Saturday, February 18, 2012

"ನಿಮ್ಮ ಮನಸ್ಸು ಸುಂದರವಾಗಿದ್ದರೆ, ಈ ಜಗತ್ತೇ ಸುಂದರ!!!"

ನನ್ನ ಬ್ಲಾಗ್  ಸ್ನೇಹಿತ ಬಾಲೂ ಸರ್ ಅವರ ಬ್ಲಾಗ್ 'ನಿಮ್ಮೊಳಗೊಬ್ಬ ಬಾಲು'ಅವರ ಬ್ಲಾಗಿನ ಧ್ಯೇಯ ವಾಕ್ಯ 'ನಿಮ್ಮ ಮನಸ್ಸು ಸುಂದರವಾಗಿದ್ದರೆ ,ಜಗತ್ತೇ ಸುಂದರ!!'ಎನ್ನುವ ಮಾತುಗಳು ನನಗೆ ಸದಾ ನೆನಪಾಗುತ್ತಿರುತ್ತವೆ .ಆ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆಯಲ್ಲವೇ!. The  world is neither good nor bad,our perception makes it so.'The mind in itself can create a hell or a heaven!'ನಾವು ಹೊರಗಿನ ಸಂದರ್ಭಗಳಿಂದ ,ಘಟನೆಗಳಿಂದ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ ಎನ್ನುತ್ತೇವೆ.ಆದರೆ ಆ ಘಟನೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ನಮ್ಮ ನೆಮ್ಮದಿ ಹಾಳಾಗುತ್ತದೆಯೇ ಹೊರತು ಆ ಘಟನೆಗಳಿಂದಲ್ಲ.ಸಾಧ್ಯವಿದ್ದಷ್ಟೂ ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬೇಡಿ.ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನಾಡಬೇಡಿ.ಯಾವುದೇ NEGATIVE VIBRATION ಅದರ ಮೂಲವಾದ ನಮ್ಮ ಮನಸ್ಸನ್ನೇ ಹಾಳು ಮಾಡುತ್ತದೆ.ಸದಾ ಕಾಲ ಮನಸ್ಸು ಶಾಂತಿಯಿಂದ,ನೆಮ್ಮದಿಯಿಂದ  ,ಸಂತೋಷದಿಂದ ಇರುವಂತೆ ನೋಡಿಕೊಳ್ಳಿ.THIS SHOULD BE  A ONE POINT PROGRAMME OF YOUR LIFE TIME..ಈ ಒಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡಿ.ಮತ್ತೆಲ್ಲಾ ವಿಷಯಗಳೂ ತಮ್ಮಷ್ಟಕ್ಕೆ ತಾವೇ ಬದಲಾಗುತ್ತವೆ.If you can make your mind beautiful,the world will definitely be beautiful.'ದೃಷ್ಟಿಯಂತೆ ಶೃಷ್ಟಿ'ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ.ಬಸವಣ್ಣನವರು ನೂರಾರು ವರುಷಗಳ ಹಿಂದೆಯೇ ಹೇಳಿದಂತೆ ಲೋಕದ ಡೊಂಕ ತಿದ್ದುವ ಮೊದಲು ನಮ್ಮ ಮನದ ಡೊಂಕುಗಳನ್ನು ತಿದ್ದಿಕೊಳ್ಳೋಣ.ನಮ್ಮ ನಮ್ಮ ಮನಗಳ ಸಂತೈಸಿಕೊಳ್ಳೋಣ.ನಮ್ಮ ಆಲೋಚನೆಗಳನ್ನು ಮೊದಲು ಸರಿಪಡಿಸಿಕೊಳ್ಳೋಣ.
'ಈ ಕ್ಷಣದಲ್ಲಿ ಇರುವುದನ್ನು 'ರೂಢಿಸಿ ಕೊಳ್ಳುವುದರಿಂದಲೂ, ಧ್ಯಾನದಿಂದಲೂ ,ಸದಾ ಧನಾತ್ಮಕ ಚಿಂತನೆಗಳಿಂದಲೂ (positive thinking), ನಮ್ಮ ಮನಸ್ಸನ್ನು ಸುಂದರವಾಗಿಸಿಕೊಂಡು ,ಈ ಜಗತ್ತನ್ನೂ ಸುಂದರಗೊಳಿಸೋಣ.

15 comments:

  1. ಡಾಕ್ಟ್ರೆ..

    ಬಹಳ ಸತ್ಯವಾದ ಮಾತುಗಳನ್ನು ತುಂಬಾ ಸರಳವಾಗಿ..
    ಮನನವಾಗುವಂತೆ ತಿಳಿಸಿದ್ದೀರಿ...

    ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು...

    ಇಂಥಹ ಇನ್ನಷ್ಟು ಲೇಖನಗಳು ಬರಲಿ ಜೈ ಹೋ !!

    ReplyDelete
  2. SUNDARA MANASIGE DHANATMAKA CHINTANE.
    SARALA SULABHA KHARCHILLA UPAYA.PALISONA.CHINTANEGE SALAAM

    ReplyDelete
  3. ಹ ಹ ಹ ನನ್ನ ಬ್ಲಾಗ್ ನ ಒಂದುವಾಕ್ಯ ಇಷ್ಟೆಲ್ಲಾ ಬರೆಸಿತಲ್ಲಾ ಎಂಬ ಸಂತಸ ನನ್ನದು.ಡಾಕ್ಟರ್ ಸರ್ ನಿಮ್ಮ ಲೇಖನ ನೂರಕ್ಕೆ ನೂರಷ್ಟು ನಿಜ.ನಿಮ್ಮ ವಿಶ್ವಾಸಕ್ಕೆ ಶರಣು ಶರಣು ಶರಣಾರ್ಥಿ.

    ReplyDelete
  4. ಬಾಲುರವರ ಬ್ಲಾಗ್ ನ ಆ ಧ್ಯೇಯ ವಾಕ್ಯ ನನಗೂ ಬಹಳ ಇಷ್ಟ ಸರ್, ಅದರ ಬಗ್ಗೆ ಮನಸ್ಸಿಗೆ ಆತ್ಮೀಯವಾಗುವ೦ತೆ ಬಹಳ ಚೆನ್ನಾಗಿ ಬರೆದಿದ್ದೀರಿ ಸರ್. ಧನ್ಯವಾದಗಳು.

    ReplyDelete
  5. ಬಾಲಣ್ಣನವರ ನಿರ್ಮಲ ಮನಸಿನಂತೆಯೇ ಅವರ ಬ್ಲಾಗಿನ ಧ್ಯೇಯ ವಾಕ್ಯ ಡಾಕ್ಟ್ರೇ! ಅವರ ಎಲ್ಲಾ ಬ್ಲಾಗುಗಳೂ ಭರಪೂರ ಭೋಜನೆಗಳೇ.

    ನಿಮ್ಮಂತಹ ಕಾರಣಪುರುಷರ ಸತ್ಸಂಗದಿಂದ ಈ ಗಾಜಿನ ಕಲ್ಲೂ ವಜ್ರದ ಹೊಳಪು ಪಡೆದರೆ ಅದಕಿಂತ ಸಾರ್ಥಕ್ಯ ಬೇರಿಲ್ಲ.

    ಜಗವನು ಹೇಗೆ ನೋಡುವಿವೋ ಅದು ನಮ್ಮ ಗ್ರಹಿಕೆಗೆ ಅಂತೆಯೇ ಗೋಚರ ಎನ್ನುವ ಮಾತಿನಲ್ಲಿ ದಿವ್ಯ ಸತ್ಯವಿದೆ.

    ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಹಲ ವಿಚಿತ್ರ ಕಂನ್ನಡಿಗಳಿವೆ. ಒಂದರಲ್ಲಿ ನಾವು ಸಮರಾಯ್ ಯೋಧರಂತೆ ದಪ್ಪ ಕಂಡರೆ, ಇನ್ನೊಂದರಲ್ಲಿ ದಿ|| ನರಸಿಂಹಯಾಜು ಅವರಂತೆ ಸಪೂರ ಕಾಣ್ತೇವೆ! ನೋಟದಂತೆ ಮನೋ ಸ್ಪಂದನ.

    ಒಳ್ಳೆಯ ಮನೋಶ್ಚೇತನ ಬರಹಕ್ಕಾಗಿ ಧನ್ಯವಾದಗಳು.

    ReplyDelete
  6. ಮೂರ್ತಿ ಸರ್....

    ಹೌದು, ನಿಜವಾದ ಮಾತು..ಸುಂದರವಾಗಿ ಅದನ್ನು ವರ್ಣಿಸಿದ್ದೀರಿ....ನಾವು ಒಳ್ಳೆಯವರಾದರೆ ಊರೆಲ್ಲಾ ಒಳ್ಳೆಯದು ಅಂತಾನು ಇದೇ ರೀತಿಯಲ್ಲಿ ಹೇಳುತ್ತಾರೆ...ಧನ್ಯವಾದಗಳು ಸರ್...

    ReplyDelete
  7. ನಿಜ ಸರ್ ನೀವು ಹೇಳಿದ್ದು... ಬಹಳ ಸತ್ಯವಾದ ಸಂಗತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ ಧನ್ಯವಾದಗಳು/

    ReplyDelete
  8. saraLa satyavanna heLiddiri sir.......

    thank you very much...

    ReplyDelete
  9. ಪ್ರತಿಕ್ರಿತ್ಯಿಸಿದ ಎಲ್ಲರಿಗೂ ಧನ್ಯವಾದಗಳು.ನಮಸ್ಕಾರ.

    ReplyDelete
  10. ಡಾಕ್ಟ್ರೇ,
    ನಿಮ್ಮ ಮಾತು ಸತ್ಯ...ನಾವು ಹುಬ್ಬಳ್ಳಿಯ ಹತ್ತಿರದ ಊರಿನಲ್ಲಿ ಮೂರು ದಿನದ ಹಿಂದೆ ಅಲ್ಲಿದ್ದಾಗ ದೇವರು, ಮನಸ್ಸು...ನೆಮ್ಮದಿ ಇತ್ಯಾದಿಗಳ ವಿಚಾರಗಳನ್ನು ಚರ್ಚಿಸುತ್ತಿದ್ದಾಗ..ನಿಮ್ಮ ಲೇಖನ ಧಾಟಿಯಲ್ಲಿಯೇ ಚರ್ಚೆಯಾಗುತ್ತಿತ್ತು...ಸೂಕ್ತ ಲೇಖನ.

    ReplyDelete
  11. ತುಂಬಾ ಒಳ್ಳೆ ಮಾತು ಹೇಳಿದ್ದೀರಿ ಧನ್ಯವಾದಗಳು.

    ReplyDelete
  12. 'ದೃಷ್ಟಿಯಂತೆ ಸೃಷ್ಟಿ' absolute truth sir... ಚೆನ್ನಾಗಿದೆ ಲೇಖನ. :)

    ReplyDelete
  13. ಲೇಖನ ತುಂಬಾ ಚೆನ್ನಾಗಿದೆ ಸರ್ ...

    ReplyDelete
  14. ಮನಸ್ಸು ನಿರಾಳವಾದಾಗ ಮಾತ್ರ ಅದು ಎಲ್ಲರ ಸುಖವನ್ನೂ ಕ್ಷೇಮವನ್ನೂ ಬಯಸುತ್ತದೆ. ಪ್ರಾಪಂಚಿಕ ವ್ಯವಹಾರಗಳಲ್ಲಿ ತೊಡಗಿಕೊಂಡ ಮನಸ್ಸು ಇಡೀ ದಿನ ಸಂತೋಷಪಡುತ್ತದೆ ಎನ್ನುವುದು ಮರೀಚಿಕೆಯೇ! ಆದರೂ ಆದಷ್ಟೂ ಅದನ್ನು ಸಾಧಿಸಲು ಧ್ಯಾನಮಾರ್ಗದ ಅವಶ್ಯಕತೆಯಿದೆ. ಧ್ಯಾನದಲ್ಲೂ ನಿದಿಧ್ಯಾಸನಕ್ರಿಯೆ ಸಾಧಿಸಿದವರಿಗೆ ಮಾತ್ರ ಸಾಧ್ಯ.

    ಸಾಮಾನ್ಯರಾದ ನಮಗೆ ಧ್ಯಾನಕ್ಕೆ ಕುಳಿತಾಗ ಶೆಟ್ಟಿಗೆ ಕೊಟ್ಟ ಐನೂರು ರೂಪಾಯಿಯಲ್ಲಿ ಚಿಲ್ಲರೆ ಮರಳಿ ಪಡೆಯಲು ಮರೆತಿದ್ದೋ, ಆಟೋದಲ್ಲಿ ವಸ್ತು ಬಿಟ್ಟುಹೋಗಿದ್ದು ನೆನಪಾಗಿಯೋ, ಕೊಟ್ಟ ಸಾಲ ಮರಳಿ ಬರುತ್ತದೋ ಇಲ್ಲವೋ ಎಂಬ ಆತಂಕ ಉಂಟಾದಾಗಲೋ ಅದರ ಗುರಿ ತಲ್ಪುವುದು ಸಾಧ್ಯವಾಗುವುದಿಲ್ಲ. ಇದೆಲ್ಲವನ್ನೂ ಮೀರಿ ಬೆಳೆಯಬೇಕೆಂದರೆ ಅದಕ್ಕೆ ನಿತ್ಯಾನುಸಂಧಾನ ಬೇಕೇಬೇಕಾಗುತ್ತದೆ. ರಾತ್ರಿಯಿಡೀ ಸರಿಯಾಗಿ ವಿಶ್ರಾಂತಿ ಪಡೆದ ಮನಸ್ಸು ಬೆಳಗಿನ ಜಾವ ಮಾತ್ರ ತನ್ನ ಜಂಜಡಗಳಲ್ಲಿ ಅತೀ ಕಡಿಮೆ ಪರ್ಸೆಂಟೇಜ್ ಹೊಂದಿರುತ್ತದೆ, ಅದಕ್ಕೇ ಆ ಕಾಲವನ್ನು --ಬ್ರಾಹ್ಮೀ ಮುಹೂರ್ತವನ್ನು ಧ್ಯಾನಕ್ಕೆ ಸಕಾಲ ಎಂದು ಪ್ರಾಜ್ಞರು ತಿಳಿಸಿದ್ದಾರೆ.

    ಪ್ರತಿಕ್ರಿಯಿಸುವಾಗ ’ಚೆನ್ನಾಗಿದೆ ಚೆನ್ನಾಗಿದೆ’ ಎನ್ನುವ ನಮ್ಮ ಜನ ವೈಯ್ಯಕ್ತಿಕ ವೈರುಧ್ಯಗಳನ್ನು ಹೊಂದಿ ವ್ಯಾವಹಾರಿಕ ದೃಷ್ಟಿಯಿಂದ ಕೆಲವೊಮ್ಮೆ ನಡೆದುಕೊಳ್ಳುವುದು ನೆನಪಾದಾಗ ’ಓ ನಮ್ಮ ಸುತ್ತಲಿನ ಸಮಾಜದಲ್ಲಿ ಎಂತಾ ಢೋಂಗಿಗಳೂ ಇರುತ್ತಾರಪ್ಪಾ’ ಎಂಬ ಕಟುಸತ್ಯದ ಅನುಭವವಾಗುತ್ತದೆ!

    ಸಮಾಜ/ನಿಸರ್ಗ ಎಲ್ಲಾ ಸಹಜ ಸುಂದರವೇ ಆಗಿದೆ. ಆದರೆ ಸಮಾಜದ ಇರುವ ಮಾನವ ಎಂಬ ಪ್ರಾಣಿ ಹಾಗಲ್ಲ. ಇದರಿಂದಾಗಿ ಹೆಜ್ಜೆ ಹೆಜ್ಜೆಗೂ ವಿರೋಧವೂ ವಿರೋಧಾಭಾಸವೂ ವ್ಯಕ್ತವಾಗುವುದು ಈ ದಿನಮಾನದ ಐಹಿಕ ಅಧರ್ಮದಿಂದಾಗಿಯಾಗಿದೆ. ಯಾವಾಗ ಅಧರ್ಮ ಎಂಬುದು ಧರ್ಮವಾಗಿ ಆಳಲು ತೊಡಗುತ್ತದೋ ಆಗ ಮೇಲೆ ತಾವು ಹೇಳಿದ ಸೌಂದರ್ಯ ಕಾಣುವುದು ಕಮ್ಮಿಯಾಗುತ್ತದೆ.

    ತಾವು ಹೇಳಿದ ಮಾತು ಸತ್ಯವೇ ಇದೆ; ಆದರೆ ಅದನ್ನು ಸಾಧಿಸುವುದು ಪಥ್ಯವಾಗಬೇಕಾಗಿದೆ, ಅದನ್ನು ನಿಜಕ್ಕೂ ಎಷ್ಟು ಮಂದಿ ಸಾಧಿಸಲು ಸಾಧ್ಯ ಎಂಬುದು ಯಕ್ಷಪ್ರಶ್ನೆ ! ತಮಗೆ ಧನ್ಯವಾದಗಳು.

    ReplyDelete
  15. ಒಳ್ಳೆಯ ಲೇಖನ ಧನ್ಯವಾದಗಳು

    ReplyDelete

Note: Only a member of this blog may post a comment.