Thursday, September 16, 2010

"ಕಟ್ ಮಾಡು, ಇಲ್ಲಾ ಎದ್ದು ಆಚೆ ಹೋಗು"

ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಕುಳಿತಿದ್ದೆ.ಸುಮಾರು ಐದು ವರ್ಷ ವಯಸ್ಸಿನ U.K.G.ಓದುತ್ತಿದ್ದ ,ಗುಂಗುರು ಕೂದಲಿನ ,ಅಗಲ ಕಣ್ಣುಗಳ ನಗು ಮುಖದ ಮುದ್ದು ಹುಡುಗಿ ಸ್ಮಿತಾ ,'ಗುಡ್ ಮಾರ್ನಿಂಗ್ ಅಂಕಲ್'ಎಂದು ಕಾನ್ವೆಂಟ್ ಶೈಲಿಯಲ್ಲಿ ರಾಗವಾಗಿ ಹೇಳುತ್ತಾ ಒಳ ಬಂದಳು.ಜೊತೆಗೇ ಬಂದ ಅವಳ ತಂದೆ ನನ್ನ ಎದುರಿನ ಕುರ್ಚಿಯಲ್ಲಿ ಕುಳಿತರು.ಅವಳಿಗೆ ಎರಡು ದಿನದಿಂದ ಬಲಗಿವಿ ನೋಯುತ್ತಿದೆ ಎಂದೂ,ಪರೀಕ್ಷೆ ಮಾಡಿಸಲು ಕರೆದು ಕೊಂಡು ಬಂದುದಾಗಿಯೂ ಹೇಳಿದರು.ಸ್ಮಿತಾಳನ್ನು ನನ್ನ ಎಡಗಡೆ ಇದ್ದ ಪರೀಕ್ಷೆ ಮಾಡುವ ಸ್ಟೂಲಿನ ಮೇಲೆ ಬಂದು ಕುಳಿತುಕೊಳ್ಳುವಂತೆ ಹೇಳಿದೆ.ಆ ವಯಸ್ಸಿನ ಹುಡುಗರು ಅಳುವುದು,ರಚ್ಚೆ ಮಾಡುವುದು ,ಪರೀಕ್ಷೆಮಾಡಲು ಸಹಕರಿಸದೆ ಇರುವುದು ಸಾಮಾನ್ಯ.ಆದರೆ ಈ ಹುಡುಗಿ ಮಾತ್ರ ನಗು ನಗುತ್ತಲೇ ಬಂದು ಕುಳಿತಳು.ನನ್ನ ಸಲಕರಣೆಗಳನ್ನೆಲ್ಲಾ ಜೋಡಿಸಿಕೊಂಡು ಇನ್ನೇನು ಕಿವಿ ಪರೀಕ್ಷೆ ಮಾಡುವುದಕ್ಕೆ ಸರಿಯಾಗಿ ಅವಳ ತಂದೆಯ ಬಳಿ ಇದ್ದ ಮೊಬೈಲ್ ಫೋನ್ ರಿಂಗಣಿಸ ತೊಡಗಿತು.ಅದನ್ನು ಆತ ಕಿವಿಯ ಬಳಿ ಇಟ್ಟುಕೊಂಡು ಜೋರು ದನಿಯಲ್ಲಿ 'ಹಲೋ'ಎಂದ.ನನಗೆಒಳೊಗೊಳಗೇಇರಿಸುಮುರುಸು.ಸರಿ,ಆತ ತನ್ನ ಸಂಭಾಷಣೆಯನ್ನು ಮುಗಿಸಿ ಬಿಡಲಿ,  ಆಮೇಲೆಯೇ ಪರೀಕ್ಷೆ ಮಾಡೋಣ ಎಂದು ಸುಮ್ಮನೆ ಕುಳಿತೆ.ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು! ಆ ಪುಟ್ಟ ಹುಡುಗಿ ಸ್ಮಿತಾ ಅವರಪ್ಪನಿಗೆ "ಅಪ್ಪಾ,ಫೋನ್ ಕಟ್ ಮಾಡು------,ಇಲ್ಲ ಆಚೆ ಎದ್ದು ಹೋಗು disturb  ಮಾಡಬೇಡ"ಎಂದಳು.ಐದು ವರ್ಷದ ಹುಡುಗಿಯಿಂದ ಇಂತಹ ಪ್ರಬುದ್ಧ ಮಾತುಗಳನ್ನು ನಿರೀಕ್ಷಿಸಿರಲಿಲ್ಲ.ನಾನು ಅವಾಕ್ಕಾದೆ!ಅವರಪ್ಪ ಪೆಚ್ಚು ನಗೆ ನಗುತ್ತಾ ಆಚೆ ಎದ್ದು ಹೋದ! ಆ ಪುಟ್ಟ ಹುಡುಗಿಯ ಜವಾಬ್ದಾರಿಯುತ  ನಡವಳಿಕೆ ನನ್ನಲ್ಲಿ ಅಚ್ಚರಿ ಮೂಡಿಸಿತು!ಇನ್ನೊಬ್ಬರಿಗೆ ತೊಂದರೆ ಕೊಡ ಬಾರದೆಂಬ ಪರಿಜ್ಞಾನ ,ಸಾಮಾಜಿಕ ಕಳ ಕಳಿ,ದೊಡ್ಡವರು ಎನಿಸಿಕೊಂಡ ನಮ್ಮಲ್ಲಿ ಎಷ್ಟು ಜನಕ್ಕಿದೆ ಎನ್ನುವ ಪ್ರಶ್ನೆ ಕಾಡ ತೊಡಗಿತು. ಆ ಪುಟ್ಟ ಹುಡುಗಿಯಿಂದ ನಾವೆಲ್ಲಾ ಸಾಕಷ್ಟು ಪಾಠ ಕಲಿಯ ಬೇಕಿದೆಯಲ್ಲವೇ ?ಏನಂತೀರಿ?

52 comments:

 1. ಬುದ್ದಿಗೂ ವಯಸ್ಸಿಗೂ ಸಂಭಂದವಿಲ್ಲ ಸಾರ್ , ಎಷ್ಟೊಭಾರಿ ದೊಡ್ದವರೇ ಸಣ್ಣ ಮಕ್ಕಳಿಗಿಂತ ಬಾಲಿಶವಾಗಿ ವರ್ತಿಸುತ್ತಾರೆ. ಯಾದಕ್ಕೆ ಸ್ಮಿತಾ ತಂದೆ ಒಂದು ಉದಾಹರಣೆ ಅಷ್ಟೇ. ಮಕ್ಕಳನ್ನು ಕಳುಹಿಸಿ ಸಿಗರೆಟ್ ,ಬೀಡಿ, ಮಧ್ಯ ತರಿಸುವ ತಂದೆ ತಾಯಂದಿರು,ಮಕ್ಕಳ ಮೇಲೆ ಕ್ರೌರ್ಯ ನಡೆಸುವ ತಂದೆ ತಾಯಂದಿರ ಬಗ್ಗೆ ದಿನನಿತ್ಯ ವರದಿ ನೋಡುತ್ತಿದ್ದೇವೆ .ಇಂದು ಮಕ್ಕಳಿಗಿಂತ ದೊಡ್ಡವರಿಗೆ ಬದುಕಿನ ಪಾಠ ಕಲಿಸಬೇಕಿದೆ . ಸ್ಮಿತಾ ಳಿಗೆ ನನ್ನ ಸಲಾಂ.

  ReplyDelete
 2. ಹೌದು. ಬಹಳ ಸಾರಿ ಮಕ್ಕಳಿಗಿರುವಷ್ಟೂ ಸಾಮಾನ್ಯ ತಿಳಿವಳಿಕೆ ದೊಡ್ಡವರಿಗಿರುವುದಿಲ್ಲ...! ಮಗುವಿನ ಸಮಯ ಪ್ರಜ್ಞೆ ಮೆಚ್ಚುವಂತದ್ದು... ಧನ್ಯವಾದ ಸರ್‍.

  ReplyDelete
 3. ಖಂಡಿತ ಮಕ್ಕಳಿಂದ ಕಲಿತುಕೊಳ್ಳುವ ಪಾಠ ತುಂಬಾ ಇವೆ,ಆದರೆ ನಾವು ಅವರಿಗಿಂತ ದೊಡ್ಡವರು ಎನ್ನುವ ಕಲ್ಪನೆ ಅದಕ್ಕೆ ಅಡ್ಡಿ ಮಾಡುತ್ತೆ. ಅಲ್ವಾ ಸರ್ ?
  ಮುದ್ದಾದ ಮಗುವಿನ ಮಾತುಗಳು ಅರ್ಥಪೂರ್ಣ

  ReplyDelete
 4. ಬಾಲೂ ಸರ್;ಚಿನ್ನದಂತಹ ಮಾತು ಹೇಳಿದಿರಿ.ಮಕ್ಕಳಿಗಿಂತ ದೊಡ್ಡವರಿಗೇ ಪಾಠ ಬೇಕಾಗಿದೆ!

  ReplyDelete
 5. ಜಿತೇಂದ್ರ ಸರ್ ;ನಮಸ್ಕಾರ ಮತ್ತು ನನ್ನ ಬ್ಲಾಗಿಗೆ ಸ್ವಾಗತ.ಕೆಲವೊಮ್ಮೆ ಮಕ್ಕಳ ಸಮಯ ಪ್ರಜ್ಞೆ ಬೆರಗು ಗೊಳಿಸು ವಂತಹುದು!ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. ನಾಗರಾಜ್;ನೀವು ಹೇಳುವುದು ಸರಿ.ಮಕ್ಕಳಿಂದ ನಾವು ಕಲಿಯುವುದು ಬೇಕಾದಷ್ಟಿದೆ.ಆದರೆ ನಾವು ದೊಡ್ಡವರು ಎನ್ನುವ ಅಹಂಕಾರ ಅದಕ್ಕೆ ಅಡ್ಡಿ ಬರುತ್ತದೆ.

  ReplyDelete
 7. ಭಾಶೆ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:)

  ReplyDelete
 8. ಬಹಳ ಸಲ ಹಲವಾರು ವಿಚಿತ್ರಗಳನ್ನು ನೋಡುತ್ತೇವೆ,ಕೆಲವರು ಅತೀ ಚಿಕ್ಕ ವಯಸ್ಸಿನಲ್ಲೇ ಮಹತ್ಕಾರ್ಯ ಮಾಡುವ ಬುದ್ಧಿಯುಳ್ಳವರಾದರೆ ಇನ್ನೂ ಕೆಲವರು ವಯಸ್ಸಾದರೂ ಏನೂ ಬುದ್ಧಿಯಿರದ ಪೆದ್ದರು! ಇದನ್ನೆಲ್ಲಾ ನೋಡಿದರೆ ಪುನರ್ಜನ್ಮ ಇದೆಯೆಂಬುದು ಅನುಭವಕ್ಕೆ ಬರುತ್ತದೆ. ಒಬ್ಬ ೩-೪ ವಯದ ಹುಡುಗಿ ೪೦ ಹಾಡುಗಳನ್ನು ಹಾಡಿದ[ಆಲ್ಬಮ್] ಸೀಡಿಯೊಂದು ಇತ್ತೀಚೆಗೆ ಬಂದಿದೆ,ಅದರಲ್ಲಿ ಅವಳ ಸುಶ್ರಾವ್ಯ ಕಂಠಮಾಧುರ್ಯ ಮತ್ತು ಉಚ್ಚಾರ ಸ್ಪಷ್ಟತೆ ನೀವು ಅನುಭವಿಸಬೇಕು. ’ಜೈ ಜನಾರ್ದನ ’ ಎನ್ನುವ ಹಾಡಂತೂ ಅಪರಿಮಿತ ಖುಷಿ ಕೊಡುತ್ತದೆ![link--http://www.youtube.com/watch?v=G_9VAy2FkLs] ಇಂತಹ ಅಪರೂಪದ ಪ್ರತಿಭೆಗಳನ್ನು ಸೃಜಿಸಿದ ಜನಾರ್ದನ ವಾಸುದೇವನಿಗೆ ಶರಣೆಂಬೆ, ಸಂದಿಯಲ್ಲೇ ನಿಮಗೂ ಒಮ್ಮೆ ನಮಿಸಿರುವೆ.

  ReplyDelete
 9. ಹೌದು, ವಯಸ್ಸಿಗೂ, ವಿವೇಕಕ್ಕೂ ಸ೦ಬ೦ಧವೇ ಇಲ್ಲ ಎ೦ದೆನಿಸುತ್ತದೆ, ಕೆಲವು ವ್ಯಕ್ತಿಗಳನ್ನು, ಘಟನೆ ಗಳನ್ನೂ ಅವಲೋಕಿಸುವಾಗ.ಮಕ್ಕಳಿ೦ದ ಕಲಿಯಬೇಕಾದ್ದೂ ಬಹಳಷ್ಟಿರುತ್ತದೆ. ಚೆನ್ನಾಗಿದೆ ನೀವು ಹೇಳಿದ ಪ್ರಸಂಗ.

  ReplyDelete
 10. ಕೃಷ್ಣಮೂರ್ತಿಯವರೆ,
  ದೊಡ್ಡವರು ವಯಸ್ಸಾದಂತೆ ವಿವೇಕ ಕಳೆದುಕೊಳ್ಳುತ್ತಾರೆ ಎಂದು ಕಾಣಿಸುತ್ತದೆ. ನಮ್ಮ ಪುಟ್ಟ ಹುಡುಗರೇ ನಮಗೆ ವಿವೇಕದ ಪಾಠ ಹೇಳಬೇಕಷ್ಟೆ! ಇಂತಹ ಒಂದು ಸನ್ನಿವೇಶವನ್ನು ವಿವರಿಸಿ ನೀವು ನಮಗೆಲ್ಲರಿಗೂ alert ಮಾಡಿದ್ದೀರಿ. ಧನ್ಯವಾದಗಳು.

  ReplyDelete
 11. ಹೌದು ಸರ್... ಕೆಲವು ಮಕ್ಕಳ ನಡುವಳಿಕೆ, ಸೂಕ್ಷ್ಮತೆ ಎಲ್ಲರನ್ನೂ ಬೆರಗು ಗೊಳಿಸುತ್ತದೆ...

  ReplyDelete
 12. ನಿಜ ಸರ್
  ನಾವು ಎಷ್ಟೋ ಸಲ ಮೊಬೈಲ್ ರಿಂಗ್ ಆದ ಕೂಡಲೇ ನಮ್ಮದೇ ಮನೆ ಅನ್ನೋ ತಾರಾ ಎಲ್ಲ ಕಡೆ

  ಮಾತಾಡ್ತಾ ಇರ್ತಿವಿ

  ಕೆಲವೊಮ್ಮೆ ಊಟ ಮಾಡೋಕು ಟೈಮ್ ಇರಲ್ಲ, ಮೊಬೈಲ್ ನಲ್ಲಿ ಮಾತಾಡ್ತಾ ಇರ್ತಿವಿ

  ಹೊಸ ತಂತ್ರಜ್ಞಾನ ನಮ್ಮನ್ನು ಮುಂದಕ್ಕೆ ಕರೆದುಕೊಂಡು ಹೋಗ್ತಾ ಇದೆಯೋ, ಇಲ್ಲ ನಮ್ಮನ್ನು ಭಂಧನದಲ್ಲಿ ಇಡ್ತಾ ಇದೆಯೋ ಗೊತ್ತಾಗಲ್ಲ

  ಎಲ್ಲದಕೂ ನಮ್ಮಲ್ಲಿ ತಿಳುವಳಿಕೆ ಬರಬೇಕು

  ಆ ಚಿಕ್ಕ ಮಗುಗೆ ಆ ಜ್ಞಾನ ಬಂದಿದ್ದು ನಿಜಕ್ಕೂ ಸಂತಸದ ವಿಷಯ

  ನಮ್ಮ ಮನಸಿನಲ್ಲಿ ಸಾಮಾಜಿಕ ಕಳಕಳಿ ಬರದೆ ಇದ್ರೆ ಯಾವ ಪಾಠ ವೂ ಅಷ್ಟೇ

  ಏನಂತಿರಾ?

  ReplyDelete
 13. ಸಾರ್,
  ಆ ಚಿಕ್ಕ ಹುಡುಗಿಯ ಧೈರ್ಯ ಹಾಗು ಗುಣ ಮೆಚ್ಚುವಂತದ್ದು.
  ಕೆಲವೊಮ್ಮೆ ನಮಗೆ ಇಂತಹ ಧೈರ್ಯ ಇರುವುದಿಲ್ಲ ಎನ್ನುವುದು ಬೇಸರದ ಸಂಗತಿ.

  ReplyDelete
 14. ಆ ಮಗುವಿಗೆ ಇರುವ ವಿವೇಕ ಬುದ್ಧಿ ನಮಗೆ ಇರುವುದಿಲ್ಲ. ದೊಡ್ಡವರು ಮಕ್ಕಳಿಂದಲೂ ಕಲಿಯಲಾರದ ದುರಾಹಂಕಾರಿಗಳು ಅನ್ನಿಸುತ್ತೆ ಅಲ್ವಾ ಡಾಕ್ಟ್ರೆ!

  ReplyDelete
 15. ಡಾಕುಟ್ರೇ..ನೋಡುದ್ರಾ..ಆಕಿ ದಿಲ್ಲು..??!! ಅದೇ ಗಿಲ್ಲು ಎಲ್ರಿಗೂ ಕೊಡ್ಬೇಕಾಯ್ತದೆ..ಅದ್ರಲ್ಲೂ ನಮ್ ರಾಜ್ಕಾರ್ಣಿಗೊಳ್ಗೆ..ಹೌದು ಅವ್ರದ್ದು ಗೋಳೇ...ಅಲ್ಲ ಎಲ್ಲ ಕಡೆ ಅನಾರೋಗ್ಯ ಇದ್ರೆ ಆರೋಗ್ಯಮಂತ್ರಿಗೋಳು ಬುಂಡೆ ಒಡಿಸ್ಕಂಡು ಕಾಂಗ್ರೇಸ್ನೋರ್ ಇಂದ್ ಬೀಳೋದಾ..??!! ಅವ್ರ್ಗೂ ಯೋಳ್ಬೇಕಾಗಿತ್ತು ಇಂಗೇಯಾ...ಆಂ....ಏನಂತೀರಾ...??

  ReplyDelete
 16. ಭಟ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳಿದಂತೆ ಕೆಲವು ಮಕ್ಕಳ ಪ್ರತಿಭೆ ಅದ್ಭುತ!

  ReplyDelete
 17. ಪರಾಂಜಪೆ ಸರ್;ನೀವು ಹೇಳುವುದು ಸರಿ.ಮಕ್ಕಳಿಂದ ನಾವು ಕಲಿಯಬೇಕಾದದ್ದು ಬಹಳ ಇದೆ.

  ReplyDelete
 18. ಸುನಾತ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಮಕ್ಕಳು ಕೆಲವೊಮ್ಮೆ ಪ್ರಬುದ್ಧವಾಗಿ ವರ್ತಿಸುವ ರೀತಿ ನೋಡಿ ದೊಡ್ಡವರೂ ನಾಚಿ ತಲೆ ತಗ್ಗಿಸಬೇಕು.

  ReplyDelete
 19. ಪ್ರಗತಿ ಮೇಡಂ;ಕೆಲವು ಮಕ್ಕಳ ಸೂಕ್ಷ್ಮತೆ ಅಚ್ಚರಿ ಉಂಟು ಮಾಡುತ್ತದೆ.

  ReplyDelete
 20. ಮನಮುಕ್ತಾ ಮೇಡಂ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:-)

  ReplyDelete
 21. ಗುರೂ ಸರ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ತಂತ್ರ ಜ್ಞಾನ ನಮ್ಮನ್ನು ಹೆಚ್ಚು ನಾಗರೀಕರನ್ನಾಗಿ ಮಾಡ ಬೇಕಲ್ಲವೇ?ಆ ಮಗುವಿನ ಪ್ರಬುದ್ಧತೆಗೆ ಹ್ಯಾಟ್ಸ್ ಆಫ್.

  ReplyDelete
 22. ಶಿವ ಪ್ರಕಾಶ್;ನಿಜಕ್ಕೂ ಅಂತಹ ಧೈರ್ಯವುಳ್ಳ,ತಿಳುವಳಿಕೆ ಉಳ್ಳ ಹುಡುಗಿಯನ್ನು ಇದಕ್ಕೂ ಮೊದಲು ನೋಡಿದ ನೆನಪಿಲ್ಲ.

  ReplyDelete
 23. ಪ್ರವೀಣ್;ನೀವು ಹೇಳುವುದು ಸರಿ ಅನಿಸುತ್ತದೆ.ಅಹಂಕಾರ ಕಲಿಕೆಗೆ ಶತ್ರು.

  ReplyDelete
 24. ಅಜಾದ್ ಸಾರು;ಎಷ್ಟೋ ಕಿತ ಮಕ್ಳಿಗೆ ಇರೋ ಬುದ್ಧಿ ದೊಡ್ಡೋರ್ ಗೇ ಇರಾಕಿಲ್ಲ.ಏನ್ ಮಾಡಾನೆ? ಇಂಗೇ ಅಲ್ಲವ್ರಾ ಪರಪಂಚಾ?

  ReplyDelete
 25. ಮಕ್ಕಳಿದ್ದಾರೆ ಎಚ್ಚರಿಕೆ!

  ReplyDelete
 26. ನಿಜ ಸರ್.ಕೆಲವೊಮ್ಮೆ ಮಕ್ಕಳ ನಡತೆ/ಬುದ್ದಿವಂತಿಕೆ/ ಸಮಯ ಪ್ರಜ್ಞೆ..ನಿಜಕ್ಕೂ
  ಅಚ್ಚರಿ ತರಿಸುತ್ತದೆ.ಒಂದು ದಿನ ನನ್ನ 5 ವರ್ಷದ ಮಗಳು 'germs, antibody' ಹೇಳಿದ್ದು ಕೇಳಿ ದಂಗಾಗಿ ಹೋಗಿದ್ದೆ!
  ಆಮೇಲೆ ನಮ್ಮನೆಯಲ್ಲಿ ಜೋರಾಗಿ ಮಾತಾಡುವಂತಿಲ್ಲ!!..ಎಲ್ಲಿಯಾದರೂ ಜೋರಾಗಿ ಮಾತಾಡಿದರೆ, ರೂಮಿಗೆ ಕರೆದುಕೊಂಡು ಹೋಗಿ 'mamma, do this breathing exercise for 5 minutes' ಅಂತಾಳೆ:-)

  ReplyDelete
 27. ಗುಬ್ಬಚ್ಚಿ ಸತೀಶ್;ಸರಿಯಾಗಿ ಹೇಳಿದಿರಿ.'ಮಕ್ಕಳಿದ್ದಾರೆ,ಎಚ್ಚರಿಕೆ!'

  ReplyDelete
 28. ವನಿತ ಮೇಡಂ;Child is the father of man ಎಂದು ಹಿರಿಯರು ಹೇಳಿದ್ದು ಸುಳ್ಳಲ್ಲ!ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 29. nija sir... manusya doddavanu-vayassu hodantella nadate, buddivantike kadimeyagutta hogutte avaravara manasinalliruva aahankaara, aahamm galinda tammannu tave mareyutta hoguttare... adakke sir Obama(US president) bharata(bangalore) daa indina makkalige bhaya bilta irodu.... doddda manusyara bagge helbeku andre "soorutihudu maneya maaLige"....

  ReplyDelete
 30. ಡಾಕ್ಟರ್ ಸರ್,
  ಅಲ್ಲಾ ಸರ್...... ಅದೇನ್ ಕಟ್ ಮಾಡೋದು..... ಅದೆಲ್ಲಿ ಹೊರಗೆ ಹೋಗೋದು..... ಬರೆದ ರೀತಿ ತುಂಬಾ ಚೆನ್ನಾಗಿತ್ತು.....
  ಸೆಲ್ ಫೋನನ್ನು ಸಾರ್ವಜನಿಕ ಸ್ತಳದಲ್ಲಿ ನಿಷೇದಿಸುವ ದಿನ ಬಂದರೂ ಬರಬಹುದು ಈಗಿನ ರಗಳೆ ನೋಡಿದರೆ...... ಮಕ್ಕಳಿಗೆ ಇದು ಅರ್ಥವಾದರೆ ಮುಂದಕ್ಕೆ ತೊಂದರೆ ಇರಲ್ಲ ಅನಿಸತ್ತೆ....

  ReplyDelete
 31. ಮಕ್ಕಳಿಂದ ನಾವು ಕಲಿಯುವುದು ಬೇಕಾದಷ್ಟಿದೆ....

  ReplyDelete
 32. ತರುಣ್;ನೀವು ಹೇಳಿದ ಮಾತು ಸತ್ಯ.ಅಹಂಕಾರ ಬೆಳೆದಂತೆಲ್ಲಾ ಇನ್ನೊಬ್ಬರ ಬಗ್ಗೆ ಕಾಳಜಿ ಕಮ್ಮಿಯಾಗುತ್ತದೆ.ನಿಜಕ್ಕೂ ಆ ಮಗುವಿನ ಸಾಮಾಜಿಕ ಪರಿಜ್ಞಾನ ಆಶ್ಚರ್ಯ ಗೊಳಿಸುವಂತದು.

  ReplyDelete
 33. ದಿನಕರ್;ಇಲ್ಲಿ ನಾನು ನಡೆದ ವಿಷಯವನ್ನೂ ಬರೆದಿದ್ದೇನೆ.'ಕಟ್ ಮಾಡು ಇಲ್ಲ ಆಚೆ ಎದ್ದುಹೊಗು.ಡಿಸ್ಟರ್ಬ್ ಮಾಡಬೇಡ'ಎನ್ನುವುದು ಆ ಪುಟ್ಟ ಮಗು ಹೇಳಿದ ಮಾತುಗಳು.ಅದನ್ನು ಕೇಳಿ ನನಗೆ ಕೆಲ ಕಾಲ ಮಾತೇ ಹೊರಡಲಿಲ್ಲಾ!

  ReplyDelete
 34. ಶ್ರೀಕಾಂತ್;ಬಾಲು ಸರ್ ಹೇಳಿದಂತೆ ಎಷ್ಟೋ ಸಲ ದೊಡ್ಡವರು ಮಕ್ಕಳಿಗಿಂತ ಬಾಲಿಶವಾಗಿ ವರ್ತಿಸುತ್ತಾರೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 35. ಸವಿಗನಸು ಮಹೇಶ್;ನೀವು ಹೇಳುವುದು ಸರಿ.ಮಕ್ಕಳಿಂದ ಕಲಿಯ ಬೇಕಾದ್ದು ಸಾಕಷ್ಟಿದೆ.

  ReplyDelete
 36. ಹರೀಶ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು :-)

  ReplyDelete
 37. ಡಾಕ್ಟ್ರೆ...

  ನಿಜ ಮಕ್ಕಳಿಂದ ಬಹಳಷ್ಟು ನಾವು ಕಲಿಯಬೇಕಾದದ್ದು ಇದೆ...
  ಮಕ್ಕಳು ಸಣ್ಣವರೆಂದು ನಾವು ಅಲಕ್ಷಿಸುತ್ತೇವೆ..

  ಬದುಕನ್ನು ಹೇಗೆ ನೋಡ ಬೇಂಬುದನ್ನು ತುಂಬ ಸರಳವಾಗಿ ಕಲಿಸಿಕೊಡುತ್ತಾರೆ...

  ಅವರ ಹಾಗೆ ನಮಗೆ ಇರಲು ಆಗುವದಿಲ್ಲ...

  ಯಾಕೆಂದರೆ ನಾವೆಲ್ಲ ದೊಡ್ಡವರಾಗಿ ಬಿಟ್ಟಿದ್ದೇವೆ...

  ಅಭಿನಂದನೆಗಳು...

  ReplyDelete
 38. ಪ್ರಕಾಶಣ್ಣ;ನಿಮ್ಮ ಬ್ಲಾಗ್ನಲ್ಲಿ ಮಕ್ಕಳ ಮುಗ್ಧ ನಗು ಮತ್ತು ಬರಹ ನನ್ನ ಈ ಬರಹಕ್ಕೆ ಪೂರಕವಾಗಿದೆ.ನಿಮ್ಮ ಬ್ಲಾಗಿನ ಮಕ್ಕಳ ಚಿತ್ರಗಳು ನನಗೆ ತುಂಬಾ ಇಷ್ಟ ಆಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 39. ಕೃಷ್ಣಮೂರ್ತಿ ಸರ್,

  ಇದಕ್ಕಿಂತ ಇನ್ನೇನು ಬೇಕು ಮಂಗಳಾರತಿ !
  ಬೆಳಿತಾ ಬೆಳಿತಾ ದೊಡ್ಡವರು ಚಿಕ್ಕವರಾಗಿ ಬಿಡ್ತಾರ ?

  ReplyDelete
 40. ಶಿವ್ ಸರ್;ನೀವು ಹೇಳಿದ ಹಾಗೆ ಸರಿಯಾದ ಮಂಗಳಾರತಿ.ಎಷ್ಟೋ ಸಲ ಮಕ್ಕಳ ನಡವಳಿಕೆ ಹೆಚ್ಚು ಸಭ್ಯವಾಗಿರುತ್ತದೆ.

  ReplyDelete
 41. ಮೂರ್ತಿ ಸರ್,

  ನಿಜ ಸರ್, ಮಕ್ಕಳಿಂದಲೂ ಕಲಿಯುವುದು ಬಹಳಷ್ಟು ಇದೆ, ಕೆಲವೊಮ್ಮೆ ಹಿರಿಯರು ಮಕ್ಕಳಿಗಿಂತ ಕಡೆಯಾಗಿ ವರ್ತಿಸುತ್ತಾರೆ. ಬುದ್ದಿಗೂ, ವಯಸ್ಸಿಗೂ ಸಂಬಧವಿಲ್ಲ ಎಂಬ ಮಾತು ತುಂಬಾ ಸಲ ಸಾಬೀತಾಗಿದೆ....ಚೆನ್ನಾಗಿದೆ, ಧನ್ಯವಾದಗಳು.

  ReplyDelete
 42. hodu namaginta makkaLige buddi irutte.... aa putta hudugiya maatige appa belekottu ache hodaralla sadya hahah alle iddiddare innu svlpa buddi maatu heLuttaliddaLeno aa putta kandamma

  ReplyDelete
 43. ಅಶೋಕ್;ನಿಜಕ್ಕೂ ಮಕ್ಕಳ ಬುದ್ಧಿವಂತಿಕೆ ದೊಡ್ದವರಲ್ಲಿ ಕಾಣುವುದಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 44. ಮನಸು ಮೇಡಂ;ಆ ಹುಡುಗಿಯ ದನಿಯಲ್ಲಿದ್ದ ದೃಢತೆ, ಅವಳು ಹೇಳಿದ ರೀತಿಗೆ ಎಂತಹವರೂ ಅವಳ ಮಾತನ್ನು ಪಾಲಿಸಲೇ ಬೇಕಿತ್ತು.ಅದೂ ಅಲ್ಲದೆ ಅವಳು ಹೇಳಿದ್ದು ಸರಿಯಾಗಿಯೇ ಇತ್ತು.ಕೆಲವೊಮ್ಮೆ ಮಕ್ಕಳು ತಮ್ಮ ಪ್ರಬುದ್ಧ ನಡವಳಿಕೆಯಿಂದ ಬೆರಗುಗೊಳಿಸುತ್ತಾರೆ!ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 45. makkalu dhevaru nija sir. sogasagidhe. dhoddavaru dhoddathana beeridharene chenna.

  ReplyDelete
 46. Badrinaath;Thanks for your kind comments.regrds.

  ReplyDelete
 47. ಡಾಕ್ಟ್ರೇ,

  ಮಕ್ಕಳ ಮನಸ್ಸು ಇನ್ನು ಕಲುಷಿತವಾಗಿಲ್ಲವಾದ್ದರಿಂದ ಇಂಥ ನೇರ ನುಡಿಗಳು ಬರುತ್ತವೆ. ಅವನ್ನು ನಾವು ಒಪ್ಪಿಕೊಳ್ಳಬೇಕು. ನಾವು ಹೊರಜಗತ್ತಿನಲ್ಲಿ ವ್ಯವಹರಿಸುವಾಗ ಒಂದು ಬೋಳೇತನವೋ, ಅಥವ ಇನ್ನೊಬ್ಬರ ಬಗ್ಗೆ ಯೋಚಿಸದೇ ಹೀಗೆಲ್ಲ ನಡೆದುಕೊಳ್ಳುತ್ತೇವೆ. ಇಂಥವಕ್ಕೆ ಆಗಾಗ ಟ್ರೀಟ್ ಮೆಂಟ್ ಬೇಕು ಸಾರ್. ಹಾಗಂತ ನಾನು ಟ್ರೀಟ್‍ಮೆಂಟ್‍ಗಾಗಿ ನಿಮ್ಮ ಬಳಿಗೆ ಬರುವುದಿಲ್ಲ. ನನಗೆ ನನ್ನದೇ ಆದ ಒಂದು ಮೆಥೆಡ್ ಇದೆ. ಅದೇನೆಂದರೆ ನಾನು ಮಕ್ಕಳ ಜೊತೆ ಸೇರುವುದು ಮತ್ತು ಅವರೊಂದಿಗೆ ಆಡುವುದು. ಇದರಿಂದ ನಾವು ತುಂಬಾ ಕಲಿಯುತ್ತೇವೆ. ಮುಗ್ದತೆ, ನೇರಮಾತು, ಸರಳತೆ......ಎಲ್ಲವನ್ನು ಕಲಿಯುತ್ತಿರುತ್ತೇವೆ. ಹೇಗೂ ನಾಳೆ ನಾಡಿದ್ದು ಎರಡು ದಿನ ಶಾಲಾ-ಕಾಲೇಜು ರಜ. ನಾನಂತೂ ಎರಡು ದಿನ ಅವರ ಜೊತೆ. ಏನಂತೀರಿ..

  ReplyDelete
 48. ಮಗುವಿನ ಪ್ರಭುದ್ದತೆಗೆ ಜೈ ಹೋ!

  ReplyDelete