ಧ್ಯಾನದ ಕೋಶದೊಳಹೊಕ್ಕು
ಹೊರಬಂದಾಗ ...............,
ನಾನೊಂದು ಬಣ್ಣ ಬಣ್ಣದ
ಚಿಟ್ಟೆಯಾಗಿ.....................,
ನನ್ನ ಸುತ್ತಲ ಜನ
ರಂಗು ರಂಗಿನ ಹೂವುಗಳಾಗಿ ,
ಪ್ರೀತಿ ಸ್ನೇಹಗಳ ಕೊಡಲು
ಕೈ ಬೀಸಿ ಕರೆಯುತ್ತಿದ್ದ ಹಾಗೆ
ಕನಸು....................!
ಕನಸು ಹರಿದಾಗ
ಮತ್ತದೇ ................ನಾನು!!
ಮತ್ತದೇ .................ಜನ!!
ಚಿಟ್ಟೆಯಾಗಿ.....................,
ನನ್ನ ಸುತ್ತಲ ಜನ
ರಂಗು ರಂಗಿನ ಹೂವುಗಳಾಗಿ ,
ಪ್ರೀತಿ ಸ್ನೇಹಗಳ ಕೊಡಲು
ಕೈ ಬೀಸಿ ಕರೆಯುತ್ತಿದ್ದ ಹಾಗೆ
ಕನಸು....................!
ಕನಸು ಹರಿದಾಗ
ಮತ್ತದೇ ................ನಾನು!!
ಮತ್ತದೇ .................ಜನ!!
waav sar kya baat hai sab, adaab jai ho shukriyaa .
ReplyDeleteಕನಸು-ವಾಸ್ತವಗಳ ಅ೦ತರವನ್ನು ಚಿತ್ರಿಸುವ ಸು೦ದರ ಕವನ ಸರ್.
ReplyDeleteಬಾಲೂ ಸರ್;ನಿಮ್ಮ ಪ್ರೋತ್ಸಾಹ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.
ReplyDeleteಪ್ರಭಾಮಣಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಧ್ಯಾನ ಕೋಶವ ಹೊಕ್ಕು ಬರಲು ನಿಮ್ಮಂತ ಸಂತ ಹೃದಯವೇ ಆಗಬೇಕು. ನಮ್ಮದೇನಿದ್ದರೂ ಗೌಜು ಗದ್ಧಲಗಳ ಮಾಯಾಪುರಿ ವಾಸ! ವಾಹ್ ಸಾರ್, ನಿಮ್ಮ ಕಲ್ಪನೆಗಳ ಹೂ ತೋಟದಲ್ಲಿ ಎಷ್ಟೊಂದು ತರೆವಾರಿ ಹೂಗಳು...
ReplyDeleteಪ್ರಿಯ ಮಿತ್ರ ಬದರಿಯವರೇ;ನಿಮ್ಮ ಕಲ್ಪನಾ ಲೋಕದ ಮುಂದೆ ನನ್ನದೇನಿದ್ದರೂ ಕೋಟೆಯ ಮುಂದಿರುವ ಮರಳು ಗುಪ್ಪೆಯ ಹಾಗೆ.ಓದಿ ಪ್ರೀತಿಯಿಂದ ಹಾರೈಸಿದ್ದಕ್ಕೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDeleteಬಹಳ ಸುಂದರ ಸಾಲುಗಳು..
ReplyDeleteಇನ್ನಷ್ಟು ಕವನಗಳು ಬರಲಿ..
ಪ್ರಕಾಶಣ್ಣ;ಧನ್ಯವಾದಗಳು.
ReplyDeleteಕನಸು ಮತ್ತು ವಾಸ್ತವ! ಚೆನ್ನಾಗಿದೆ.
ReplyDeleteತುಂಬಾ ಚೆನ್ನಾಗಿದೆ ಚುಟುಕು
ReplyDeleteಕವಿ ನಾಗರಾಜ್ ಅವರಿಗೆ;ನನ್ನ ಬ್ಲಾಗಿಗೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
ReplyDeleteಸೀತಾರಾಮ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete'ಚಂಚಲ ಚಿಟ್ಟೆಯಂತಿದ್ದ ಮನ ಧ್ಯಾನಕೋಶ ಹೊಕ್ಕಿ ಬಂದ ಮೇಲೆ ಸ್ಥಿರವಾಗುವುದು'
ReplyDelete_ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ
ವಿಚಲಿತ ಅವರೆ;ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
ReplyDeleteರಾಯರೇ, ಧ್ಯಾನದ ಕೋಶದೊಳಗಿಂದ ಹೊರಬಂದ ಬಣ್ಣದ ಚಿಟ್ಟೆಯಾಗಿದ್ದರೇ ಸುಖವಿತ್ತೇನೋ, ಆದರೆ ಅದು ಕನಸಾಗಿ ಮಾರ್ಪಟ್ಟು ಮತ್ತದೇ ಜನ ಮತ್ತದೇ ಮಾಮೂಲಿ ನಮ್ಮತನ ಇದು ನಮಗೆ ಸದಾ ಅಂಟಿಕೊಂಡಿರುವ ಅಂಶ. ಎಷ್ಟೇ ಪ್ರಯತ್ನಿಸಿದರೂ ಬಿಡುಗಡೆ ಅಷ್ಟು ಸುಲಭಸಾಧ್ಯವಲ್ಲ. ಆ ಅರ್ಥದಲ್ಲಿ ನಾವೂ ಚಿಟ್ಟೆಗಳೇ ಮತ್ತೆ ಹುಟ್ಟುವೆವು ಮತ್ತೆ ಸಾಯುವೆವು, ಮತ್ತೆ ಹಲವು ದೇಹಗಳೆಂಬ ಕೋಶಗಳನ್ನು ಸೇರಿ ಮೆರೆಯುವೆವು, ಮರುಗುವೆವು ಇದುವೇ ಜೀವನ, ಈ ಸ್ವಾರಸ್ಯ ನಿಮ್ಮ ಹನಿಗವನದಲ್ಲಿ ಕಾಣಿಸಿತು, ಧನ್ಯವಾದಗಳು.
ReplyDeleteಭಟ್ ಸರ್;ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ.ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.
ReplyDelete