Saturday, June 2, 2012

"ಧ್ಯಾನಸ್ಥ .....ಸ್ವಸ್ಥ !!!"

ನಮ್ಮ ವರಾಂಡದ ಕಿಟಕಿಯ ಸರಳುಗಳ ಆಚೆ, ಬಿಡುಗಡೆಯ ಬಯಲಿನಲ್ಲಿ, ಕಾಣುತ್ತಿದೆ ಒಂದು ಧ್ಯಾನಸ್ಥ ತೆಂಗಿನ ಮರ .ಚಳಿ,ಬಿಸಿಲು,ಮಳೆ,ಗಾಳಿಗಳ ಲೆಕ್ಕಿಸದೆ ದಶಕಗಳಿಂದ ತಪೋ ನಿರತ .ಆಗೊಮ್ಮೆ ಈಗೊಮ್ಮೆ ಗಾಳಿ ಇಡುವ ಕಚಗುಳಿಗೆ ಮೆಲ್ಲನೆಯ ಸ್ಪಂದನ.ಗರಿಗಳು ನುಡಿಸುವ ಸರಿಗಮಕ್ಕೆ ಏರಿ ಇಳಿಯುವ ಹಾರ್ಮೊನಿಯಮ್ಮಿನ ಕೀ ಗಳಂತೆ ,ತನ್ನ ಸಂಗೀತಕ್ಕೆ ಮನಸೋತು ತಾನೇ ತಲೆದೂಗುತ್ತದೆ.ಪಕ್ಕದಲ್ಲೇ ಸಾಥ್ ನೀಡುತ್ತಿದೆ ಇನ್ನೊಂದು ಮರ.ಹಿಮಾಲಯದ ಸಾಧು ಒಬ್ಬನಂತೆ, ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೆತ್ತಲಾಗಿ, ಚಳಿಗೆ, ಏನ್ ಮಾಡ್ತೀಯೋ ಮಾಡ್ಕೋ ಹೋಗ್,ಎಂದು ಸವಾಲೆಸೆಯುತ್ತದೆ.ಎಲ್ಲಿಂದಲೋ ಬಂದ ಹಕ್ಕಿಗಳ ಹಿಂಡೊಂದು ತೆಂಗಿನ ಮರದ ತಪಸ್ಸು ಕೆಡಿಸಲು ಗರಿಗಳಲ್ಲಿ ಕೂತು, ಏನೂ ಪ್ರಯೋಜನವಿಲ್ಲೆಂದು ತಮ್ಮಲ್ಲೇ ಮಾತಾಡಿಕೊಂಡು ,ಬುರ್ರ್ ಎಂದು ಒಟ್ಟಿಗೇ ಹಾರಿಹೊಗುತ್ಹವೆ . ಇದ್ಯಾವುದನ್ನೂ ಲೆಕ್ಕಿಸದ ತೆಂಗಿನಮರ ಮೊದಲಿನಂತೆ ಧ್ಯಾನಸ್ಥ ! ಸ್ವಸ್ಥ!! ಕಿಟಕಿ ಬಾಗಿಲುಗಳಿಂದ ನಮ್ಮನು ನಾವೇ ಬಂಧಿಸಿ ಕೊಂಡು, ತಲೆಯಲ್ಲಿ ನಾನಾ ಚಿಂತೆಯ, ಗಿಳಿ,ಗೂಬೆ,ಕಾಗೆಗಳನ್ನು ಬಿಟ್ಟುಕೊಂಡು, ಅವುಗಳ ಕಿರುಚುವಿಕೆಯಿಂದ ತಲೆ ಚಿಟ್ಟು ಹಿಡಿಸಿಕೊಂಡು ಬದುಕುತ್ತಿರುವ ನಮ್ಮ ಬದುಕು --------------ಅಸ್ವಸ್ಥ.

14 comments:

  1. ವಾಹ್..! ಒಳ್ಳೆಯ ಲೇಖನ ಸರ್.. ನಾವು ಪ್ರಕೃತಿಯ ಒಡಲಿನಲ್ಲಿರುವ ಯಾವ ಸಸ್ಯರಾಶಿಯಂತೆಯೂ ಇರಲಾಗದು. ನಮ್ಮ ಜೀವನದಲ್ಲಿ ಎಲ್ಲಾವೂ ಇದ್ದು ನೀವು ಹೇಳಿದಹಾಗೆ ಅಸ್ವಸ್ಥ...

    ReplyDelete
    Replies
    1. ಸುಗುಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಮನುಷ್ಯನಿಗೆ ಮನಸ್ಸನ್ನು ಸಂತೋಷವಾಗಿ ಇಟ್ಟುಕೊಳ್ಳುವ ಕಲೆ ಸಿದ್ಧಿಸಿದಾಗ ನಮ್ಮ ಬದುಕೂ ಸ್ವಸ್ಥ ಬದುಕಾಗಬಹುದು.ನಮಸ್ಕಾರ.

      Delete
  2. ತೆಂಗಿನ ಮರವೊಂದು ಕಿವಿ ಬಳಿ ಬಂದು ಗುನುಗುಟ್ಟುವಂತೆ ಭಾಸವಾಯಿತು .ತುಂಬಾ ಚಂದದ ಲೇಖನ

    ReplyDelete
    Replies
    1. ಪ್ರಮೋದ್ ಶೆಟ್ಟಿಯವರೇ;ನನ್ನ ಬ್ಲಾಗಿಗೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  3. Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  4. ಡಾಕ್ಟ್ರೇ... ಕಲ್ಪತರು ಗರಿ ಗರಿ ಚೆನ್ನುಡಿ ನಿಮ್ಮ ಮೂಲಕ...ವಾಹ್...ಕ್ಯಾ ಬಾತ್ ಹೈ...

    ReplyDelete
    Replies
    1. ಅಜಾದ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಹೊಸ ಪ್ರಯೋಗ ಮುಂದುವರೆಸಿ.ಚೆನ್ನಾಗಿದೆ.

      Delete
  5. ಧ್ಯಾನಸ್ಥ, ಅಸ್ವಸ್ಥ...ತುಲನಾತ್ಮಕ ಚಿ೦ತನೆಗೆ ಅಭಿನ೦ದನೆಗಳು ಡಾ. ಸರ್.

    ಅನ೦ತ್

    ReplyDelete
    Replies
    1. ಅನಂತ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.ಮನುಷ್ಯನ ಸ್ವಸ್ಥತೆಗೆ ಅವನ ಮನಸ್ಸೇ ದೊಡ್ಡ ಅಡ್ಡಿ.ಅದನ್ನು ಗೆಲ್ಲುವುದು ಹೇಗೆಂಬುದೇ ಎಲ್ಲಾ ಸಾಧನೆಗಳ ಒಳಗುಟ್ಟು.ಬರುತ್ತಿರಿ.ನಮಸ್ಕಾರ.

      Delete
  6. tamma prakruti araadhane adbut mattu tamma sukshma veekshane abhinandaarhaneeya,

    ReplyDelete
  7. ಧನ್ಯವಾದಗಳು ಸೀತಾರಾಂ ಸರ್.ಬರುತ್ತಿರಿ.ನಮಸ್ಕಾರ.

    ReplyDelete
  8. ಸ್ವಸ್ಥ ಮನಸ್ಸನ್ನು ಕಾಪಾಡಿಕೊಳ್ಳಲು ನಮಗೆ ನೀವು ನೀಡಿದ ಈ ಉತ್ತಮ ಉದಾಹರಣೆಯ ಪಾಠ ಅಮೋಘ ಸಾರ್. ಇದನ್ನೇ ಕವಿತೆ ರೂಪದಲ್ಲಿ ಕೊಡುತ್ತೀರ ದಯವಿಟ್ಟು.

    ReplyDelete
  9. ಬದರಿ ಸರ್;ಇದರ ಬಗ್ಗೆ ನೀವೇ ಒಂದು ಕವನ ಯಾಕೆ ಬರೆಯಬಾರದು?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.