ನೀನು ನನಗೆ ಅರ್ಥವಾಗಿಲ್ಲ !
ನನ್ನ ಅಂತರಾಳದ ಗುಹೆಯಲ್ಲಿ
ಎಲ್ಲೋ ಹುದುಗಿರುವ ನಾನು
ನನಗೇ ಅರ್ಥವಾಗಿಲ್ಲ !
ಇನ್ನು ನೀನು ನನ್ನನ್ನು,
ನಾನು ನಿನ್ನನ್ನು,
ಅರ್ಥಮಾಡಿ ಕೊಳ್ಳಬೇಕೆನ್ನುವುದು,
ಅರ್ಥವಿಲ್ಲದ ವ್ಯರ್ಥ ಪ್ರಲಾಪ.
ನಿನಗೆ ಕಾಣಿಸುವ ನಾನು,
ನಿಜವಾದ ನಾನಲ್ಲ !
ನನಗೆ ಕಾಣಿಸುವ ನೀನು
ನಿಜವಾದ ನೀನಲ್ಲ !
ಹೀಗೆ ಕಾಣಿಸದ ನನಗಾಗಿ ನೀನು ,
ನಿನಗಾಗಿ ನಾನು ,
ಸುಮ್ಮನೆ ಹುಡುಕಾಡುವ
ಗೋಜಿಗೇ ಹೋಗದೆ ,
ಕಾಣುವ ನಾನು ನೀನು ಎಲ್ಲರೂ ,
ಹೊಂದಿಕೊಂಡು ಬಾಳಬಾರದೇಕೆ?
ಒಮ್ಮೆಯಾದರೂ ---------------,
ಧರೆಯ ಹಸಿರಾಗಬಾರದೇಕೆ!?
ಹಸಿರ ಉಸಿರಾಗಬಾರದೇಕೆ! ?
nice one..
ReplyDeletewhat is truth? ennuvadu million dollar question! arthavaaguvadu namma namma arivina hinneleyalli enbudu nanna anisike. aadare koodi baaluvadideyalla adu ondureetiya niswartha bhavane. namma ajja ajji, appa ammandirella badukiddu, badukuttiruvadu haageye allave? Really they are great. Avarige badukuva kale gottide! namage hosa jnaanada belakalli ellavannoo prashne maaduvudu maatra gottide. "Nambaru nechcharu baride karevaru nambalanariyaru lokada manujaru" endu vachanakaararu heliddu idakke irabeku! olleya vichaarakke prachodane needuva kavithe. Thanks
ReplyDeletethak you manamukta and vasanth for visiting my blog and thaks for your kind comments.I just probably want to highlight the point that it is not that easy or necessary to really understand any body or anything for that matter.it is living peacefully and compassionately that counts.thanks again. Regards. DR.D.T.K.
ReplyDeleteಡಾ.ಕೃಷ್ಣಮೂರ್ತಿಅವರೆ,
ReplyDeleteನೀವನ್ನೋದು ಸರಿ ಅಂತ ನನಗೂ ಅನ್ನಸ್ತಾ ಇದೆ.
ವಸಂತ್,
ನನಗೂ ತುಂಬಾ ಇಷ್ಟವಾದ ವಚನದ ನೆನಪು ಮಾಡಿಕೊಟ್ಟೆ.
Good one, I think quite a few humans think so as they grow older and mature mentally. :)
ReplyDeleteDr. Krishnamurty Sir
ReplyDeleteAll the Poems/Essay are thought provoking.I liked all.
b v ramesh AO KPCL