Tuesday, April 24, 2012
"ನನ್ನ ಜೀವನದಲ್ಲಿ ಹೀಗೊಬ್ಬ ಹೀರೋ !!!"
ಇದು ಸುಮಾರು ಹತ್ತು ವರುಷಗಳ ಹಿಂದೆ ನಡೆದ ನನ್ನ ಸ್ನೇಹಿತರೊಬ್ಬರ ಕಥೆ.ಅವರ ಹೆಸರು ಇಲ್ಲಿ ಅಪ್ರಸ್ತುತ.ಆದರೆ ಅವರದು ಎಂತಹ ಅದ್ಭುತ ವ್ಯಕ್ತಿತ್ವವೆಂದರೆ ,ಅದನ್ನು ಬಣ್ಣಿಸಲು ನನ್ನ ಶಬ್ಧ ಭಂಡಾರ ಸಾಲದು !ಸುಮಾರು ನಲವತ್ತೈದು ವರ್ಷಗಳಷ್ಟು ವಯಸ್ಸಾಗಿದ್ದರೂ ಅವರ ಜೀವನೋತ್ಸಾಹ ಎಳ್ಳಷ್ಟೂ ಕುಗ್ಗಿರಲಿಲ್ಲ!ಸದಾ ಚಟುವಟಿಕೆಯಿಂದ,ಲವಲವಿಕೆಯಿಂದ ಪುಟಿಯುತ್ತಿದ್ದ ವ್ಯಕ್ತಿ.ಆಫೀಸಿಗೆ ಹೋಗುವ ಮುಂಚೆ ಮತ್ತು ಆಫೀಸಿನಿಂದ ಬಂದ ನಂತರ ಪಿ.ಯು.ಸಿ.ಹುಡುಗರಿಗೆ ಉಚಿತವಾಗಿ ಪಾಠ ಹೇಳುತ್ತಿದ್ದರು.ಅವರಿದ್ದಲ್ಲಿ ಹಾಸ್ಯ ,ನಗು!ಉತ್ಸಾಹ ಭರಿತ ಜೋರು ದನಿ.ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದೆ. ನನ್ನ ಹಿಂದೆ ಹೊಚ್ಚ ಹೊಸ ಸ್ಯಾಂಟ್ರೋ ಕಾರೊಂದು ನಿಂತಿತು.'ಬನ್ನಿ ಡಾಕ್ಟ್ರೆ...... ನನ್ನ ಹೊಸಾ ಕಾರು ಹೇಗಿದೆ ,ಡ್ರೈವ್ ಮಾಡಿ ನೋಡಿ' ಎಂದು ಕರೆದರು.'ಅಯ್ಯೋ ಬೇಡ ಬಿಡೀ ಸರ್ ,ಇನ್ನೂ ಅಷ್ಟು ಸರಿಯಾಗಿ ಡ್ರೈವಿಂಗ್ ಬರುವುದಿಲ್ಲಾ.ಹೊಸಾ ಕಾರುಬೇರೆ !',ಎಂದು ಹೇಳಿ ಮುನ್ನಡೆದೆ.'ಹೋ ...ಹೋ ..ಡಾಕ್ಟರ್ ಆಗಿ ಇಷ್ಟೊಂದು ಭಯ ಪಟ್ಟರೆ ಹೇಗೆ ಸರ್?'ಎಂದು ಜೋರಾಗಿ ನಗುತ್ತಾ,ಡ್ರೈವ್ ಮಾಡಿಕೊಂಡು ಮುಂದೆ ಹೋದರು. ಇದಾದ ಎರಡು ತಿಂಗಳಿಗೆ ಯಾರದೋ ಮದುವೆಗೆ ರಾಯಚೂರಿನಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ತಾವೇ ಡ್ರೈವ್ ಮಾಡುತ್ತಾ ತಮ್ಮ ಮನೆಯವರೊಂದಿಗೆ ಹೊರಟರು.ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಿರುವೊಂದರಲ್ಲಿ ಅಕಸ್ಮಾತ್ತಾಗಿ ಎದುರಿಗೆ ಬಂದ ಲಾರಿಯೊಂದನ್ನು ತಪ್ಪಿಸಲು ಹೋಗಿ ಕಾರು ಪಕ್ಕದಲ್ಲಿದ್ದ ಸುಮಾರು ಹತ್ತು ಅಡಿ ಆಳದ ಹಳ್ಳಕ್ಕೆ ಪಲ್ಟಿ ಹೊಡೆಯಿತು.ಇವರು 'ಸೀಟ್ ಬೆಲ್ಟ್ 'ಹಾಕಿರದೆ ಇದ್ದದ್ದರಿಂದ ಕಾರಿನಿಂದಾಚೆ ಎಸೆಯಲ್ಪಟ್ಟರು.ಮಿಕ್ಕವರೆಲ್ಲಾ ಸೀಟ್ ಬೆಲ್ಟ್ ಹಾಕಿದ್ದರಿಂದ ಕಾರಿನಲ್ಲೇ ಇದ್ದರು. ಇವರು ಎದ್ದು ಕಾರಿನಲ್ಲಿದ್ದವರಿಗೆ ಸಹಾಯ ಮಾಡಬೇಕೆಂದು ಏಳಲು ಪ್ರಯತ್ನಿಸಿದರೂ ಏಳಲಾಗಲಿಲ್ಲ.ಕಾರಿನಲ್ಲಿದ್ದ ಇತರರಿಗೆ ಹೆಚ್ಚೇನೂ ಪೆಟ್ಟಾಗಿರಲಿಲ್ಲ.ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸೊಂಟದ ಮೇಲು ಭಾಗದಲ್ಲಿ spinal chord injury ಆಗಿತ್ತು.ಆಪರೇಶನ್ ಮಾಡಿದರೂ ಪ್ರಯೋಜನವಾಗಲಿಲ್ಲ.ಸೊಂಟದ ಕೆಳ ಭಾಗದಲ್ಲಿ ಅವರಿಗೆ ಯಾವುದೇ,ಚಲನೆಯಾಗಲೀ ,ಸ್ಪರ್ಶ ಜ್ಞಾನ ವಾಗಲೀ ಇರಲಿಲ್ಲ.ಮೂತ್ರವನ್ನು ತಾವೇ 'catheter' pass ಮಾಡಿಕೊಂಡು ತೆಗೆದುಕೊಳ್ಳಬೇಕು! ಕೈಗೆ glove ಹಾಕಿಕೊಂಡು ತಮ್ಮ ಮಲವನ್ನೂ ತಾವೇ ಹೊರತೆಗೆಯಬೇಕಾದ ಪರಿಸ್ಥಿತಿ. ಅವರು ಹೋಗದ ಆಸ್ಪತ್ರೆಯಿಲ್ಲ.ಮಾಡದ ವೈದ್ಯವಿಲ್ಲ.ಪಕ್ಕಾ ಆಶಾವಾದಿ.ಮನೆಯಲ್ಲಿಯೇ ಎರಡು ಮೂರು ತಾಸು paralyse ಆದ ಭಾಗಕ್ಕೆ physio therapy exercises ಮಾಡುತ್ತಿದ್ದರು.ಎರಡು ಮೂರು ತಿಂಗಳಲ್ಲಿಯೇ ಮತ್ತೆ ಅವರ ಚೈತನ್ಯ ಪೂರ್ಣ ನಗು ಮುಖದಲ್ಲಿ ಕಾಣಿಸಿಕೊಂಡಿತ್ತು.ಆಫೀಸಿಗೆ ವೀಲ್ ಚೇರಿನಲ್ಲಿ ಹೊಗಿಬರತೊಡಗಿದರು. ಈಗಲೂ ಅವರ physical condition ಹಾಗೆಯೇ ಇದೆ .ಆಗ ಟೆಂತ್ ಓದುತ್ತಿದ್ದ ಮಗ ಈಗ ಸ್ವತಹ ವೈದ್ಯ ನಾಗಿದ್ದಾನೆ. ನಾನು ಆ ಊರಿನಿಂದ ವರ್ಗವಾಗಿ ಬಂದು ಏಳು ವರ್ಷಗಳಾದವು.ಇತ್ತೀಚಿಗೆ ಅವರ ಫೋನ್ ಬಂದಾಗ ಅವರ ಮಾಮೂಲು ಚೈತನ್ಯ ಪೂರ್ಣ ಜೋರು ದನಿಯಲ್ಲಿ ಅವರು "ಇಲ್ಲೇ ಬಂದು ಬಿಡಿ ಡಾಕ್ಟ್ರೆ......... I MISS YOU A LOT ! " ಎಂದಾಗ ನನ್ನ ಕಣ್ಣಂಚಿನಲ್ಲಿ ನೀರಿತ್ತು. ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.
Subscribe to:
Post Comments (Atom)
ಒಂದು ಭಾವುಕ ಕಥಾನಕ. ಜೀವನದಲ್ಲಿನ ಹುರುಪು ಉತ್ಸಾಹಗಳು ಬಹುಷಃ ಒಬ್ಬ ವ್ಯಕ್ತಿಯನ್ನು ನಿಜಜೀವನದ ನಾಯಕನನ್ನಾಗಿ ಮಾಡುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ನಿಮ್ಮ ಕಥಾನಾಯಕ ಯುವಪೀಳಿಗೆಗೆ ಸ್ಪೂರ್ತಿ. ಅನುಭವ ಹಂಚಿಕೊಂಡದಕ್ಕೆ ಧನ್ಯವಾದಗಳು ಗುರುವರ್ಯ.
ReplyDeleteಪುಸ್ಪರಾಜ್;ನನ್ನ ಬ್ಲಾಗಿಗೆ ಸ್ವಾಗತ.ಓದಿ,ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.
ReplyDeleteಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆ ಸಾರ್.
ReplyDeleteಎಂತಹ ಆದರ್ಶ ವ್ಯಕ್ತಿತ್ವ ಇವರದು. ದೇವರು ತಣ್ಣಗಿಟ್ಟಿರಲಿ.
ಧನ್ಯವಾದಗಳು ಬದರಿ.ದೇವರು ಇಂತಹ ಜೀವಿಗಳನ್ನು ತಣ್ಣಗಿಟ್ಟಿರಲಿ.ಇಂತಹವರು ನಮ್ಮೆಲ್ಲರಿಗೂ ಗುರುಗಳು.ಸಣ್ಣ ಪುಟ್ಟ ನೋವುಗಳಿಗೂ ಗೋಳಾಡುವ ನಾವು ಇಂತಹವರಿಂದ ಬಹಳಷ್ಟು ಕಲಿಯುವುದಿದೆ!
Deleteಅಬ್ಬಾ... ಎಂತಹ ಚೈತನ್ಯ.. ಇಂತಹವರು ಸಿಗುವುದು ಬಹಳ ಕಮ್ಮಿ, ನಮ್ಮಂತವರಿಗೆ ಸ್ಪೂರ್ತಿ ಕೂಡ. ಒಳ್ಳೆಯ ಲೇಖನ ಕೊಟ್ಟಿದ್ದೀರಿ ಸರ್... ನನ್ನ್ಗೆ ಕಾಲುನೋವು ಅಂತಾ ಬೇಜಾರು ಮಾಡ್ಕೋತಾ ಇದ್ದೆ ಈ ಕಥೆ ಓದಿ ನನಗೇನು ಆಗೇ ಇಲ್ಲಾ ಎಂಬಂತಿದ್ದೇನೆ.
ReplyDeleteಮನಸು ಮೇಡಂ;ನಮಸ್ಕಾರ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಲೇಡಿ ಡಾಕ್ಟರ್ ಅವರ ಸ್ನೇಹಿತೆಯೊಬ್ಬರು ಸುಮಾರು ಮೂವತ್ತು ವರ್ಷಗಳಿಂದ ಇಂತಹುದೇ ತೊಂದರೆಯಿಂದ ಬಾಳುತ್ತಿದ್ದಾರೆ! ನಗುನಗುತ್ತಲೇಬಾಳುತ್ತಿದ್ದಾರೆ!ನರಳುತ್ತಿಲ್ಲ!ಅದೂ ಒಬ್ಬರೇ! ಕೆಲಸಕ್ಕೂ ಹೋಗುತ್ತಾ ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ.ಧಾರವಾಡದ ಆಸ್ಪತ್ರೆಯೊಂದರಲ್ಲಿ ವೈದ್ಯೆ!ಇಂತಹವರು ನಿಜಕ್ಕೂ ಗ್ರೇಟ್ !!ಅಲ್ಲವೇ?
Deleteಏನ್ ಹೇಳಬೇಕೋ ಗೊತ್ತಾಗಲ್ಲ ಸರ್,
ReplyDeleteಇಂಥವರನ್ನ ನೋಡ್ದಾಗ
ಸ್ವರ್ಣಾ
ಸ್ವರ್ಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಇಂತಹವರೇ ನಮಗೆ ಗುರುಗಳು.ಜಗತ್ತಿನ ಇಂತಹ ಜೀವಿಗಳಿಗೆ ನನ್ನ ನಮನಗಳು.
Deleteಕೆಲವರು ನಮ್ಮ ಎಲ್ಲ ಅನಿಸಿಕೆಗಳನ್ನು ಪೂರ್ವಯೋಚನೆಗಳನ್ನು ತಲೆಕೆಳಗು ಮಾಡುತ್ತಾರೆ.,,ಹೌದು ಡಾ.ಟಿಡಿಕೆ ಇವರು ನಿಜಕ್ಕೂ ನಮಗೆ ಗುರುಗಳೇ...
ReplyDeleteಸಣ್ಣ ಸಣ್ಣ ವಿಷಯಗಳಿಗೂ(ಉದಾ;ಯಾವುದೊ ಎಕ್ಸಾಂ ನಲ್ಲಿ ಕಮ್ಮಿ ಮಾರ್ಕ್ ಬಂತು ಅಂತ)ಸಣ್ಣ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸುದ್ಧಿಗಳನ್ನು ಓದುತ್ತಿರುವ ಈ ಕಾಲದಲ್ಲಿ ಅಕಸ್ಮಾತ್ತಾಗಿ ಒದಗಿಬಂದ ಅಂಗವೈಕಲ್ಯದೊಂದಿಗೆ ಜೀವನ ಪರ್ಯಂತ ನಗು ನಗುತ್ತಾ ಬಾಳುವ ಇಂತಹವರು ಜಗತ್ತಿಗೆ ಮಾರ್ಗ ದರ್ಶಕರು.ಅಲ್ಲವೇ ಸರ್?
ReplyDeleteನೋವಿನಲ್ಲಿಯೂ ನಲಿಯಬಲ್ಲ ಎ೦ಥಾ ಧೀಮ೦ತ ವ್ಯಕ್ತಿತ್ವ ಅವರದು ಸರ್, ದುರ್ಬಲ ಮನಸ್ಸುಗಳಿಗೆ ದಾರಿದೀಪವಾಗಬಲ್ಲ ಆ ಮಹಾನ್ ಚೇತನಕ್ಕೆ ನನ್ನ ನಮನಗಳು.ಹ೦ಚಿಕೊ೦ಡದ್ದಕ್ಕಾಗಿ ಧನ್ಯವಾದಗಳು ಸರ್. ನನ್ನ ಬ್ಲಾಗ್ ಗೂ ಬನ್ನಿ.
ReplyDeleteಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಬ್ಲಾಗನ್ನು ತಪ್ಪದೆ ಓದುತ್ತಿರುತ್ತೇನೆ.ಒಳ್ಳೆಯ ಆಧ್ಯಾತ್ಮಿಕ ವಿಚಾರಗಳುಳ್ಳ ಸುಂದರ ಲೇಖನಗಳು ಬರುತ್ತಿವೆ.
ReplyDeleteಅದಮ್ಯ ಚೇತನಗಳು ಯಾವತ್ತು ಜೀವನದಲ್ಲಿ ಗೆದ್ದೇಗೆಲ್ಲುತ್ತಾರೆ
ReplyDelete