Tuesday, February 16, 2010

ರೂಪಾಂತರ

ಅರಣ್ಯದ ಮಧ್ಯೆ ಬಿದಿರು ಮೆಳೆಯಲ್ಲಿ,
ನನ್ನ ಸಮನಾರಿಲ್ಲೆಂದು ಮೆರೆಯುತ್ತಿದ್ದ ನನಗೆ,
ಬಿತ್ತೊಂದು ------------ಕೊಡಲಿ ಪೆಟ್ಟು!                      
ಪೇಪೆರ್ ಮಿಲ್ಲಿನಲ್ಲಿ ರೂಪಾಂತರಗೊಂಡು,
ಸುದ್ದಿಯಾಗಿ,----------ಕಡೆಗೆ ರದ್ದಿಯಾಗಿ, 
ಮತ್ತೆ ಪೇಪರ್ ಬ್ಯಾಗ್ ಆಗಿ,
ಯಾರದೋ ಕಷ್ಟಗಳ ಸಾಮಾನು,
ಹೊಟ್ಟೆಯಲಿ ಹೊತ್ತು ಸಾಗಿಸಿ,
ಈಗ, ಉಪಯೋಗ ವಿಲ್ಲದೆ ಬಿದ್ಡಿದೇನೆ,
ಮನೆಯ ಹೊರಗೆ-------------!
ನಿಮ್ಮದೇ ಕರೆ ಕರೆಯಲ್ಲಿ ನೀವಿದ್ದರೂ,
ನನ್ನ ಕರೆಗೆ ಓಗೊಟ್ಟಿರಿ 
ನನ್ನ ಪುಣ್ಯ -------------!
ನನ್ನನೊಮ್ಮೆ ಗಾಳಿಪಟವಾಗಿಸಿ,
ತೇಲಿಬಿಡಿ ಆಗಸದಲ್ಲಿ -----------,
ನಿಮ್ಮ ಕಲ್ಪನೆಗಳ ಜೊತೆ,
ರಂಗು ರಂಗಿನ ---------
ಕನಸುಗಳ ಜೊತೆ!
ನಲಿಯುತ್ತೇನೆ ಹಕ್ಕಿಗಳೊಡನೆ,
ಒಂದು ಕ್ಷಣ------------,
ಮಣ್ಣಲ್ಲಿ, ಮಣ್ಣಾಗುವ ಮುನ್ನ!    
       (Inspired by sri. Narayan Bhat's article about a paper bag in his blog .)      

5 comments:

  1. ಕನಸುಗಳ ಜೊತೆಗೆ, ಕಲ್ಪನೆಗಳ ಜೊತೆಗೆ, ಆಗಸದಲ್ಲಿ ಹಕ್ಕಿಗಳ ಜೊತೆಗೆ ನಲಿಯುವ ಆಸೆ..ಮಣ್ಣಲ್ಲಿ ಮಣ್ಣಾಗುವ ಮುನ್ನ.. ತುಂಬಾ ಅರ್ಥಗರ್ಭಿತವಾಗಿದೆ. ಬರೆದರೆ ಬರೀಬೇಕು ನಿಮ್ಮ ಹಾಗೆ ಮನದ ಕವನ.

    ReplyDelete
  2. Ee kavanada sampoorna shreya tammade Bhattare.Idaralli nanna paalu sonne.Nimma adhbuta baravanigeya spoorti.Dhanyavaadagalu.

    ReplyDelete
  3. what a flow in writing. haage telihoda haage. thumba chennagide.
    nimminda ee kavana baruvanthe madida aa paper bag cover prathikruthige thanx.

    paper bag cover model mattu adara text baredu
    market madthiro a agency marketing technique thamba chennagide

    ReplyDelete
  4. thankyou Ashok thakyou vasanth.All credits to NarayanBhats article.

    ReplyDelete

Note: Only a member of this blog may post a comment.