Saturday, August 27, 2011

"ನಾನು ಬಾಯಿ ಬಿಡಲೇ ಇಲ್ಲವಲ್ಲಾ ಸ್ವಾಮಿ!!"

1)ಮೆಳ್ಳಗಣ್ಣು ಇರುವ ಪೋಲಿಸಿನವನೊಬ್ಬ ಕುಡಿದು ತೂರಾಡುತ್ತಿದ್ದ ಮೂರು ಮಂದಿಯನ್ನು ಅರೆಸ್ಟ್ ಮಾಡಿದ.
ಪೋಲಿಸಿನವನು, ಮೊದಲನೆಯವನನ್ನು ನೋಡುತ್ತಾ  'ಏನೋ ನಿನ್ನ ಹೆಸರು ?'ಎಂದ. 'ಗುಂಡ ಸ್ವಾಮಿ'ಎಂದು ಎರಡನೆಯವನಿಂದ  ಉತ್ತರ ಬಂತು!ಪೊಲೀಸಪ್ಪನಿಗೆ ಸಿಟ್ಟು ಬಂತು. ಎರಡನೆ ಯವನನ್ನು ದುರುಗುಟ್ಟಿ ನೋಡುತ್ತಾ 
 'ಏಯ್ .....,ನಿನ್ನನ್ನು ಯಾವೋನೋ ಕೇಳಿದವನು?'ಎಂದು  ಗದರಿದ. 'ಅಯ್ಯೋ!  .......ನನ್ನನ್ನು ಯಾಕೆ ಸ್ವಾಮಿ ಗದರುತ್ತೀರಿ!........ನಾನು ಬಾಯಿ ತೆಗೆಯಲೇ ಇಲ್ಲವಲ್ಲಾ 'ಎಂದ ಮೂರನೆಯವನು.

2)ಮುಲ್ಲಾನ ಸ್ನೇಹಿತ ಹೇಳುತ್ತಿದ್ದ "ನನ್ನ ಹೆಂಡತಿ ಮೊದಲು ಪಿಯಾನೋ ನುಡಿಸುತ್ತಿದ್ದಳು.ಆದರೆ ಮಕ್ಕಳಾದ ಮೇಲೆ ಅವಳಿಗೆ ನುಡಿಸಲು ಪುರುಸೋತ್ತಾಗಲಿಲ್ಲ ". ಅದಕ್ಕೆ ಮುಲ್ಲಾ "ಕೆಲವೊಮ್ಮೆ ಮಕ್ಕಳು ಎಂತಹ ನೆಮ್ಮದಿಯನ್ನು ಕೊಡುತ್ತವೆ ಅಲ್ಲವೇ!!"ಎಂದು ಉದ್ಗಾರ ತೆಗೆದ.

3)ಮುಲ್ಲಾನ ಮಿತ್ರ ಹೇಳಿದ "ನನ್ನ ಹೆಂಡತಿ ಮೂರು ತಿಂಗಳಿಂದ ನನ್ನಹತ್ತಿರ ಮಾತನಾಡಿಲ್ಲ.ಆದ್ದರಿಂದ ನಾನು 
  ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದೇನೆ."ಅದಕ್ಕೆಮುಲ್ಲಾನ ಉತ್ತರ ಹೀಗಿತ್ತು; "ನೀನು ಮತ್ತೊಮ್ಮೆ ಆಲೋಚಿಸುವುದು ಒಳ್ಳೆಯದು.ಅಂತಹ ಒಳ್ಳೆಯ ಹೆಂಡತಿ ಎಲ್ಲರಿಗೂ ಸಿಗುವುದಿಲ್ಲ".

15 comments:

  1. ಧನ್ಯವಾದಗಳು ನಾಗರಾಜ್.

    ReplyDelete
  2. ha ha ha chennaagide sar , olleya haasada moodnalli ideeri.

    ReplyDelete
  3. ಬಾಲೂ ಸರ್;ನಗುವು ಸಹಜದ ಧರ್ಮ,ನಗಿಸುವುದು ಪರಧರ್ಮ.ಅಲ್ಲವೇ?

    ReplyDelete
  4. Daktre! Mulla jokes super! Bhanuvara nageyondige shruvaytu. Dhanyavada.

    ReplyDelete
  5. ದೀಪಕ್;ಭಾನುವಾರ ನಗುವಿನಿಂದ ಶುರುವಾಗಿ ವಾರವೆಲ್ಲಾ ನಗುವಿರಲಿ.ಧನ್ಯವಾದಗಳು.

    ReplyDelete
  6. ಭಟ್ಟರೇ;ಧನ್ಯವಾದಗಳು.

    ReplyDelete
  7. ಮುಲ್ಲಾನ ನಗೆಹನಿಗಳು ಚೆನ್ನಾಗಿವೆ! ನಮ್ಮೊಡನೆ ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete
  8. ತಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಮೇಡಂ.

    ReplyDelete
  9. Good jokes sir

    suragange.blogspot.com

    ReplyDelete

Note: Only a member of this blog may post a comment.