ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ ಸಮಗ್ರ ಕವನ ಸಂಕಲನ "ಕ್ಯಾಮರಾ ಕಣ್ಣು"ಓದುತ್ತಿದೇನೆ.
ಒಂದೊಂದು ಕವನವೂ ಅದ್ಭುತ.ಅವರ ಕೆಲವು ಕವನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸುತ್ತಿದೆ.
ಇಲ್ಲಿದೆ ಅವರ ಒಂದು ಕವನ "ಕಿವಿ ಮಾತು":
ಮೊದಲೇ ಚೆಲುವೆ,ಜೊತೆಗೆ ಯೌವನ ,
ನೆಲ ಕಾಣುವುದಿಲ್ಲ,ನಿಜ.
ಈ ಒನಪು ವೈಯಾರ ,ಬಿಂಕ ಬಿಗುಮಾನ ,
ಇವೂ ನಿನಗೆ ಸಹಜ.
ನಿನ್ನ ಹೆತ್ತವರ ನೋಡಿ ಉತ್ತರಿಸು :
ನಿನ್ನ ಚೆಲುವು ಸ್ವಂತವೇ?
ಇನ್ನು ನಿನ್ನ ಈ ಏರು ಯೌವನ ,
ಇದಾದರೂ ಅನಂತವೇ?
ಬೇರಿನಿಂದ ಪ್ರತಿ ರೆಂಬೆಯ ತುದಿಗೂ
ಕಾಣದ ಅಂತಃ ಸೂತ್ರ;
ಹೊರಗೆ ಮೆರೆಯುವುದು ಗಮ್ಮನೆ ಅರಳಿದ
ಬಣ್ಣದ ಹೂಗಳು ಮಾತ್ರ .
ಸಂಜೆಗೆ ಮರದಡಿ ಉದುರಿ ಬಿದ್ದಿವೆ
ರಾಶಿ ರಾಶಿ ಹೂ ಹೆಣ ;
ದುಂಬಿ ಚಿಟ್ಟೆಗಳ ಪಾಳಿ ಮುಗಿದಿದೆ ,
ಇನ್ನು ಕೇವಲ ಇರುವೆ ,ನೊಣ.
ನಿನ್ನ ಸ್ವಯಾರ್ಜಿತ ವೆಂದರೆ ಇಷ್ಟೇ:
ಹಾರ್ದಿಕ ಪ್ರೀತಿ,ವಿನಯ.
ಚೆಲುವೆ ,ಒಮ್ಮೆ ನಿನ್ನೊಳಗೆ ನೋಡಿಕೋ ,
ಅವು ನಿನ್ನಲಿ ಇವೆಯ?
ಸ್ವಯಾರ್ಜಿತ ವೆಂದರೆ..ಹಾರ್ದಿಕ ಪ್ರೀತಿ,ವಿನಯ... sundara kavithe dr. sir. hanchikondaddakke dhanyavaadagalu.
ReplyDeleteananth
ಅನಂತ್ ಸರ್;ಆ ಸುಂದರ ಸಾಲುಗಳಿಗೆ ಕಲಶ ಪ್ರಾಯದಂತಿರುವುದು ಮುಂದಿನ ಈ ಸಾಲುಗಳು;ಚೆಲುವೆ ಒಮ್ಮೆ ನೋಡಿಕೋ
ReplyDeleteಅವು ನಿನ್ನೊಳಗೆ ಇವೆಯ?
ಬೇರಿನಿಂದ ಪ್ರತಿ ರೆಂಬೆಯ ತುದಿಗೂ
ReplyDeleteಕಾಣದ ಅಂತಃ ಸೂತ್ರ;
ಹೊರಗೆ ಮೆರೆಯುವುದು ಗಮ್ಮನೆ ಅರಳಿದ
ಬಣ್ಣದ ಹೂಗಳು ಮಾತ್ರ
Sundara Salugalu... Dr.
Nanu Lakshman Rao avara tarle hadugalannu matra kelidde...
Dhanyavada Galu..
Habbada Shubhashayagalu
thanks sir...for sharing...
ReplyDeletetumbaa ishTa aaytu....
avara kelavondu kavana odiddene....
ಸತ್ಯವನ್ನೇ ಹೇಳಿದರೂ ಸಹ, ಇದು ಕೇವಲ ಸ್ತ್ರೀಯರಿಗೆ ಮಾತ್ರ ಅನ್ವಯಿಸುವ ಸತ್ಯವೆ? ಲಕ್ಷ್ಮಣರಾಯರು ಪುರುಷರ ಬಿಂಕವನ್ನು ಮರೆತು ಬಿಟ್ಟಿದ್ದಾರೆಯೆ?
ReplyDeleteದೀಪಕ್;ನಿಮಗೂ ಹಬ್ಬದ ಶುಭಾಶಯಗಳು.ನಾನು ಇಷ್ಟಪಟ್ಟಿದ್ದನ್ನು ನೀವೂ ಇಷ್ಟಪಟ್ಟಿರಿ.ಖುಷಿಯಾಯಿತು.ಧನ್ಯವಾದಗಳು.
ReplyDeleteದಿನಕರ್;ಬ್ಲಾಗಿಗೆ ಬಂದಿರಿ.ನಾನು ಇಷ್ಟಪಟ್ಟ ಕವಿತೆಯನ್ನು ನೀವೂ ಓದಿದಿರಿ.ಖುಶಿಪಟ್ಟಿರಿ.ಸಂತೋಷ.ಬರುತ್ತಿರಿ.ಧನ್ಯವಾದಗಳು.
ReplyDeleteನೀವು ಹೇಳುವುದು ಸರಿ.ಚೆಲುವೆಗೆ ಹೇಳುವುದು ಚೆಲುವನಿಗೂ ಅನ್ವಯಿತ್ತದೆ.ಅಲ್ಲವೇ ಸರ್? ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ ಸರ್.ನಮಸ್ಕಾರ.
ReplyDeleteಚಿಕ್ಕವಾದರೂ ಎಷ್ಟು ಚಂದ ಇವೆ ಸಾರ್ ಸಾಲುಗಳು! ಬಹಳ ಇಷ್ಟವಾದವು. ಹೀಗೆ ಇನ್ನು ಹೆಚ್ಚು ಕವನಗಳು ಓದಲು ಸಿಗಲಿ.. ಧನ್ಯವಾದಗಳು!
ReplyDeleteಪ್ರದೀಪ್ ರಾವ್;ಪ್ರತಿಕ್ರಿಯೆಗೆ ಧನ್ಯವಾದಗಳು."ಕೊಳಲು",ಕನ್ನಡ ಕಾವ್ಯದ ಕೊರಳಾಗಲಿ ಎನ್ನುವ ಆಸೆ.ಬರುತ್ತಿರಿ.ನಮಸ್ಕಾರ.
ReplyDeleteತುಂಬಾ ಚೆನ್ನಾಗಿದೆ. ಸ್ವಯಾರ್ಜಿತದಲ್ಲಿ ಏನೇನೆಲ್ಲಾ ಇರಬಹುದು ...ಅದರಲ್ಲಿ ಪ್ರೀತಿ ಮತ್ತು ವಿನಯ ಮಾತ್ರ ಉಳಿಯುವಂತದ್ದು..ಅಲ್ಲವೇ?
ReplyDeleteಭಟ್ಟರೇ;ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.ಲಕ್ಷ್ಮಣರಾವ್ ಹೇಳುವ ರೀತಿ ವಿಶಿಷ್ಟವಾಗಿದೆ."ಎನೆಲ್ಲಾ ಇದ್ದರೂ ಹಾರ್ದಿಕ ಪ್ರೀತಿ ವಿನಯವಷ್ಟೇ ಸ್ವಯಾರ್ಜಿತ.
ReplyDeleteಒಮ್ಮೆ ನಿನ್ನೊಳಗೆ ನೋಡಿಕೋ!ಅವು ನಿನ್ನಲ್ಲಿ ಇವೆಯಾ?"ಎಂದು ಕೇಳುವ ರೀತಿ ಇಷ್ಟವಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.
ಅತ್ಯಂತ ಲವಲವಿಕೆಯ ಗಣಿ ನಮ್ಮ ಬಿ.ಆರ್.ಎಲ್.
ReplyDeleteಕಾವ್ಯಕ್ಕೆ ಪೋಲೀತನದ ಮೆರುಗುಕೊಟ್ಟು, ಚಿಂತನೆಗೆ ಹಚ್ಚುವ ಅವರ ಶೈಲಿ ಅನನ್ಯ.
ಉತ್ತಮ ಕಾವ್ಯವನ್ನು ತಾಯಿ ಹಕ್ಕಿ ಮರಿಗೆ ಗುಕ್ಕು ಕೊಡುವ ತೆರದಿ ಉಣಬಡಿಸುವ ನಿಮ್ಮ ಸಹೃದಯತೆಗೆ ಜೈ!
ಬದರಿ;ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಕನ್ನಡ ಸಾಹಿತ್ಯದ ಸಮೃದ್ಧತೆ ನನ್ನನ್ನು ಮೂಕನನ್ನಾಗಿಸುತ್ತದೆ.ಓದಿ ಸವಿಯಲು ಎಷ್ಟೊಂದಿದೆ!ನಮಗಾಗಿ ಸಾಲು ಸಾಲು ಪ್ರಸಿದ್ಧ ಕವಿಗಳು ಎಂತೆಂತಹ ಸೊಗಸಾದ ಕಾವ್ಯವನ್ನು ಕೊಟ್ಟಿದ್ದಾರೆ ಎಂದು ನೆನೆದಾಗ ರೋಮಾಂಚನವಾಗುತ್ತದೆ!ಜೀವನ ಪರ್ಯಂತ ಓದಿದರೂ ಸಾಲದೇನೋ ಎನ್ನಿಸುತ್ತದೆ.ಒಳ್ಳೆಯ ಕಾವ್ಯವನ್ನು ಓದಿದಾಗ ನಿಮ್ಮೆಲ್ಲರೊಡನೆ ಹಂಚಿ ಕೊಳ್ಳುವ ತವಕ!ನಮಸ್ಕಾರ.
ReplyDeletesuperb....
ReplyDeleteTHANK YOU.
ReplyDeleteತುಂಬಾ ಖುಷಿಯಾಯ್ತು ಸರ್.. ಒಳ್ಳೆಯ ಲೇಖನಿ ನಿಮ್ಮದ್ದು, ಸುಂದರವಾದ್ದನ್ನೇ ಹುಡುಕಿದ್ದೀರಿ.. ಹಬ್ಬದ ಶುಭಾಶಯಗಳು.
ReplyDeleteಈಶ್ವರ್ ಭಟ್;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಬ್ಲಾಗಿಗೂ ಫಾಲೋಯರ್ ಆಗಿದ್ದೇನೆ.ನಾಳೆ ನಿಮ್ಮ ಕವನವನ್ನು ಬಿಡುವಾಗಿ ಓದುತ್ತೇನೆ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteThanks sir
ReplyDeleteB.R.L.ravara adbhutavaada
ReplyDeletekavanavanakkaagi dhanyavaadagalu.
4-9-11randu BRL ravara
sammukhadalli kavinamanadalli
haaduva sowbhaagya nammadaagide.
ಕಲರವ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನ್ನ ನೆಚ್ಚಿನ ಕವಿಯ ಸಮ್ಮುಖದಲ್ಲಿ ಹಾಡುತ್ತಿರುವ ನಿಮಗೆ ಅಭಿನಂದನೆಗಳು.ಸಮಾರಂಭಕ್ಕೆ ಶುಭಾಶಯಗಳು.
ReplyDeleteನಮಸ್ಕಾರ.
ಗುರುಗಳೇ, ಸುನರ ಸಾಲುಗಳು.
ReplyDeleteತುಂಬಾ ಇಷ್ಟವಾಯಿತು...........
ಸುಂದರವಾದ ಕವನ. ಚೆಲುವ-ಚೆಳುವಿಯರಿಗೆ ಒಳ್ಳೆ ಕಿವಿಮಾತು
ReplyDelete