Sunday, November 28, 2010

"ವೈದ್ಯನೊಬ್ಬನ ಮರೆಯದ ನೆನಪುಗಳು"-ಭಾಗ೧

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

24 comments:

  1. ಎಲ್ಲಾ ಸ೦ಬ೦ಧಗಳಿಗಿ೦ತಾ ಮಾನವೀಯ ಸ೦ಬ೦ಧ ದೊಡ್ಡದು ಅಲ್ವೆ ಸರ್..?

    ಥ್ಯಾ೦ಕ್ಸ್

    ReplyDelete
  2. ಡಾಕ್ಟ್ರೆ...

    ಎಂಥಹ ಅನುಭವಗಳು ನಿಮ್ಮದು?
    ಬದುಕು ಸಾರ್ಥಕ ಅನ್ನಿಸುವಂಥಾದ್ದು..

    ನಿಮ್ಮ ವೃತ್ತಿಯೇ ಹಾಗೆ..

    ಎರಡು ಜೀವ ಉಳಿಸಿದ ಘಟನೆ..
    ನಮಗೂ ಸ್ಪೂರ್ತಿ ಕೊಡುವಂಥಾದ್ದು..

    ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು..

    ಬ್ರೀಚ್ ಡೆಲಿವರಿಗೆ ಇಲ್ಲಿ ಪಟ್ಟಗಳಲ್ಲಿ ೩-೪ ಲಕ್ಷ ರೂಪಾಯಿ ಚಾರ್ಜು ಮಾಡ್ಟಾರೆ ಅಲ್ಲವೆ?

    ನಿಮ್ಮ ಅನುಭವಗಳು ಇನ್ನಷ್ಟು ಬರಲಿ...

    ReplyDelete
  3. ಡಾಕ್ಟರ್ ಸರ್ ಬ್ರೀಚ್ ಡೆಲಿವರಿ ಬಗ್ಗೆ ಕೇಳಿದ್ದೇನೆ ಇಂತಹ ಡೆಲಿವರಿಗಳನ್ನು ಮಾಡಲು ಸಾಮಾನ್ಯವಾಗಿ ಎಲ್ಲಾ ಸೌಲಭ್ಯಗಳಿದ್ದೂ ವಿಫಲವಾಗುವ ಸಂಭವ ಜಾಸ್ತಿ ಅಂತಾದ್ರಲ್ಲಿ ನೀವು ಮಂದ ಬೆಳಕಿನಲ್ಲಿ ,ಯಾವುದೇ ಸೌಲಭ್ಯ ವಿಲ್ಲದೆ ಇರುವ ಗುಡಿಸಿಲಿನಲ್ಲಿ ಬ್ರೀಚ್ ಡೆಲಿವರಿ ಮಾಡಿರುವುದು ಅಚ್ಚರಿಯ ವಿಚಾರವೇ ಸರಿ. ದಿಕ್ಕು ಕಾಣದ ಬಡವರ ಮನೆಯಲ್ಲಿ ದೇವರಂತೆ ಹೋಗಿ ಸಾಂತ್ವನ ಹೇಳಿ ಸೇವೆ ನೀಡಿದ ನಿಮ್ಮ ಮಾನವಿಯತೆಗೆ ಬೆಲೆ ಕಟ್ಟಲಾಗದು. ಮಾಡಿದ ಸಹಾಯವನ್ನು ನೆನಪಿನಲ್ಲಿ ಇಟ್ಟುಕೊಂಡು ಬಂದು ಮಗಳ ವಿವಾಹದ ಆಮಂತ್ರಣ ಪತ್ರಿಕೆ ನೀಡಿ ಮಗಳಿಗೆ ನಿಮ್ಮ ಆಶೀರ್ವಾದ ಬೇಡಿದ ಆ ಜನಗಳು ಅಭಿನಂದನಾರ್ಹರು .ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ .ಜೈ ಹೋ ಡಾ// ಕೃಷ್ಣ ಮೂರ್ತಿ ಸರ್ .ಇಂತಹ ಅನುಭವಗಳ ಮಾಲಿಕೆಗಳ ಒಂದು ಪುಸ್ತಕ ನಿಮ್ಮ ಕಡೆಯಿಂದ ಬರಲಿ ಅದು ನಮ್ಮ ಬ್ಲಾಗಿಗರ ಸಮಾವೇಶದಲ್ಲಿ ಬಿಡುಗಡೆಯಾಗಲಿ ಏನಂತೀರ ಬ್ಲಾಗಿಗರೇ ??

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. ಹಿಂದಿನ ವೈದ್ಯರುಗಲ್ಲಿ ಹೆಚ್ಚಿನ ಧೈರ್ಯವಿತ್ತು. ಆಗಿನ ಕಾಲದಲ್ಲಿ ಇಂದಿನಂತೇ ವೈದ್ಯ ಸಲಕರಣೆಗಳು, ಯಂತ್ರಗಳು ಅಷ್ಟಾಗಿ ಇರಲಿಲ್ಲ. ಹೊಟ್ಟೆನೋವು ಬಂದಿದೆ ಎಂದ ತಕ್ಷಣ ಸ್ಕ್ಯಾನ್ ಮಾಡುವ ಪರಿಪಾಟ ಇರಲಿಲ್ಲ. ಇವತ್ತು ಕಾಲ ಬದಲಾಗಿದೆ, Young Doctor depends more on instruments & equipments rather than his interpersonal skills ! ಇನ್ನು ಕೆಲವು ಇರುವುದೇ ದುಡ್ಡಿಗಾಗಿ. ತಪ್ಪು ಎನ್ನಲಾರೆ-ಯಾಕೆಂದರೆ ಅವರು ಕಲಿಯುವಾಗ ಖರ್ಚುಮಾಡಿದ ಹಣ, ರಾಜಕಾರಣಿಗಳ ಖಾಸಗಿ ವಿದ್ಯಾಲಯಗಳಿಗೆ ಕೊಟ್ಟ ಡೊನೇಶನ್ ಇವೆಲ್ಲಾ ಅದಕ್ಕೆ ಕಾರಣಗಳಿರಬಹುದು, ಆದರೆ ಅದಕ್ಕೂ ಹತ್ತುಪಟ್ಟು ಹಣಗಳಿಸಿ ಸುಖವಾಗಿರುವ ಆಸೆ ಅರ್ಹತೆಯಿಲ್ಲದವರನ್ನೂ ವೈದ್ಯರನ್ನಾಗಿಸುತ್ತಿದೆ, ತಂತ್ರಜ್ಞರನ್ನಾಗಿಸುತ್ತಿದೆ.

    ಕತ್ತಲ ಕಾರಿರುಳಲ್ಲಿ ಲಾಟೀನ್ [ಕಂದೀಲು]ದೀಪದಲ್ಲಿ ನಡೆದುಹೋಗಿ, ಗುಡಿಸಲಲ್ಲಿ ಇರುವ ಜಾಗದಲ್ಲೇ, ಯಾವುದೇ ಅನುಭವವಿಲ್ಲದಿದ್ದರೂ ಕೇವಲ ಮಾನಸಿಕ ಸ್ಥೈರ್ಯ ಮತ್ತು ಧೈರ್ಯದಿಂದ ಹೆರಿಗೆಮಾಡಿಸಿದ ತಮ್ಮ ಈ ಅನುಭವ ಅನನ್ಯ! ಪಾಪದ ಜನರ ಪಾಲಿಗೆ ಅಂದು ನೀವು ದೇವರೇ ಆದಿರಿ. ಅದನ್ನು ನೆನೆದು ಬೆಳೆದ ಮಗಳನ್ನು ಕರೆತಂದು ತಮ್ಮನ್ನು ಹುಡುಕಿ ವಂದನೆಸಲ್ಲಿಸಿದ ಆ ತಾಯಿಯ ಅವ್ಯಕ್ತ ಹಾರೈಕೆ ನಿಮ್ಮ ಕುಟುಂಬ ಸುಖವಾಗಿ ಬಾಳಲಿ ಎಂದು ಬಯಸಿದ ಆ ಮನಸ್ಸಿನ ಹೇಳದೇ ಇರುವ ತುಡಿತ ಇಲ್ಲಿ ವ್ಯಕ್ತವಾಗಿದೆ. ನಿಜಕ್ಕೂ ತಾವು ಧನ್ಯರು, ಮಾನ್ಯರು. ತಮ್ಮ ಅನುಭವವನ್ನು ನಮ್ಮೆಲ್ಲರೊಡನೆ ಹಂಚಿಕೊಳ್ಳುತ್ತ ನಮಗೂ ಮಾನವೀಯತೆಯನ್ನು ನೆನೆಯಲು. ಅನುಸರಿಸಲು ಆದರ್ಶರಾದಿರಿ. ನಿಮಗೆ ಅನಂತ ನಮಸ್ಕಾರಗಳು.

    ReplyDelete
  5. maanveeya sambhadave melu... endenisutte alva sir... avara magaLu saha nimmanna nodi kushi pattiruttaaLe...

    maanaveeyate mereda lekhana.... sada nimminda oLLeya kelasagaLu neDeyuttaliralendu aashisuttene...

    ReplyDelete
  6. good article.

    ನಮಸ್ಕಾರ,
    ನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
    ನಿಮ ಪ್ರೀತಿ ಹೀಗೆ ಇರಲಿ...

    http://badari-notes.blogspot.com/

    ReplyDelete
  7. Dear Doctor, thanks for sharing this. We can learn many morals from this incident itself. Sometimes we feel that we are the great sufferers, hearing to incidents like this will humble us, and your act was really brave and kind.

    Sincerely
    Bhavana

    ReplyDelete
  8. ಮೂರ್ತಿಯವರೆ,
    ಓದುತ್ತಿದ್ದಂತೆ ಮನಸ್ಸು ತುಂಬಿ ಬಂದಿತು. ನಿಮ್ಮ ಜೀವನ ಸಾರ್ಥಕ್ಯ ಪದೆದಿದೆ.
    ಬಾಲು ಹೇಳುವಂತೆ ನಿಮ್ಮ ಅನುಭವಗಳ ಪುಸ್ತಕವೊಂದು ಹೊರ ಬರಬೇಕು.

    ReplyDelete
  9. ಡಾಕ್ಟರ್ ಸಾಹೇಬರೆ ಕಾಕಾಅವರ ಮಾತಿಗೆ ದುಸರಾ ಮಾತಿಲ್ಲ. ನಿಮ್ಮ ವೃತ್ತಿಯೇ ಹಾಗಲ್ಲವೇ ಅದು ಚಾಲೆಂಜಿಂಗ
    ಇವನ್ನು ಶಾಶ್ವತವಾಗಿ ಪುಸ್ತಕರೂಪದಲ್ಲಿ ದಾಖಲಿಸ್ರಿ..
    ಇನ್ನೊಂದು ವಿಷಯ ನನ್ನ ಬ್ಲಾಗಿಗೆ ನೀವು ಬರದೇ ಭಾಳದಿನಾ ಆದವು..

    ReplyDelete
  10. ಕೃಷ್ಣಮೂರ್ತಿ ಸರ್,

    ಸುಮ್ಮನೆ ಕಣ್ಣು ಒದ್ದೆಯಾಯ್ತು ನಿಮ್ಮ ಲೇಖನ ಓದಿ..
    ನಿಮ್ಮ ಅನುಭವಗಳು ನಿಜಕ್ಕೂ ಜೀವನ್ಮುಖಿ ಮತ್ತು ಆಪಾರ.

    ಖಂಡಿತವಾಗಿಯೂ ನಿಮ್ಮ ಅನುಭವಾಮೃತ ಪುಸ್ತಕ ರೂಪದಲ್ಲಿ ಬಂದರೆ ಚೆನ್ನಾಗಿರುತ್ತೆ..

    ReplyDelete
  11. ಎಲ್ಲ ಅನಾನುಕೂಲತೆಗಳ ನಡುವೆಯೂ ಧೈರ್ಯದಿಂದ ಎರಡು ಜೀವಗಳನ್ನು ಉಳಿಸಿದ ಸಂಧರ್ಭ, ವೈದ್ಯನೇ ಪ್ರತ್ಯಕ್ಷ ದೇವರು ಎಂಬುದನ್ನು ಅರಿವು ಮಾಡಿಕೊಡುವಂತಿದೆ.

    ReplyDelete
  12. ವೈದ್ಯರಿಗೆ ಮಾದರಿಯಾದ ಕೆಲಸ. ಬ್ರ್ರೀಚ್ ಹೆರಿಗೆಯಲ್ಲಿ ಕೈಗಳು ಮುರಿಯುವ ಸ೦ಧರ್ಭವಿರುವದು ಮಗು ಉಳಿಯುವದು ಕಷ್ಟವೆ೦ದು ಕೇಳಿದ್ದೆ. ಯಾವ ಓಟಿ ಸಹಾಯವಿಲ್ಲದೆ ಅದು ಹೆರಿಗೆ ತಮ್ಮ ಪಾರಿಣಿತಿ ವಿಭಾಗವಲ್ಲದಿದ್ದರೂ ಅದನ್ನು ಯಶಸ್ವೀಯಾಗಿ ಮಡಿದ್ದು ನಿಜಕ್ಕು ತಮ್ಮಲ್ಲಿನ ಮಾನವೀಯತೆಗೆ ದೇವರು ಮೆಚ್ಚಿ ನೀಡಿದ ಸಾಮರ್ಥ್ಯ. ತಮ್ಮ೦ಥಾ ವೈದ್ಯರ ಅವಶ್ಯ ಸಮಾಜಕ್ಕಿದೆ.
    ಆ ಜನ ತಮ್ಮನ್ನು ನೆನಪೀಟ್ಟು ವ೦ದಿಸಬೇಕಾದರೆ ತಮ್ಮಲ್ಲಿನ ಶಕ್ತಿ ಎ೦ತಹುದು. ತು೦ಬಾ ಮಾನವೀಯ ಪ್ರಸ೦ಗ.
    ಹ೦ಚಿಕೊ೦ಡಿದಕ್ಕೆ ಧನ್ಯವಾದಗಳು.

    ReplyDelete
  13. ಹೃದಯಸ್ಪರ್ಶಿ ಅನುಭವ ಡಾ. ಸರ್. ವ೦ದನೆಗಳು.

    ಅನ೦ತ್

    ReplyDelete
  14. ಮೇಲಿಂದ ಮೇಲೆ ಬ್ರಾಡ್ ಬ್ಯಾಂಡ್ ಕೈ ಕೊಡುತ್ತಿರುವುದರಿಂದ ಕೆಲ ದಿನಗಳಿಂದ ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನು ಅರ್ಪಿಸಲು ಸಾಧ್ಯವಾಗುತ್ತಿಲ್ಲ.ಕ್ಷಮೆಯಿರಲಿ.ಆಸ್ಥೆಯಿಂದ ಓದಿ,ನಲ್ಮೆಯಿಂದ ಪ್ರತಿಕ್ರಿಯೆ ನೀಡುತ್ತಿರುವ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು.ತಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ನಮಸ್ಕಾರ.

    ReplyDelete
  15. Too good sir ....
    it just shows how good are these people ...they may not have money but they have kind heart, respect n gratitude...

    Touching one ...nice one ..

    ReplyDelete
  16. ಅಯ್ಯಪ್ಪ!!!

    ಇದೊಂದು ಶಬ್ದ ಬಿಟ್ಟು ಇನ್ನೇನೂ ಬರಲಿಲ್ಲ ಬಾಯಲ್ಲಿ! ನಿಮ್ಮ ಬರಹ ಓದಿ!

    ReplyDelete
  17. ಸರ್
    ಕೆಲವು ದಿನಗಳಿಂದ ಬರಲಾಗಲಿಲ್ಲ
    ಕ್ಷಮಿಸಿ
    ಮತ್ತೆ ನಿಮ್ಮ ಪತ್ರ ಓದುತ್ತಿರುವೆ
    ಇದೊಂದು ಹ್ರದಯಸ್ಪರ್ಶೀ ಅನುಭವ
    ಮೊದಲೇ ನಿಮಗೆ ಹೇಳಿದ್ದೇನೆ,
    ಮತ್ತೆ ಹೇಳುತ್ತಿದ್ದೇನೆ,
    ನಿಮ್ಮ ವೃತ್ತಿಯ ಶ್ರೇಷ್ಠತೆ ಇನ್ಯಾವ ವೃತ್ತಿಗೂ ಇಲ್ಲ
    ಜನ ನಿಮ್ಮಲ್ಲಿ ದೇವರನ್ನು ಕಾಣುತ್ತಾರೆ

    ReplyDelete
  18. ಡಾಕ್ಟ್ರೇ,

    ನಿಮ್ಮ ಅನುಭವ ಈ ಬ್ರೀಚ್ ಡೆಲಿವರಿ ವಿಚಾರವನ್ನು ಓದಿ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತದೆ. ಮಾಡುವ ಕೆಲಸವನ್ನು ಮನಸಾರೆ ಇಷ್ಟಪಟ್ಟು ಪ್ರತಿಫಲವನ್ನು ನಿರೀಕ್ಷಿಸದೆ ಮಾಡಿದರೆ ಸುಗುವ ಆತ್ಮತೃಪ್ತಿ ಅಂದರೆ ಇದೇ ಅಲ್ಲವೇ...ಸರ್...ನಿಮ್ಮ ವೃತ್ತಿಗೆ ಮತ್ತು ನಿಮಗೆ ಹ್ಯಾಟ್ಸಪ್....

    ReplyDelete
  19. @ತೇಜಸ್ವಿನಿ ಹೆಗ್ಡೆ ,@ಈಶ್ವರ್ ಜಕ್ಕಳಿ,@ಭಾಶೆ ,@ಗುರುಸರ್,@ಸುಬ್ರಮಣ್ಯ ಮಾಚಿಕೊಪ್ಪ,@ವಸಂತ್ @ಶಿವು;ಓದಿ ಪ್ರತಿಕ್ರಿಯಿಸಿದ ನಿಮಗೆಲ್ಲಾ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  20. nimage aa kshana estu tense aagirabahudu endu naanu oohisaballe...
    ella oLLeyadaayitalla... dhanyavaadagalu...

    ReplyDelete
  21. sir nimma atydbhuta anubhavagalu maanavatege hidida kannadiyaagide."vaidyanaaraayano harihi"embudu aksharashaha satya.nimage anata dhanyavaadagalu.namma blog gu omme bhetikodi.namaskaara.

    ReplyDelete

Note: Only a member of this blog may post a comment.