Tuesday, December 18, 2012

"ಹೆಸರಿನಲ್ಲಿ ಹಾಸ್ಯ!!!"

ದಿನನಿತ್ಯದ,ಏಕತಾನತೆಯ,ಜಂಜಾಟದ ಬದುಕಿನಲ್ಲೂ ಕೆಲವೊಮ್ಮೆ ನಡೆಯುವ ಹಾಸ್ಯ ಪ್ರಸಂಗಗಳು ಬದುಕನ್ನು ಹಸನಾಗಿಸುತ್ತವೆ.

ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗ ವಿಭಾಗಕ್ಕೆ ನಲವತ್ತೇಳು ವರ್ಷ ವಯಸ್ಸಿನ ಮಹಿಳಾ ರೋಗಿಯೊಬ್ಬರು ಚೀಟಿ ಬರೆಸಿಕೊಂಡು ಬಂದರು.ಚೀಟಿಯಲ್ಲಿ,ಅವರ ಹೆಸರನ್ನು 'ಹೇಮಂತ',ಎಂದು ಬರೆಯಲಾಗಿತ್ತು.'ಅರೇ....! ಇದು ಸಾಮಾನ್ಯವಾಗಿ ಗಂಡಸರು ಇಟ್ಟುಕೊಳ್ಳುವ ಹೆಸರಲ್ಲವೆ....?!' ಅನಿಸಿತು. ಆ ಹೆಂಗಸನ್ನು ಹೆಸರೇನೆಂದು ಕೇಳಿದೆ.ಅದಕ್ಕವರು "ಹೇಮ" ಅಂದರು!ಚೀಟಿ ಬರೆದು ಕೊಟ್ಟ ನನ್ನ ಶಿಷ್ಯನನ್ನು ಕರೆದು, 'ಏನಪ್ಪಾ ಇದು ಇವರ ಹೆಸರನ್ನು"ಹೇಮಂತ"ಅಂತ ಬರೆದಿದ್ದೀಯಲ್ಲಾ ?'ಎಂದೆ.ಅದಕ್ಕವನು'ಸರ್ ....ಎರಡೆರಡು ಸಲ ಕೇಳಿದೆ .ಅವರು "ಹೇಮಂತ"ಎಂದೇ  ಹೇಳಿದರು ' ಎಂದ ಭೂಪ!!

ಆ ಹೆಂಗಸಿಗೆ ನಡೆದ ಪರಪಾಟು ಅರ್ಥವಾಗಿ ನಗತೊಡಗಿದರು.ಚೀಟಿ ಬರೆಯುವವನು ಹೆಸರೇನು ಎಂದು ಎರಡೆರಡು ಸಲ ಕೇಳಿದಾಗ, ಇವರು ಎರಡು ಸಲವೂ,"ಹೇಮ ಅಂತ "ಎಂದು ಉತ್ತರಿಸಿದ್ದರು."ಹೇಮ ಅಂತ "ಅನ್ನುವುದನ್ನು,ನನ್ನ  ಶಿಷ್ಯ "ಹೇಮಂತ"ಎಂದು ಅರ್ಥ ಮಾಡಿ ಕೊಂಡಿದ್ದ!!! ಆದ ಎಡವಟ್ಟು ಅರ್ಥವಾಗಿ ಅವನೂ ,ನಗುತ್ತಾ ಚೀಟಿ ಬರೆಯಲು ಹೋದ.ಆಸ್ಪತ್ರೆಯ ಎಲ್ಲರಿಗೂ ಗೊತ್ತಾಗಿ,ಎಲ್ಲರೂ ನಕ್ಕಿದ್ದೇ, ನಕ್ಕಿದ್ದು !!!

13 comments:

  1. ಉಸಿರಿನಲ್ಲಿ ಬೆರೆತ ಹೆಸರನ್ನು ರಾಡಿ ಮಾಡಿ ಹಾಸ್ಯವಸ್ತುವಾಗುವ ರೀತಿ ಬಲು ಸೊಗಸಾಗಿರುತ್ತೆ. ಕೊಂಚ ಉಲ್ಟಾ ಪಲ್ಟ ಆದರು ಅದು ಹೊರಡಿಸುವ ನಗೆಯ ಅಲೆ ಸುಂದರ...ಆದ್ರೆ ಆ ಹೆಸರಿನ ಮಾಲೀಕರಿಗೆ ಒಂದು ಚೂರು ನಗು..ಇನ್ನೊಂದು ರೀತಿ..ಸಂಕಟ..ಸುಂದರ ಕಥಾ ಪ್ರಸಂಗ ಡಾಕ್ಟ್ರೆ..

    ReplyDelete
  2. ಶ್ರೀಕಾಂತ್ ಸರ್;ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಒಬ್ಬೊಬ್ಬರದು ಒಂದೊಂದು ರೀತಿ!!! ಅದಕ್ಕೇ ಇಷ್ಟೆಲ್ಲಾ ಎಡವಟ್ಟುಗಳು!!!ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  3. ಹಹ್ಹಹ್ಹಾ ಹೆಸರಿನ ಕರಾಮತ್ತು. ಅದನ್ನು ಬರೆಯುವಾಗ ಮತ್ತು ಪಲುಕುವಾಗಲೂ ಮಜಾ ಇರುತ್ತದೆ.

    ಒಳ್ಳೆಯ ತಮಾಷಾ ಪ್ರಸಂಗ ಡಾಕ್ಟ್ರೇ.



    ReplyDelete
  4. ಹಾ ಹಾ...ಸರಿ ಸರಿ :)..
    ಚೆನಾಗಿದೆ...

    ReplyDelete
  5. ಹಹಹ......ಚೆನ್ನಾಗಿದೆ .....

    ReplyDelete
  6. NANNA HESAROO ONDU KADE 'YAMA CHANDRA'AAGIDE- ENU MAADALI?

    ReplyDelete
  7. ಹಹ್ಹಾ,, ಸೂಪರ್ .. ಅಂದಾಜಿಸಿದ್ದೆ.. ನಿಮ್ಮ ಜಾಣ್ಮೆಯೂ ಇದೆ :)

    ReplyDelete
  8. ನಿಜ ಜೀವನದ ಹಾಸ್ಯ...ಚಂದದ ನಿರೂಪಣೆ

    ReplyDelete
  9. ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
    Replies
    1. ಎಲ್ಲಿ ನಿಮ್ ಆಸ್ಪತ್ರೆಗಾ ಇಲ್ಲಾ ಬ್ಲಾಗ್’ಗಾ?

      Delete
  10. ಮಹಿಳೆ ಮ೦ಗಳೂರಿನವರು 'ಅ೦ತಾ' ಕಾಣಿಸುತ್ತಿದೆ. :)

    ReplyDelete

Note: Only a member of this blog may post a comment.