Saturday, April 7, 2012

"ಔಷಧಿಯಿಲ್ಲದೆ ಆರೋಗ್ಯ ಸಾಧ್ಯವಿಲ್ಲವೇ?"

ಇಂದು ವಿಶ್ವ ಅರೋಗ್ಯ ದಿನಾಚರಣೆ.ನಿರಾಳವಾಗಿ ಇರುವವರು ಅಪರೂಪವೇನೋ ಎನ್ನುವವಷ್ಟು ಸರ್ವೇ ಸಾಮಾನ್ಯವಾಗಿ ಬಹಳಷ್ಟು ಜನ ಏನೋ ಮಾನಸಿಕ ಒತ್ತಡದಲ್ಲಿರುವಂತೆ ಕಾಣುತ್ತದೆ.ಬಹಳಷ್ಟು ಜನಕ್ಕೆ ಏನೋ ತಳಮಳ,ಏನೋ ಆತಂಕ ! ಔಷಧವಿಲ್ಲದೆ ಆರೋಗ್ಯವಾಗಿರುವುದು ಅಪರೂಪವೆನಿಸಿಬಿಟ್ಟಿದೆ.ಔಷಧಿಗಳನ್ನು ಉಪಯೋಗಿಸದೆ ನಿಯಮಿತ ಆಹಾರ,ಸಾಕಷ್ಟು ವ್ಯಾಯಾಮ,ಧ್ಯಾನ,ಪ್ರಾಣಾಯಾಮ ಮತ್ತು ಯೋಗಾಸನಗಳಿಂದ ಮಾನಸಿಕ ನೆಮ್ಮದಿ ಪಡೆದು ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.
ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದರು !ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್,ನಮ್ಮ ಕೆಲಸಾನೆ ಹಾಗಿದೆ!'ಎಂದರು.ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.ಅವರ ಈ ಮಾತುಗಳನ್ನು ಕೇಳಿ 'ನಾವು ಎಂಥಾ ಸ್ಥಿತಿಗೆ ಬಂದು ನಿಂತಿದ್ದೇವೆ!'ಎಂದು ಅಚ್ಚರಿಯಾಯಿತು.ಔಷಧ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?'what is used less and less ultimately becomes useless 'ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.ಹೆಚ್ಚಿನ ಓಡಾಟ ,ಚಟುವಟಿಕೆ ಇಲ್ಲದೆ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗಂತೂ ಶರೀರ ಆರೋಗ್ಯವಾಗಿ ಇರಬೇಕಾದರೆ ಸ್ವಲ್ಪ ಮಟ್ಟಿಗೆ ವ್ಯಾಯಾಮ ಬೇಕೇ ಬೇಕು.ಮಾನಸಿಕ ಶಾಂತಿ,ನೆಮ್ಮದಿ, ಒಟ್ಟು ಆರೋಗ್ಯಕ್ಕೆ ಮೂಲ ಭೂತ ಅಗತ್ಯ.ಯಾವುದೇ ಕಾರಣಕ್ಕೂ ನಿಮ್ಮ ನೆಮ್ಮದಿ ಹಾಳು ಮಾಡಿ ಕೊಳ್ಳ ಬೇಡಿ.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದೇ ಒಂದು ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಮಾನಸಿಕ ಆರೋಗ್ಯಕ್ಕಾಗಿ ಯೋಗ,ಧ್ಯಾನ ಮತ್ತು ಪ್ರಾಣಾಯಾಮವನ್ನೂ ಅಳವಡಿಸಿಕೊಂಡರೆ ಇನ್ನೂ ಒಳಿತು.ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಆರೋಗ್ಯಕ್ಕೆ ಮಾರಕ.ಸರಿಯಾದ ಆಹಾರ,ಆರೋಗ್ಯಕರ ಹವ್ಯಾಸಗಳು ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

9 comments:

  1. ನಿಮ್ಮ ಆಲೋಚನೆಗಳಿಗೆ ಪೂರಕವಾಗಿ ಓದುಗರಿಗಾಗಿ - ಬೊಜ್ಜು ಕರಗಿಸುವ ತಾಯತವೊಂದರ ಬಗ್ಗೆ - ನಾನು (ಹಿಂದೆ) ಬರೆದ ಬ್ಲಾಗ್ ಬರಹ -
    http://machikoppa.blogspot.in/2011/05/blog-post.html

    ReplyDelete
  2. ಸುಬ್ರಮಣ್ಯ;ನಿಮ್ಮ ಪ್ರತಿಕ್ರಿಯೆಗೆ ಮತ್ತು ನೀವು ಒದಗಿಸಿರುವ ಮಾಹಿತಿಯ ಲಿಂಕ್ ಗೆ ಧನ್ಯವಾದಗಳು.ನಮಸ್ಕಾರ.

    ReplyDelete
  3. ಬರೀ ಔಷದಗಳ ಸಹಾಯವಿಲ್ಲದೆ ದೈಹಿಕ ವ್ಯಾಯಾಮದ ಮೂಲಕವೂ ರೋಗ ನಿಯಂತ್ರಣ ಮಾಡಬಹುದು ಎನ್ನುವುದನ್ನು ಚೆನ್ನಾಗಿ ನಿರೂಪಿಸಿದ್ದೀರ.

    ಈ ಮೆಟ್ಟಿಲು ವ್ಯಾಯಾಮ ನೀವೆ ನನಗೆ ಹೇಳಿ ಕೊಟ್ಟದ್ದು ಸಾರ್, ಈಗ ನಾನು ಸುಮಾರು ೪೦ ಮೆಟ್ಟಿಲಿನವರೆಗೂ ಇಳಿದು ಹತ್ತುತ್ತಿದ್ದೇನೆ. ಧನ್ಯವಾದಗಳು.

    ಅಂತೂ ಒಳ್ಳೆಯ ಲೇಖನದ ಜೊತೆ ವಾಪಸ್ಸಾದಿರಿ. ಇದೇ ನಮಗೆ ನಿಜವಾದ ಔಷದಿ ಉಪಚಾರ...

    ಅಂದ ಹಾಗೆ, ನಿಮ್ಮ ಬ್ಲಾಗಿನ ಬಗ್ಗೆ ಪ್ರಜಾವಾಣಿ ಬೆಂಗಳೂರು ಮೆಟ್ರೋ ವಿಭಾಗದಲ್ಲಿ ೦೬.೦೪.೨೦೧೧ ರಂದು ಪ್ರಕಟವಾಯಿತು. ಓದಿ ಖುಷಿ ಪಟ್ಟೆ. "ಬ್ಲಾಗುಗಳ ರಾಜ"ನಿಗೆ ಸಂದ ಗೌರವವಿದು. ಇನ್ನೂ ಹೆಚ್ಚು ಹೆಚ್ಚು ಬರೆಯುತ್ತಿರಿ.

    ReplyDelete
  4. ಬದ್ರಿಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಮನಸ್ಸನ್ನುಪ್ರಶಾಂತವಾಗಿರಿಸಿಕೊಂಡು,ಆಹಾರವನ್ನು ಹಿತವಾಗಿ,ಮಿತವಾಗಿ ಸೇವಿಸಿ,ದೈಹಿಕ ಚಟುವಟಿಕೆಯಿಂದ ಇದ್ದರೆ ಸಹಜವಾಗಿ ಆರೋಗ್ಯದಿಂದ ಇರಬಹುದು ಎಂದು ತಿಳಿಸುವುದೇ ಈ ಲೇಖನದ ಉದ್ದೇಶ.ಸರ್ವೇ ಜನಾಃ ಸುಖಿನೋ ಭವಂತು.ಸರ್ವೇ ಮಂತು ನಿರಾಮಯಹ.ನನ್ನ ಬ್ಲಾಗಿನ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ಲೇಖನ ಓದಿದೆ.ಇದರ ಶ್ರೇಯಸ್ಸು ನನಗೆ ಪ್ರೋತ್ಸಾಹ ನೀಡಿದ ಎಲ್ಲಾ ಸಹ ಬ್ಲಾಗಿಗರಿಗೂ ಮತ್ತು ಎಲ್ಲಾ ಓದುಗರಿಗೂ ಸಲ್ಲಬೇಕು.ನಮಸ್ಕಾರ.

    ReplyDelete
  5. ಒಳ್ಳೆಯ ಲೇಖನ ಧನ್ಯವಾದಗಳು ಸರ್.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ.ಭಟ್ ಸರ್ ಹೇಗಿದ್ದಾರೆ?ಮಗಳು ಚೆನ್ನಾಗಿದ್ದಾರಾ?ಇಬ್ಬರಿಗೂ ನನ್ನ best wishes ತಿಳಿಸಿ.ನಮಸ್ಕಾರ.

      Delete
  6. ನಿಮ್ಮ ಲೇಖನಗಳು, ವಿಚಾರ ಧಾರೆ, ಮಾತುಗಳು, ಮುಚ್ಚಿದ ಬಾಗಿಲು-ಕಿಟಕಿಗಳ ಸಂದಿಯಿಂದಲೂ ಹರಿದುಬರುವ ಹಿತವಾದ ಗಾಳಿ- ಬೆಳಕಿನ ಹಾಗೆ. 'ಕೊಳಲು' ಬ್ಲಾಗಿನ ಕುರಿತು ಪ್ರಜಾವಾಣಿಯಲ್ಲಿ ಪ್ರಶಂಸೆ ಪ್ರಕಟವಾದದ್ದು ನಿಮ್ಮ ವ್ಯಕ್ತಿತ್ವಕ್ಕೆ-ಪ್ರತಿಭೆಗೆ ಒಂದು ಕನ್ನಡಿ..ನಮ್ಮೆಲ್ಲರಿಗೂ ತುಂಬ ಖುಷಿ ಆಯ್ತು.ಸದಾಕಾಲವೂ ಹೀಗೆಯೇ ಬರೆಯುತ್ತಿರಿ.

    ReplyDelete
  7. ನಾರಾಯಣ್ ಭಟ್;ಬ್ಲಾಗಿನ ಯಶಸ್ಸಿಗೆ ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ.ಬ್ಲಾಗ್ ಶುರು ಮಾಡಲು ಪ್ರೇರಣೆ ನೀಡಿದವರು ನೀವು.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  8. ಒಳ್ಳೆಯ ಲೇಖನ ಧನ್ಯವಾದಗಳು

    ReplyDelete

Note: Only a member of this blog may post a comment.