Friday, October 29, 2010

"ಉರುಕುಂದಪ್ಪಾ ! ನಿನ್ನ ಮರೆಯೋದು ಹೆಂಗಪ್ಪಾ?"(ಬ್ಲಾಗಿನ ನೂರನೇ ಬರಹ )

ಒಂದು ದಿನ ಬೆಳಿಗ್ಗೆ ಸುಮಾರು ಹನ್ನೊಂದು ಗಂಟೆ ಸಮಯ.O.P.D.ಯಲ್ಲಿ ರೋಗಿಗಳನ್ನು ನೋಡುತ್ತಿದ್ದೆ.ನಮ್ಮ ಆಸ್ಪತ್ರೆಯ ಅಟೆಂಡರ್ ತಾಯಪ್ಪ ಒಳಬಂದು ಮಾಮೂಲಿಯಂತೆ ತಲೆ ಕೆರೆಯುತ್ತಾ ನಿಂತ.'ಏನು ತಾಯಪ್ಪಾ'ಎಂದೆ.ಅದಕ್ಕವನು 'ಊರಿಂದ ನಮ್ಮಣ್ಣ ಬಂದಾನ್ರೀ ಸರ್' ಎಂದು ಹಲ್ಲುಬಿಟ್ಟ. ಊರಿನಿಂದ ಸಂಬಂಧಿಗಳನ್ನು ಆಸ್ಪತ್ರೆಗೆಕರೆತರುವುದುಮಾಮೂಲಾಗಿತ್ತು.'ಒಳಗೆ ಕರಿ'ಎಂದೆ.
ಸುಮಾರು 65 ವರ್ಷಗಳ ಕೃಶವಾದ ಶರೀರದ ವ್ಯಕ್ತಿಯೊಬ್ಬ ಒಳಗೆ ಬಂದು ,ತಲೆಗೆ ಕಟ್ಟಿದ ರುಮಾಲನ್ನು ಬಿಚ್ಚಿ ಕಂಕುಳಿನಲ್ಲಿ ಸಿಗಿಸಿಕೊಂಡು ,ಕೈಕಟ್ಟಿ ,ನಿಂತ.'ಏನಪ್ಪಾ ನಿನ್ನ ಹೆಸರು'ಎಂದೆ. 'ನಾನ್ರೀ ಎಕಲಾಸ್ ಪುರದ ಉರುಕುಂದಪ್ಪ' ಎಂದ.ಹೆಸರು ಕೇಳಿ ನನಗೆ ಒಂದು ನಿಮಿಷ ಶಾಕ್ ಹೊಡೆದಂತಾಗಿತ್ತು!ಮಾತು ಹೊರಡದೆ ಮೌನವಾಗಿ ಕುಳಿತೆ.ಆತನೇ ಮಾತು ಮುಂದುವರೆಸಿ 'ನೀವು ಆಚಾರ್ ಸಾಹೇಬರ
ಎರಡನೇ ಮಗ, ಅಲ್ಲೇನ್ರೀ ?'ಎಂದ.ನನ್ನ ತಂದೆಯ ಹೆಸರನ್ನು ಹೇಳಿದ್ದಲ್ಲದೇ,ನನ್ನನ್ನೂ ಗುರುತು ಹಿಡಿದಿದ್ದ! ಅನುಮಾನವೇ ಇಲ್ಲ !ಅದೇ ವ್ಯಕ್ತಿ .ನನ್ನ ಎದೆ ಬಡಿತ ಜೋರಾಯಿತು! ಸುಮಾರು ಮೂವತ್ತು ವರ್ಷಗಳ ನಂತರ ಅವನನ್ನು ಭೇಟಿಯಾಗುತ್ತಿದ್ದೆ .ಆದರೂ ಖಾತ್ರಿ ಪಡಿಸಿಕೊಳ್ಳಲು 'ಈಗ ಎಲ್ಲಿ ಕೆಲಸ ಮಾಡುತ್ತಿದ್ದೀಯ ಉರುಕುಂದಪ್ಪ?'ಎಂದು ಕೇಳಿದೆ.ಅದಕ್ಕವನು' ಈಗೆಲ್ಲೂ ಕೆಲಸಕ್ಕೆ ಹೊಗೂದಿಲ್ರೀ ಸಾಹೇಬ್ರೆ.ನಿಮ್ಮ ಅಪ್ಪಾವ್ರ ಕೆಳಗೆ ಅಗಸೀಹಾಳ್ ಫಾರಂ ನಲ್ಲಿ ಕೆಲಸ ಮಾಡ್ತಾ ಇದ್ದೇರಿ .ನೀವೆಲ್ಲಾ ಸಣ್ಣಾವರಿದ್ದಾಗ ಬಾವ್ಯಾಗೆ ಈಸಾಡೋಕೆ ಬರೋವಾಗ ಅಲ್ಲೇ ತೋಟದಾಗ ಕೆಲ್ಸಾ ಮಾಡಿಕೋತ ಇರುತ್ತಿದ್ದೆನಲ್ರೀ ?ಮರ್ತೀರೇನ್ರೀ----ಸಾಹೇಬ್ರೆ?'ಎಂದ.ಅದನ್ನೆಲ್ಲಾ ಹೇಗೆ ಮರೆಯೋಕೆ ಸಾಧ್ಯ?ಅದರಲ್ಲೂ ,ಈ ವ್ಯಕ್ತಿಯನ್ನು ಜೀವಮಾನವಿಡೀ ಮರೆಯೋಕೆ ಸಾಧ್ಯವೇ !!?ನನ್ನ ಗಂಟಲು ಕಟ್ಟಿತು.ಅವನ ಕೈ ಹಿಡಿದು 'ಕೂತ್ಕೋ ಉರುಕುಂದಪ್ಪ 'ಎಂದೆ .'ಐ ------ಬ್ಯಾಡ್ರೀ ಸಾಹೇಬರೇ,ನಿಂತಕಂಡಿರ್ತೀನ್ ಬಿಡ್ರೀ----,ನಮ್ ದೊಡ್ ಸಾಹೇಬರ ಮಗ "ದಾಗ್ದಾರ್ ಸಾಬ್" ಅಗ್ಯಾನೆ ಅಂತ ತಿಳಿದು ಕುಶಿ ಆತ್ರೀ .ನೋಡಾಕ್ ಬಂದೀನ್ರೀ'ಎಂದ.ಮನಸ್ಸು ಒಂದು ಕ್ಷಣ ನನ್ನ ಬಾಲ್ಯದ ದಿನಗಳಿಗೆ ಜಾರಿತು. ನಮ್ಮ ತಂದೆ ರಾಯಚೂರಿನ ಹತ್ತಿರವಿರುವ ಅಗಸೀಹಾಳ ಎಂಬ ಹಳ್ಳಿಯ ಪಕ್ಕದಲ್ಲಿದ್ದ 'ಕೃಷಿಸಂಶೋಧನಾ ಕೇಂದ್ರ' ದಲ್ಲಿ ಕೆಲಸ ಮಾಡುತ್ತಿದ್ದರು.ಅಲ್ಲಿ ತೋಟದಲ್ಲಿ ದೊಡ್ಡದೊಂದು ಬಾವಿ ಇತ್ತು.ಅದು ಮಾಮೂಲು ಬಾವಿಗಳಂತೆ ನೀರು ಸೇದುವ ಬಾವಿಯಾಗಿರಲಿಲ್ಲ.ಮೆಟ್ಟಿಲು ಗಳಿದ್ದ ದೊಡ್ಡ ಬಾವಿ.ಸುಮಾರು ಮೂವತ್ತು ಅಡಿ ಅಗಲ ,ನಲವತ್ತು ಅಡಿ ಆಳವಿತ್ತು .ಅದಕ್ಕೆ ಏತ ಕಟ್ಟಿ ತೋಟಕ್ಕೆ ನೀರು ಬಿಡುತ್ತಿದ್ದರು.ನನ್ನ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದು ಬೇಸಿಗೆ ರಜೆ ಬಂದಿತ್ತು.ಎಲ್ಲಾ ಹುಡುಗರ ಜೊತೆ ನಾನೂ ಬಾವಿಗೆ ಈಜು ಕಲಿಯಲು ಹೋಗುತ್ತಿದ್ದೆ.ಇನ್ನೂ ಅಷ್ಟು ಸರಿಯಾಗಿ ಈಜು ಬರುತ್ತಿರಲಿಲ್ಲ.ಒಂದು ಮಧ್ಯಾಹ್ನ ನಾನು ಬಾವಿಯಲ್ಲಿ ಈಜುತ್ತಿರಬೇಕಾದರೆ ,ಮೇಲಿನಿಂದ ಹಾರಿಬಂದ ಹುಡುಗನೊಬ್ಬ ನನ್ನ ಮೇಲೆಯೇ ಡೈವ್ ಹೊಡೆದ.ಈಜು ಬಾರದ ನಾನು,ಸೀದಾ ಬಾವಿಯ ತಳ ಸೇರಿದೆ.ನನಗೆ ಅರೆ ಬರೆ ಎಚ್ಚರ.ಯಾರೋ ನೀರಿನೊಳಗೆ ಬಂದು ನನ್ನ ಜುಟ್ಟು ಹಿಡಿದು ಮೇಲಕ್ಕೆ ಎಳೆಯುತ್ತಿದ್ದರು.ನಾನು ಕೈ ಕಾಲು ಬಡಿಯುತ್ತಾ ಅರೆ ಪ್ರಜ್ಞಾವಸ್ಥೆಯಲ್ಲಿ ಒದ್ದಾಡುತ್ತಿದ್ದೆ.ನೀರಿನ ಬುಳು ಬುಳು ಶಬ್ದ ಕೇಳಿಸುತ್ತಿತ್ತು.ಪೂರ್ಣ ಎಚ್ಚರವಾಗಿ ಕಣ್ಣು ಬಿಟ್ಟಾಗ,ಬಾವಿಯ ದಂಡೆಯ ಮೇಲೆ ಮಲಗಿದ್ದೆ.ಯಾರೋ ಎದೆ ,ಹೊಟ್ಟೆ ,ಅಮುಕಿ ನೀರು ಹೊರಗೆ ತೆಗೆಯುತ್ತಿದ್ದರು.ಮೂಗಿನಿಂದ,ಬಾಯಿಯಿಂದ ಪಿಚಕಾರಿಯಿಂದ ನೀರು ಚಿಮ್ಮುವಂತೆ ನೀರು ಚಿಮ್ಮುತ್ತಿತ್ತು.ನಾನು ಬಾವಿಯ ನೀರಿನಲ್ಲಿ ಮುಳುಗಿ ಮೇಲೆ ಬರದೇ ಇದ್ದಾಗ,ಯಾರೋಹುಡುಗರು ಅಲ್ಲೇ ತೋಟದಲ್ಲಿ ಕೆಲಸಮಾಡುತ್ತಿದ್ದ ಎಕಲಾಸ್ ಪುರದ ಉರುಕುಂದಪ್ಪನನ್ನು ಕರೆದಿದ್ದರು.ಉರುಕುಂದಪ್ಪ ತೋಟದ ಕೆಲಸ ಮಾಡಿ ,ಮಾಂಸ ಖಂಡಗಳು ಹುರಿಗೊಂಡಿದ್ದ ಬಲವಾದ ಆಳು.ತಕ್ಷಣವೇ ಬಾವಿಗೆ ಹಾರಿದ ಉರುಕುಂದಪ್ಪ,ಬಾವಿಯ ತಳದಿಂದ ನನ್ನ ಜುಟ್ಟು ಹಿಡಿದು ಮೇಲೆ ಎಳೆದು ತಂದು ನನ್ನ ಜೀವ ಉಳಿಸಿದ್ದ!ಅದೇ ಉರುಕುಂದಪ್ಪ ಈಗ ಮೂವತ್ತು ವರ್ಷಗಳ ನಂತರ ವಯಸ್ಸಿನಿಂದ,ಕುಡಿತದಿಂದ ಕೃಶ ಕಾಯನಾಗಿದ್ದ .ಬಹಳ ಬಲವಂತ ಮಾಡಿದ ಮೇಲೆ ರೋಗಿಗಳು ಕೂರುವ ಸ್ಟೂಲಿನ ಮೇಲೆ ಕುಳಿತ.'ಏನಾನ ತ್ರಾಸು ಇದೆಯಾ ಉರುಕುಂದಪ್ಪಾ?ಎಂದೆ.'ಹೌದ್ರೀ ಸಾಹೇಬ್ರೇ----,ಭಾಳಾ ನಿತ್ರಾಣ ಆಗೈತ್ರೀ.ಕೈ ಭಾಳಾ ಹರೀತೈತ್ರೀ ---'ಎಂದ.ನನ್ನ ಜೀವವನ್ನು ಉಳಿಸಿದ ಆ ಕೈಗಳನ್ನು ಮುಟ್ಟಿ ನೋಡಿದೆ. ಅವುಗಳಿಗೆ ಮನಸ್ಸಿನಲ್ಲೇ ನಮಸ್ಕರಿಸಿದೆ.'ಆ ಕೈಗಳು ಅಂದು ಸಹಾಯ ಮಾಡದಿದ್ದರೆ ನಾನೆಲ್ಲಿ ಬದುಕಿರುತ್ತಿದ್ದೆ!'ಎನಿಸಿ ಮನದಲ್ಲಿ ಧನ್ಯತಾ ಭಾವ ಮೂಡಿತ್ತು .'ಎನಿತು ಜನುಮದಲಿ, ಎನಿತು ಜೀವರಿಗೆ ,ಎನಿತು ನಾವು ಋಣಿಯೋ!ನಿಜದಿ ನೋಡಿದರೆ ,ಬಾಳು ಎಂಬುದು ,ಋಣದ ರತ್ನ ಗಣಿಯೋ!'ಎಂಬ ಕವಿಯ ವಾಣಿ ನೆನಪಾಯಿತು.ಅವನನ್ನು ಅಮೂಲಾಗ್ರವಾಗಿ ಪರೀಕ್ಷೆ ಮಾಡಿ ,ಒಂದು ತಿಂಗಳಿಗಾಗುವಷ್ಟು ಮಾತ್ರೆ ,ಟಾನಿಕ್ಕುಗಳನ್ನು ಕೊಡಿಸಿದೆ.ಮತ್ತೇನಾದರೂ ಬೇಕಾದರೆ ನನ್ನನ್ನು ಬಂದು ಕಾಣುವಂತೆ ಹೇಳಿದೆ.ಅವನ ಮುಖದಲ್ಲಿ ,ಕೃತಜ್ಞತಾ ಭಾವವಿತ್ತು.ನಾನು ಜೀವನ ಪರ್ಯಂತ ಸ್ಮರಿಸಿ,ನಮಿಸಬೇಕಾದ ನನ್ನ ಜೀವ ರಕ್ಷಕ,ನನಗೇ ಎರಡೆರಡು ಸಲ ನಮಸ್ಕಾರ ಮಾಡಿ ಹೋದ!ಮನಸ್ಸಿನಲ್ಲೇ 'ಎಕಲಾಸ್ ಪುರದ ಉರುಕುಂದಪ್ಪಾ, ನಿನ್ನನ್ನು ಮರೆಯೋದು ಹೆಂಗಪ್ಪಾ!'ಎಂದು ಕೊಂಡೆ.(ಇದು ನನ್ನ ಬ್ಲಾಗಿನ ನೂರನೇ ಬರಹ.ಓದಿ ಪ್ರೋತ್ಸಾಹಿಸಿದ ಎಲ್ಲಾ ಸಹ ಬ್ಲಾಗಿಗರಿಗೂ,ಎಲ್ಲಾ ಓದುಗರಿಗೂ ನಮನಗಳು)

46 comments:

 1. ನಿಮ್ಮ ನೂರನೇ ಬರಹ ವಾವ್ ಸೂಪರ್ . ಉರುಕುಂದಪ್ಪ ಅವರಿಗೆ ನನ್ನದೂ ಒಂದು ಸಲಾಂ. ಒಂದು ಅಮೂಲ್ಯ ಜೀವ ಉಳಿಸಿನಮ್ಮ ನೆಚ್ಚಿನ ಡಾಕ್ಟರ್ ಅನ್ನು ನಮಗೆ ಕೊಡುಗೆ ಯಾಗಿ ನೀಡಿದ್ದಾರೆ.ಅವರ ಆರೋಗ್ಯ ಸುಧಾರಿಸಲಿ. ಸಣ್ಣ ವಯಸ್ಸಿನಲ್ಲಿ ನಾನೂ ಕೂಡ ಇಂತಹ ಬಾವಿಗಳಲ್ಲಿ ಈಜಲು ಹೋಗುತ್ತಿದ್ದ ನೆನಪು ಮೂಡಿತು. ಸಿಕ್ಸರ್ ಭಾರಿಸಿದ್ದೀರಿ ಡಾಕ್ಟರ್ ಸಾರ್ ನಿಮಗೆ ಅಭಿನಂದನೆಗಳು

  ReplyDelete
 2. ಬ್ಲಾಗ್ ಬರಹದ ಶತಕ ...ಅಭಿನ೦ದನೆಗಳು.
  ನಿಮ್ಮನ್ನು ಕಾಪಾಡಿದ ಉರುಕು೦ದಪ್ಪನವರಿಗೂ ಅನೇಕ ಜನರ ರೋಗಶಮನ ಮಾಡುವ ನಿಮಗೆ, ಇಬ್ಬರಿಗೂ ಅನ೦ತ ವ೦ದನೆಗಳು. ನಿಮ್ಮ ಅನುಭವೀ ಬರಹಗಳು ಬಹುಬೇಗ ಮತ್ತೊ೦ದು ನೂರಾಗಲಿ.

  ReplyDelete
 3. ಮನಕಲಕುವ ಬರಹ.
  ಇನ್ನೊಂದು ವಿಚಾರ. ಕಾಮೆಂಟ್ ಮಾಡಿದನಂತರ ವರ್ಡ್ ವೆರಿಫಿಕಶನ್ ತೆಗೆದು ಹಾಕಿ.

  ReplyDelete
 4. ಲೇಖನ ಬಹಳ ಹಿಡಿಸಿತು, ಹೀಗೇ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುತ್ತವೆ, ಅನೇಕ ಕಗಳು ಸಹಾಯ ಮಾಡಿರುತ್ತವೆ, ಕೆಲವೊಮ್ಮೆ ಅವರ ಋಣ ನಾವು ತೀರಿಸಲು ಸಾಧ್ಯವಾಗುವುದಿಲ್ಲ, ಬದುಕುವ ರೇಖೆ ಹಣೆಯಲಿ ಬರೆದಿದ್ದರೆ ರಕ್ಷಕರನ್ನು ಆತನೇ ಕಳಿಸುತ್ತಾನೆ, ಡಾ| ದೇವಿಶೆಟ್ಟಿ ಯವರ ಹತ್ತಿರ ಮದರ್ ತೆರೇಸಾ ಹೇಳಿದ್ದರಂತೆ " ಭಗವಂತ ಅವಸರದಲ್ಲಿ ಜನರನ್ನು ಸೃಷ್ಟಿಮಾಡುತ್ತಾನೆ ಮತ್ತು ಅವರ ಆರೋಗ್ಯಕ್ಕೆ, ರಕ್ಷಣೆಗೆ ನಿಮ್ಮಂತವರನ್ನು ಭೂಮಿಗೆ ಕಳಿಸುತ್ತಾನೆ " ಎಂದು! ಇದು ಸಹಜವೂ ಹೌದು. ಒಂದು ರೈಲು ಓಡುತ್ತಿರುವಾಗ ಅದರಲ್ಲಿ ಆಯುಷ್ಯ ಮುಗಿದವರೂ, ಆಯುಷ್ಯ ಸ್ವಲ್ಪ ಇರುವವರೂ ಮತ್ತು ದೀರ್ಘಾಯುಷ್ಯ ಇರುವವರೂ ಇರುತ್ತಾರೆ.[ದೇವರ ಪುಸ್ತಕದ ಲೆಕ್ಕಾಚಾರ] ಅಪಘಾತವಾದರೆ ಆಯುಷ್ಯ ಮುಗಿದವರು ಹೋಗುತ್ತಾರೆ, ಸ್ವಲ್ಪ ಉಳ್ಳವರು ಕೆಲಕಾಲ ಬದುಕುತ್ತಾರೆ, ದೀರ್ಘ ಕಾಲ ಆಯುಷ್ಯ ಉಳ್ಳವರಿಗೆ ಜಾಸ್ತಿ ಏಟು ಬಿದ್ದಿರುವುದಿಲ್ಲ ! ಶತಕದ ಸರದಾರರಾದ ನಿಮಹೆ ಹೃತ್ಪೂರ್ವಕ ಅಭಿನಂದನೆಗಳು, ನಮಸ್ಕಾರ

  ReplyDelete
 5. ಶತಕದ ವೀರರಿಗೆ ಶುಭಾಶಯಗಳು. ಕಡೆಗೂ ಸಿಕ್ಸರ್ ಬಾರಿಸಿಯೇ ಬಿಟ್ಟಿರಿ. ಬಹಳ ಕುತೂಹಲದಿ೦ದ ಬ್ಲಾಗಿಗರೆಲ್ಲ ಕಾಯುತಿದ್ದೆವು. ಅಭಿನ೦ದನೆಗಳು ಡಾ. ಸರ್.


  ಅನ೦ತ್

  ReplyDelete
 6. ರೋಗಿಗಳಿಗೆ ಪುನರ್ಜನ್ಮ ನೀಡುವ ನೀವು...ನಿಮಗೇ ಮರುಜನ್ಮ ನೀಡಿದ ಉರುಕುಂದಪ್ಪ!..ನಿಮ್ಮ ಅನುಭವ ಕಥನ ಮೈ ನವಿರೇಳುವಂತಿದೆ...ಬ್ಲಾಗ್ ಮೂಲಕ ನಮಗೆ ನೂರು ಬರಹ ಕೊಟ್ಟ ನಿಮಗೆ ಹೃತ್ಪೂರ್ವಕ ಅಭಿನಂದನೆ.

  ReplyDelete
 7. ಗುರುಗಳೆ,
  ನಿಮ್ಮ ಬ್ಲಾಗ್ ಶತಕ ಹೊಡೆದ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು.
  ಜೀವ ಉಳಿಸಿ ಈ ಸರ್ಜನರ ಒಡನಾಟ ಇಂದು ನಮ್ಮೊಂದಿಗರುವಂತೆ ಮಾಡಿದ ಉರುಕುಂದಪ್ಪನಿಗೆ ಶರಣೋ ಶರಣು.......

  ReplyDelete
 8. ನೂರನೆಯ ಬರಹಕ್ಕೆ ಶುಭಾಶಯಗಳು. ಲೇಖನ ತುಂಬ ಚೆನ್ನಾಗಿದೆ.

  ReplyDelete
 9. nooru ,savira-saviravagali.may your tribe increase.nooraneya kanthu nannannoo saha RAICHURINA aa dinagala meluku hakuvante maditu.
  DHANYAVADAGALU.

  ReplyDelete
 10. sir
  kumbaa khushiyaayitu lekhana odi.... ee saari kumbaa meduvaagi, haguravaagi barediddiraa... adaralu bareda vishaya mana taTTItu.... namma jeeve kaapaaDidavara seve maaDO bhaagya ellarigu sigolla... adrallu Doctor ge.....

  century ge abhinandanegalu....

  nanagannisida haage tumbaa fast ( kaDime dinagaLalli) century hoDediddiraa sir...

  munduvariyali nimma saahitya...

  ReplyDelete
 11. ನಿಮ್ಮ ನೂರನೇ ಬರಹಕ್ಕೆ ಅಭಿನ೦ದನೆಗಳು.ಜೀವರಕ್ಷಕನಿಗೆ ರಕ್ಷಣೆ ಕೊಟ್ಟು,ನೆನಪಿಸಿಕೊ೦ಡಿದ್ದೀರಿ.ಮನ ತು೦ಬಿ ಬ೦ತು.

  ReplyDelete
 12. ನೂರನೇ ಬರಹ, ನೂರು ಅನುಸರಣೆದಾರರ ಬೆ೦ಬಲ, ಡಬ್ಬಲ್ ಧಮಾಕಾ, ಎರಡೂ ಏಕಕಾಲಕ್ಕೆ ಘಟಿಸಿದೆ. ಆತ್ಮೀಯ ಅಭಿನ೦ದನೆ. ಜೀವರಕ್ಷಕನ ಬಗ್ಗೆ ಬರೆದ ಲೇಖನವೂ ಆಪ್ತವಾಗಿದೆ. ಇನ್ನಷ್ಟು ಬರೆಯಿರಿ. ನಿಮ್ಮ ಅನುಭವ ಗಳು ಪುಸ್ತಕ ರೂಪದಲ್ಲಿ ಬರಬೇಕು.

  ReplyDelete
 13. ಸರ್,
  ಸೆಂಚುರಿಯನ್ನು ಸೆಂಟಿಮೆಂಟಿನಿಂದ ಬಾರಿಸಿರುವಿರಿ. ಅಭಿನಂದನೆಗಳು.

  ReplyDelete
 14. ನಿಮ್ಮ ಬರಹ ಶತಕ ಬಾರಿಸಿದಕ್ಕೆಅಭಿನಂದನೆಗಳು.
  ಉರುಕುಂದಪ್ಪ ಅವರಿಗೂ ನನ್ನ ನಮನಗಳು ಸರ್..

  ReplyDelete
 15. ಡಾಕ್ಟ್ರೇ,

  ನಿಮ್ಮ ಬಾಲ್ಯದಲ್ಲಿ ಪ್ರಾಣ ಉಳಿಸಿದ ಉರುಕುಂದಪ್ಪನ ಬಗ್ಗೆ ಬರೆದು ನೂರನೇ ಬರಹವನ್ನು ಸಾರ್ಥಕ ಗೊಳಿಸಿದ್ದೀರಿ. ಒಂದು ಖುಷಿ ವಿಚಾರವನ್ನು ನೆನಪನ್ನು ಹೀಗೆ ಹಂಚುವುದರಲ್ಲಿ ಆನಂದವೇ ಬೇರೆ. ನೂರನೇ ಬರಹಕ್ಕೆ ಅಭಿನಂದನೆಗಳು. ನೂರು ಸಾವಿರವಾಗಲಿ..ಸರ್..

  ReplyDelete
 16. ಆ ತೆಂಡುಲ್ಕರ್ ಮಾತ್ರ ಅಲ್ಲ ನಂ ಡಾಕ್ಟರ್ರು ಸೆಂಚುರಿ ಹೊಡದ್ರು....!
  ಅಭಿನಂದನೆಗಳು.
  ಮೊದಲೇ ಹೇಳಿದ್ದೆ ನಿಮ್ಮಲ್ಲಿರೋದು ಅನುಭವದ ಮೂಸೆ ಕೈ ಹಾಕಿ ಹೊರತೆಗೆದಾಗೊಮ್ಮೆ ಮುತ್ತು ಬರುತ್ತವೆ ಅಂತ
  ತುಂಬ ಆಪ್ತ ಬರಹ.

  ReplyDelete
 17. ಶತಕದ ಸಂಭ್ರಮಕ್ಕೆ ನನ್ನ ಶುಭಾಶಯಗಳು. ಬಾಲ್ಯದ ನಿಮ್ಮ ಅನುಭವಗಳು ತುಂಬಾ ಹೃದಯಸ್ಪರ್ಶಿಯಾಗಿವೆ.

  ReplyDelete
 18. ಆತ್ಮ್ಮೀಯರೇ;ಎಲ್ಲರಿಗೂ ನಮನಗಳು.ಬ್ಲಾಗೆಂಬ ಪದವನ್ನೇ ಕೇಳದವನು ಸುಮಾರು ಎಂಟು ತಿಂಗಳ ಅವಧಿಯಲ್ಲಿ ನೂರು ಬರಹಗಳನ್ನು ಬ್ಲಾಗಿಸಿರುವುದು ನಿಮ್ಮೆಲ್ಲರಪ್ರೋತ್ಸಾಹದ,ಆತ್ಮೀಯತೆಯಫಲ.ಬ್ಲಾಗುನನಗೆಒಳ್ಳೆಯಸ್ನೇಹಿತರನ್ನುಗಳಿಸಿಕೊಟ್ಟಿದೆ!ನನ್ನ ಬರಹಗಳನ್ನು ನಲ್ಮೆಯಿಂದಓದುವವರಒಂದುಬಳಗವಿದೆ.ಪ್ರತಿಯೊಬ್ಬರೂ ಜೀವನದಲ್ಲಿ ಹಲವಾರು ಅನುಭವಗಳನ್ನು ಹೊಂದಿದವರೇ.ಅವುಗಳನ್ನು ಅನುಭವಿಸಿದಾಗ ಆದ ಅನುಭೂತಿಯನ್ನು ಇನ್ನೊಬ್ಬರ ಜೊತೆ ಹಂಚಿಕೊಂಡಾಗ ಆಗುವ ಸಂತೋಷವೇ ಬೇರೆ.ಆ ಸಂತೋಷ ನನಗೆ ಬ್ಲಾಗಿನಿಂದ ದೊರಕಿದೆ.ಅದಕ್ಕೆ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು.ನಮಸ್ಕಾರ.

  ReplyDelete
 19. ಥ್ಯಾಂಕ್ಸ್ 'ಎಕಲಾಸ್ ಪುರದ ಉರುಕುಂದಪ್ಪಾ'

  ನೀನಿಲ್ದಿದ್ರೆ ಈ ಕೊಳಲನ್ನು ಯಾರು ಊದ್ತಿದ್ರು?

  (ಡಾಕ್ಟ್ರು ಸಾಹೇಬ್ರಿಗೆ ನೂರನೇ ಲೇಖನದ ಶುಭಾಷಯಗಳು..)

  -ಯಳವತ್ತಿ

  ReplyDelete
 20. ಡಾಕ್ಟ್ರೇ ನಾನು ಹೇಳಿದ್ದೆ...ಸಿಕ್ಸರ್ ಬಾರ್ಸಿ ಅಂತ ನಿಮ್ಮ ಅಭಿಮಾನಿಗೆ ಓಗೊಟ್ಟು ಹೊಡೆದೇ ಬಿಟ್ರಿ..ಇದು ಸಿಕ್ಸರ್ ಗೂ ಹೆಚ್ಚು, ಮೊದಲು ಎಂಟು ರನ್ ಇತ್ತಂತೆ...ಹಾಗೆ...!!!.ವಾವ್ ಶತಕವೀರನಿಗೆ ಶುಭಕಾಮನೆಗಳು ಅಭಿನಂದನೆಗಳು,,,,

  ReplyDelete
 21. ನಿಮಗೆ ಈ ಶತಕದ ಶುಭಾಶಯಗಳು.. ನಿಮ್ಮ ಈ ಜೀವನದ ಅನುಭಯ ಹೃದಯ ತಾಗುವಂತದ್ದು...

  ReplyDelete
 22. @ಶಿವಶಂಕರ್ ಯೆಳವತ್ತಿ,@ಜಲನಯನ ಅಜಾದ್ @ಭಾವನ ರಾವ್;ಈ ಎಲ್ಲಾ ಸಹ ಬ್ಲಾಗಿಗರಿಗೆ ,ಓದಿ,ಪ್ರತಿಕ್ರಿಯಿಸಿ,ಪ್ರೋತ್ಸಾಹಿಸಿದ್ದಕ್ಕೆ ನನ್ನ ಅನಂತ ಧನ್ಯವಾದಗಳು. ಎಲ್ಲರಿಗೂ ನಮಸ್ಕಾರ.

  ReplyDelete
 23. ಡಾಕ್ಟ್ರೆ....

  ಮೊದಲಿಗೆ ನಿಮ್ಮ ಬರಹಗಳ ಶತಕಕ್ಕೆ ಅಭಿನಂದನೆಗಳು...
  ನಮಗೆಲ್ಲ ಚೆನ್ನಾಗಿ ಗೊತ್ತಿದೆ....
  ಈ ಬರಹಗಳು ಸಾವಿರ ಸಂಖ್ಯೆಯನ್ನು ಸರಾಗವಾಗಿ ದಾಟಲಿದೆ...
  ನಿಮ್ಮ ಅನುಭವ ಬಹಳ ದೊಡ್ಡದು...

  ನಿಮ್ಮ ಜೀವ ಉಳಿಸಿದ...
  ಉರುಕುಂದಪ್ಪ...
  ನಿಮ್ಮ ಬದುಕನ್ನೂ ಬೆಳೆಸಿದ ಅಲ್ಲವೆ?
  ನಮ್ಮ ಬದುಕು ಅನೇಕರಿಗೆ ಋಣವಾಗಿರುತ್ತದೆ ಅನ್ನುವದನ್ನು ತಿಳಿಸಿದ್ದೀರಿ...

  ನಿಮ್ಮ ಅನುಭವಗಳು ಇನ್ನಷ್ಟು ಬರಲಿ..

  ನಿಮ್ಮ ಲೇಖನಗಳು..
  ಅನುಭವಗಳು " ಔಷಧ"ವಿದ್ದಂತೆ...

  ಹೃತ್ಪೂರ್ವಕ ಅಭಿನಂದನೆಗಳು...

  ಜೈ ಹೋ....!!!

  ReplyDelete
 24. ಮೊದಲು ಬ್ಲಾಗ್ ಬರಹದಲ್ಲಿ ಸೆ೦ಚುರಿ ಬಾರಿಸಿದ ತಮಗೆ ಅಭಿನ೦ದನೆಗಳು. ಎಲ್ಲಕ್ಕಿ೦ತ ಮೊದಲಿಗೆ ನಿಮ್ಮ೦ಥಾ ಸಹೃದಯೀ, ಮಾನವೀಯ ಗುಣಸ೦ಪನ್ನರಾದ ವೈದ್ಯರನ್ನು ಉಳಿಸಿ (ಆಗಿನ ಮುಗ್ಧ ಬಾಲಕ!) ಮನುಕುಲಕ್ಕೆ, ವಿಶೇಷವಾಗಿ ನಮ್ಮ ಬ್ಲಾಗಿಗರಿಗೆ ಕೊಡುಗೆಯಾಗಿ ನೀಡಿದ ಉರುಕು೦ದಪ್ಪನವರಿಗೆ ಅನ೦ತಾನ೦ತ ವ೦ದನೆಗಳು.

  ReplyDelete
 25. ಡಾ.ಡಿ.ಟಿ.ಕೃಷ್ಣಮೂರ್ತಿ ಅವರೇ...
  ನೂರನೇ ಬರಹಕ್ಕೆ ಅಭಿನಂದನೆ. ಬರೀತಿರಿ.

  ReplyDelete
 26. ನಮಸ್ತೆ ಸಾರ್,

  ಶತಕ ಬಾರಿಸಿದ ತಮಗೆ ಅಭಿನಂದನೆಗಳು!!! ಅತಿ ಬೇಗನೆ ಇದು ಸಹಸ್ರವಾಗಲಿ..  ಉತ್ತಮ ಬರಹ.. ನನ್ನ ಬಾಲ್ಯದ ನೆನಪಾಯಿತು..ನಿಮಗೆ ಉರುಕುಂದಪ್ಪನಿದ್ದಂತೆ, ನನ್ನನ್ನು ಬಾಲ್ಯದಲ್ಲಿ ಆಡಿಸಿ,ಊರೆಲ್ಲ ತಿರುಗಿಸಿ ಇವತ್ತಿಗೂ ಊರಿಗೆ ಹೋದಾಗ "ಬಾಲೇ" (ಇದು ತುಳು ಪದ.. ಅಂದ್ರೆ ಮಗೂ ಅಂತ ಅರ್ಥ) ಅಂತ ಕರೆದುಕೊಂಡು ಬರುವ "ಅಣ್ಣಿ ಶೆಟ್ಟಿ" ನೆನಪಾದ.. ಈ ಬಾರಿ ಊರಿಗೆ ಹೋದಾಗ ಆತನನ್ನು ಭೇಟಿಯಾಗಬೇಕು ಅಂತ ತೀರ್ಮಾನಿಸಿದ್ದೇನೆ..

  ReplyDelete
 27. ನನ್ನ ಬಾಲ್ಯದ ಬಾವಿ ಈಜುಗಳ ನೆನಪುಗಳನ್ನು ರಿವೈಂಡ್ ಮಡಿದ್ದಕ್ಕಾಗಿ ಧನ್ಯವಾದಗಳು ಡಾಕ್ಟ್ರೇ.

  ನಿಮ್ಮ ೧೦೦ ಬರಹಗಳಿಗೆ ಅಭಿನಂದನೆಗಳು. ಇದು ೧೦೦೦೦೦೦೦೦೦೦೦೦೦೦೦ ಆಗಲಿ.

  ನಿಮಗೆ ರಾಜ್ಯೋತ್ಸವ ಶುಭಾಶಯಗಳು...

  ReplyDelete
 28. ಶತಕದ ಸರದಾರರಿಗೆ ಕನ್ನಡ ರಾಜ್ಯೋತ್ಸವದ ಹಾಧಿ೯ಕ ಶುಭಾಷಯಗಳು....

  ReplyDelete
 29. ಕೃಷ್ಣಮೂರ್ತಿ ಸರ್,

  ಶತಕ ಬಾರಿಸಿದ ನೆಚ್ಚಿನ ಕೊಳಲಿಗೆ ಅಭಿನಂದನೆಗಳು !
  ಹೀಗೆ ಸಾಗಲಿ ಕೊಳಲ ಗಾನ..

  ತುಂಬಾ ಆತ್ಮೀಯ ಬರಹ..

  ಕನ್ನಡ ರಾಜ್ಯೋತ್ಸವದ ಶುಭಾಶಯಗಳು

  ReplyDelete
 30. ಶತಕ ವೀರರಿಗೆ ಅಭಿನಂದನೆಗಳು... ಜೀವನದ ಅನುಭವ ಎಷ್ಟೋ ವಿಷಯಗಳನ್ನು ತಿಳಿಸುತ್ತದೆ. ಧನ್ಯವಾದಗಳು.. ತಡವಾದ ಅನಿಸಿಕೆಗಳಿಗೆ ಕ್ಷಮೆ ಇರಲಿ... ಕೆಲಸದ ಒತ್ತಡದಿಂದ ತಡವಾಗಿದೆ...

  ReplyDelete
 31. @ಪ್ರಕಾಶ್ ಹೆಗ್ಡೆ,@ಪ್ರಭಾಮಣಿ ನಾಗರಾಜ್,@ಶಾಂತಲಾ ಭಂಡಿ,@ರವಿಕಾಂತ್ ಗೋರೆ,@ಬದರಿನಾಥ್,@ಸವಿಗನಸು ಮಹೇಶ್,@ಶಿವ್,@ಮನಸು ಮೇಡಂ ;ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.ನನ್ನ ಬ್ಲಾಗಿನ ಲೇಖನಗಳನ್ನು ಓದಿ ನಿರಂತರ ಪ್ರೋತ್ಸಾಹ ಕೊಡುತ್ತಿರುವ ನಿಮಗೆಲ್ಲ ನನ್ನ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿಎಂದು ನಮ್ರತೆಯಿಂದ ವಿನಂತಿಸಿಕೊಳ್ಳುತ್ತೇನೆ.ಎಲ್ಲರಿಗೂ ನಮಸ್ಕಾರ.

  ReplyDelete
 32. ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

  ReplyDelete
 33. ಸರ್‍, ನಮಸ್ಕಾರ. ರಾಜ್ಯೋತ್ಸವದ ಶುಭಾಶಯಗಳು. ಹಾಗೆಯೇ ನಿಮ್ಮ ಜೀವನದಲ್ಲಿ ನಡೆದ ಘಟನೆಯ ಲೇಖನ ನಮ್ಮನ್ನೂ ಉರುಕುಂದಪ್ಪನನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.
  ಬ್ಲಾಗ್‌ ನೂರನೆ ಬರಹ ಪೂರೈಸುವುದರೊಂದಿಗೆ 'ನೂರು' ಮಂದಿ ಸ್ನೇಹಿತರನ್ನು ತಮ್ಮ ಬ್ಲಾಗ್‌ ಹಿಂಬಾಲಕರನ್ನಾಗಿಸಿದೆ. ಇದು ನೂರು, ಸಾವಿರವಾಗಲಿ.

  ಧನ್ಯವಾದಗಳು.

  ReplyDelete
 34. channagidae sir.ಉರುಕುಂದಪ್ಪಾ estu thanks helidaru saladu .andu nimma kapadade ogiddare nimma barahagala mis madkoltidvi.sir neevake nimma kelsasada anubavagala ottukudisi ondu boook baribardu??

  ReplyDelete
 35. ನಿಮ್ಮ ಬದುಕಿನ ಅನುಭವಗಳನ್ನೇ ಬರಹಗಳ ಮೂಲಕ ಎಲ್ಲರಿಗೂ ಹಂಚುತ್ತಿದ್ದೀರಿ. ತುಂಬಾ ಚೆನ್ನಾಗಿದೆ. ನೂರನೇ ಪೋಸ್ಟ್‌ಗೆ ಅಭಿನಂದನೆಗಳು.

  ReplyDelete
 36. @B.C.CHANDRU ,@SRIKANTH,@TEJASVINIHEGDE MEDAM;
  'Facts are stranger than fiction'ಎಂಬ ಒಂದು ಮಾತಿದೆ.ಜೀವನದಲ್ಲಿ ಸ್ವತಹ ಅನುಭವಿಸಿದ ಘಟನೆಗಳು ಕಟ್ಟಿ ಹೇಳಿದ ಕತೆಗಳಿಗಿಂತಾ ಹೆಚ್ಚು ಸ್ವಾರಸ್ಯವಾಗಿರುತ್ತವೆ.ಅದಕ್ಕೇ ನಾನು ಬದುಕಿನ ಅನುಭವಗಳನ್ನೇ ಬರಹಗಳ ಮೂಲಕ ಹಂಚಿಕೊಂಡಿದ್ದೇನೆ.ನನ್ನೆಲ್ಲಾ ಬರಹಗಳನ್ನೂ ಓದಿ,ಪ್ರತಿಕ್ರಿಯಿಸಿ,ಪ್ರೋತ್ಸಾಹ ನೀಡಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 37. "ಸೆಂಚುರಿ ಸ್ಟಾರ್" ಮೂರ್ತಿ ಸರ್: ಈ ಬ್ಲಾಗ್ ಎಂಬುದು ಒಂದು ಅದ್ಭುತ ಉಡುಗೊರೆ, ಹಲವರಿಂದ-ಹಲವರಿಗೆ ಹರಡುವ ಪ್ರೀತಿ.
  ಎಕಲಾಸ್ ಪುರದ ಉರುಕುಂದಪ್ಪಾ,ಅವರಿಗೆ ನನ್ನ ನಮಸ್ಕಾರ.
  ಅವರನ್ನು ನೀವು ನಮಿಸಿದ್ದು ತುಂಬಾ ಹಿಡಿಸಿತು..!
  ನಿಮ್ಮ ಸಾಂಗತ್ಯ ದೊರಕಿದ್ದು ನಮ್ಮಲ್ಲೆರ "ಲಕ್" ..!
  "ವೀ ಲವ್ ಯು" :)

  ReplyDelete
 38. ಶತಕದ ಸರದಾರರಿಗೆ ಅಭಿನಂದನೆಗಳು. ತುಂಬಾ ಆಪ್ತ ಘಟನೆ ಹಂಚಿದ್ದಿರಾ... ಎಲ್ಲರ ಬಾಳಿನಲ್ಲೂ ಇಂತಹ ಉರುಕುಂದಪ್ಪನವರಿದ್ದಾರೆ. ಅವರನ್ನು ನೆನೆದ ನಿಮಗೆ ನಮೋನ್ನಮಃ.

  ReplyDelete
 39. ಡಾಕ್ಟರ ಕೃಷ್ಣಮೂರ್ತಿ ಯವರೇ ನಿಮ್ಮ ನೂರನೇ ಮೆಟ್ಟಿಲನ್ನು ಏರುತ್ತಿರುವ ಲೇಖನ ನಿಮ್ಮ ಕೃತಘ್ನತಾ ಭಾವವನ್ನು ಬಿಂಬಿಸಿದೆ.ನಿಮ್ಮ ಬ್ಲಾಗ್ ನ ಮೊದಲ
  ಭೇಟಿಯಲ್ಲೇ ಬಹಳ ಒಳ್ಳೆಯ ಲೇಖನ ಓದಿದೆ.ಕೃತಘ್ನತೆಯೇ ಸಾರ್ಥಕತೆ.ಶತಕ ಸಾಮ್ರಾಟರಿಗೆ ಶುಭಾಶಯಗಳು

  ReplyDelete
 40. ಮನಮುಟ್ಟುವ ಲೇಖನ ಡಾಕ್ಟ್ರೇ, ಮೆಚ್ಚಾಯಿತು

  ReplyDelete
 41. @ಅನಿಲ್,@ಸೀತರಾಮ್ ಸರ್.@ಕಲರವ.@ಮಂಜುನಾಥ್ ಕೊಳ್ಳೇಗಾಲ;ನನ್ನೆಲ್ಲಾ ಬರಹಗಳನ್ನೂ ಪ್ರೀತಿಯಿಂದ ಓದಿ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ನಮಸ್ಕಾರ.

  ReplyDelete
 42. ಕರುಣಾಜನಕ ಕಥೆ ಮೂರ್ತಿ ಸರ್ ನಿಮಗೆ ಅಭಿನಂದನೆಗಳು. ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು.

  ವಸಂತ್

  ReplyDelete
 43. ಎಷ್ಟೋ ಜೀವಗಳನ್ನು ಉಳಿಸಿದ ನೀವು ನಿಮ್ಮ ಜೀವ ಉಳಿಸಿದ ಉರುಕಂದಪ್ಪ. ಎಷ್ಟೋ ವರ್ಷಗಳನಂತರ ಪರಸ್ಪರ ಭೇಟಿ ಎಂಥ ಅವಿನಾಭಾವದ ಕ್ಷಣವದು. ಓದಿ ಸಂತೋಷವಾಯಿತು. ಬ್ಲಾಗಿನ ನೂರನೇ ಬರಹ ರನ್ನದ ಬರಹ.
  ಮಾಲಾ

  ReplyDelete