Sunday, July 3, 2011

"ನಿನಗೇನು ಗೊತ್ತು?ನೀನೇನು ಡಾಕ್ಟರ?"

೧)ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ಮರಿ ಡಾಕ್ಟರ್ ಗಳು ಬಹಳ ದಿನಗಳಿಂದ ಅಸ್ವಸ್ಥ ನಾಗಿದ್ದ,ಚಲನೆ ಇಲ್ಲದೆ ಬಿದ್ದಿದ್ದ ರೋಗಿಯೊಬ್ಬನನ್ನು ಬಹಳ ಹೊತ್ತು ಪರೀಕ್ಷೆ ಮಾಡಿ,ಅವನು ಸತ್ತಿದ್ದಾನೆಂದು ತೀರ್ಮಾನಕ್ಕೆ ಬಂದರು.ಅವನು ಸತ್ತ ಕಾರಣ ಏನಿರಬಹುದೆಂದು ಚರ್ಚೆ ಶುರುವಾಯಿತು.ಚರ್ಚೆಯ ಮಧ್ಯೆ ರೋಗಿ ಎದ್ದು ಕುಳಿತು ಕ್ಷೀಣ ದನಿಯಲ್ಲಿ "ನಾನಿನ್ನೂ ಬದುಕಿದ್ದೇನೆ" ಎಂದ.ತಕ್ಷಣವೇ ಅಲ್ಲೇ ಇದ್ದ ನರ್ಸ್ ಅಭ್ಯಾಸ ಬಲದಿಂದ  "ನೀ ಸುಮ್ನೆ ಬಾಯಿ ಮುಚ್ಚಿಕೊಂಡು ಮಲಗು.ನಿನಗೇನು ಗೊತ್ತಾಗುತ್ತೆ,ನೀನೇನು ದೊಡ್ಡ ಡಾಕ್ಟರ?"ಎನ್ನಬೇಕೆ !!!

೨).ಕ್ರಿಮಿಕೀಟಗಳು  ಮತ್ತು ಇಲಿಗಳ ಮಧ್ಯೆ ಫುಟ್ ಬಾಲ್ ಪಂದ್ಯ ಏರ್ಪಾಡಾಗಿತ್ತು.ಕೀಟಗಳ ಕಡೆ 'ಸ್ಟಾರ್ ಆಟಗಾರ'ನೂರು ಕಾಲುಗಳುಳ್ಳ ಸೆಂಟಿಪೀಡ್(ಶತ ಪದಿ)ಇದ್ದಿದ್ದುರಿಂದ ಅವುಗಳೇ ಪಂದ್ಯವನ್ನು ಗೆಲ್ಲುವ ಫೇವರೈಟ್ ಟೀಮ್ ಆಗಿದ್ದವು.ಆದರೆ ಎಷ್ಟು ಹೊತ್ತಾದರೂ ಆ ದಿನ ಸೆಂಟಿ ಪೀಡ್ ಪಂದ್ಯವನ್ನಾಡಲು ಬರಲೇ ಇಲ್ಲ!ತಮ್ಮ ಸ್ಟಾರ್ ಆಟಗಾರನಿಲ್ಲದೆ  ಕೀಟಗಳು ಪಂದ್ಯವನ್ನು ಒಂದು ಗೋಲಿನಿಂದ ಸೋತಿದ್ದವು! ಕೀಟಗಳೆಲ್ಲವೂ ಸೇರಿ ಸೆಂಟಿ ಪೀಡಿನ ಗುಹೆಯ ಬಳಿ ಹೋದವು."ನೀನಿಲ್ಲದೆ ಈ ದಿನ ಪಂದ್ಯ ಸೋತೆವು.ನೀನ್ಯಾಕೆ ಪಂದ್ಯಕ್ಕೆ ಬರಲಿಲ್ಲ?"ಎಂದವು.
"ಏನು!! ಪಂದ್ಯ ಮುಗಿದೇ  ಹೋಯಿತೇ!!?ನನ್ನ ಸಮಸ್ಯೆ ನಿಮಗೆ ಹೇಗೆ ಅರ್ಥ ವಾಗುತ್ತೆ?ನಾನಿನ್ನೂ ಷೂ ಗಳನ್ನು ಹಾಕಿಕೊಳ್ಳುವುದೇ ಮುಗಿದಿಲ್ಲಾ!!!"ಎನ್ನುತ್ತಾ ತನ್ನ ನೂರನೇ ಕಾಲಿನ ಷೂ ಲೇಸ್ ಬಿಗಿಯ ತೊಡಗಿತು!!!





15 comments:

  1. :)....ಎರಡೂ ಹಾಸ್ಯ ಪ್ರಕರಣಗಳು(ಹೂರಣಗಳೂ)....ಪೊಗದಸ್ತಾಗಿವೆ. ಅಭಿನ೦ದನೆಗಳು ಡಾ.ಸರ್.

    ಅನ೦ತ್

    ReplyDelete
  2. ಡಾಕ್ಟ್ರೆ...

    ನಮಗೆಲ್ಲ "ನಗೆ" ಮಾತ್ರೆ ಕೊಟ್ಟಿದ್ದೀರಿ..

    ಹ್ಹಾ..ಹ್ಹಾ..ಹ್ಹಾ.. !!

    ಜೈ ಹೋ !!

    ReplyDelete
  3. ಮಸ್ತ್ ಮಸ್ತ್ ಆಗಿದೆ ಜೋಕುಗಳು...

    ReplyDelete
  4. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ನಗೆ ಗುಳಿಗಳು ಸದಾ ನಳನಳಿಸುವ ಆರೋಗ್ಯ ನೀಡಲಿ.

    ReplyDelete
  5. ತುಂಬಾ ಚೆನ್ನಾಗಿದೆ ಸರ್ ,ನನ್ನ ಅಜ್ಜಿ ಹೇಳಿದ್ದು ನೆನಪಾಯಿತು ಹುಷಾರಿಲ್ಲ ಅಂತ ಡಾಕ್ಟರ ಮನೆಗೆ ಕರೆದು ಕೊಂಡು ಹೋದಾಗ ಡಾಕ್ಟರು ಏನಾಗಿದೆ ಅಂತ ಅಜ್ಜಿಯನ್ನು ಕೇಳಿದಾಗ ನನಗೆ ಹುಷಾರಿಲ್ಲ ಅಂತ ನಿಮಗೆ ಗೊತ್ತಾಗದಿದ್ದರೆ ನಿವೆಂತಾ ಡಾಕ್ಟರು ಅಂತ ಕೇಳಿದ್ಳು...

    ReplyDelete
  6. ನಗುವೇ ಅತ್ಯುತ್ತಮ ಔಷಧಿಯಂತೆ. ಹಾಸ್ಯಪ್ರಜ್ಣ್ಯೆ ಇರುವ ವೈದ್ಯರಿದ್ದರೆ ಬೇಗ ಗುಣಮುಖರಾಗುವುದು ಗ್ಯಾರೆಂಟಿ. ನಿಮ್ಮ ಬಳಿ ಬರುವ ರೋಗಿಗಳು ನಿಜಕ್ಕೂ ಅದೃಷ್ಟವಂತರು

    ReplyDelete
  7. foot ball aata tumba chennagittu.

    ReplyDelete

Note: Only a member of this blog may post a comment.