Wednesday, February 10, 2010

ಧ್ಯಾನಸ್ಥ -------------ಸ್ವಸ್ಥ `

ನಮ್ಮ ವರಾಂಡದ ಕಿಟಕಿಯ ಸರಳುಗಳ ಆಚೆ, ಬಿಡುಗಡೆಯ ಬಯಲಿನಲ್ಲಿ, ಕಾಣುತ್ತಿದೆ ಒಂದು ಧ್ಯಾನಸ್ಥ ತೆಂಗಿನ ಮರ .ಚಳಿ,ಬಿಸಿಲು,ಮಳೆ,ಗಾಳಿಗಳ ಲೆಕ್ಕಿಸದೆ ದಶಕಗಳಿಂದ ತಪೋ ನಿರತ .ಆಗೊಮ್ಮೆ ಈಗೊಮ್ಮೆ ಗಾಳಿ ಇಡುವ ಕಚಗುಳಿಗೆ ಮೆಲ್ಲನೆಯ ಸ್ಪಂದನ.ಗರಿಗಳು ನುಡಿಸುವ ಸರಿಗಮಕ್ಕೆ ಏರಿ ಇಳಿಯುವ ಹಾರ್ಮೊನಿಯಮ್ಮಿನ ಕೀ ಗಳಂತೆ .ತನ್ನ ಸಂಗೀತಕ್ಕೆ ಮನಸೋತು ತಾನೇ ತಲೆದೂಗುತ್ತದೆ.ಪಕ್ಕದಲ್ಲೇ ಸಾಥ್ ನೀಡುತ್ತಿದೆ ಇನ್ನೊಂದು ಮರ.ಹಿಮಾಲಯದ ಸಾಧು ಒಬ್ಬನಂತೆ, ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೆತ್ತಲಾಗಿ, ಚಳಿಗೆ, ಏನ್ ಮಾಡ್ತೀಯೋ ಮಾಡ್ಕೋ ಹೋಗ್,ಎಂದು ಸವಾಲೆಸೆಯುತ್ತದೆ.ಎಲ್ಲಿಂದಲೋ ಬಂದ ಹಕ್ಕಿಗಳ ಹಿಂಡೊಂದು ತೆಂಗಿನ ಮರದ ತಪಸ್ಸು ಕೆಡಿಸಲು ಗರಿಗಳಲ್ಲಿ ಕೂತು, ಏನೂ ಪ್ರಯೋಜನವಿಲ್ಲೆಂದು ತಮ್ಮಲ್ಲೇ ಮಾತಾಡಿಕೊಂಡು ,ಬುರ್ರ್ ಎಂದು ಒಟ್ಟಿಗೇ ಹಾರಿಹೊಗುತ್ಹವೆ . ಇದ್ಯಾವುದನ್ನೂ  ಲೆಕ್ಕಿಸದ ತೆಂಗಿನಮರ ಮೊದಲಿನಂತೆ ಧ್ಯಾನಸ್ಥ ! ಸ್ವಸ್ಥ!! ಕಿಟಕಿ ಬಾಗಿಲುಗಳಿಂದ  ನಮ್ಮನು  ನಾವೇ ಬಂಧಿಸಿ ಕೊಂಡು, ತಲೆಯಲ್ಲಿ ನಾನಾ ಚಿಂತೆಯ, ಗಿಳಿ,ಗೂಬೆ,ಕಾಗೆಗಳನ್ನು ಬಿಟ್ಟುಕೊಂಡು, ಅವುಗಳ ಕಿರುಚುವಿಕೆಯಿಂದ ತಲೆ ಚಿಟ್ಟು ಹಿಡಿಸಿಕೊಂಡು  ಬದುಕುತ್ತಿರುವ ನಮ್ಮ ಬದುಕು --------------ಅಸ್ವಸ್ಥ.

4 comments:

  1. dhyanastha mara mattu adara swastate bagge thumba chennagi thilisidira.

    marada swastatege karana nanna prakaara
    adakkinnu manassina yanthra sikkadiruvudu

    manavarige sikka manassannu smruthi, prarabdagala jothe sikkisi adara suliyinda horabaralaagada sthithi nirmisiruvudu
    aswasthathe silukisiruvudu

    ReplyDelete
  2. ತೆಂಗಿನ ಮರದಲ್ಲಿ ಧ್ಯಾನಸ್ತ ಮನಸ್ಸನ್ನು ನೋಡುವ ನಿಮ್ಮ ದೃಷ್ಟಿ ಮೆಚ್ಚಿಕೆಯಾಯ್ತು..ಇದೇ ನಮ್ಮಲ್ಲಾಗುತ್ತಿರುವ ಪರಿವರ್ತೆನೆಯ ಅರಿವಿನ ಮೂಲ ಅಲ್ವೇ?

    ReplyDelete
  3. chintegalanna badukina javabdari kartavya endukondre manassu swastha :)

    ReplyDelete
  4. ಮತ್ತೆ ನಿಮ್ಮ ಬರಹಗಳು ಓದಲು ದೊರೆತದ್ದು ತುಂಬಾ ಖುಷಿ.

    ReplyDelete

Note: Only a member of this blog may post a comment.