Saturday, June 8, 2013

"ಒಂದಿಂಚು ಉದ್ದದ ಬೋಲ್ಟು ....!!!!"

ಒಂದಿಂಚು ಉದ್ದದ ಬೋಲ್ಟನ್ನು ನೋಡಿದರೆ ನಿಮಗೇನಾದರೂ ಗಾಭರಿ ಆಗುತ್ತದೆಯೇ ?

ಇದೆಂತಹ ಪ್ರಶ್ನೆ ಎಂದು ನಗಬೇಡಿ.

ನಾನಂತೂ ಹೌಹಾರಿದ್ದೆ !!!!

 ಆದದ್ದು ಇಷ್ಟು .ಒಂದು ವರ್ಷದ ಮಗುವೊಂದು  ಒಂದಿಂಚು ಉದ್ದದ ಬೋಲ್ಟ್ ಒಂದನ್ನು ನುಂಗಿದೆ

ಎಂದು ಅದರ ತಂದೆ ತಾಯಿ ಹೇಳಿದಾಗ ,ಮೊದಲು ನಾನು ನಂಬಿರಲಿಲ್ಲ. ನಂತರ ಮಗುವಿನ ಹೊಟ್ಟೆಯ ಎಕ್ಸ್ ರೇ

ತೆಗಿಸಿ ನೋಡಿದಾಗ ಒಂದಿಂಚಿನ ಬೋಲ್ಟು  ಮಗುವಿನ ಹೊಟ್ಟೆಯೊಳಗೆ ಅಡ್ಡಡ್ಡ ಮಲಗಿತ್ತು !!!

ಮಗು ಏನೂ ಅರಿಯದೆ ಕಿಲ ಕಿಲ ನಗುತ್ತಿತ್ತು !!!!!

ಮಗುವಿನ ತಂದೆ ತಾಯಿಯ ಮುಖದಲ್ಲಿ ಮುಂದೇನೋ ?!!ಎನ್ನುವ ಚಿಂತೆಯ ಕಾರ್ಮೋಡ.

ಆಗಲೇ ನಾನು ಹೌಹಾರಿದ್ದು. ಏನು ಮಾಡೋದು ......,ನನಗಾದ ಗಾಭರಿ ಅವರಿಗೆ ತೋರುವಂತಿಲ್ಲ !!!

"ಸಾರ್ ಬೋಲ್ಟ್ ಎಲ್ಲಾದರೂ ಸಿಕ್ಕಿ ಹಾಕಿ ಕೊಳ್ಳ ಬಹುದಾ? ಕರುಳನ್ನು ಕೊರೆದು ತೂತು ಮಾಡುವ ಚಾನ್ಸ್ ಇದೆಯಾ?"

ಸಹಜವಾಗಿ,ಅವರ ಗಾಭರಿ ಅವರಿಗೆ.

ಅವರೆಲ್ಲಾ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವ ಅನಿವಾರ್ಯ ನನ್ನದು !!!

"ಏನೂ ಗಾಭರಿಯಾಗಬೇಡಿ. ಏನೂ ಆಗುವುದಿಲ್ಲಾ.ನಾಳೆಯೋ,ನಾಡಿದ್ದೋ ಮಲದಲ್ಲಿ ಖಂಡಿತಾ ಹೊರಬರುತ್ತೆ.

ಆದರೂ ಕಾಡಿನ ಮಧ್ಯದ ಈ ಊರಿನಲ್ಲಿ ರಾತ್ರಿಯೇನಾದರೂ ತೊಂದರೆಯಾದರೆ ,ಆಗ ಮಗುವನ್ನು  ದೊಡ್ಡ ಆಸ್ಪತ್ರೆಗೆ

ಚಿಕೆತ್ಸೆಗೆ ಕರೆದೊಯ್ಯುವುದು ಕಷ್ಟ. ಹೇಗಿದ್ದರೂ ಈಗ ಮಗು ಆರಾಮವಾಗಿದೆ.ಮಗುವನ್ನು ತಕ್ಷಣ ತುರ್ತು ಚಿಕಿತ್ಸೆ

ಲಭ್ಯ ವಿರುವ ಆಸ್ಪತ್ರೆಯಲ್ಲೇ ಅಡ್ಮಿಟ್ ಮಾಡಿ ,ಎರಡು ದಿನ ನಿಗಾ ವಹಿಸುವು ಒಳಿತು " ಎಂದೆ. ಅವರಿಗೂ ಅದು ಸರಿ

ಎನಿಸಿತು. ಶಿವಮೊಗ್ಗದ  ಹೆಸರಾಂತ ಅಸ್ಪತ್ರೆಯೊಂದಕ್ಕೆ,ಮಗುವನ್ನು ಕಳಿಸಿ ಕೊಟ್ಟೆ .

ಎರಡು ದಿನದ ನಂತರ ಮಗುವಿನ ತಂದೆಯಿಂದ ಫೋನ್  ಬಂತು.

"ಸಾರ್ ಬೋಲ್ಟ್ ಹೊರ ಬಂತು!!!" ಅವನ ದನಿಯಲ್ಲಿ ಎಂತಹ ನಿರಾಳ!!!!

ನಾನೂ ನಿರಾಳವಾಗಿ ಉಸಿರಾಡಿದೆ !!!

10 comments:

  1. ಈ ಪ್ರಸಂಗ ಓದುತ್ತಿದ್ದರೆ, ಇತ್ತೀಚೆಗೆ ಹುಬ್ಬಳ್ಳಿ ಪಜೀತಿ ನೆನಪಾಯಿತು. ಅಲ್ಲೊಬ್ಬ ಕಳ್ಳ ಸರಗಳ್ಳತನ ಮಾಡಿ ಅದನ್ನೇ ನುಂಗಿ ಬಿಟ್ಟ! ಪಾಪ ಪೊಲೀಸರು ಅವನ್ನು ಕಿಂಸ್ ಆಸ್ಪತ್ರೆಗೆ ದಾಖಲು ಮಾಡಿ, ರಾತ್ರಿ ಬಾಳೇ ಹಣ್ಣುಗಳನ್ನ ತಿನಿಸಿ, ಬೆಳಿಗ್ಗೆ ಮಲದಲ್ಲಿ ಸರ ತೆಗೆದು, ತೊಳೆದು ,ಕೈಯಲ್ಲಿ ಹಿಡಿದು ಟೀವಿ ಕ್ಯಾಮರಾಗೆ ಪ್ರದರ್ಶಿಸುತ್ತಿದ್ದರು! :-D

    ReplyDelete
  2. ಅಬ್ಬಬ್ಬ ಎಂತೆಂತಹ ಅನುಭವಗಳು ನಿಮ್ಮ ಅನುಭವದ ಬತ್ತಳಿಕೆಯಲ್ಲಿ ಅದಗಿವೆಯೋ ಕಾಣೆ, ಮಗುವಿನ ತಂದೆ ತಾಯಿಯರನ್ನು ಸಂತೈಸಿ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಿದ ಹಾಗು ಆ ಮಗುವು ಬದುಕಲು ಸಹಕಾರ ನೀಡಿದ ನಿಮ್ಮ ಸಮಯೋಚಿತ ಕಾರಕ್ಕೆ ಜೈ ಹೊ ಸಾರ್.

    ReplyDelete
  3. ಅಯ್ಯಪ್ಪಾ.ಸಾರ್...
    ಬಾಲ್ಯದಲ್ಲಿ ಚೀವಿಂಗ್ ಗಮ್ ಅನ್ನು ನುಂಗಿದ್ದು ನೆನಪಿಗೆ ಬಂತು...

    ReplyDelete
  4. ಓದಿದರೆ ಗಾಬರಿಯಾಗುತ್ತೆ.. ಒಂದು ವರ್ಷದ ಮಗುವಲ್ಲಿ ಒಂದು ಇಂಚಿನ ಬೋಲ್ಟ್. ಅಪ್ಪ ಅಮ್ಮನ ತಳಮಳ ನಿಜಕ್ಕೂ ಹೇಳಲಿಕ್ಕೆ ಆಗದು. ಕಂದನಿಗೆ ಇನ್ನು ಆಗುತ್ತಿದೆ ಎಂದು ಗೊತ್ತಾದರೂ ಹೇಳೋಕೆ ಆಗೋಲ್ಲ. ನೆನದರೆ ಮೈಯಲ್ಲಿ ಕಂಪನ ಶುರುವಾಗುತ್ತೆ ಡಾಕ್ಟ್ರೆ.

    ReplyDelete
  5. ಅಬ್ಭಾ.. ಗಾಬರಿಯಾಯ್ತು ಓದಿ... ಕೊನೆಗೆ ನಿಮ್ಮಂತೆಯೆ ನಮಗೂ ನಿರಾಳವಾಯ್ತು... ಚೆನ್ನಾಗಿದೆ ಬರೆದ ರೀತಿ....

    ReplyDelete
  6. ಅಬ್ಬ, ಅದು ಹೇಗೆ ನು0ಗಿತು ಆ ಮಗು! ಸಧ್ಯ ಸುಖಾಂತ್ಯವಾಯ್ತಲ್ಲ! ಬರಹ ಕುತೂಹಲಕರವಾಗಿದೆ. ನಿಮ್ಮ ಪ್ರತ್ಯುತ್ಪನ್ನಮತಿಗೆ ವ೦ದನೆಗಳು ಸರ್.

    ReplyDelete
  7. ಅಬ್ಬ!ವೈದ್ಯೋ ನಾರಾಯಣೋ ಹರಿಃ

    ReplyDelete
  8. Sir I have experienced similar situation when my son was 6 month old he swallowed a safety pin, but we came to now next day while changing the daiper.

    ReplyDelete

Note: Only a member of this blog may post a comment.