Wednesday, November 24, 2010
"ಯಾರೋ ಹೇಳಿದರು ಅಂತ ......!"(ಡಯಾಬಿಟಿಸ್ ಭಾಗ -2)
ನಾನು ಇನ್ನೇನು ಆಸ್ಪತ್ರೆಗೆ ಹೊರಡಬೇಕು ಎನ್ನುವಾಗ,ಎದುರು ಮನೆಯ ಸಂದೀಪ ಬಂದ.'ಸರ್ ...,ಊರಿಂದ ನಮ್ಮ ಅಂಕಲ್ ಬಂದಿದ್ದಾರೆ.ಆಪರೇಶನ್ ಆಗಿದೆ......,ಡ್ರೆಸ್ಸಿಂಗ್ ಮಾಡಬೇಕು.ಆಸ್ಪತ್ರೆಗೆ ಕರೆದುಕೊಂಡು ಬರಲಾ?' ಎಂದ.ನಾನು ಹೊರಡುವ ಆತುರದಲ್ಲಿ ಇದ್ದುದರಿಂದ ಹೆಚ್ಚು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಮಾಮೂಲಾಗಿ 'ಅಪೆಂಡಿಕ್ಸ್' ,ಅಥವಾ 'ಹರ್ನಿಯಾ'ಆಪರೇಶನ್ ಆದವರು ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿದುದುಂಟು.ನಾನು ಅದೇ ರೀತಿ ಯಾರೋ ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬರುತ್ತಿರಬೇಕೆಂದುಕೊಂಡಿದ್ದೆ. ಆದರೆ ,ಸಂದೀಪನ ಜೊತೆ ಸುಮಾರು ಇಪ್ಪತೆಂಟು ವಯಸ್ಸಿನ ಯುವಕನೊಬ್ಬ ಒಂದು ಕಾಲಿಲ್ಲದೇ ,ಊರುಗೋಲಿನ ಸಹಾಯದಿಂದ ,ಕುಂಟುತ್ತಾ ಆಸ್ಪತ್ರೆಗೆ ಬಂದಿದ್ದು ನೋಡಿ ಗಾಭರಿಯಾಯಿತು.ಎಡಗಾಲಿನ ತೊಡೆಯ ಕೆಳಗಿನ ಭಾಗ ಇರಲಿಲ್ಲ.ತೊಡೆಯ ಸುತ್ತಾ ಬ್ಯಾಂಡೇಜ್ ಇತ್ತು.ಯಾವುದಾದರೂ ಅಪಘಾತವಾಯಿತೇನೋ ಎಂದುಕೊಂಡೆ.ಡ್ರೆಸ್ಸಿಂಗ್ ಮಾಡುತ್ತಾ 'ಏನಾಯಿತು'ಎಂದು ಕೇಳಿದೆ.ಅದಕ್ಕವನು 'ಸುಮಾರು ಐದು ವರ್ಷಗಳಿಂದ ಡಯಾಬಿಟಿಸ್ ಇತ್ತುಸರ್.ಮಾತ್ರೆ ತೆಗೆದುಕೊಳ್ಳುವಾಗ ಶುಗರ್ ಕಂಟ್ರೋಲ್ ನಲ್ಲಿತ್ತು.ಜೀವನ ಪೂರ್ತಿ ಇದೆ ರೀತಿ ಮಾತ್ರೆ ತೆಗೆದುಕೊಳ್ಳಬೇಕೆಂಬ ಬೇಸರವೂ ಇತ್ತು.ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತೆ ಅಂತ ಯಾರೋ ಹೆದರಿಸಿದರು. ಒಂದು ಪುಡಿ ಕೊಟ್ಟು,ದಿನಾ ಬೆಳಿಗ್ಗೆ ಪುಡಿ ತೆಗೆದುಕೊಂಡು ,ಸಾಧ್ಯವಾದಷ್ಟು ಎಳನೀರು ಕುಡಿಯಬೇಕೆಂದರು.ನಮ್ಮದೇ ತೆಂಗಿನ ತೋಟವಿದ್ದುದರಿಂದ ದಿನಕ್ಕೆ ಆರೇಳು ,ಎಳನೀರು ಕುಡಿಯುತ್ತಿದ್ದೆ.ಮಾತ್ರೆ ಸಂಪೂರ್ಣ ನಿಲ್ಲಿಸಿದೆ.ಕಾಲಿಗೆ ಒಂದು ಸಣ್ಣ ಗಾಯವಾಗಿ ಎಡಗಾಲಿನ ಮಂಡಿಯ ಕೆಳಗಿನ ಭಾಗ ಪೂರ್ತಿ ಕಪ್ಪಾಯಿತು.ಕಾಲು 'gangrene' ಆಗಿದೆಯೆಂದು ಮಂಡಿಯ ಮೇಲೆ ಕತ್ತರಿಸಿದರು. ನೋಡಿ ಸಾರ್............,ಯಾರೋ ಹೇಳಿದ್ದು ಮಾಡಲು ಹೋಗಿ ಒಂದು ಕಾಲನ್ನು ಕಳೆದುಕೊಂಡೆ 'ಎಂದು ನಿಟ್ಟುಸಿರು ಬಿಟ್ಟ.ಅವನನ್ನು ನೋಡಿ'ಯಾರದೋ ಮಾತು ಕೇಳಿಕೊಂಡು ಈ ಸ್ಥಿತಿ ತಂದುಕೊಂಡನಲ್ಲ ಪಾಪ' ಎನಿಸಿತು.ಅವತ್ತೆಲ್ಲ ಒಂದು ರೀತಿಯ ಬೇಸರ ಮನಸ್ಸನ್ನು ಆವರಿಸಿಕೊಂಡಿತ್ತು. ಕೆಲವರ ಜೀವನದಲ್ಲಿ ಹೀಗೆಲ್ಲಾ ಏಕಾಗುತ್ತದೆ ಎಂದು ಒಂದು ರೀತಿಯ ಜಿಜ್ಞಾಸೆ ಕಾಡಿತ್ತು.
Subscribe to:
Post Comments (Atom)
ಒ೦ದು ರೀತಿಯ ಮೂಡನ೦ಬಿಕೆ.. ಹೆಚ್ಚಿನವರಿಗೆ ದೇಹ ಶಾಸ್ತ್ರ ಗೊತ್ತಿರುವ ಡಾಕ್ಟರ್ ಗಿ೦ತ ಸುಮ್ಮನೆ ಏನೊ ಹೇಳುವವರ ಬಗೆಗೇ ನ೦ಬಿಕೆ ಜಾಸ್ತಿ..
ReplyDeleteಆಮೇಲೆ ಹೀಗೆಲ್ಲಾ ಅನುಭವಿಸಬೇಕಾಗುತ್ತದೆ.
ಉಪಯುಕ್ತ ಅನುಭವ ..
ಯಾರದೋ ಮಾತು ಕೇಳಿ ವೈಧ್ಯರ ಮಾತ್ರೆ ತ್ಯಜಿಸಿ ಕಾಲು ಕಳೆದುಕೊಂಡ ಆ ವ್ಯಕ್ತಿ ತನ್ನ ತಪ್ಪನ್ನು ಅರಿಯುವ ವೇಳೆಗೆ ಕೈ ಮೀರಿದೆ.ಮನ ಕರಗುವ ಲೇಖನ ಚೆನ್ನಾಗಿದೆ.ಡಾಕ್ಟರ್ ಜಿ ಜೈ ಹೋ
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.
sir,
ReplyDeleteFelt Bad. When i was in primary classes heared that one young girl lost her eye, near by my native. because her parents followed the meaningless methods. people should know not to mislead anyone but still this kind of blunders with life happening around.
eegellaa ardha ghante vyaayaamada badalu eraDu tablet tinnalu jana ready iddaare...
ReplyDeleteyaavudu sulabhavo ade beku janakke...
oLLeya maahiti jote eccharike sir....
ಔಷದಿ ಯಾವುದು ಬೇಕಾದರೂ ಆಗಿರಲಿ, ಟೆಸ್ಟ್ ಗಳನ್ನು ಮಾತ್ರ ಆಲೋಪತಿಯಲ್ಲಿ ಮಾಡಿಸಿ ಆ ಔಷದಿ ಪರಿಣಾಮಕಾರಿಯೇ ಅಲ್ಲವೇ ಎಂಬುದನ್ನು ತಿಳಿಯುತ್ತಿರಬೇಕು.
ReplyDeleteviparyasa. bejaraytu odi! :(
ReplyDeleteತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ಮರೆಯಲಾಗದ ನೆನಪುಗಳ ಸರಣಿ. ವೈದ್ಯಕೀಯ ಅನುಭವಗಳನ್ನು ಹೊತ್ತಗೆಯ ರೂಪದಲ್ಲೂ ಹೊರತನ್ನಲು ಯತ್ನಿಸಿ. ಇದರಿಂದ ಮತ್ತೂ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ... ಇಂತಹ ತಪ್ಪು ಕಲ್ಪನೆಗಳಿಂದ ಹೊರಬರಲಾಗುತ್ತದೆ!
ReplyDeleteತೇಜಸ್ವಿನಿಯವರ ಮಾತಿಗೆ ನಾನೂ ದನಿಗೂಡಿಸುತ್ತೇನೆ. ನಿಮ್ಮ ಅನುಭವದ ಬರಹಗಳು ಬೇಗ ಪುಸ್ತಕರೂಪದಲ್ಲಿ ಬರುವ೦ತಾಗಲಿ.
ReplyDeletesabka suno aapka karo.
ReplyDeleteಆಗಬೇಕಾದ್ದನ್ನು ಯಾರೂ ತಪ್ಪಿಸಲು ಆಗುವುದಿಲ್ಲ ! ಇದು ಅಚ್ಚರಿಯೇ ಆದ್ರೂ ಸತ್ಯ. ಕೇವಲ ಬೇರೆ ಯಾರೋ ನಿಮಿತ್ತ ಮಾತ್ರರಾಗಿ ನಡೆಯಬೇಕಾದ ದಾರಿ ತಪ್ಪಿಸಿವುದು ಬದುಕಿನ ಕೆಟ್ಟಘಳಿಗೆ, ಕೆಲವರಿಗೆ ಯಾರದೋ ಹೇಳಿಕೆಯನ್ನನುಸರಿಸಿ ಜೀವನದಲ್ಲೇ ಒಂಡು ಒಳ್ಳೆಯ ಅವಕಾಶ ಒದಗಿಬರುವುದೂ ಉಂಟು. ಅದೇ ಆ ಮನುಷ್ಯನಿಗೆ ಮೊದಲೇ ನಿಮ್ಮ ಪರಿಚಯವಿರುತ್ತಿದ್ದರೆ ಆತನ ಬದುಕಿನ ರೀತಿಯೇ ಬೇರೆ ಇರುತ್ತಿತ್ತು. ಅದಕ್ಕೇ ಸರ್ವಜ್ಞ ಹೇಳಿದ :
ReplyDeleteಹೇತ್ತಾತನರ್ಜುನನು
ಮುತ್ತಯ್ಯ ದೇವೇಂದ್ರ ಮತ್ತೆ
ಮಾತುಲನು ಶ್ರೀಹರಿಯಿರಲು ಅಭಿಮನ್ಯು
ಸತ್ತನೇಕಯ್ಯ | ಸರ್ವಜ್ಞ
ವಿಧಿಯೇ ಎಲ್ಲದಕ್ಕೂ ಕಾರಣ, ಬದುಕಿನ ಬಂಡಿಯ ಸಾಹೇಬನಾದ ವಿಧಿ ಹೇಳಿದ ಕಡೆಗೆ ನಾವು ನಡೆಯಬೇಕಾದುದು ಪಡೆದುಬಂದ ಕರ್ಮ. ಕಥೆ ನಿಜವಾಗೂ ಬೇಸರ ತರಿಸಿತು, ಆದರೂ ಅನುಭವದ ಪೆಟ್ಟಿಗೆಗೆ ಮತ್ತೊಂದು ಕಾಣಿಕೆಯನ್ನು ಅರ್ಪಿಸಿದ್ದೀರಿ, ಧನ್ಯವಾದಗಳು
ಸರ್,
ReplyDeleteವೈದ್ಯರ ಮಾತುಗಳನ್ನು ಬೇರೆಯವರ ಮಾತು ಕೇಳಿದರೆ ಏನಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ..
ಸಕ್ಕರೆ ರೋಗ ಹೆಚ್ಚುತ್ತಿರುವ ರೀತಿ ನೋಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ಎಲ್ಲರ ಮನೆಯಲ್ಲೂ ಒಬ್ಬರಾದರೂ ಸಕ್ಕರೆಖಾಯಿಲೆಯವರು ಇರುವ ಸಾಧ್ಯತೆ ಇದೆ.ಈ ಖಾಯಿಲೆಯನ್ನು ಸರಿಯಾಗಿ ಹತೋಟಿಯಲ್ಲಿ ಇಡದಿದ್ದರೆ ಭೀಕರ ಅಡ್ಡ ಪರಿಣಾಮಗಳಾಗಬಹುದು.ಇಲ್ಲಿ ಹೇಳಿರುವ ರೋಗಿಯಂತೆ ಕಾಲುಗಳನ್ನು ಕಳೆದು ಕೊಳ್ಳಬೇಕಾಗಬಹುದು.ಆದ್ದರಿಂದ ಜನರಲ್ಲಿ ಈ ರೋಗದ ಬಗ್ಗೆ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಈ ದಿಶೆಯಲ್ಲಿ ನನ್ನದೊಂದು ಸಣ್ಣ ಪ್ರಯತ್ನ.ಓದಿ ನಲ್ಮೆಯಿಂದ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ವಂದನೆಗಳು.
ReplyDeleteಆ ಹುಡುಗನ ಬಗ್ಗೆ ಬಹಳ ಬೇಸರವೆನಿಸಿತು ಸರ್. ಇದೇ ರೀತಿ ಎಷ್ಟೋ ಜನ mislead ಆಗ್ತಾರೆ. ಇ೦ಥಾ ಜೀವ೦ತ ಉದಾಹರಣೆಗಳಿ೦ದ ಎಚ್ಚರಿಕೆ ನೀಡಬೇಕು.ಉತ್ತಮ ಮಾಹಿತಿಗಾಗಿ ಧನ್ಯವಾದಗಳು
ReplyDeleteಡಾ.ಡಿ.ಟಿ.ಕೆ. ನಿಮ್ಮ ಅನುಭವದ ಪಿಟಾರಿಯಿಂದ ಉಪಯುಕ್ತ ಸಲಹೆಯನ್ನು ಪೋಣಿಸಿದ್ದು ಇಷ್ಟವಾಯ್ತು...ಹೌದು..ಸಕ್ಕರೆ ಖಾಯಿಲೆ ಭಾರತದಲ್ಲಿ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ...ಇದರ ಕರಾಳ ಛಾಯೆ ಈಗ ಕಡಿಮೆ ವಯಸ್ಸನವರಮೇಲೂ ಹೆಚ್ಚು ಕಾಣುತ್ತಿದೆಯಂತೆ...ನಮ್ಮ ದೈನಂದಿನ ಜೀವನ ಶೈಲಿಯಲ್ಲಿನ ಜಡತೆ ಇದಕ್ಕೆ ಕಾರಣವೆಂದುಕೊಳ್ಳುತ್ತೇನೆ....
ReplyDeletevery touching sir
ReplyDeleteondondu sala naavu huccharaage ellara maatannu keli halagi hogtivi
ಉಪಯುಕ್ತ ಅನುಭವದ ಲೇಖನ.
ReplyDelete