Monday, June 4, 2012

"ಗ್ಯಾಸ್ಟ್ರಿಕ್"ಪ್ರಾಬ್ಲಂ....!!!!

ಮೊದಲೆಲ್ಲಾ ಯಾರಾದರೂ "ಗ್ಯಾಸ್ಟ್ರಿಕ್"ಪ್ರಾಬ್ಲಂ ಇದೇ ಸಾರ್ ಎಂದರೆ,ಅವರಿಗೆಲ್ಲೋ ಅಸಿಡಿಟಿ ಯಾಗಿ ಹೊಟ್ಟೆ ಉರಿ ಆಗಿರಬೇಕು ಎಂದುಕೊಳ್ಳುತ್ತಿದ್ದೆ.ಸಣ್ಣ ಸಣ್ಣ ಹುಡುಗರನ್ನೂ ಕರೆದುಕೊಂಡು ಬಂದು "ಇವನಿಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ,ಏನಾದರೂ ಔಷಧಿ ಕೊಡಿ ಸಾರ್"ಎಂದುಕೇಳಿದಾಗ, 'ಇಷ್ಟು ಸಣ್ಣ ಹುಡುಗನಿಗೂ ಹೊಟ್ಟೆ ಉರಿ ಯಾಗುತ್ತದೆಯೇ ?'ಎನ್ನುತ್ತಿದ್ದೆ."ಅವನಿಗೆ ಹೊಟ್ಟೆ ಉರಿ ಏನೂ ಇಲ್ಲಾ ಸಾರ್!ಗ್ಯಾಸ್ ಬಿಟ್ಟರೆ ಕೆಟ್ಟ ವಾಸನೆ. ಇವನ ಕಾಟದಿಂದ ಮನೇಲಿ ಯಾರೂ ಇರೋ ಹಂಗಿಲ್ಲಾ "ಎಂದು ಅಲವತ್ತು ಕೊಳ್ಳುತ್ತಿದ್ದರು.'ಗ್ಯಾಸ್ ಸಮಸ್ಯೆಗೆ', "ಗ್ಯಾಸ್ಟ್ರಿಕ್"ಸಮಸ್ಯೆ ಎನ್ನುತ್ತಾರೆಂದು ಆಗ ಅರ್ಥವಾಯಿತು!ಸಾಮಾನ್ಯವಾಗಿ ಮಧ್ಯವಯಸ್ಸಿನ,ಅಥವಾ ವಯಸ್ಸಾದ ಗಂಡಸರಿಗೆ ಈ ಸಮಸ್ಯೆ ಹೆಚ್ಚು . ಅವರ "ಗ್ಯಾಸ್ಟ್ರಿಕ್ "ಸಮಸ್ಯೆ, ಸಶಬ್ಧವಾಗಿ ಡಂಗೂರ ಸಾರಿ ಎಲ್ಲರಿಗೂ ತಿಳಿಸುವಂತಹುದು.ಸಮಯ,ಸಂದರ್ಭ ಒಂದೂ ನೋಡದೆ ಹೊರ ಬಂದು, ಅವರನ್ನು ಪೇಚಿನಲ್ಲಿ ಸಿಗಿಸಿ ಬಿಡುತ್ತದೆ . ನಮ್ಮ ಪರಿಚಯದವರೊಬ್ಬರ ಮಗಳು ತನ್ನ ಕಾಲೇಜಿನ ಸಹಪಾಟಿಗಳನ್ನು ಮನೆಗೆ ಕರೆದುಕೊಂಡು ಬಂದು, "ಇವಳು ದೀಪ,ಇವಳು ಸ್ನೇಹ,ಇವಳು ರೂಪ......"ಅಂತ ತನ್ನ ತಂದೆಗೆ ಪರಿಚಯ ಮಾಡಿಕೊಡುತ್ತಿದ್ದಾಗ,ಅವರ ತಂದೆ ಸಶಬ್ಧವಾಗಿ ಗ್ಯಾಸ್ ಬಿಟ್ಟರು.ಆ ವಯಸ್ಸಿನ ಹುಡುಗಿಯರಿಗೆ ಮೊದಲೇ ನಗು ಜಾಸ್ತಿ!ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಸ ಕಿಸನೇ ನಗುವ ವಯಸ್ಸು.ಆ ಶಬ್ಧಕ್ಕೆ ಬಂದ ಹುಡುಗಿಯರೆಲ್ಲಾ ಹೆದರಿಕೊಂಡು, "ಹೋ......."ಎಂದು ನಗುತ್ತಾ ,ಚೆಲ್ಲಾ ಪಿಲ್ಲಿಯಾಗಿ ಹೊರಗೋಡಿದರು!!! ಅವರ ಮಗಳು ತನ್ನ ಸ್ನೇಹಿತೆಯರ ಎದುರಿಗೆ ಆದ ಅವಮಾನಕ್ಕೆ ,ತಂದೆಯ ಮೇಲೆ ಮುನಿಸಿಕೊಂಡು ಎರಡು ದಿನ ಮಾತು ಬಿಟ್ಟಳು! ನನ್ನ ಸ್ನೇಹಿತರೊಬ್ಬರ ಇಬ್ಬರು ಮಕ್ಕಳು ರಜಾ ಕಳೆಯಲೆಂದು ಅಜ್ಜಿಯ ಮನೆಗೆ ಹೋಗಿದ್ದರು.ರಾತ್ರಿ ಅಜ್ಜಿಯ ಪಕ್ಕ ಮಲಗಿದ್ದರು. ಬೆಳಿಗ್ಗೆ ಹಜಾರದಲ್ಲಿ ಮನೆ ಮಂದಿ ಎಲ್ಲಾ ಸೇರಿ,ಕಾಫಿ ಕುಡಿಯುತ್ತಿದ್ದಾಗ ಆ ಹುಡುಗರಲ್ಲೊಬ್ಬಅವರಮ್ಮನ ಬಳಿ ಹೋಗಿ ಅವರ ಅಜ್ಜಿಯನ್ನೇ ನೋಡುತ್ತಾ ಆಶ್ಚರ್ಯದಿಂದ "ಅಮ್ಮಾ ...,ಹೆಂಗಸರೂ ಗ್ಯಾಸ್ ಬಿಡುತ್ತಾರಾ?"ಎಂದು ಪ್ರಶ್ನಿಸಿದ. ಪಾಪ ಅವನ ಅಜ್ಜಿಗೆ ಹೇಗಾಗಿರಬೇಡ! ಅವರು ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಅಡಿಗೆ ಮನೆ ಸೇರಿಕೊಂಡರೆ ,ಅಜ್ಜನೂ ಸೇರಿದಂತೆ ಮಿಕ್ಕವರೆಲ್ಲಾ ನಗು ತಡೆದು ಕೊಳ್ಳಲು ಒದ್ದಾಡುತ್ತಿದ್ದರಂತೆ!!! ಒಟ್ಟಿನಲ್ಲಿ "ಗ್ಯಾಸ್ಟ್ರಿಕ್ "ಪ್ರಾಬ್ಲಂನಿಂದ ಒದ್ದಾಡುವವರ ಕಥೆ , ಆಡುವಂತಿಲ್ಲ,ಅನುಭವಿಸುವಂತಿಲ್ಲ!!!

17 comments:

  1. haha :) sir problems heLidri idakke parihaaranu heLbekittu...

    ReplyDelete
    Replies
    1. ಸುಗುಣ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಆದಷ್ಟೂ ಕಡಿಮೆ ತಿಂದು,ಚೆನ್ನಾಗಿ ನೀರು ಕುಡಿದು,ಹೆಚ್ಚು ಓಡಾಡಿಕೊಂಡಿದ್ದರೆ ಗ್ಯಾಸ್ ತೊಂದರೆ ಅಷ್ಟಾಗಿ ಕಾಡುವುದಿಲ್ಲ.ಸಾಧ್ಯವಿದ್ದಷ್ಟು ಗ್ಯಾಸ್ ಉತ್ಪತ್ತಿ ಮಾಡುವ ಪದಾರ್ಥಗಳಾದ ಬೆಳ್ಳುಳ್ಳಿ,ಈರುಳ್ಳಿ,ಕೋಸು,ಕಾಲಿ ಫ್ಲವರ್,ಆಲೂ,ಬೇಳೆಯಿಂದ ಮಾಡಿದ ಪದಾರ್ಥಗಳನ್ನು ಕಡಿಮೆ ತಿನ್ನುವುದರಿಂದ ಗ್ಯಾಸ್ ತೊಂದರೆ ಕಡಿಮೆಯಾಗುತ್ತದೆ.ಅಷ್ಟಕ್ಕೂ ಕಮ್ಮಿಯಾಗದಿದ್ದರೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

      Delete
  2. ಸೀತಾರಾಂ ಸರ್;ಬಹಳ ದಿನಗಳ ನಂತರ ಬ್ಲಾಗಿಗೆ ಬಂದಿದೀರ.ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.:-)

    ReplyDelete
  3. ಸಾರ್, ಇಂತಹ ಪಜೀತಿಗಳು ಮನಸ್ಸನ್ನು ಕುಗ್ಗಿಸಿ ಬಿಡುತ್ತದೆ ಅಲ್ವಾ? ಸರಿಯಾದ ವೈದ್ಯಕೀಯ ಚಿಕಿತ್ಸೆಯೊಂದೇ ತಕ್ಕ ಉಪ್ಪ ಅಲ್ವಾ ಸಾರ್.

    ReplyDelete
  4. ಬದರಿ;ಇಷ್ಟಕ್ಕೆಲ್ಲಾ ಯಾಕೆ ಮನಸ್ಸನ್ನು ಕುಗ್ಗಿಸಬೇಕು?ನನ್ನ ಮೊದಲನೇ ಪ್ರತಿಕ್ರಿಯೆಯಲ್ಲಿ ಹೇಳಿದ ನಿವಾರಣಾ ಕ್ರಮಗಳನ್ನು ಕೈಗೊಂಡರೆ ಸಾಕು.ಅಷ್ಟಕ್ಕೂ ತೊಂದರೆ ಕಮ್ಮಿಯಾಗಲಿಲ್ಲವೆಂದರೆ ವೈದ್ಯಕೀಯ ಚಿಕಿತ್ಸೆ ಇದ್ದೇ ಇದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. AHARA MATTU NEERU HOTTEGE SARI SERIDARE

    GAS,GASTRICNA TALE MURIYABAHUDALLVE?

    ReplyDelete
  6. ಹೇಮಚಂದ್ರ;ನೀವು ಹೇಳುವುದು ಸರಿ.ಹಿತಮಿತ ಆಹಾರ,ಸಾಕಷ್ಟು ನೀರು ಮತ್ತು ಸರಿಯಾದ ವ್ಯಾಯಾಮ ಗ್ಯಾಸ್ ತೊಂದರೆಯನ್ನು ಖಂಡಿತ ದೂರ ಇಡಬಲ್ಲವು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ನಿಜಕ್ಕೂ ಈ ಗ್ಯಾಸ್ ಪ್ರಾಬ್ಲಮ್ ಬಹಳ ಇಕ್ಕಟ್ಟಿಗೆ ಸಿಲುಕಿಸುತ್ತದೆ. ತುಂಬಾ ಚೆನ್ನಾಗಿದೆ ಲೇಖನ . ಈ ಲೇಖನವನ್ನು ಓದುತ್ತಾ ಯಾಕೋ ಪ್ರಕಾಶಣ್ಣನ "ಗ್ಯಾಸ್ ಮಹಾದೇವ" ನೆನಪಾದ...:):)

    ReplyDelete
  8. ಸಂಧ್ಯಾ;ಪ್ರತಿಕ್ರಿಯೆಗೆ ಧನ್ಯವಾದಗಳು.ಹೌದು,ಪ್ರಕಾಶಣ್ಣನ 'ಗ್ಯಾಸ್ ಮಹಾದೇವನ' ಲೇಖನ ನನಗೂ ನೆನಪಾಯ್ತು.:-)

    ReplyDelete
  9. ಡಾಕ್ಟ್ರೆ...

    ನಿಮ್ಮ ಇಂಥಹ ಬರಹಗಳು ನನಗೆ ಬಲು ಇಷ್ಟ...

    ನೆನಪು ಆದಾಗಲೆಲ್ಲ ನಗೆ ಉಕ್ಕುತ್ತದೆ...

    ನನಗೂ "ಗ್ಯಾಸ್ ಮಹಾದೇವ" ನೆನಪಾದ.. ಹ್ಹಾ ಹ್ಹಾ...!

    ಹೆಣ್ಣುಮಕ್ಕಳು ಗ್ಯಾಸ್ ಬಿಟ್ಟರೆ ಅದ್ಯಾಕೆ ಅಷ್ಟೆಲ್ಲ ನಾಚಿಕೊಳ್ಳುತ್ತಾರೆ... ?? !!!!!!!!!

    ಮತ್ತು ..
    ನಮಗೆಲ್ಲ ಅಷ್ಟೆಲ್ಲ.. ತಡೇಯಲಾರದ ನಗು ಬರುತ್ತದೆ... !!

    ಹ್ಹಾ ಹ್ಹಾ !!

    ReplyDelete
  10. ಪ್ರಕಾಶಣ್ಣ;ನಮ್ಮಲ್ಲಿ ಹಿರಿಯೊಬ್ಬರಿಗೆ ಪ್ರತಿಸಲ ಗ್ಯಾಸ್ ಬಿಟ್ಟಾಗಲೂ"ನಾರಾಯಣ,ನಾರಾಯಣ"
    ಎಂದು ಹೇಳಿಕೊಳ್ಳುವ ಅಭ್ಯಾಸವಿತ್ತು.ಪ್ರತಿ ಹತ್ತು ನಿಮಿಷಕ್ಕೊಮ್ಮೆ ಜೋರಾಗಿ ಗ್ಯಾಸ್ ಬಿಟ್ಟು ಜೊತೆಗೇ'ನಾರಾಯಣ,ನಾರಾಯಣ'ಎನ್ನುತ್ತಿದ್ದರು.ಒಮ್ಮೆ ನಾನಿರುವ ಕೊಠಡಿಯಲ್ಲೇ ಅವರೂ ಉಳಿದುಕೊಂಡಿದ್ದರು.ರಾತ್ರಿಯೆಲ್ಲಾ ಅವರ "ನಾರಾಯಣ,ನಾರಾಯ"ಜಪದಿಂದ ನಿದ್ದೆ ಬರದೆ ನಾನು ಮನಸ್ಸಿನಲ್ಲೇ 'ನಾರಾಯಣ!ನಾರಾಯಣ!'ಎನ್ನುವಂತಾಗಿತ್ತು!!!

    ReplyDelete
  11. sir, gas bagegina vaiparitya mattu parihaara tilisiruvudakkaagi dhanyavaadagalu.jotege nivu naaraayana annuvantagiddu namaguu naguvantaaytu.

    ReplyDelete
  12. ಕಲರವ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಳು.ಇನ್ನೊಬ್ಬ ಹಾಸ್ಯ ಪ್ರವೃತ್ತಿಯ ಹಿರಿಯರೊಬ್ಬರು ಅವರು ಗ್ಯಾಸ್ ಬಿಟ್ಟಿದ್ದಕ್ಕೆ ಯಾರಾದರೂ ಆಕ್ಷೇಪ ಮಾಡಿದರೆ,'ಇದು ದೇವರು ಕೊಟ್ಟ ಪೀಪಿ.ನಾನೇನು ಮಾಡಲಿ ಪಾಪಿ?'ಎಂದು ಸೀರಿಯಸ್ ಆಗಿ ಕೇಳಿ ಎಲ್ಲರನ್ನೂ ನಗಿಸುತ್ತಿದ್ದರು.
    ನನಗೆ ಪರಿಚಯದ ಹುಡುಗಿಯೊಬ್ಬಳು ಯಾರಾದರೂ'ಗ್ಯಾಸ್'ಬಿಟ್ಟ ಶಬ್ದ ಕೇಳಿ ಹೊಟ್ಟೆ ಹಿಡಿದು ಅರ್ಧಘಂಟೆ ಬಿದ್ದು ಬಿದ್ದು ನಗುತ್ತಿದ್ದಳು!ಅವಳಿಗೆ ಯಾಕಷ್ಟು ನಗು ಬರುತ್ತೋ ಗೊತ್ತಿಲ್ಲ.ಇನ್ನು ಕೆಲವರು ಏನೂ ಆಗಿಯೇ ಇಲ್ಲವೆಂಬಂತೆ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ!ಅಂತೂ ಗ್ಯಾಸ್ ಪುರಾಣಕ್ಕಂತೂ ಕೊರತೆಯಿಲ್ಲ.

    ReplyDelete
  13. ಪ್ರಕಾಶಣ್ಣನ ಕಾಮೆಂಟ್ ಸೂಪರ್ರು...

    ಕಲರವ ಮೇಡಂಗೆ ನೀವು ಹಾಕಿದ ಉತ್ತರದಲ್ಲಿ ಗಬ್ಬು ಗ್ಯಾಸೂ ಸಹ ಲಾಫಿಂಗ್ ಗ್ಯಾಸ್ ಆದ ಬಗ್ಗೆ ಬಲೇ ಸೊಗಸಾಗಿ ಹೇಳಿದ್ದೀರ ಸಾರ್.

    ಬರಹಕ್ಕೆ ಒಪ್ಪುವ ಫೋಟೋ. ಅಲ್ಲಿ ನೋಡಿದ್ರಾ ಗ್ಯಾಸ್ ಬಿಟ್ಟಿದ್ದಕ್ಕೆ ಹಿಂದೆ ಫೋಟೋದಲ್ಲಿ ಹೂವೂ ಮಟಾಷ್...

    ಗ್ಯಾಸ್ ಸಮಸ್ಯೆ ಎಂತಹ ಫಜೀತಿಗಳನ್ನು ಉಂಟು ಮಾಡುತ್ತವೆ ಮತ್ತು ಅದರ ಪರಿಹಾರಕ್ಕೆ ಉಚಿತ ವ್ಯದ್ಯಕೀಯ ಸಲಹೆ ಉತ್ತಮ ಅಲ್ವಾ ಸಾರ್?

    ReplyDelete
  14. ಬದರಿ;ನಿಮ್ಮ ಆಬ್ಸರ್ವೆಶನ್ ಸೂಪರ್!ಎಷ್ಟಾದರೂ ನೀವು ಪ್ರೊಫೆಶನಲ್ ಫೋಟೋಗ್ರಾಫರ್ ಅಲ್ಲವೇ!ನಾನು ಚಿತ್ರದಲ್ಲಿ ಹೂವು ಮಟಾಶ್ ಆಗಿದ್ದನ್ನು ಗಮನಿಸಿರಲಿಲ್ಲ.

    ReplyDelete
  15. ಡಾ, ಸಮಸ್ಯೆ ಹಾಗೂ ಪರಿಹಾರ ಎರಡೂ ಸೂಚಿಸಿದ್ದೀರಿ. ಧನ್ಯವಾದಗಳು

    ReplyDelete

Note: Only a member of this blog may post a comment.