ನನ್ನ ಎದೆಯಾಳದಲ್ಲಿ -----,
ಚುಚ್ಚುತ್ತಿರುವ ಮುಳ್ಳುಗಳೆಲ್ಲ
ಹೂವಾಗಿ ಅರಳಿ ---------,
ಸುಗಂಧ ಬೀರಲಿ ಸುತ್ತ!
ಸಹ್ಯವಾಗಲಿ ಬದುಕು ,
ನನಗೂ ,ಸರ್ವರಿಗೂ .
ತಣ್ಣಗೆ ಒಳಗೇ ಕೊರೆಯುವ
ನೋವಿನ ಮಂಜು ಕರಗಿ ,
ನೀರಾಗಿ ,ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ ,
ತಂಪೆರೆಯಲಿ ----!
ಸಂಬಂಧಗಳು ಬತ್ತಿರುವ
ಈ ಮರುಧರೆಯ ಎದೆಗಳಲಿ
ಮತ್ತೆ ಬಾಂಧವ್ಯಗಳ
ಹೊಸ ಚಿಗುರೊಡೆದು
ಕಳೆ ಇರದ ಬದುಕಿನ ಹೊಲ
ನಳ,ನಳಿಸಲಿ---------,
ಎನ್ನುವ --------ಹಾರೈಕೆ!
chennagide!
ReplyDeleteNijavaali nimma haraike! :)
ಭಾಶೇ ಯವರೇ ;ತಕ್ಷಣದ ನಿಮ್ಮ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು.ನಿಜಕ್ಕೂ ಇದು ನಿಮ್ಮದೂ ಸೇರಿದಂತೆ ಎಲ್ಲರ ಮನದಾಳದ ಹಾರೈಕೆಯಲ್ಲವೇ? ನಮಸ್ಕಾರ.
ReplyDeleteನಿಮ್ಮ ಹಾರೈಕೆ ಇಷ್ಟ ಆಯಿತು ಸರ್..ಚೆನ್ನಾಗಿದೆ ಕವನ.
ReplyDeleteಚ೦ದದ ಹೋಲಿಕೆ..
ReplyDeleteನೋವಿನ ಮ೦ಜು ಕರಗಿ ಸುಖದ ಹೊಳೆ ಹರಿಸಲಿ...
ಮನದ ಕತ್ತಲ ಕೊಳೆಯ ತೊಳೆದು ಹೊರ ಚಲ್ಲಲಿ....
ಸು೦ದರವಾದ ಕವನಕ್ಕೆ... ಹಾರೈಕೆಗೆ ಅಭಿನ೦ದನೆಗಳು.
ಆಹಾ,ಒಂದು ಸುಂದರವಾದ ಹಾರೈಕೆ ಸರ್.
ReplyDelete"ತಣ್ಣಗೆ ಒಳಗೇ ಕೊರೆಯುವ
ನೋವಿನ ಮಂಜು ಕರಗಿ ,
ನೀರಾಗಿ ,ಆವಿಯಾಗಿ
ಕಾಣದಂತಾಗಸಕ್ಕೇರಿ,
ಮಳೆ ಸುರಿಯಲಿ ,
ತಂಪೆರೆಯಲಿ ----!"
ತುಂಬಾ ಹತ್ತಿರವಾದ ಸಾಲುಗಳಿವು ಸರ್.
ಥ್ಯಾಂಕ್ಸ್
ನಿಮ್ಮ ಹಾರೈಕೆಗೆ ನನ್ನ ದನಿಗೂಡಿಸುವೆ. ಚೆ೦ದದ ಕವನ.
ReplyDeleteಅನ೦ತ್
ನಮಸ್ತೆ ಮೂರ್ತಿ ಸರ್.. ನೀವಂದಂತೆ ಇದು ನಮ್ಮೆಲ್ಲರ ಹಾರೈಕೆ.. ತುಂಬಾ ಚೆನ್ನಾಗಿದೆ..
ReplyDeletetumbaa oLLeya saalugaLu sir,
ReplyDeletenimma haaraike nijavaagali, ellellu samraddi , shanti nelesali...
ಚೆನ್ನಾಗಿದೆ ಸಾರ್ .ಆಶಯ ಇಷ್ಟವಾಯಿತು.
ReplyDeleteಕೃಷ್ಣಮೂರ್ತಿಯವರೆ,
ReplyDeleteತುಂಬ ಉದಾತ್ತ ಭಾವನೆಗಳ ಹಾರೈಕೆ ಇದು. ‘ವಸುಧೈವ ಕುಟುಂಬಕಮ್’ ಎನ್ನುವವರಿಗೆ ಮಾತ್ರ ಇಂತಹ ಭಾವನೆ ಸಾಧ್ಯ.
ಸುಂದರ ಕವನ..
ReplyDeleteನಿಮ್ಮ ಹಾರೈಕೆ ನನಸಾಗಲಿ
ಗುರುಗಳೆ,
ReplyDeleteನಿಮ್ಮ ಮನದ ಹಾರೈಕೆಯ ಪರಿ ಕವನದಲ್ಲಿ ಸುಂದರವಾಗಿ ಮೂಡಿದೆ.
ಚಂದದ ಕವನಕ್ಕೆ ಧನ್ಯವಾದಗಳು.
ನಿಮ್ಮ ಹಾರೈಕೆ ಚೆನ್ನಾಗಿದೆ...ನಿಜವಾಗಲಿ...
ReplyDeleteಚೆಂದದ ಕವನ...
ನಲ್ಮೆಯಿಂದ ಓದಿ ಚಂದದ ಪ್ರತಿಕ್ರಿಯೆ ನೀಡಿದ @ಶಶಿ ಜೋಯಿಸ್ @ಚುಕ್ಕಿ ಚಿತ್ತಾರ@ನಾಗರಾಜ್@ಅನಂತ್ ರಾಜ್ @ವಸಂತ್ @ದಿಲೀಪ್ ಹೆಗ್ಡೆ @ದಿನಕರ್ ಮೊಗೇರ @ಕೂಸು ಮುಲಿಯಳ @ಸುನಾತ್ ಸರ್ @ಅಪ್ಪ ಅಮ್ಮ @ಪ್ರವೀಣ್ @ಸವಿಗನಸು ಮಹೇಶ್ ಇವರಿಗೆಲ್ಲಾ ನನ್ನ ಹೃತ್ಪೂರ್ವಕ ಧನ್ಯವಾದಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಎಲ್ಲರಿಗೂ ನಮಸ್ಕಾರ.
ReplyDeleteNIMMA MANADASE EDERALI, ELLARA BAALU HASANAGALI.
ReplyDeleteಡಾಕ್ಟರ್ ಸಾಬ್ ಕವಿತಾ ಛಂದದ ಸೂಜಿಚುಚ್ಚುವ ಕೈ ಲೇಖನಿ ಹಿಡಿದು ಜೀವ ಮಿಡಿಸಬಲ್ಲದು..ಚೆನ್ನಾದ ಕವಿತೆ
ReplyDeleteಹಿರಿಯ ವೈದ್ಯಮಿತ್ರರೇ, ಕವಿತೆಚೆನ್ನಾಗಿದೆ, ಅದೂ ಈ ದಸರಾ ಸಮಯದಲ್ಲಿ ತಮ್ಮ ಹಾರೈಕೆ ಬಹಳ ಇಷ್ಟವಾಯಿತು, ತಮ್ಮ ಕವಿತಾ ಲಹರಿಯ ಝರಿ ಹೀಗೇ ನಳನಳಿಸಲಿ ಎಂದು ಪ್ರಾರ್ಥಿಸುತ್ತಾ, ತಮಗೂ ತಮ್ಮ ಕುಟುಂಬಕ್ಕೂ ಶುಭಕೋರುತ್ತಿದ್ದೇನೆ,ನಮಸ್ಕಾರ
ReplyDeleteಡಾಕ್ಟ್ರೇ,
ReplyDeleteನಿಮ್ಮ ಹಾರೈಕೆ ನಮಗೂ ಇಷ್ಟವಾಯ್ತಲ್ಲ..ಹೀಗೆ ಮುಂದುವರಿಯಲಿ ನಿಮ್ಮ ಬರಹದ ಸಿರಿ..
@ಹೇಮಚಂದ್ರ ,@ಉಮೇಶ್ ದೇಸಾಯಿ ,@ವಿ.ಆರ್.ಭಟ್,@ಶಿವು ;ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದಗಳು.ನಿಮ್ಮ ಪ್ರೀತಿ ಪೂರ್ವಕ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಎಲ್ಲರಿಗೂ ನಮಸ್ಕಾರ.
ReplyDeleteಸುಂದರ ಕವನ..
ReplyDeleteಮೂರ್ತಿ ಸರ್,
ReplyDeleteನಿಮ್ಮ ಹಾರೈಕೆಯೇ ನಮ್ಮ ಹಾರೈಕೆ, ಸುಂದರವಾದ ಉಪಮೆಗಳು, ಸೊಗಸಾದ ಕವನ, ಧನ್ಯವಾದಗಳು...
ಸರ್
ReplyDeleteಸೊಗಸಾದ ಕವನ
ದಸರೆಯ ಶುಭಾಶಯಗಳು
"ಸಹ್ಯವಾಗಲಿ ಬದುಕು ,
ReplyDeleteನನಗೂ ,ಸರ್ವರಿಗೂ "
ನಿಮ್ಮ ಸರ್ವ ಹಿತ ಮನೋಭಾವ ಸರಳ ಸಾಲುಗಳಲ್ಲಿ ಮನ ಮುಟ್ಟಿದೆ. ಕವಿತೆ ಓದಿ ಮನಸ್ಸು ಹಗುರಾಯಿತು. ಇದೆ ಮೊದಲ ಭಾರಿ ನಿಮ್ಮ ಬ್ಲಾಗಿಗೆ ಬಂದೆ. ಬಹಳ ಖುಷಿಯಾಯಿತು. ನನ್ನ ಬ್ಲಾಗುಗಳಿಗೆ ಸ್ವಾಗತ. ಶಿವಮೊಗ ನನ್ನ ಮಡದಿಯ ಊರು.
ಶುಭ ಹಾರೈಕೆಗಳೊಂದಿಗೆ..
*ಲಿಂಗೆಶ್ ಹುಣಸೂರು*,
ಬಿಂದುವಿನಿಂದ ಅನಂತದೆಡೆಗೆ..
ಸಂಸ್ಥಾಪಕ, ಚುಕ್ಕಿ ಸಂಸ್ಥೆ (ರೀ),
ಹುಣಸೂರು, ಮೈಸೂರು ಜಿಲ್ಲೆ.
http://chukkisamsthe.blogspot.com
ತಮ್ಮ ಹಾರೈಕೆ ತುಂಬಾ ಪ್ರಸ್ತುತ ಹಾಗು ಇದು ನಮ್ಮ ಹಾರೈಕೆ ಸಹಾ. ಕವನಕ್ಕೆ ಧನ್ಯವಾದಗಳು.
ReplyDelete