ವಿಜ್ಞಾನದ ಲೇಬೆಲ್ ಹಚ್ಚಿಕೊಂಡ ಅಜ್ಞಾನಿ ಮಹಾಶಯರೇ!
ಪ್ರಳಯಾಂತಕರು ಸ್ವಾಮಿ ನೀವು !
ನಮ್ಮ ತಟ್ಟೆಯ ಬದನೆಯನ್ನೇ ,
ಕುಲಾಂತರಿಸಲು ಹೊರಟಿದ್ದೀರಲ್ಲ!
ಪಾಪ , ಏನೂ ಅರಿಯದ ಮುಗ್ಧ ಬದನೆಗಳು!
ಮೊನ್ನೆ ಬೆಳಿಗ್ಗೆ ದೋಸೆಗೆ ಬದನೆ ಚಟ್ನಿ ,
ನಿನ್ನೆ ಮಧ್ಯಾನ್ನ ಬದನೆ ಸಾಂಬಾರ್,
ರಾತ್ರಿ ಚಪಾತಿಗೆ ತುಂಬು ಬದನೆಯ
ಮಸಾಲೆದಾರ್ ಪಲ್ಯ !
ಈ ದಿನ ಮಧ್ಯಾನ್ನ ವಾಂಗಿಬಾತು!
ಬದನೆಯ ತಳಿಗಳೆಲ್ಲ ಬ.ಟಿ.ಯ ಹೆಸರು ಕೇಳಿ
ಹೆದರಿ ಗುಳೆ ಹೊರಟು ನಮ್ಮ ಫ್ರಿಡ್ಜ್ ಸೇರಿವೆಯಲ್ಲ !
ಫ್ರಿಡ್ಜ್ ಬಾಗಿಲು ತೆರೆದು ನೋಡಿದರೆ ,
ಆ ಚಳಿಯಲ್ಲೂ ಸಣ್ಣಗೆ ಬೆವರುತ್ತಿವೆ ಪಾಪ !
ಬ.ಟಿ . ಬದನೆಯ ಆಕ್ರಮಣಕ್ಕೆ ಹೆದರಿ !
ತರಕಾರಿಗಳ ರಾಜ ವಂಶಜರೆ ಹೆದರದಿರಿ!
ನಮ್ಮ ಫ್ರಿಡ್ಜ್ ಗಳ ಆಶ್ರಯದಲ್ಲಿ
ತಣ್ಣಗಿರಿ ಮಹಾಸ್ವಾಮಿಗಳೇ !
ನಿಮಗೆ ವರ್ಣ ಸಂಕರಣದ ಭಯ ಬೇಡ .
ನಾವಿದ್ದೇವಲ್ಲ ಅಭಿಮಾನಿ ದೇವರುಗಳು!
ಯಾವ ಕಾಲಕ್ಕೂ ನಿಮ್ಮ ಹುಳುಕನ್ನು
ಬಿಟ್ಟುಕೊದುವುದಿಲ್ಲ
ನೀವು ನಮಗೆ
ಹೇಗಿದ್ದರೂ ಚೆನ್ನ !
ಬಿ.ಟಿ.ಬದನೆ ಸೃಷ್ಟಿಸಿದವರಿಗೇನು ಗೊತ್ತು ಬದನೇಕಾಯಿ!
ReplyDeletesuper aagideyalla bhattare nimma commentu!hats off.naanu bareda kavanada saaravanna onde saalinalli bhatti ilisibitri!
ReplyDeleteB T BADANE PURANA ENNALE.
ReplyDeleteNIMMA ANISIKEGE NAMMA SATH.