಳಿದ್ದು !!!
ಕ್ಷಮಿಸಿ ಬಿಡು ದಯೆ ತೋರಿ !!!
ಬದುಕಿ ಬಿಡುತ್ತೇನೆ ಮತ್ತೊಮ್ಮೆ !!!
ಹೀಗೊಮ್ಮೆ ,ಇನ್ನೊಮ್ಮೆ !!!
ಕ್ಷಣ ಕ್ಷಣವೂ ಬದುಕುತ್ತಾ 
ಬದುಕ ಸವಿಯ ...........,
ಗುಟುಕು,ಗುಟುಕಾಗಿ ಸವಿಯುತ್ತಾ ,
ಅನು ಕ್ಷಣವೂ, ಬದುಕಿದ್ದಕ್ಕಾಗಿಯೇ 
ನಲಿ,ನಲಿಯುತ್ತಾ...........!!!!
ಬದುಕಿ ಬಿಡುತ್ತೇನೆ ,ಸಾಯುವ ಮುನ್ನ !!!

8 comments:

  1. `ಅನು ಕ್ಷಣವೂ, ಬದುಕಿದ್ದಕ್ಕಾಗಿಯೇ
    ನಲಿ,ನಲಿಯುತ್ತಾ...........!!!!
    ಬದುಕಿ ಬಿಡುತ್ತೇನೆ ' ಅದ್ಭುತ ಸಾಲುಗಳು ಪ್ರೇರಣಾತ್ಮಕ ಕವನ ಸರ್, ನಿಮ್ಮ ಈ ಬದುಕುವ ಪರಿ ನಮ್ಮೆಲ್ಲರಿಗೂ ಮಾದರಿಯಾಗಲಿ :) ನನ್ನ ಬ್ಲಾಗ್ ಗೆ ಭೇಟಿ ಕೊಡಿ ಸರ್, ಪ್ರಶಸ್ತಿ ಪ್ರದಾನ ಸಮಾರ೦ಭದ ಫೋಟೋ ಗಳನ್ನು ಹಾಕಿದ್ದೇನೆ.

    ReplyDelete
  2. ಇದುವೇ ಸತ್-ಚಿತ್-ಆನಂದದ ಅರ್ಥ!

    ReplyDelete
  3. ಬದುಕೆನ್ನೋದು ದಕ್ಕೋದೇ ಒಮ್ಮೆ. ಬದುಕಿಬಿಡು
    ಅದ ಬದುಕಿಗೇ ಅಸೂಯೆಯಾಗುವಂತೆ
    ನಕ್ಕುಬಿಡು ಮನಚಿಚ್ಚಿ, ನೋವೇ ಇಲ್ಲದಂತೆ
    ಅಳುವೂ ನಕ್ಕುಬಿಡುವಂತೆ..
    ಚೆನ್ನಾಗಿದೆ ಸರ್.. ಜೀವನೋತ್ಸಾಹದ ಸಾಲುಗಳು

    ReplyDelete
  4. (ಬ್ಲಾಗಿನಲ್ಲಿ ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆ ಇರಲಿ ಸಾರ್,
    ಮನೆಯಲ್ಲಿ ನೆಟ್ ಮತ್ತು ಮೊಬೈಲಿನ ನೆಟ್ ಎರಡೂ ಮಲಗಿ ಬಿಟ್ಟಿವೆ ನನ್ನ ಗ್ರಹಚಾರಕ್ಕೆ!)

    ’ಬದುಕಿಯೂ .......ಸತ್ತದ್ದು’ ಮಾರ್ಮಿಕವಾದ ಮಾತು ಸಾರ್!
    ಮತ್ತೊಮ್ಮೆ ಮೊದಲಿನಿಂದ ಬದುಕಿಬಿಡುವ ಬಯಕೆ ಯಾರಲ್ಲಾದರೂ ಹುಟ್ಟಿದೆ ಎಂದರೆ ಅದು ನಿಜವಾಗಲೂ ಶುಭಸೂಚನೆ.

    ತಿದ್ದುವೆಡೆ ತಿದ್ದಿ, ಮೆರಗು ನೀಡುವಲ್ಲಿ ಮನಸನ್ನು ದುಡಿಸಿಕೊಂಡು - ಪುನರಪಿ ಹಿಂದಿನ ವಸಂತಗಳಿಗೆ ತೆರಳಿ, ಮರಳಿ ಸರಿ ನಿರ್ಧಾರಗಳಿಂದ ಬದುಕ ರೂಪಿಸಿಕೊಳ್ಳುವ ಹಂಬಲವೇ ಶ್ರೇಷ್ಟತಮ.

    ಬದುಕ ಸವಿಯ ...........,
    ಗುಟುಕು,ಗುಟುಕಾಗಿ ಸವಿಯುತ್ತಾ
    ಬದುಕುವ ಇಚ್ಛೆ ಇದೆಯಲ್ಲಾ ಅದೇ ಬದುಕಿಸಿ ಬಿಡಬಲ್ಲದು ನಿಜವಾಗಲೂ ಸಾಯುವ ಮುನ್ನ!!

    ಸೂಪರ್ ಸೂಪರ್....

    ReplyDelete
  5. ಚಿಕ್ಕ ಚೊಕ್ಕ ಪದಗಳನ್ನು ಅಷ್ಟೇ ಜೋಪಾನವಾಗಿ ಭಾವಗಳಿಂದ ಅಲಂಕರಿಸುವ ರೀತಿ ಸೂಪರ್ ಡಾಕ್ಟ್ರೆ

    ReplyDelete
  6. ಕೃಷ್ಣ ಮೂರ್ತಿ ಸಾರ್ ,

    ಜೀವನ್ಮೋಖಿ ಸಾಲುಗಳು ..
    ಧನ್ಯವಾದಗಳು

    ಹೊಸ ವರ್ಷದ ಶುಭಾಶಯಗಳು !

    ReplyDelete
  7. ಮನಕ್ಕೆ ಹಿಡಿಸಿತು. ಆದರೂ ಎಲ್ಲೊ ಮೂಲೆಯಲ್ಲಿ ಈ ಗೆಳೆಯನಲ್ಲೇಕೆ ಈ ಇಂಥ ಭಾವನೆಗಳು ಈಗ ಎಂದು ಆತಂಕವನ್ನೂ ತಂತು.

    ReplyDelete

Note: Only a member of this blog may post a comment.