Saturday, September 4, 2010

"ಕಿವಿಯಲ್ಲಿ ಗರ್ಭಪಾತ !!!"

ಒಮ್ಮೊಮ್ಮೆ  ಸಂವಹನ ಕ್ರಿಯೆ ,ಸರಿಯಾಗಿ ನಡೆಯದೆ ಇದ್ದಾಗ ಎಂತೆಂತಹ ಎಡವಟ್ಟುಗಳಾಗುತ್ತವೆ ಎನ್ನುವುದನ್ನು ಊಹಿಸಿ ಕೊಳ್ಳುವುದೂ ಅಸಾಧ್ಯ !ಕೆಲವು ತಿಂಗಳುಗಳ ಹಿಂದೆ 'ಪ್ರಜಾವಾಣಿಯಲ್ಲಿ' ಶ್ರೀ ಗುರುರಾಜ ಕರಜಗಿಯವರು ಬರೆದ ಘಟನೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳ ಬಯಸುತ್ತೇನೆ.ಪುಣೆಯಲ್ಲಿ ಗಂಡ ,ಹೆಂಡತಿ ಒಟ್ಟಾಗಿ ಒಂದು ಕ್ಲಿನಿಕ್ ನಡೆಸುತ್ತಿದ್ದರು.ಗಂಡ 'ಸ್ತ್ರೀ ರೋಗ ತಜ್ಞ' ( male gynecologist). ಹೆಂಡತಿ'ಕಿವಿ,ಗಂಟಲು,ಮೂಗು 'ತಜ್ಞೆ (E.N.T.Specialist).ಕಿವಿಯಲ್ಲಿ wax ತೆಗೆಸಿಕೊಳ್ಳಲು ಬಂದ ಮಹಿಳೆಯೊಬ್ಬಳು ,ಪ್ರಮಾದದಿಂದ ಅಲ್ಲಿದ್ದ male gynecologist ಬಳಿ ಹೋಗುತ್ತಾಳೆ.ಅದೇ ವೇಳೆಗೆ ಯಾರೋ ನಾಲಕ್ಕು ತಿಂಗಳಿಗೆ ಗರ್ಭಪಾತ ಮಾಡಿಸಿಕೊಳ್ಳಲು ಬರಬೇಕಿದ್ದ ಮಹಿಳೆಯ ನಿರೀಕ್ಷೆಯಲ್ಲಿದ್ದ ವೈದ್ಯ ಮಹಾಶಯ ಕಿವಿಯ ರೋಗಿಯನ್ನೇ, ಗರ್ಭಪಾತ ಮಾಡಿಸಲು ಬಂದವಳೆಂದು ತಪ್ಪು ತಿಳಿಯುತ್ತಾನೆ.ಅವರಿಬ್ಬರ ಸಂಭಾಷಣೆ ಈ ರೀತಿ ಸಾಗುತ್ತದೆ;
ವೈದ್ಯ ;'ಬನ್ನಿ ,ಬನ್ನಿ,ಆರಾಮಾಗಿ ಕುಳಿತುಕೊಳ್ಳಿ.Just relax.ಗಾಭರಿ ಪಡುವಂತಹುದು ಏನೂ ಇಲ್ಲ.'
ರೋಗಿ;'ಅಯ್ಯೋ!ಇದಕ್ಕೆಲ್ಲಾ ಗಾಭರಿ ಯಾಕೆ!ಮನೆಯಲ್ಲೇ ನಾನೇ ಪಿನ್ ಹಾಕಿ ತೆಗೆದು ಬಿಡ ಬೇಕೆಂದಿದ್ದೆ!'
ವೈದ್ಯ;ಗಾಭರಿಯಿಂದ 'ಛೆ !ಛೆ!ಏನಮ್ಮಾ ನೀವು!ಒಳ್ಳೇ ವಿದ್ಯಾವಂತೆ ತರ ಕಾಣ್ತೀರಾ !ಹೀಗೆಲ್ಲಾ ಮಾಡ್ತಾರಾ!?'
ರೋಗಿ;'ಪಕ್ಕದ ಮನೆ ಹೆಂಗಸು ಎಣ್ಣೆ ಕಾಯಿಸಿ ಬಿಡು.ಬಂದು ಬಿಡುತ್ತೆ ಎಂದಳು.ನನಗ್ಯಾಕೋ ಸರಿಕಾಣಲಿಲ್ಲ .'
ವೈದ್ಯ;ಹೌಹಾರಿ 'ಅಯ್ಯಯ್ಯೋ !ಅದೆಲ್ಲಾ ತಪ್ಪಲ್ವಾ?ನಿಮ್ಮ ಯಜಮಾನ್ರನ್ನೂ ಕರೆದು ಕೊಂಡು ಬರಬೇಕಿತ್ತು.ಇದಕ್ಕೆ ಅವರ ಒಪ್ಪಿಗೇನೂ ಬೇಕಿತ್ತು'ಎಂದರು.
ರೋಗಿ;ಇಷ್ಟು ಸಣ್ಣ ವಿಷಯಕ್ಕೆ ಅವರ ಒಪ್ಪಿಗೆ ಯಾಕೇ?ಅವರು ದುಬೈಗೆ ಹೋಗಿ ಒಂದು ವರ್ಷವಾಯಿತು.ನೀವು ತೆಗೀರಿ ,ಪರವಾಗಿಲ್ಲ.ನೋವಾಗುತ್ತಾ ಡಾಕ್ಟರ್?ಎಂದಳು.
ವೈದ್ಯ;'ಛೆ!ಛೆ! ಅಷ್ಟೇನೂ ನೋವಾಗೊಲ್ಲಾ.ಸ್ವಲ್ಪ ಬ್ಲೀಡಿಂಗ್ ಆಗಬಹುದು.ಸ್ವಲ್ಪ ತಲೆ ಸುತ್ತಬಹುದು.ಅಷ್ಟೇ.'
ರೋಗಿ;ಗಾಭರಿಯಾಗಿ 'ಬ್ಲೀಡಿಂಗ್ ಜಾಸ್ತಿಯಾಗುತ್ತಾ ಡಾಕ್ಟರ್?'
ವೈದ್ಯ;'ಹೆಚ್ಚೇನಿಲ್ಲ.ಮಾಮೂಲು ನಿಮ್ಮ ಪೀರಿಯಡ್ಸ್ ನಲ್ಲಿ ಆದಷ್ಟು.'  
ಕಿವಿಯಲ್ಲಿ ಪೀರಿಯಡ್ಸ್ ನಲ್ಲಿ ಆದಷ್ಟು ಬ್ಲೀಡಿಂಗ್ ಆಗುತ್ತೆ ಅಂದರೆ ಯಾರಿಗೆ ತಾನೇ ಗಾಭರಿಯಾಗೊಲ್ಲಾ?
ರೋಗಿ;'ಬರ್ತೀನಿ ಡಾಕ್ಟ್ರೆ ,ಈಗ ಸ್ವಲ್ಪ ಅರ್ಜೆಂಟ್ ಕೆಲಸ ಇದೆ.ಆಮೇಲೆ ಬಂದು ತೆಗೆಸ್ಕೊತೀನಿ' ಎಂದು ಹೇಳಿ ಓಟ ಕಿತ್ತಳು!       
ಸರಿಯಾದ ಸಂವಹನ ಕ್ರಿಯೆ ( communication skill) ಎಷ್ಟು ಮುಖ್ಯ ಅಲ್ಲವೇ ಸ್ನೇಹಿತರೇ? ಇಷ್ಟ ಆಯ್ತಾ?ನಮಸ್ಕಾರ.

53 comments:

  1. ಮೂರ್ತಿಯವರೆ,
    ಒಳ್ಳೇ ಹಾಸ್ಯಪ್ರಸಂಗವನ್ನು ಹೆಕ್ಕಿಕೊಟ್ಟಿದ್ದೀರಿ. ಧನ್ಯವಾದಗಳು.

    ReplyDelete
  2. ಸುನಾಥ್ ಸರ್;ಮೊದಲ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  3. I had read this in Prajavani! My aunt preserved this paper cutting!

    Original piece is lengthy and very very funny!

    ReplyDelete
  4. TARUN;THANK YOU FOR YOUR KIND COMMENTS.REGARDS.

    ReplyDelete
  5. ಗುರುರಾಜ ಕರಜಗಿ ಯವರ ಭಾಷಣಗಳನ್ನು ಕೇಳಿದ್ದೇನೆ, ಆದರೆ ಇದನ್ನು ಪ್ರಜಾವಾಣಿ ಯಲ್ಲಿ ಓದಿರಲಿಲ್ಲ. ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದ. ಸ೦ವಹನ ಕೊರತೆ ಹೇಗೆ ಬಹುದೊಡ್ಡ ಪ್ರಮಾದಕ್ಕೆ ಕಾರಣ ಆಗಬಹುದು ಎ೦ಬುದಕ್ಕೆ ಈ ಉದಾಹರಣೆ ಸೂಕ್ತವಾಗಿದೆ.

    ReplyDelete
  6. ಮನಮುಕ್ತ ಮೇಡಂ ಅವರೆ;ಧನ್ಯವಾದಗಳು.

    ReplyDelete
  7. ಪರಾಂಜಪೆಯವರಿಗೆ;ನಮಸ್ಕಾರಗಳು.ಗುರುರಾಜ ಕರಜಗಿಯವರ ಮೂಲ ಲೇಖನ ಸವಿಸ್ತಾರವಾಗಿತ್ತು.ಅದರ ಪ್ರತಿ ನನ್ನಲ್ಲಿಲ್ಲ.ನೆನಪಿದ್ದಷ್ಟನ್ನು ಸಂಕ್ಷಿಪ್ತವಾಗಿ ಬರೆದಿದ್ದೇನೆ.ಹೆಸರಾಂತ ಪತ್ರಿಕೆಯಲ್ಲಿ ಬಂದಿದ್ದರೂ ಹಲವಾರು ಜನಕ್ಕೆ ಇಂತಹ ಒಳ್ಳೆಯ ಲೇಖನವನ್ನು ಓದುವ ಅವಕಾಶ ತಪ್ಪಿ ಹೋಗಿರಬಹುದಾದ್ದರಿಂದ ಅದರ ಸಾರಾಂಶವನ್ನು ಕೊಡುವ ಪ್ರಯತ್ನ ಮಾಡಿದ್ದೇನೆ.ಧನ್ಯವಾದಗಳು.

    ReplyDelete
  8. ಶ್ರೀಕಾಂತ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. ಕೂಸು ಮುಲಿಯಳ ಅವರೆ;ಧನ್ಯವಾದಗಳು.

    ReplyDelete
  10. nice humourous incident on communication gap.
    Thanks for sharing.

    ReplyDelete
  11. ಮೂರ್ತಿ ಸಾರ್..
    ಏನ್ ಸಾರ್.... ಎಲ್ಲಿ ಎನ್ ಮಾಡ್ತೀರಾ.... ಎಲ್ಲರನ್ನು ಗಾಬರಿ ಬೀಳಿಸಿದಿರಿ...... ನಿಮಗೆ ಎಂದಾದರೂ ಇಂಥಹ ಘಟನೆಗಳು ಆಗಿದ್ದವಾ ... ನಮ್ಮೊಡನೆ ಹಂಚಿಕೊಳ್ಳೀ.... ಚೆನ್ನಾಗಿ ಬರೆದಿದ್ದೀರಾ ಸರ್.... ಹ್ಹ ಹ್ಹಾ....

    ReplyDelete
  12. seetaaraam sir;Thanks for your kind comments.

    ReplyDelete
  13. ದಿನಕರ್ ಮೊಗೇರ;ಒಳ್ಳೆಯ ಹಾಸ್ಯ ಪೂರ್ಣ ಘಟನೆ .ಎಲ್ಲರೊಡನೆ ಹಂಚಿಕೊಳ್ಳಬೇಕೆನಿಸಿತು.

    ReplyDelete
  14. ವೈದ್ಯರ ಸಂವಹನ ಪ್ರಕ್ರಿಯೆ ಬಹಳ ನಗುತರಿಸಿತು, ಬಂದವಳು ಓಡಿದ್ದು ನೆನೆದರೆ ಮತ್ತೂ ನಗು ಬರುತ್ತಿರುತ್ತದೆ, ಚೆನ್ನಾಗಿರುವ ಮಿರ್ಚಿ ಕೊಟ್ಟಿರಿ, ಧನ್ಯವಾದಗಳು

    ReplyDelete
  15. ಹ್ಹ ಹ್ಹ, ಸಕತ್ತಾಗಿದೆ

    ReplyDelete
  16. ಭಟ್ ಸರ್;ನಮಸ್ಕಾರ.ಕೆಲವೊಮ್ಮೆ ಎದುರಿನವರಿಗೆ ನಾವು ಹೇಳುವುದು ಅರ್ಥವಾಗದು.ಅವರು ಬೇರೇನೋ ಅರ್ಥ ಮಾಡಿಕೊಂಡಿರುತ್ತಾರೆ.ಅವರೇನೋ ಅರ್ಥದಲ್ಲಿ ಹೇಳಿರುತ್ತಾರೆ ನಾವೇನೋ ಅರ್ಥ ಮಾಡಿಕೊಂಡಿರುತ್ತೇವೆ.ಇದರಿಂದ ಆಗುವ ಅನರ್ಥಗಳಿಗೆ ಲೆಕ್ಕವಿಲ್ಲ.ನನ್ನ ಜೀವನದಲ್ಲೂ ಇಂತಹ ಘಟನೆಗಳು ಹಲವಾರು ನಡೆದಿವೆ.ನೀವು ಹೇಳಿದ ಹಾಗೆ ನಮಗೆ ಗಮನವಿಟ್ಟು ಕೆಳುವ ಕಲೆಯಾಗಲಿ ಸರಿಯಾಗಿ ಹೇಳುವ ಕಲೆಯಾಗಲೀ ಗೊತ್ತಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ದೀಪಸ್ಮಿತ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. naaneno edu ettichina vaidyakeeya avishkaravirabahudu endukondidde,ee kaaladalli
    enu bekadaroo madabahudu.lekhana ranjaneeyavagide.dhanyavadagalu.

    ReplyDelete
  19. ಹೇಮಚಂದ್ರ;ಲೇಖನ ರಂಜನೀಯವಾಗಿದೆ ಎಂದಿದ್ದೀರಿ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  20. ಡಾಕ್ಟ್ರೆ ನಿಮ್ಮ ಹಾಸ್ಯ ಪ್ರಜ್ಞೆ ಮೆಚ್ಚಬೇಕು.ಎಲ್ಲರನ್ನೂ ನಗಿಸುವ ಕಲೆ ನಿಮಗೆ ಕರಗತವಾಗಿದೆ.ಹ್ಯಾಟ್ಸ್ ಆಫ್

    ReplyDelete
  21. ಡಾಕ್ಟ್ರೆ..

    ಹೊಟ್ಟೆ ತುಂಬಾ ನಗದೆ ಒಂದುವಾರವಾಗಿತ್ತು..

    ಹ್ಹಾ..ಹ್ಹಾ.. !

    ಮಸ್ತ್ ಆಗಿದೆ..

    ನಿಜ ಕಿವಿ ಸಮಸ್ಯೆಗೂ, ಗರ್ಭಪಾತಕ್ಕೂ ನಂಟು !!

    ಇಂಥಹದೊಂದು ನಮ್ಮ ಮನೆಕಟ್ಟುವ ಕೆಲಸದಲ್ಲೂ ಆಗಿದೆ..
    ನೆನಪಿಸಿದ್ದಕ್ಕೆ ಥ್ಯಾಂಕ್ಸು..

    ಸಧ್ಯದಲ್ಲಿಯೇ ಹಾಕುತ್ತೇನೆ..

    ನಿಮ್ಮ "ಎನಿಮಾ" ಪುರಾಣ ಬರೆಯಿರಿ ಸ್ವಾಮಿ...!!
    ತುಂಭಾ ಮಜವಾಗಿದೆ...

    ಹ್ಹಾ..ಹ್ಹಾ..

    ReplyDelete
  22. ಪ್ರಕಾಶಣ್ಣ;ನಿಮ್ಮ ಸ್ನೇಹ ಮೊದಲೇ ಸಿಹಿ.ಅದರ ಜೊತೆ ನೀವು ನಕ್ಕರೆ ಹಾಲುಸಕ್ಕರೆ.
    ನಿಮಗೆ ಖುಷಿ ಕೊಟ್ಟಿದ್ದಕ್ಕೆ ನನಗೆ ಖುಷಿ.ನೀವು ಸದಾ ನಗುತ್ತಾ ಇರಿ ಪ್ರಕಾಶಣ್ಣ.ನಿಮ್ಮ ನಗುವಿಗೆ ನೂರು ಜನರನ್ನು ನಗಿಸುವ ಶಕ್ತಿ ಇದೆ.ಧನ್ಯವಾದಗಳು.

    ReplyDelete
  23. Baloo sir;thanks for your kind comments.the credit goes to the original writer.I am just sharing the fun.Regards.

    ReplyDelete
  24. ರವಿಕಾಂತ ಗೋರೆ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  25. ಕೃಷ್ಣಮೂರ್ತಿ ಸರ್,

    ಚೆನ್ನಾಗಿದೆ ಲೇಖನ.
    ಇದನ್ನೂ ಬ್ಲಾಗಿನ ಮೂಲಕ ಓದಿಸಿದಕ್ಕೆ ವಂದನೆಗಳು.

    ReplyDelete
  26. ಧನ್ಯವಾದಗಳು ಶಿವ್;ಲೇಖನ ಓದಿ ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ.ನಮಸ್ಕಾರ.

    ReplyDelete
  27. ಸಂಭಾಷಣೆ ಹಾಸ್ಯಭರಿತವಾಗಿದೆ., ಧನ್ಯವಾದಗಳು

    ReplyDelete
  28. SIR DHANYVADAGALU, NAKKU NAKKU SUSTADE.
    NIMMA MEDICALGE SAMBANDISIDA GHATANEGALANNU ODOVAGA NAMMA GANESHGUDIYA ODANATA NENAPIGE BARUTTIDE. NAMMA "GREEN CLUB" ADARALLIYA CHARCHEGALU. SAHITYA SAMVADA. VAIDYAKIYA SALAHEGALU,CHANNAGIDDAVU.ELLARIGU MATANADUVA PRAYOGA. NENAPISUTTENE SIR NIMMA."NABHI"NAMAGE DARI TORISIDDARE.UMA BHAT MOUNAVAGIDDARE.NANIDDENE SIR,HALEYADARONDIGE HOSATANNU NIREEKSHISUTTA.

    ReplyDelete
  29. ಹ್ಹ ಹ್ಹ...ಸೂಪರ್ Doctor ಸರ್..ನಮ್ಮನೆಯವರಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು.:-)

    ReplyDelete
  30. ಗುರುಪ್ರಸಾದ್ ಶೃಂಗೇರಿ;ಹಾಸ್ಯ ಲೇಖನವನ್ನು ಓದಿ,ಮೆಚ್ಚಿ ,ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.

    ReplyDelete
  31. ಜಿ.ಜಿ.ಹೆಗಡೆಯವರೇ;ಗಣೇಶ್ ಗುಡಿಯ ದಿನಗಳನ್ನು ನೆನಪಿಸಿದ್ದಕ್ಕೆ ಧನ್ಯ ವಾದಗಳು.
    ಅಲ್ಲಿ ವಾರಕ್ಕೊಮ್ಮೆ ನಾವು ನಡೆಸುತ್ತಿದ್ದ 'ಎವರ್ ಗ್ರೀನ್'ಹೆಲ್ತ್ ಕ್ಲಬ್ ನ ಆರೋಗ್ಯಕ್ಕೆ ಸಂಭದಿಸಿದ ಚರ್ಚೆಗಳು,ಸಾಹಿತ್ಯ ಸಂವಾದ,ನೀವೆಲ್ಲಾ ಸಂತೋಷದಿಂದ ಭಾಗವಹಿಸುತ್ತಿದ್ದ ರೀತಿ ,ಈ ಎಲ್ಲಾ ಸವಿ ನೆನಪುಗಳು ತುಂಬಾ ಖುಷಿ ಕೊಡುತ್ತವೆ.ಈಗ ನೆನೆಸಿ ಕೊಂಡು ಇಷ್ಟೆಲ್ಲಾ ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡುತ್ತೇನೆ.ಓದಿ ,ಇಷ್ಟಪಟ್ಟು ,ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  32. ವನಿತಾ ಮೇಡಂ;ನೀವೆಲ್ಲಾ ಓದಿ ಖುಷಿ ಪಟ್ಟು ನಕ್ಕರೆ ನಮಗೂ ಸಂತೋಷ.ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  33. Murthy Sir,

    Tumbaa Chennagide, Odi nagu tadeyalaagalilla...Dhanyavadagalu...

    ReplyDelete
  34. ಅಶೋಕ್;ಓದಿ ,ಮೆಚ್ಚಿ,ಪ್ರತಿಕ್ರಿಯಿಸಿದ್ದಕ್ಕೆ ಅನಂತ ಧನ್ಯವಾದಗಳು.

    ReplyDelete
  35. ಹ್ಹ್ ಹ್ಹ್ ಹ್ಹ್ ..ಸಕತ್ತಾಗಿದೆ ಸರ್ ,,, ಪಾಪ ಬ್ಲೀಡಿಂಗ್ ಬಗ್ಗೆ ಕೇಳಿ ಅವರ ಪರಿಸ್ಥಿತಿ ಹೇಗಾಗಿರಬೇಡ...

    ReplyDelete
  36. ಶ್ರೀಧರ್;ಮೂಲ ಲೇಖಕರು ಇದನ್ನು ನಡೆದ ಘಟನೆ ಎಂದು ಬರೆದಿದ್ದರು.ಬ್ಲೀಡಿಂಗ್ ಬಗ್ಗೆ ಕೇಳಿ ಪುಣ್ಯಕ್ಕೆ ಆಕೆ ತಲೆ ತಿರುಗಿ ಬಿದ್ದಿಲ್ಲಾ!

    ReplyDelete
  37. ಡಾಕ್ಟ್ರೇ,

    ಈಗ ತಾನೆ ಮನೆಗೆ ಬಂದವನು ನಿಮ್ಮ ಲೇಖನ ಓದಿದೆ. ನಗು ತಡೆಯಲಾಗಲಿಲ್ಲ. ನನ್ನ ಶ್ರೀಮತಿಗೆ ತೋರಿಸಿದೆ. ಅವಳು ಸಕ್ಕತ್ತಾಗಿ ನಕ್ಕಳು.

    ReplyDelete
  38. ಶಿವು;ನಮಸ್ಕಾರ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  39. ಹಹ್ಹಹಾಆಅ,, ನಕ್ಕೂ ನಕ್ಕೂ ಸಾಕಾಯ್ತು. ಎಂತಹ ಸಂಭಾಷಣೆ ಅವರದ್ದು.. ತುಂಬಾ ಚೆನ್ನಾಗಿದೆ

    ReplyDelete
  40. ಸಾಗರಿ ಮೇಡಂ;ಲೇಖನ ನಿಮಗೆ ಇಷ್ಟವಾದದ್ದು ಸಂತೋಷ.ಲೇಖನವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.

    ReplyDelete
  41. ವೆಂಕಟೇಶ್ ಹೆಗ್ಡೆ ಯವರಿಗೆ;ಲೇಖನವನ್ನು ಓದಿ,ಮೆಚ್ಚಿ,ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.

    ReplyDelete
  42. ಶಿವ ಪ್ರಕಾಶ್;ಥ್ಯಾಂಕ್ ಯು :D :D

    ReplyDelete
  43. ನಕ್ಕೂ ನಕ್ಕೂ ಸಾಕಾಯ್ತು. :-) :-)

    ReplyDelete
  44. ನಿಶಾ ಮೇಡಂ ;ಧನ್ಯವಾದಗಳು.

    ReplyDelete

Note: Only a member of this blog may post a comment.