Tuesday, April 10, 2012

"ಯಾರಾದರೂ ನಮ್ಮತ್ತ ಚಪ್ಪಲಿ ಎಸೆದರೆ?"

ನಾವು ಯಾರನ್ನಾದರೂ ಭೇಟಿ ಯಾದಾಗ ಅವರು ನಮ್ಮತ್ತ ತಮ್ಮ ಚಪ್ಪಲಿ ಎಸೆದಾಗ ನಮಗೆಷ್ಟು ಅವಮಾನವಾಗಬಹುದು ಎನ್ನುವುದನ್ನು ನೆನೆಸಿ ಕೊಳ್ಳಲೂ ಸಾಧ್ಯವಿಲ್ಲ.ಅವಮಾನದಿಂದ,ಕೋಪದಲ್ಲಿ ನಾವೂ ಅಂತಹುದೇ ಯಾವುದೋ ಎಡವಟ್ಟುಕೆಲಸವನ್ನು ಮಾಡುವ ಸಾಧ್ಯತೆಯೇ ಹೆಚ್ಚು.ಆದರೆ ಅಂತಹ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಅದನ್ನೂ ಜಾಣ್ಮೆಯಿಂದ ಉಪಯೋಗಿಸಿಕೊಂಡ ಮಹನೀಯರೊಬ್ಬರ ಉಲ್ಲೇಖ ಇಂದಿನ 'ಕನ್ನಡ ಪ್ರಭ'ದಿನಪತ್ರಿಕೆಯಲ್ಲಿದೆ. ಪಂಡಿತ ಮದನ ಮೋಹನ ಮಾಳವೀಯರು ೧೯೧೬ ರಲ್ಲಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ವಂತಿಗೆ ಹಣ ಕೇಳಲು ಜನರ ಬಳಿ ಹೋಗುತ್ತಿದ್ದರು.ಹೈದರಾಬಾದಿನಲ್ಲಿ ಅಂದಿನ ನಿಜಾಮರ ಬಳಿ ಹೋದಾಗ,ಅವರ ಭಂಡ ಧೈರ್ಯ ಕಂಡು ನಿಜಾಮರು ಸಿಟ್ಟಿನಿಂದ ಅವರತ್ತ ತಮ್ಮ ಚಪ್ಪಲಿ ಬಿಸುಟರು.ಮಾಳವೀಯರು ಸ್ವಲ್ಪವೂ ಸಿಟ್ಟಿಲ್ಲದೆ, ಆ ಒಂಟಿ ಚಪ್ಪಲಿಯನ್ನೇ ತೆಗೆದು ಕೊಂಡು ಹೊರ ಹೋದರು.ಮಾರನೇ ದಿನ ಹೈದರಾಬಾದಿನ ಪ್ರಮುಖ ಬೀದಿಯಲ್ಲಿ, ನಿಜಾಮನ ಒಂಟಿ ಚಪ್ಪಲಿಯನ್ನೇ ಹರಾಜಿಗಿಟ್ಟರು!ಈ ವಿಷಯ ನಿಜಾಮರಿಗೂ ತಿಳಿದು, ಹರಾಜಿನಲ್ಲಿ ತಮ್ಮ ಚಪ್ಪಲಿ ಕಡಿಮೆ ಬೆಲೆಗೆ ಮಾರಾಟವಾದರೆ ತಮಗೇ ಅವಮಾನ ವಾಗುತ್ತದೆ ಎಂದು, ತಮ್ಮವರೊಬ್ಬನನ್ನು ಕಳಿಸಿ ಆ ಒಂಟಿ ಚಪ್ಪಲಿಯನ್ನು ಹೆಚ್ಚಿನ ಬೆಲೆಗೆ ಕೊಂಡು ಕೊಂಡರಂತೆ !ನಮ್ಮ ಹಿರಿಯರ ಜಾಣ್ಮೆ ನಿಜಕ್ಕೂ ಮೆಚ್ಚುವಂತಹುದು !!! ಅಲ್ಲವೇ? (ಆಧಾರ;ಇಂದಿನ 'ಕನ್ನಡ ಪ್ರಭ' ದಿನಪತ್ರಿಕೆ)

11 comments:

  1. ಇದು ನಿಜವಾಗಿ ಮನೋ ಧೈರ್ಯವನ್ನೂ ಮತ್ತು ಪರಿಸ್ಥಿತಿ ನಿಭಾಯಿಸುವುದನ್ನೂ ಹೇಳಿ ಕೊಡುವ ಬರಹ.

    ನಿಮಗೆ ನಮ್ಮ ಧನ್ಯವಾದಗಳು.

    ReplyDelete
    Replies
    1. ಬದರಿ ಇದು ಅಂದಿನ ಹಿರಿಯರಧೈರ್ಯ,ಸ್ಥೈರ್ಯ,ಹಿಡಿದ ಕೆಲಸವನ್ನು ಬಿಡದೆ ಮಾಡುವ ಮುತ್ಸದ್ಧಿತನ ತೋರುತ್ತದ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಹೌದು, ತುಂಬಾ ಒಳ್ಳೆಯ ಬರಹ .. ಧನ್ಯವಾದಗಳು ಸರ್ :)

    ReplyDelete
    Replies
    1. ಈಶ್ವರ್ ಭಟ್;ಇಂತಹ ಹಿರಿಯರಿಂದ ನಾವೆಲ್ಲಾ ಕಲಿಯಬೇಕಾದದ್ದು ಬಹಳಷ್ಟಿದೆ.ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  3. ಚೆನ್ನಾಗಿದೆ ಸರ್.
    ಕೋಪ ತಡ್ಕೋಳ್ಳೋಕೆ ಈ ಘಟನೆ ಸ್ಪೂರ್ತಿಯಾಗಬಹುದು
    ಸ್ವರ್ಣಾ

    ReplyDelete
    Replies
    1. ಸ್ವರ್ಣ;ಪ್ರತಿಕ್ರಿಯೆಗೆ ಧನ್ಯವಾದಗಳು.ನಮ್ಮ ಹಿರಿಯರ ಇಂತಹ ನಡವಳಿಕೆ ಇಂದಿನ ದಿನಗಳಲ್ಲಿ ಅಪರೂಪ .ಅಲ್ವಾ?

      Delete
  4. Good thought sir. sreeyuta Madan mohana malaveeyara gunagalu tumba anukarneeya, indina janangakke balashtu margadarshi yaagabahudu. dhanyvadagalu sir.

    ananth

    ReplyDelete
    Replies
    1. ಅನಂತ್ ಸರ್;ಕನ್ನಡ ಪ್ರಭದ ಆ ಲೇಖನದಲ್ಲಿ ಅವರ ಬಗ್ಗೆ ಇನ್ನೂ ಹಲವಾರು ವಿಷಯಗಳಿದ್ದವು.ಆದರೆ ಈ ಘಟನೆ ವಿಶೇಷವೆನಿಸಿದ್ದರಿಂದ,ಅದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

      Delete
  5. ಚಪ್ಪಲಿ ಎಸೆಯೋದು ಒಂದು ಫ್ಯಾಶನ್ ಆಗಿಬಿಟ್ಟಿತ್ತು...ಆನಂತರ ಮೀಡಿಯಾ ಗಮನ ಸೆಳೆಯಲು ಕೆಲವರು ಅನುಸರಿಸಿದ ತಂತ್ರವೂ ಹೌದು... ಇದೇ ತರಹದ್ದು ಎಂದುಕೊಂಡಿದ್ದೆ...ಆದರೆ ವಿಭಿನ್ನ...ಮತ್ತು ಆಸಕ್ತಿ ಮೂಡಿಸಿದ ಲೇಖನ ಡಾ, ಟಿಡಿಕೆ.

    ReplyDelete
  6. ಅಜಾದ್ ಸರ್;ಪಂಡಿತ್ ಮದನ ಮೋಹನ ಮಾಳವೀಯರು,ಇಂದಿನ ಪೀಳಿಗೆಗೆ ಮಾದರಿಯಾಗಬಲ್ಲ ಉದಾತ್ತ ವ್ಯಕ್ತಿತ್ವ ಹೊಂದಿದಂತಹವರು.ವಿಷದಲ್ಲೇ ಇಂದು ಪ್ರಖ್ಯಾತಿ ಪಡೆದಂತ ಬೆನಾರಸ್ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಪ್ರಮುಖ ಕಾರಣರಾದಂತಹ ಮಹಾನ್ ಪುರುಷರು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.