ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ.ಆಗ ತಾನೇ ಆಸ್ಪತ್ರೆಗೆ ಬಂದಿದ್ದೆ.ತಾಯಿಯೊಬ್ಬಳು ಗಾಭರಿಯಿಂದ ಅಳುತ್ತಾ ತನ್ನ ಒಂದುವರ್ಷದ ಮಗುವನ್ನು ಎತ್ತಿಕೊಂಡು ಓಡಿಬಂದು 'ನನ್ನ ಮಗುವನ್ನು ಉಳಿಸಿಕೊಡಿ ಡಾಕ್ಟ್ರೆ' ಎಂದು ಗೋಳಾಡಲು ಶುರುಮಾಡಿದಳು.ಮಗು ವಿಪರೀತ ವಾಂತಿ ಮಾಡುತ್ತಿತ್ತು .ವಾಂತಿ ರಕ್ತ ಮಿಶ್ರಿತ ವಾಗಿತ್ತು .ಅಳುವಿನ ಮಧ್ಯೆ ಆ ತಾಯಿ ತಾನು ಒಳಗೆ ಕೆಲಸ ಮಾಡುತ್ತಿದ್ದಳೆಂದೂ,--ಮಗು ಹೊರಗೆ ಹಾಲ್ ನಲ್ಲಿ ಆಡುತ್ತಿತ್ತೆಂದೂ --,ಇದ್ದಕ್ಕಿಂದಂತೆ ವಾಂತಿ ಮಾಡಲು ಶುರು ಮಾಡಿತೆಂದೂ ಹೇಳಿದಳು.ಮೊದಲಿಗೆ ಆರೋಗ್ಯವಾಗಿದ್ದ ಈಮಗು ಇದ್ದಕ್ಕಿದ್ದ ಹಾಗೇ,ಹೀಗೇಕೆ
ರಕ್ತವಾಂತಿಮಾಡುತ್ತಿದೆಎಂದುನನಗೆತಕ್ಷಣಕ್ಕೆಅರ್ಥವಾಗಲಿಲ್ಲ.ಆತಾಯಿಯಗೋಳಾಟ,ಆಮಗುಕಷ್ಟಪಡುತ್ತಾ,ಕೆಮ್ಮುತ್ತಾ.
ರಕ್ತವಾಂತಿಮಾಡುತ್ತಿದ್ದದ್ದು!,ಹೇಗಾಯಿತು, ಏನಾಯಿತು!!?ಎಂದು ಕುತೂಹಲದಿಂದ ಸೇರಿದ ಜನ ಜಂಗುಳಿ ! ಇವೆಲ್ಲವೂ ಸೇರಿ ನನಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ,ಎಲ್ಲವೂ ಅಯೋಮಯ ವಾಗಿತ್ತು!
ರೋಗಿಯನ್ನು ವಾರ್ಡಿನಲ್ಲಿ ಮಲಗಿಸಿ------- ಪರೀಕ್ಷೆ ಮಾಡಿದರೆ ,ಏನಾದರೂ ತಿಳಿಯಬಹುದೇನೋ ಎಂದು ವಾರ್ಡಿಗೆ ಕರೆದುಕೊಂಡು ಹೋದೆ.ವಾರ್ಡಿನ ಬೆಡ್ಡಿನ ಮೇಲೆ ಮಲಗಿಸಿದ ಕೂಡಲೇ ಮಗು ಮತ್ತೊಮ್ಮೆ ರಕ್ತ ಮಿಶ್ರಿತ ವಾಂತಿ ಮಾಡಿತು.ಆದರೆ ಈ ಸಲ ವಾಂತಿಯ ಜೊತೆ ಚೂಪಾದ ಅಂಚು ಗಳಿದ್ದ ಮಾತ್ರೆ ಉಪಯೋಗಿಸಿ ಬಿಸಾಡಿದ್ದ ಅಲ್ಯೂಮಿನಿಯಂ ಫಾಯಿಲ್ (aluminium foil ) ಒಂದು ಹೊರ ಬಂತು-----! ಮಗುವಿನ ವಾಂತಿ ನಿಂತಿತು.ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಿದ ಆ ದೇವನಿಗೆ ಮನಸ್ಸಿನಲ್ಲಿಯೇ ನೂರೆಂಟು ನಮನ ಸಲ್ಲಿಸಿದೆ.
ಒಂಬತ್ತು ತಿಂಗಳಿಂದ, ಒಂದೂವರೆ -----ಎರಡು ವರ್ಷದ ಒಳಗಿನ ಮಕ್ಕಳಿಗೆ , ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.ತಾಯಂದಿರು ಮೈಯೆಲ್ಲಾ ಕಣ್ಣಾಗಿ ಮಗುವನ್ನು ನೋಡಿಕೊಳ್ಳಬೇಕು.ಮಾತ್ರೆಗಳು,ಕ್ಯಾಪ್ಸೂಲ್ ಗಳನ್ನು ಉಪಯೋಗಿಸಿದ ಮೇಲೆ ಅವುಗಳ ಮೇಲಿನ ಹೊದಿಕೆಯ ರೂಪದ ಅಲ್ಯೂಮಿನಿಯಮ್ ಫಾಯಿಲ್'ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಮೊದಲು ಬಿಡಬೇಕು. ಮಕ್ಕಳಿರುವ ಮನೆಯಲ್ಲಿ ನೀವು ಎಷ್ಟು ಎಚ್ಚರದಿಂದ್ದರೂ ಕಮ್ಮಿಯೇ------------!
ರಕ್ತವಾಂತಿಮಾಡುತ್ತಿದೆಎಂದುನನಗೆತಕ್ಷಣಕ್ಕೆಅರ್ಥವಾಗಲಿಲ್ಲ.ಆತಾಯಿಯಗೋಳಾಟ,ಆಮಗುಕಷ್ಟಪಡುತ್ತಾ,ಕೆಮ್ಮುತ್ತಾ.
ರಕ್ತವಾಂತಿಮಾಡುತ್ತಿದ್ದದ್ದು!,ಹೇಗಾಯಿತು, ಏನಾಯಿತು!!?ಎಂದು ಕುತೂಹಲದಿಂದ ಸೇರಿದ ಜನ ಜಂಗುಳಿ ! ಇವೆಲ್ಲವೂ ಸೇರಿ ನನಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ,ಎಲ್ಲವೂ ಅಯೋಮಯ ವಾಗಿತ್ತು!
ರೋಗಿಯನ್ನು ವಾರ್ಡಿನಲ್ಲಿ ಮಲಗಿಸಿ------- ಪರೀಕ್ಷೆ ಮಾಡಿದರೆ ,ಏನಾದರೂ ತಿಳಿಯಬಹುದೇನೋ ಎಂದು ವಾರ್ಡಿಗೆ ಕರೆದುಕೊಂಡು ಹೋದೆ.ವಾರ್ಡಿನ ಬೆಡ್ಡಿನ ಮೇಲೆ ಮಲಗಿಸಿದ ಕೂಡಲೇ ಮಗು ಮತ್ತೊಮ್ಮೆ ರಕ್ತ ಮಿಶ್ರಿತ ವಾಂತಿ ಮಾಡಿತು.ಆದರೆ ಈ ಸಲ ವಾಂತಿಯ ಜೊತೆ ಚೂಪಾದ ಅಂಚು ಗಳಿದ್ದ ಮಾತ್ರೆ ಉಪಯೋಗಿಸಿ ಬಿಸಾಡಿದ್ದ ಅಲ್ಯೂಮಿನಿಯಂ ಫಾಯಿಲ್ (aluminium foil ) ಒಂದು ಹೊರ ಬಂತು-----! ಮಗುವಿನ ವಾಂತಿ ನಿಂತಿತು.ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಿದ ಆ ದೇವನಿಗೆ ಮನಸ್ಸಿನಲ್ಲಿಯೇ ನೂರೆಂಟು ನಮನ ಸಲ್ಲಿಸಿದೆ.
ಒಂಬತ್ತು ತಿಂಗಳಿಂದ, ಒಂದೂವರೆ -----ಎರಡು ವರ್ಷದ ಒಳಗಿನ ಮಕ್ಕಳಿಗೆ , ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.ತಾಯಂದಿರು ಮೈಯೆಲ್ಲಾ ಕಣ್ಣಾಗಿ ಮಗುವನ್ನು ನೋಡಿಕೊಳ್ಳಬೇಕು.ಮಾತ್ರೆಗಳು,ಕ್ಯಾಪ್ಸೂಲ್ ಗಳನ್ನು ಉಪಯೋಗಿಸಿದ ಮೇಲೆ ಅವುಗಳ ಮೇಲಿನ ಹೊದಿಕೆಯ ರೂಪದ ಅಲ್ಯೂಮಿನಿಯಮ್ ಫಾಯಿಲ್'ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಮೊದಲು ಬಿಡಬೇಕು. ಮಕ್ಕಳಿರುವ ಮನೆಯಲ್ಲಿ ನೀವು ಎಷ್ಟು ಎಚ್ಚರದಿಂದ್ದರೂ ಕಮ್ಮಿಯೇ------------!
ಹೌದೇ ಹೌದು ಡಾಕ್ಟ್ರೆ..
ReplyDeleteಚಿಕ್ಕ ಮಕ್ಕಳಿಗೆ ಬಾಳೆ ಹಣ್ಣು ಈ ರೀತಿಯ ಮೆತ್ತಗಿರುವ ಪದಾರ್ಥಗಳನ್ನಾದರೂ ತಿನ್ನಿಸುವಾಗ ಜಾಗರೂಕತೆಯೇ ಬೇಕು.. ತಿನ್ನುತ್ತೆ ಅ೦ತ ತಿನ್ನಿಸುತ್ತಾ ಹೋದರೆ ಅವುಗಳಿಗೆ ನು೦ಗುವಾಗ ಕಷ್ಟವಾಗಿ ಗ೦ಟಲಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇರುತ್ತೆ..
ಇಲ್ಲೊ೦ದು ಮಗುವಿಗೆ ಹಾಗೆ ಆಗಿತ್ತು. ಎ೦ಟು ತಿ೦ಗಳ ಮಗುವಿಗೆ ಬಾಳೆಹಣ್ಣು ತಿನ್ನಿಸಿದರು ಅತ್ತೆ ಸೊಸೆ ಇಬ್ಬರೂ ತಿನ್ನುತ್ತೆ ಅ೦ತ.ಇವರು ತಿನ್ನಿಸುವ ವೇಗಕ್ಕೆ ಅದಕ್ಕೆ ನು೦ಗುವಾಗ ತೊ೦ದರೆಯಾಗಿ ಸುಮ್ಮನೆ ಕೈ ಕಾಲಾಡಿಸದೆ ಇತ್ತ೦ತೆ. ತ೦ದೆ ಬ೦ದವನು ಮಗುವನ್ನು ಎತ್ತಿಕೊಳಲು ಹೋದಾಗ ಮಗುವಿನ ಮುಖ ಕೆ೦ಪಾಗಿ ಇರುವುದು ಕ೦ಡು ಗಾಭರಿಯಾಗಿ ನಿಧಾನವಾಗಿ ಬೆರಳು ಹಾಕಿ ತೆಗೆದ ಮೇಲೇ ಮಗು ಕೈಕಾಲಾಡಿಸಲು ಶುರುಮಾಡಿತು..
ಎಷ್ಟು ಜಾಗರೂಕತೆಯಿದ್ದರೂ ಸಾಲದು....
ಥ್ಯಾ೦ಕ್ಸ್
ಹೌದು, ಮಕ್ಕಳ ಬಗ್ಗೆ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ, ಉತ್ತಮ ಬರಹ.
ReplyDeleteಡಾಕ್ಟರ್,
ReplyDeleteಅಜಾಗರೂಕತೆಯಿಂದ ಜರಗುವ ಅವಘಡವನ್ನು ಚೆನ್ನಾಗಿ ವಿವರಿಸಿದ್ದೀರಿ. ವಿಜಯಶ್ರೀಯವರು ಸಹ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ.
ಧನ್ಯವಾದಗಳು.
dhanyavaadagalu
ReplyDeletekrishnamurthy avare ನಿಜ, ಮಕ್ಕಳನ್ನು ಭದ್ರವಾಗಿ ನೋಡಿಕೊಳ್ಳಬೇಕು. ಆದ್ರೆ ತಾಯಿಂದರೆ ಏಕೆ ಯಾವಾಗಲೂ ಮಗುವನ್ನು ನೋಡಿಕೊಳ್ಳಬೇಕು?? ತಂದೆಯವರಿಗೆ ಇದರ ಜವಾಬ್ಧಾರಿ ಇಲ್ಲವೇ?? :)
ReplyDeleteಓದಿ ಪ್ರತಿಕ್ರಿಯೆ ನೀಡಿದ @ಚುಕ್ಕಿ ಚಿತ್ತಾರ@ಸುನಾತ್ ಸರ್ @ಪರಾಂಜಪೆ ಸರ್ @ಸೀತಾರಾಂ ಸರ್ ಇವರಿಗೆಲ್ಲಾ ಧನ್ಯವಾದಗಳು.
ReplyDelete@ಭಾವನಾ ರಾವ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು .'ತಾಯಂದಿರೆ ಮಕ್ಕಳ ಮೇಲೆ ನಿಗಾ ಇಡಿ' ಎಂದರೆ ತಂದೆಯಂದಿರು ನಿಗಾ ಇಡಬಾರದು ಎಂದು ಅರ್ಥವಲ್ಲ.ಸಾಮಾನ್ಯವಾಗಿ ತಾಯಂದಿರು ಮಕ್ಕಳನ್ನು ನೋಡಿಕೊಳ್ಳುವುದರಿಂದ ಆ ರೀತಿ ಹೇಳುವುದು ರೂಢಿ.ಅದರ ಅರ್ಥ ತಂದೆಯಂದಿರು ಮಕ್ಕಳನ್ನು ನೋಡಿ ಕೊಳ್ಳಬಾರದು ಎಂದಲ್ಲ.ಇಲ್ಲಿ ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ.
ಮಗುವಿನ ಸುರಕ್ಷತೆ ಮುಖ್ಯ.ಮನೆಯಲ್ಲಿಯೇ ಎಂತಹ ಅವಗಢಗಳು ನಡೆಯಬಹುದು ,ತಂದೆ ತಾಯಿಗಳು ಎಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ಈ ಘಟನೆಯನ್ನು ಉಲ್ಲೇಖಿಸಿದ್ದೇನೆ.:-)
Howdu.. Makkala bagge hecchu yeccharike vahisidashtu olitu..
ReplyDeleteಡಾಕ್ಟರ್, ಉಪಯುಕ್ತ ಮಾಹಿತಿ, ಧನ್ಯವಾದ.
ReplyDeleteಸ್ವಾಮಿ, ನಮ್ಮ ಭಾಷಾ ಪ್ರಯೋಗದ ಬಗ್ಗೆ ಎಚ್ಚರಿಕೆ ಮೂಡಿಸಲು ಭಾವನಾ ರಾವ್ ಪ್ರತಿಕ್ರಿಯೆ ಸಹಕಾರಿಯಾಗಿದೆ....!
ನಿಜ, ಮಗುವಿನ ಸುರಕ್ಷತೆ ಬಹಳ ಮುಖ್ಯ.. ಬಹಳ ಮನೆಗಳಲ್ಲಿ ಈಗಿನ ಕಾಲದಲ್ಲೂ, ಗಂಡಾ ಹೆಂಡತಿಯರು ಇಬ್ಬರೂ ದುಡಿಯುವ ಮನೆಗಳಲ್ಲೂ, ಮನೆಯ ಎಲ್ಲಾ ಜವಾಬ್ದಾರಿಯನ್ನು ಹೆಂಡತಿಯ ತಲೆಯ ಮೇಲೇ ಹಾಕೋ ಗಂಡಸರನ್ನು ಬಹಳ ನೋಡಿದ್ದೇನೆ. ಭಾರತದಲ್ಲಿ ಸಿಗೊ maternity leave ಬರೀ ೩-೬ ತಿಂಗಳೊ(ಸರಿಯಾಗಿ ಗೊತ್ತಿಲ್ಲ). ಇಂಥ ಸಂದರ್ಭದಲ್ಲಿ, ಗಂಡನ ಜವಾಬ್ದಾರಿ ಮಕ್ಕಳ ಮೇಲೆ ಬಹಳ ಮುಖ್ಯ. homemakerಗಳಾಗಿದ್ದರೂ ಅವರಿಗೆ ಒಮ್ಮೊಮ್ಮೆ ಸಹಾಯ ಕೊಡುವುದು ಬಹಳ ಮುಖ್ಯ ಅಂತದ್ರಲ್ಲಿ, ದುಡಿಯುವ ಮಹಿಳೆಯರಿಗೆ ತಮ್ಮ ಗಂಡನ ಸಹಾಯ ಬಹಳ ಅಗತ್ಯ. ಕೆಲವು ಇಂಥ ದುಡಿಯುವ ಮಹಿಳೆಯರೆ “ ಹೋಗ್ಲಿಬಿಡಿ, ಗಂಡಸರಿಗೆ ಇವೆಲ್ಲ ತಿಳಿಯೋದಿಲ್ಲ ಅಂತಾರೆ”. ಇಂಥವರಿಗೆ ಬುದ್ಧಿವಾದ ಹೇಳೋದರಲ್ಲಿ ಏನು ಪ್ರಯೋಜನವಿಲ್ಲ.
ReplyDeleteನನ್ನ ಪ್ರಕಾರ, ಮಕ್ಕಳ ಸುರಕ್ಷತೆಯ ಜೊತೆಗೆ, ತಾಯಿಯ ಸುರಕ್ಷತೆಯೂ ಬಹಳ ಮುಖ್ಯ. ಇದರ ಜೊತೆಗೆ, ಗಂಡ ಹೆಂಡಿರ ಮಧ್ಯೆ ಹೊಂದಾಣಿಕೆ ಇಲ್ಲದಿದ್ದರೆ, ಕಹೀ ಮೂಡಿದರೆ, ಮುಂದಿನ ಮಕ್ಕಳ ಬೆಳವಣಿಗೆ ಹೇಗೆ ಸುಗಮವಾಗಿರುತ್ತದೆ?. ಇದು ನನ್ನ ಪ್ರಶ್ನೆ. :o)
ನನ್ನನ್ನು ಕ್ಷಮಿಸಬೇಕು, ನನ್ನ feminist feelings ನನ್ನಲ್ಲಿ ಬಹಳ ಆಳವಾಗಿ ಮೂಡಿದೆ.. :)
ಭಾವನಾ ರಾವ್;ನಿಮ್ಮ ಅಭಿಪ್ರಾಯಕ್ಕೆ ನನ್ನಸಹಮತವಿದೆ,ಸಹಾನುಭೂತಿಯಿದೆ.ಆದರೆ
ReplyDeleteಇಲ್ಲಿ ನಾವು ಚರ್ಚಿಸಿತ್ತಿರುವ ವಿಷಯ ಮಗುವಿನ ಸುರಕ್ಷತೆಯ ಬಗ್ಗೆ.ವಿಷಯಾಂತರ ಮಾಡುವುದು ಬೇಡ.ಹನುಮಂತನ ಬಗ್ಗೆ ಚರ್ಚೆ ಮಾಡಲು ಹೋಗಿ ಬರೀ ಅವನ ಬಾಲದ ಬಗ್ಗೆ ಚರ್ಚೆ ಮಾಡಿದಂತಾಯಿತು!ಇಲ್ಲಿಗೆ ಈ ಚರ್ಚೆಮುಗಿಸೋಣ.ನಮಸ್ಕಾರ.
ಕೃಷ್ಣಮೂರ್ತಿಯವರೆ...
ReplyDeleteನಿಜ ಆ ವಯಸ್ಸಿನ ಮಕ್ಕಳನ್ನು ಬಹಳ ಜಾಗ್ರತೆಯಾಗಿ ನೋಡಿಕೊಳ್ಳ ಬೇಕು...
ನನ್ನ ಪರಿಚಯದವರ ಮಗುವೊಂದು ಮೂಗಿನಲ್ಲಿ ಮಲ್ಲಿಗೆ ಮೊಗ್ಗು ಸಿಕ್ಕಿಸಿಕೊಂಡು ಬಿಟ್ಟಿತ್ತು...
ಅದು ಹಳ್ಳಿಯಾದ್ದರಿಂದ ಬಹಳ ಕಷ್ಟವಾಯಿತು...
ಕೊನೆಗೆ ಪಟ್ಟಣಕ್ಕೆ ಕರೆದುಕೊಂಡು ಹೋಗಿ ತೆಗೆಸಿದರು...
ನಿಮ್ಮ ಅನುಭವಗಳನ್ನು ಇನ್ನಷ್ಟು ಬರೆಯಿರಿ...
ಧನ್ಯವಾದಗಳು...
ಒಳ್ಳೇ ಲೇಖನ. ಪೇಷೆಂಟ್ ಗಳಿಂದ ನಾವು ತುಂಬಾ ಕಲಿಯುತ್ತೇವೆ!!!೬-೭ ವರ್ಷದ ಚಿಕ್ಕ ಮಗುವಿನ ಅರ್ದಂಬರ್ದ ತುಂಡಾದ ಬೆರಳುಗಳನ್ನ ನೋಡಿದ ಮೇಲೆ ಅಪ್ಪಿತಪ್ಪಿ ಕತ್ತಿಲಿ ಆತ ಆಡಬೇಡಿ ಎಂದು ಮಕ್ಕಳಿಗೆ ತಾಕೀತು ಮಾಡಿದೆ.
ReplyDelete"maternity leave "-ಬಗ್ಗೆ.ಒಂದೆರಡು ವರ್ಷದ ಹಿಂದೆ ನ್ಯಾಷನಲ್ ಗಿಯಾಗ್ರಾಫಿಕ್ ಪುಸ್ತಕದಲ್ಲಿ ಮ್ಯಾಪ್ ಸಹಿತ ಒಂದು ಪುಟದ ಲೇಖನ ಓದಿದ ನೆನಪು.ದಾರಾಳ maternity leave ಕೊಡುವ ದೇಶಗಳಲ್ಲಿ ನಮ್ಮ ಭಾರತವೂ ಒಂದು!!! ಅತಿ ಜುಗ್ಗತನ ತೋರಿಸುವ ದೇಶಗಳೆಂದರೆ ಅಮೇರಿಕ ಮತ್ತು ಆಸ್ಟ್ರೇಲಿಯ!!!!!
ಡಾಕ್ಟ್ರೇ,
ReplyDeleteನಿಮ್ಮ ಲೇಖನ ಓದಿ ಮೊದಲಿಗೆ ಭಯವಾಯಿತು. ಮಕ್ಕಳ ಬಗ್ಗೆ ಎಷ್ಟು ಗಮನವಿಟ್ಟರೂ ಅವರ ತುಂಟಾಟದಿಂದ ಏನಾದರೂ ಒಂದು ತೊಂದರೆಗಳು ಉಂಟಾಗಿಬಿಡುತ್ತವೆ. ನನ್ನ ಬಾಲ್ಯದಲ್ಲಿ ಮನೆಯ ಸೂರಿಗೆ ಜೋತುಬಿದ್ದು ಅಯಾತಪ್ಪಿ ನನ್ನ ಎಡಗೈ ಮುರಿದುಕೊಂಡಿದ್ದ ಘಟನೆ ನೆನಪಾಯಿತು...
abbha... enta kelasavagi hogide... estu husharagiddaroo saladu..
ReplyDeletedhanyavadagaLu sir...
ಡಾಕ್ಟರ್,
ReplyDeleteನಿಜಕ್ಕೂ ಒಳ್ಳೆಯ ಮಾಹಿತಿ ಹಾಗೂ ಎಚ್ಚರಿಕೆ ಕೊಟ್ಟಿದ್ದೀರಿ.
ಚಿಕ್ಕ ಮಕ್ಕಳನ್ನು ಸ್ವಲ್ಪ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಪ್ರತಿ ಕ್ಷಣವೂ, ಎಚ್ಚರಿಕೆ ವಹಿಸಬೇಕಾಗುತ್ತದೆ.ಸ್ವಲ್ಪ ದೊಡ್ಡ ಮಕ್ಕಳಿಗೆ ಆಗಾಗ ಸುತ್ತಮುತ್ತಲಿನ, ಪ್ರತಿದಿನ ಬಳಸುವ ನೋಡುವ ವಸ್ತುಗಳ ಬಗ್ಗೆ ಏನು ಯಾಕೆ ಹೇಗೆ ಎ೦ಬ ವಿಚಾರಗಳ ಬಗ್ಗೆ ತಿಳುವಳಿಕೆ ಕೊಡುತ್ತಿರಬೇಕು.
ನಮ್ಮ ಎದುರು ಮನೆಯಲ್ಲಿ ಎರಡು ವರ್ಷದ ಮಗುವನ್ನು ಆಟಿಕೆ ಸಾಮಾನುಗಳನ್ನು ಕೊಟ್ಟು ಆಡಲು ಕುಳ್ಳಿರಿಸಿ ಮಗುವಿನ ಅಮ್ಮ ಸ್ನಾನಕ್ಕೆ ಹೋದಳು.ಎರಡೆ ನಿಮಿಷಗಳಲ್ಲಿ ಅಮ್ಮಾ ಎನ್ನುತ್ತಾ ಆ ಮಗು ಬಚ್ಚಲಿನ ಬಾಗಿಲ ಬಳಿನಿ೦ತು ಹೊರಗಿನಿ೦ದ ಚಿಲಕ ಸರಿಸಿ ಚಿಲಕ ಹಾಕಿಬಿಟ್ಟಳು.ಅಮ್ಮ ಬಚ್ಚಲಿನ ಒಳಗಿನಿ೦ದ ಎಷ್ಟೇ ಹೇಳಿದರೂ ಚಿಲಕ ಹೇಗೆ ತೆಗೆಯಬೇಕೆ೦ದು ಮಗುವಿಗೆ ತಿಳಿಯದು.ಜೋರಾಗಿ ಅಳಲು ಶುರುಮಾಡಿದಳು.ಅಮ್ಮ ಕಿಡಕಿಯಿ೦ದ ಪಕ್ಕದ ಮನೆಯವರನ್ನು ಕರೆದು ಮಗುವಿನ ಅಪ್ಪನಿಗೆ ಫೋನ್ ಮಾಡಿಸಿ ಅವರು ಬ೦ದರು. ಡೋರ್ ಲೋಕ್ ಸಿಸ್ಟಮ್ ಆದ್ದರಿ೦ದ ಅವರ ಬಳಿ ಇನ್ನೊ೦ದು ಮನೆಯ ಕೀಲಿ ಯಾವಾಗಲೂ ಇರುತ್ತಿತ್ತು ಅದರಿ೦ದ ಬಾಗಿಲು ತೆಗೆದು ಒಳ ಬ೦ದು ಬಚ್ಚಲಿನ ಚಿಲಕ ತೆಗೆದರು ಇಷ್ಟೆಲ್ಲಾ ನಡೆಯುವ ಹೊತ್ತಿಗೆ ಒ೦ದು ತಾಸಿನ ಮೇಲಾಗಿತ್ತು ಮಗು ಅತ್ತು ಅತ್ತು ಜ್ವರ ಬರುವಷ್ಟಾಗಿತ್ತು.
ನನ್ನ ಮಕ್ಕಳು ಚಿಕ್ಕವರಿರುವಾಗ ಅವರಿಗೆ ಸಿಕ್ಕುವ ಎಲ್ಲಾ ಚಿಲಕಗಳಿಗೂ ಹಾಕಲು ಬಾರದ೦ತೆ ಹಗ್ಗದಿ೦ದ ಕಟ್ಟಿಟ್ಟಿದ್ದೆ.ನ೦ತರ ಆ ಮಗುವಿನ ಅಮ್ಮನಿಗೂ ಹಾಗೆಯೇ ಮಾಡಲು ತಿಳಿಸಿದೆ.
ವ೦ದನೆಗಳು.
ಎಲ್ಲಾ ಚಿಕ್ಕಮಕ್ಕಳಿಗೂ ತುಂಟತನ ಒಂದು ಬಳುವಳಿ...ಯಾವ ಕ್ಷಣದಲ್ಲಿ ಏನು ಮಾಡುತ್ತಾರೆ ಎಂದು ಹೇಳುವದು ಸಾದ್ಯವಿಲ್ಲ..ದೊಡ್ಡವರು ಎಷ್ಟು ಎಚ್ಚರದಲ್ಲಿ ಇದ್ದರೂ ಆಕಸ್ಮಿಕಗಳು ನಡೆದೇ ಬಿಡುತ್ತವೆ..ನಿಮ್ಮ ಅನುಭವ ಕಥನ ಇನ್ನೂ ಕೆಲವು ಸಹಬ್ಲಾಗಿಗರ ಅನುಭವಗಳು ಬಿಚ್ಚಿಕೊಳ್ಳುವಂತೆ ಮಾಡಿದೆ.
ReplyDelete@ಪ್ರಕಾಶ್ ಹೆಗ್ಡೆ,@ಸುಬ್ರಮಣ್ಯ ಮಾಚಿಕೊಪ್ಪ,@ಶಿವು,@ಮನಸು ಮೇಡಂ,@ಮನಮುಕ್ತಾ ಮೇಡಂ,@ನಾರಾಯಣ್ ಭಟ್;ಸಾಮಾನ್ಯವಾಗಿ ಐದು ವರ್ಷದ ಒಳಗಿನ ಮಕ್ಕಳು ಏನೋ ಒಂದು ಅವಘಡಗಳನ್ನು ಮಾಡಿಕೊಳ್ಳುತ್ತವೆ.ಕಿವಿಯಲ್ಲಿ ಅಥವಾ ಮೂಗಿನಲ್ಲಿ ಮಣಿಯನ್ನೋ,ಶೇಂಗಾ ಬೀಜವನ್ನೋ,ಬಳಪವನ್ನೋ ಹಾಕಿಕೊಳ್ಳುವುದು ಸಾಮಾನ್ಯ.ಮೊನ್ನೆ ರಾತ್ರಿ ಮೂರುವರ್ಷದ ಹುಡುಗಿಯ ಕಿವಿಯಿಂದ ಗೋಧಿಯ ನಾಲಕ್ಕು ಕಾಳುಗಳನ್ನು ತೆಗೆಯಬೇಕಾಯಿತು.ಆದರೆ ಇಲ್ಲಿ ಬರೆದ ಘಟನೆ ಅಪರೂಪದ್ದು.ಆ ಮಗು ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾಗ ಇಂತಹ ವಸ್ತುವೊಂದನ್ನು ನುಂಗಿರಬಹುದೆಂಬ ಕಲ್ಪನೆಯೂ ನನಗಿರಲಿಲ್ಲ.ಹಲವಾರು ಮನೆಗಳಲ್ಲಿ ಮಾತ್ರೆಗಳನ್ನು,ಕ್ಯಾಪ್ಸೂಲ್ಗಳನ್ನೂ ಬಳಸಿ ಅದರ ಮೇಲಿನ ಕವರ್ ಗಳನ್ನು ಎಲ್ಲೆಂದರಲ್ಲಿ ಬಿಸಾಡಿರುವುದನ್ನು ನೋಡಿದ್ದೇನೆ.ಇಂತಹ ಘಟನೆ ಮತ್ತೆಲ್ಲೂ ಮರುಕಳಿಸಿದಿರಲಿ ,ಮಕ್ಕಳಿರುವ ಮನೆಯವರಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಲಿ ಎನ್ನುವುದು ಈ ಬರಹದ ಉದ್ದೇಶ. ನಲ್ಮೆಯಿಂದ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.
ReplyDeleteಮಗು ಇರುವ ಮನೆಯವರು ಖಂಡಿತಾ ಓದಬೇಕಾದ ಲೇಖನವಿದು .ಹೌದು ತಾಯಿ ಅಷ್ಟೇ ಅಲ್ಲ ಮನೆಯಲ್ಲಿರುವ ಎಲ್ಲಾ ದೊಡ್ಡವರೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಕ್ಯಾಪ್ಸಲ್ಗಳು, ಮಾತ್ರೆಗಳು, ಸೂಜಿ,ಸೇಫ್ಟಿ ಪಿನ್ನುಗಳು, ಆಯಿಂಟ್ಮೆಂಟ್ ಗಳು,ತಲೆ ಪಿನ್ನುಗಳು,ಇಂತಹ ಹಲವಾರು ಪದಾರ್ಥಗಳು ಮಕ್ಕಳ ಕೈಗೆ ಸಿಗದಂತೆ ಎಚ್ಚರ ವಹಿಸಬೇಕು. ಕಣ್ತೆರೆಸುವ ಲೇಖನ ಡಾಕ್ಟ್ರೆ ನಿಮಗೆ ಧನ್ಯವಾದಗಳು.
ReplyDeleteವೈದ್ಯಮಿತ್ರರೇ, ವೈದ್ಯನಲ್ಲದ ನನ್ನ ಸ್ವಾನುಭವದ ಕಥೆಯೊಂದನ್ನು ಕೇಳಿ:
ReplyDeleteಎರಡೂವರೆ ವರ್ಷಗಳ ಹಿಂದೆ ನನ್ನ ಮಗನಿಗೆ ಎರಡು ವರ್ಷ ವಯಸ್ಸಾಗಿತ್ತು. ಸ್ನೇಹಿತರೂ ಅವರೂ ಇವರೂ ಅಂತ ಕೆಲವರು ಆಟಿಕೆಗಳನ್ನು ಕೊಟ್ಟಿದ್ದರು. ಅವುಗಳ ಪೈಕಿ ಚೀನಾ ತಯಾರಿಕೆಯ ಆಟಿಕೆಯ ಮೊಬೈಲ್ ಕೂಡ ಒಂದು. ಚಳಿಗಾಲದ ಒಂದು ಸಂಜೆ ೫ ಘಂಟೆಗೆ ನನಗೆ ಹೆಂಡತಿ ಜಂಗಮದೂರವಾಣಿ ಕರೆಮಾಡಿದಳು. " ಮಗ ಆಡುತ್ತಾ ಆಟಿಕೆಯ ಮೊಬೈಲ್ ಬಿಡಿಸಿ ಅದರಲ್ಲಿರುವ ಸೆಲ್ಲುಗಳಲ್ಲಿ ಒಂದನ್ನು ಬಾಯಲ್ಲಿ ಪೆಪ್ಪರಮಿಂಟಿನಂತೇ ಚೀಪುತ್ತಿದ್ದ. ಇನ್ನೊಂದು ಸೆಲ್ಲಿಗಾಗಿ ಹುಡುಕಿದರೆ ಸಿಗಲಿಲ್ಲ. ಅದನ್ನು ಆತನೇ ನುಂಗಿರಬೇಕು, ಅದು ವಿಷವಲ್ಲವೇ ? ಈಗ ಏನುಮಾಡೋಣ ? " .
ನಾನು ತಕ್ಷಣಕ್ಕೆ ಪರಿಚಿತ ವೈದ್ಯರಿಗೆಲ್ಲಾ ಫೋನಾಯಿಸಿದೆ. ಪರಿಹಾರ ಕೇಳಿದೆ. ಕಚೇರಿಯ ಕೆಲಸದಲ್ಲಿ ಸುಮಾರು ೨೫ ಕೀ.ಮೀ. ದೂರದಲ್ಲಿದ್ದುದರಿಂದ ಶೀಘ್ರ ಮನೆಗೆ ಬರುವುದೂ ಆಗುತ್ತಿರಲಿಲ್ಲ. ನಿಕ್ಕೆಲ್ ಕ್ಯಾಡ್ಮಿಯಮ್ ಸೆಲ್ಲೆಂದರೆ ಅದು ಸಯನೈಡ್ ಇದ್ದಂತೇ, ಎಲ್ಲಾದ್ರೂ ಹೊಟ್ಟೆಯಲ್ಲಿ ಲೀಕಾದರೆ ಮಗುವಿನ ಸಾವು ಖಚಿತ ಎಂಬುದು ನನಗೆ ಅನಿಸಿದ್ದು, ಆದರೂ ಪರಮಾತ್ಮನಲ್ಲಿ ಪ್ರಾರ್ಥಿಸಿ ಹುಟ್ಟಿಸಿದ ಅವನಿಗೇ ಜವಾಬ್ದಾರಿಯನ್ನೂ ವಹಿಸಿದೆ. ವೈದ್ಯರು ಯಾರಿಗೂ ಇಂತಹ ಘಟನೆಯ ಬಗ್ಗೆ ಅನುಭವ ಇರಲಿಲ್ಲ. ಎಲ್ಲರೂ ಎಲ್ಲಾದರೂ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎನ್ನುವವರೇ. ನಾನು ಮನೆಗೆ ಮರಳಿದಾಗ್ ರಾತ್ರಿ ೮ ಘಂಟೆ. ಮಡದಿಗೆ ವಿಷದ ತೀವ್ರತೆಯ ಬಗ್ಗೆ ನಾನು ಹೇಳಲಿಲ್ಲ, ಆದರೆ ನನ್ನೊಳಗಿನ ಭಾವನೆ ಮುಖದಲ್ಲಿ ಗೊತ್ತಾಗುತ್ತಿತ್ತು ಅನಿಸುತ್ತದೆ ಅವಳು ಕೇಳುತ್ತಲೇ ಇದ್ದಳು. ನಮ್ಮ ಹತ್ತಿರ ವರದ ಹಳ್ಳಿಯ ಶ್ರೀಧರ ಸ್ವಾಮಿಗಳ ಪ್ರಸಾದ ಮಂತ್ರಾಕ್ಷತೆಯಿತ್ತು--ಅದನ್ನೇ ಮಗುವಿಗೆ ತಿನ್ನಿಸಿ ರಾತ್ರಿಯಿಡೀ ಜಾಗರಣೆಮಾಡಿದಂತೇ ಕಾಲಕಳೆದೆವು. ಬೆಳಿಗ್ಗೆ ೯ ಗಂಟೆಯ ವರೆಗೂ ಮನದ ತೂತುಬಿದ್ದ ಹಡಗು ಚಿಂತೆಯ ಸಾಗರದಲ್ಲಿ ಹೊಯ್ದಾಡುತ್ತಿತ್ತು. ಮಗನಿಗೆ ಕಿತ್ತಳೆ ಹಣ್ಣು ತಿನ್ನಿಸಿ ಜಾಸ್ತಿ ನೀರು ಕುಡಿಸಿದ್ದೆವು. ಅಂತೂ ದೇವರು ದೊಡ್ಡವನು, ಬೆಳಿಗ್ಗೆ ೯ ಘಂಟೆಯ ವೇಳೆಗೆ ಮಗ ಮಲವಿಸರ್ಜನೆ ಮಾಡಿದ. ಅದರಲ್ಲಿ ಒಂದು ಭಾಗ ತುಂಬಾ ಕಪ್ಪಗಿತ್ತು. ಅದನ್ನು ಕೆದಕಿದಾಗ ಸೆಲ್ಲು ಕಂಡುಬಂತು. ಸೆಲ್ಲಿನ ಸುತ್ತ ಕಿತ್ತಳೆಯ ದ್ರವ ಹರಿದ ಪರಿಣಾಮ ಅದು ಕಪ್ಪಗಾಗಿತ್ತು.
ಇಂತಹ ಹಲವಾರು ಘಟನೆಗಳು ತಾವೇ ಹೇಳಿದ ಹಾಗೇ ಸರ್ವೇ ಸಾಮಾನ್ಯ, ಆದರೂ ಗೊತ್ತಿದ್ದೂ ಗೊತ್ತಿದ್ದೂ ಕೆಲವೊಮ್ಮೆ ನಾವು ಮರೆತೇ ಹೋಗುತ್ತೇವೆ. ಅನುಭವಕಥನ ಚೆನ್ನಾಗಿದೆ, ತಮ್ಮ ಅನುಭವಗಳ ಪುಸ್ತಕವೊಂದು ಹೊರಬರಲಿ, ಧನ್ಯವಾದಗಳು ಮತ್ತು ಶುಭಹಾರೈಕೆಗಳು.