Monday, November 15, 2010

"ಕಂಬಳಿ ಹುಳುವಿನಂತಹ...ಮನವೇ !"

ದುರ್ಗುಣಗಳ ಮೊಟ್ಟೆಯೊಡೆದು 
ಮೈಯೆಲ್ಲಾ ಮುಳ್ಳಾಗಿ 
ಎಲ್ಲರನ್ನೂ ಚುಚ್ಚುವ 
ಎಲ್ಲರಲ್ಲೂ ತಪ್ಪುಹುಡುಕುವ
ಸಿಕ್ಕಸಿಕ್ಕಲ್ಲಿ  ಮೇಯುವ ,
ಇಲ್ಲೇ ನರಳುವ ....,
ಇಲ್ಲೇ ಹೊರಳುವ ...,
ಈ ಜಗದ ಜಂಜಾಟಗಳ
ಹೊಲಸಲ್ಲೇ ತೆವಳುವ,
ಕಂಬಳಿಹುಳದಂಥ  ಮನವೇ !
ನೀ ,ಧ್ಯಾನದ,ಮೌನದ 
ಕೋಶದೊಳಹೊಕ್ಕು,
ಸುಂದರ ಪತಂಗವಾಗಿ 
ಮಾರ್ಪಟ್ಟು ............!
ಆನಂದದಿ ಹಾರಾಡು!
ಎಲ್ಲರ ಮನದ .......,
ಪ್ರೀತಿಯ ಹೂಗಳ ....,
ಮಕರಂದ ಹುಡುಕುವ
ಸುಂದರ ಚಿಟ್ಟೆಯಾಗು !
ಸಚ್ಚಿದಾನಂದರೂಪವಾಗು!
ನಿನ್ನ.. ನಿಜಸ್ವರೂಪವೇ 
..............ನೀನಾಗು!

18 comments:

  1. ಮನಸಿನ ಕಲ್ಮಶಗಳನ್ನೆಲ್ಲ ತೊಳೆದು ಸಾರ್ಥಕತೆಯ ಬದುಕಿನತ್ತ ನಡೆದು ಚಂದದ ಬದುಕನ್ನ ನಡೆಸಬೇಕು ಅನ್ನುವುದನ್ನ ಎಸ್ಟ್ ಚಂದವಾಗಿ ಕವನರೂಪದಲ್ಲಿ ಇಳಿಸಿದ್ದೀರಿ ಮೂರ್ತಿ ಸಾರ್ , ಧನ್ಯವಾದಗಳು :)

    ReplyDelete
  2. ನಮಸ್ಕಾರ ರಂಜಿತ ಮೇಡಂ;ಬಹಳ ದಿನಗಳ ನಂತರ ಬ್ಲಾಗಿನಲ್ಲಿ ನಿಮ್ಮ ಕಾಮೆಂಟ್ ನೋಡಿ ಖುಷಿಯಾಯಿತು.ನಿಮ್ಮೆಲ್ಲರ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗಳೇ ನನ್ನ ಬರಹಗಳಿಗೆ ಮೂಲ ಇಂಧನ!ಬರುತ್ತಿರಿ.ನಮಸ್ಕಾರ.

    ReplyDelete
  3. ವಸಂತ್;ನಿಮ್ಮ ಪ್ರೋತ್ಸಾಹಪೂರ್ವಕ ಅನಿಸಿಕೆಗಳು ಮತ್ತಷ್ಟು ಲೇಖನಗಳನ್ನು ಬರೆಸುತ್ತದೆ.ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  4. ಚುಕ್ಕಿ ಚಿತ್ತಾರ ಮೇಡಂ;ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  5. ತುಂಬಾ ವಿನೂತನ ಹೋಲಿಕೆಯೊಂದಿಗೆ ಮಾನವನ ಜೀವನಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೀರಾ.

    ReplyDelete
  6. ಕೃಷ್ಣಮೂರ್ತಿ ಸರ್,

    ಎಂತಹ ಅದ್ಭುತ ಅನುಭೂತಿ ಈ ಕವನದಲ್ಲಿದೆ..
    ಸುಂದರವಾದ ಕವನಕ್ಕೆ ವಂದನೆಗಳು.

    ReplyDelete
  7. patangavagu- HA ENTHAHA SUNDARA UPAME.

    ReplyDelete
  8. wow.. very inspiring and very nice message.. thanks for sharing.

    ReplyDelete
  9. ತುಂಬಾ ಚೆನ್ನಾಗಿದೆ.. ಮನಸ್ಸನ್ನು ಹೋಲಿಸಲು ಎಲ್ಲೆಲ್ಲೋ ಓಡುತ್ತಿದ್ದೆ...
    ತುಂಬಾ ಅರಾಮಾಗಿ ಹೇಳಿದಿರಿ......
    ಧನ್ಯವಾದಗಳು ಅದಕ್ಕೆ..

    ಹಾಂ.. ಮತ್ತೊಂದು ಕಂಬಳಿ ಹುಳ ಅಂದ ಕೂಡಲೇ ನೆನಪಾಯ್ತು
    ತಂಗಿ ಚಿಕ್ಕವಳಿರುವಾಗ ಹೇಳುತ್ತಿದ್ದ ಮಾತಿದು...
    " ಅಣ್ಣಯ್ಯಾ ಕಂಬಳಿಹುಳ ಕೂಗ್ ತಾ?" :)p
    ಬನ್ನಿ ನಮ್ಮನೆಗೂ
    http://chinmaysbhat.blogspot.com

    ReplyDelete
  10. ಉತ್ತಮ ಉಪಮೆಯ ಮೂಲಕ ತತ್ತ್ವಜ್ಞಾನದ ವಿಚಾರವನ್ನು ಮು೦ದಿಟ್ಟೀದ್ದೀರಿ.
    ಧನ್ಯವಾದಗಳು ಡಾ.ಸರ್.

    ಅನ೦ತ್

    ReplyDelete
  11. ಪ್ರೀತಿಯ ಹೂಗಳ ....,
    ಮಕರಂದ ಹುಡುಕುವ
    ಸುಂದರ ಚಿಟ್ಟೆಯಾಗು !
    ಸಚ್ಚಿದಾನಂದರೂಪವಾಗು!
    ನಿನ್ನ.. ನಿಜಸ್ವರೂಪವೇ
    ..............ನೀನಾಗು! ನಿಮ್ಮ ಸುಂದರ ಕವಿತೆಯಲ್ಲಿ ನನಗೆ ಇಷ್ಟವಾದ ಸಾಲುಗಳು. ನನ್ನ ಮನದ ಆಶಯಗಳು ಸಹ ಆಗಿದೆ.ಡಾಕ್ಟರ್ ಸರ್ ಜೈ ಹೋ.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  12. ಡಾಕ್ಟ್ರೆ..

    ಮನದ ಮರ್ಕಟ ಸ್ವಭಾವನ್ನು ತಿಳಿಸಿ..
    ಅದನ್ನು ಹೇಗೆ ಸರಿಪಡಿಸಬಹುದೆಂಬದನ್ನೂ ಸೂಚ್ಯವಾಗಿ ತಿಳಿಸಿದ್ದೀರಿ..

    ಚಂದದ ಕವಿತೆ...

    ಅಭಿನಂದನೆಗಳು...

    ReplyDelete
  13. ಡಾಕ್ಟ್ರೇ,

    ನಿಮ್ಮ ಪದ್ಯದ ತಾತ್ಪರ್ಯವನ್ನೇ ನನ್ನ ಮನಸ್ಸಿನಲ್ಲೂ ಆಗಾಗ ಬೇಡಿಕೊಳ್ಳುತ್ತಿರುತ್ತೇನೆ..ಪದ್ಯದಲ್ಲಿ ಅದ್ಯಾತ್ಮದ ಸ್ಪರ್ಶವನ್ನು ಕೊಟ್ಟಿದ್ದೀರಿ..ಥ್ಯಾಂಕ್ಸ್.

    ReplyDelete
  14. ನಿನ್ನೆಯಿಂದ ಒಂದು ದಿನ ಪೂರ್ತಿ ಬ್ರಾಡ್ ಬ್ಯಾಂಡ್ ಕೈಕೊಟ್ಟಿ ದ್ದರಿಂದ ಎಲ್ಲರಿಗೂ ಬೇರೆ ಬೇರೆಯಾಗಿ ಪ್ರತಿಕ್ರಿಯೆ ನೀಡಲಾಗಲಿಲ್ಲ.ಪ್ರತಿಕ್ರಿಯಿಸಿದ ಎಲ್ಲಾ ಬ್ಲಾಗ್ ಸ್ನೇಹಿತರಿಗೆ ನನ್ನ ಅನಂತ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಎಲ್ಲಾ ಬರವಣಿಗೆಗೆ ಇಂಧನವೆಂಬುದು ನನ್ನ ಅನಿಸಿಕೆ.ಮುಂದೆಯೂ ತಮ್ಮೆಲ್ಲರಿಂದ ಇದೇ ಪ್ರೋತ್ಸಾಹವಿರಲಿ.ವಂದನೆಗಳು.

    ReplyDelete
  15. ಕವನ ಸುಂದರವಾಗಿದೆ. ಹೋಲಿಕೆ ಹೊಸರೀತಿಯದಾಗಿ ಪೂರಕವಾಗಿದೆ, ಹೀಗೇ ಹರಿಯಲಿ ತಮ್ಮ ಕಾವ್ಯ ಧಾರೆ, ಧನ್ಯವಾದಗಳು

    ReplyDelete

Note: Only a member of this blog may post a comment.