Wednesday, October 6, 2010

"ಹೀಗೂ ಉಂಟೆ?"

ರಾತ್ರಿ ಸುಮಾರು ಹನ್ನೊಂದು ಗಂಟೆ ಸಮಯ.ರಾಯಚೂರಿನ ರೈಲ್ವೆ ಸ್ಟೇಷನ್ನಿನಲ್ಲಿ ದಾದರ್-ಚೆನ್ನೈ ಎಕ್ಸ್ ಪ್ರೆಸ್ ಟ್ರೈನಿಗೆ ಟಿಕೆಟ್ ಕೊಳ್ಳಲು ಹನುಮಂತನ ಬಾಲದಂತಹ ಉದ್ದನೆಯ ಕ್ಯೂ ನಲ್ಲಿ ನಿಂತಿದ್ದೆ.ಟ್ರೈನ್ ಪ್ಲಾಟ್ ಫಾರಮ್ಮಿಗೆ ಬರುವ ಸೂಚನೆಯಾಗಿ ಮೂರನೇ ಗಂಟೆ ಬಾರಿಸಿದರೂ ಕ್ಯೂ ಕರಗುವ ಸೂಚನೆ ಕಾಣದೆ ಪ್ರಯಾಣಿಕರಲ್ಲಿ ಗಡಿಬಿಡಿ,ಆತಂಕ ಶುರುವಾಯಿತು.ಎಲ್ಲರಂತೆ ನಾನೂ ಬೇಗ ಟಿಕೆಟ್ ಕೊಡುವಂತೆ ದನಿ ಸೇರಿಸಿದೆ.ಟಿಕೆಟ್ ಕೌಂಟರ್ ನಲ್ಲಿದ್ದ ಒಬ್ಬ ವ್ಯಕ್ತಿ  ನನ್ನ ದನಿ ಗುರುತು ಹಿಡಿದು ಕೌಂಟರ್ ನಿಂದ ಹೊರಗೆ ಬಂದು ,ನನ್ನ ಬಳಿ ಬಂದು "ಸಾರ್ ನೀವು ಡಾ.ಕೃಷ್ಣ ಮೂರ್ತಿಯವರಲ್ಲವೇ ?ಹತ್ತು ವರ್ಷಗಳ ಹಿಂದೆ ಶಕ್ತಿನಗರದಲ್ಲಿದ್ದಿರಿ .ಹೌದಲ್ಲವೇ ?"ಎಂದ.ನಾನು "ಹೌದು ,ಆದರೆ ನೀವು ಯಾರು ? ನನಗೆ ನಿಮ್ಮ ಪರಿಚಯವಿಲ್ಲವಲ್ಲ "ಎಂದೆ.ಅಷ್ಟರಲ್ಲಿ ಟ್ರೈನು ಪ್ಲಾಟ್ ಫಾರಮ್ಮಿಗೆ ಬಂದಿತ್ತು ."ಸಾರ್ ,ಅದೆಲ್ಲಾ ಆಮೇಲೆ ಹೇಳುತ್ತೀನಿ ,ನಿಮಗೆ ಎಲ್ಲಿಗೆ ಟಿಕೆಟ್ ಬೇಕು ಹೇಳಿ?" ಎಂದ.ನಾನು ಹೋಗ ಬೇಕಾದ ಸ್ಥಳದ ಹೆಸರು ಹೇಳಿದೆ.ತಕ್ಷಣವೇ ಹಣವನ್ನೂ ತೆಗೆದು ಕೊಳ್ಳದೆ,ನಾನು ಹೋಗಬೇಕಾದ ಸ್ಥಳಕ್ಕೆ ಟಿಕೆಟ್ ತಂದು ಸ್ಲೀಪರ್ ಬೋಗಿ ಯೊಂದರ ಟಿ.ಟಿ.ಗೆ ಹೇಳಿ ಸೀಟು ಕೊಡಿಸಿದ.ಎಷ್ಟೇ ಬಲವಂತ ಮಾಡಿದರೂ ಟಿಕೆಟ್ಟಿನ ಹಣ ತೆಗೆದುಕೊಳ್ಳಲಿಲ್ಲ . ನನಗೆ 'ಇವನು ಯಾರು?ನನಗೇಕೆ ಸಹಾಯ ಮಾಡುತ್ತಿದ್ದಾನೆ?' ಎಂದು ಅರ್ಥವಾಗಲಿಲ್ಲ.I was in a totally confused state.ನಾನು ಟ್ರೈನಿನಲ್ಲಿ ಕಿಟಕಿಯ ಬಳಿ ಕುಳಿತ ಬಳಿಕ, ಕಿಟಕಿಯ ಹೊರಗೆ ನಿಂತು ಆತ ಹೇಳಿದ "ಸಾರ್ ,ಹತ್ತು ವರ್ಷಗಳ ಹಿಂದೆ ನಾನು 'ಕೃಷ್ಣ ರೈಲ್ವೆ ಸ್ಟೇಷನ್' ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಮಗನಿಗೆ ಬೈಕ್ accident ಆಗಿ 'ಶಕ್ತಿನಗರ'ದ ಆಸ್ಪತ್ರೆಗೆ ರಾತ್ರಿ ಸುಮಾರು ಎರಡು ಗಂಟೆಗೆ ಕರೆದುಕೊಂಡು ಬಂದಾಗ ನೀವು  ಬಹಳ ಚೆನ್ನಾಗಿ ಟ್ರೀಟ್ ಮೆಂಟ್ ಕೊಟ್ಟಿರಿ.ಗಾಯಗಳಿಗೆ ಸುಮಾರು ಹೊತ್ತು ಸೂಚರ್ ಹಾಕಿದಿರಿ. ಹಣ ಕೊಡಲು ಬಂದಾಗ ತೆಗೆದು ಕೊಳ್ಳದೆ ಹಾಗೇ  ಕಳಿಸಿದಿರಿ.ನಿಮ್ಮ ಉಪಕಾರ ನಾನು ಯಾವತ್ತೂ ಮರೆಯೋಕೆ ಆಗೋಲ್ಲಾ ಸಾರ್.ಹತ್ತು ವರ್ಷಗಳಾದರೂ ನಿಮ್ಮ ದನಿ ನನಗೆ ಇನ್ನೂ ನೆನಪಿದೆ ನೋಡಿ!ನಿಮ್ಮ ದನಿಯಿಂದಲೇ ನಿಮ್ಮ ಗುರುತು ಹಿಡಿದೆ"ಎಂದ.ನಾನು ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ಅವಾಕ್ಕಾಗಿದ್ದೆ.ಅವನ ಮುಖದಲ್ಲಿ ಕೃತಜ್ಞತೆ ಇತ್ತು.
ಕಣ್ಣುಗಳಲ್ಲಿ ನೀರಿನ ಪಸೆ ಇತ್ತು.ಟ್ರೈನ್ ನಿಧಾನವಾಗಿ ಮುಂದೆ ಚಲಿಸಿದಂತೆ ಬೀಳ್ಕೊಡುವಂತೆ ಕೈ ಬೀಸಿದ.ನಾನೂ 'ಹೀಗೂ ಉಂಟೆ?'ಎಂದುಕೊಳ್ಳುತ್ತಾ ,ಕೈ ಬೀಸಿ ಬೀಳ್ಕೊಟ್ಟೆ .

38 comments:

  1. ಹೀಗೂ ಉಂಟು ಎಂದು ನೀವೇ ಹೇಳಿದ್ದೀರಲ್ಲ... ಸಂತೋಷವಾಯಿತು!

    ReplyDelete
  2. ತುಂಬಾ ಖ್ಹುಶಿ ಕೊಡುವ ಅನುಭವ ಅಲ್ವಾ ಸರ್?
    ಸಮಾಜಕ್ಕೆ ನಾವೇನು ಕೊಡುವೆವೋ, ಅದು ನಮಗೆ ಖಂಡಿತಾ ನಮಗೆ ಮರಳಿ ಬರುವುದು..

    ReplyDelete
  3. ನಿಷ್ಟೆಯಿಂದ ನಿಸ್ವಾರ್ಥದಿಂದ ಮಾಡಿದ ಸೇವೆ ಎಂದಿಗಾದರು ಫಲ ಕೊಡುತ್ತೆ. ಪ್ರೀತಿ ಪ್ರೇಮ ವಿಶ್ವಾಸ ದಲ್ಲಿ ಸಿಗೋ ಸುಖ ದುಡ್ಡಿಂದ ಸಿಕ್ಕಿತೆ!
    Good deeds always breed good
    ಘಟನೆ ಓದಿ ಖುಷಿಯಾಯಿತು- ಹೀಗೂ ಉಂಟಲ್ಲಾ ಅಂಥಾ.

    ReplyDelete
  4. ಡಾಕ್ಟರ್ ನಿಮ್ಮನ್ನು ಅಂದರೆ ವೈದ್ಯರನ್ನು ನಾರಾಯಣ ಅಂತಾರೆ ಯಾಕೆ ಗೊತ್ತೆ ಜೀವದಾನಮಾಡದಿದ್ದರೂ ಆ ನಿಟ್ಟಿನಲ್ಲಿ
    ಶ್ರಮಿಸುತ್ತೀರಿ. ನಿಮ್ಮ ವೃತ್ತಿ ನಿಜಕ್ಕೂ ಧನ್ಯ

    ReplyDelete
  5. ಉಪಕಾರ ಸ್ಮರಣೆಯೇ ಒಳ್ಳೆಯ ಕೆಲಸಕ್ಕೆ ಸಿಗುವ ಪ್ರತಿಫಲ. ಆ ಪ್ರತಿಫಲ ಸಿಕ್ಕಾಗ ದೊರಕುವ ಖುಶಿ ಹೇಳತೀರದು. ನಿಮಗೆ ಹಾಗು ನಿಮ್ಮ ನೆನಪನ್ನು ಇಟ್ಟುಕೊಂಡ ಆ ಕೃಷ್ಣನಿಗೆ ನನ್ನ ಪ್ರಣಾಮಗಳು.

    ReplyDelete
  6. ಡಾ, ಈಗ್ಲೂ ಇಂತಹವರು ಇದ್ದಾರೆಂದೇ ಪ್ರಪಂಚ ನಡೀತಾ ಇದೆ..! ನಾವು ಎಷ್ಟೋ ಜನರಿಗೆ ಹಣ ಸಹಾಯ ಮಾಡ್ತೇವೆ, ಟೋಪಿ ಹಾಕಿಸ್ಕೋತೇವೆ ಮರಿತೇವೆ. ಅದೇ ತರ ಅಲ್ಲಲ್ಲಿ ಒಳ್ಳೆಯವರು ಖಂಡಿತಾ ಇದ್ದಾರೆ. ನಿಮ್ಮದು ತುಂಬಾ ಸಿಹಿ ಅನುಭವ. ಕಣ್ಣಗಳು ಒದ್ದೆಯಾದವು....

    ReplyDelete
  7. ಕೃಷ್ಣಮೂರ್ತಿಯವರೆ...

    ಹೃದಯಸ್ಪರ್ಶಿ ಘಟನೆ..

    ಆ ಅಪರಿಚಿತ ವ್ಯಕ್ತಿಯ...
    ಕೃತಜ್ಞತೆ ಭಾವಕ್ಕೊಂದು ನಮನ..

    ReplyDelete
  8. ಲೋಕದಲ್ಲಿ ಎಲ್ಲರಿಂದಲೂ ಇಂಥಹ ಕ್ರತಜ್ನತಾ ಭಾವ ಬಂದರೆ ಜಗತ್ತು ಎಷ್ಟು ಚೆಂದ ಅಲ್ಲವೇ

    ನಿಮ್ಮ ವೃತ್ತಿಯಲ್ಲಿರುವ ಸಂತೋಷ ಬೇರೆ ವ್ರತ್ತಿಗೆ ಸ್ವಲ್ಪ ಕಡಿಮೆ, ನಿಮ್ಮಲ್ಲಿಗೆ ನೊಂದವರು ಬರುತ್ತಾರೆ
    ಅಳುತ ಬಂದವರನ್ನು ನಗುತ ಕಳಿಸುವ ವೈದ್ಯ ವ್ರತ್ತಿಗೆ ನಮೋ ನಮಃ

    ReplyDelete
  9. ಡಾಕ್ಟ್ರೇ.....
    ನಿಮ್ಮ ದ್ವನಿ ಯನ್ನ ಯಾರೂ ಮರೆಯಲು ಆಗಲ್ಲ ಸರ್..... ನಿಮ್ಮ ಒಳ್ಳೆ ಗುಣವನ್ನೂ ಸಹ..... ಹೀಗೆ ಇರಿ ಸರ್.... ನಿಮ್ಮಂಥ ಡಾಕ್ಟರ್ ಜರೂರತ್ ಇದೆ...... ಧನ್ಯವಾದ ಸರ್....

    ReplyDelete
  10. ಹೃದಯಸ್ಪರ್ಶಿ ಘಟನೆ ಡಾ. ಸರ್. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

    ಅನ೦ತ್

    ReplyDelete
  11. ಒಳ್ಳೆಯ ತನಕ್ಕೆ ಬೆಲೆ ಇದೆ ಎನ್ನಲು ಇದೊಂದು ಉದಾಹರಣೆ ಅಲ್ವೇ ಮೂರ್ತಿ ಸರ್... ನಿಮಗಿಬ್ಬರಿಗೂ ನನ್ನ ನಮನ..

    ReplyDelete
  12. kandita sir krutagnate annodu antavara attirane irodu sir... nim ashcharyakke yavadu karanna illa bidi sir yakandre krutagnate annodu indib\na dinadalli maari hogide... :)

    ReplyDelete
  13. ಓದಿ ನಲ್ಮೆಯಿಂದ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು .
    ಹೊಸದಾಗಿ ಬ್ಲಾಗಿಗೆ ಬಂದಿರುವ ಗುಹೆ ಮತ್ತು ಚರಿತಾ ಭಟ್ ಅವರಿಗೆ ಸ್ವಾಗತ.ನಾನು ಶಕ್ತಿನಗರದ ಥರ್ಮಲ್ ಪವರ್ ಸ್ಟೇಷನ್ ನಲ್ಲಿ 1985-91 ಮತ್ತು 2000-2005 ನಲ್ಲಿ ಕೆಲಸ ಮಾಡಿದ್ದೆ.ಈ ಘಟನೆ ನಡೆದದ್ದು 1996 ರಲ್ಲಿ ನಾನು ಬಳ್ಳಾರಿಯಲ್ಲಿ E.N.T. p.g. ಮಾಡುತ್ತಿದ್ದಾಗ.ಶಕ್ತಿನಗರದಲ್ಲಿ ಯಾವುದೋ ಒಂದು ಸಮಾರಂಭ ಅಟೆಂಡ್ ಮಾಡಿ ಬಳ್ಳಾರಿಗೆ ಟ್ರೈನಿನಲ್ಲಿ ವಾಪಸ್ ಹೋಗುತ್ತಿದ್ದಾಗ ನಡೆದದ್ದು.ನನಗೆ ಟಿಕೆಟ್ ಕೊಡಿಸಿದ ವ್ಯಕ್ತಿ ರೈಲ್ವೆ ಇಲಾಖೆಯವನು.
    1986 ರಲ್ಲಿ ಶಕ್ತಿನಗರಕ್ಕೆ ಹತ್ತಿರವಿರುವ 'ಕೃಷ್ಣಾ'ಎಂಬ ಹೆಸರಿನ ರೈಲ್ವೆ ಸ್ಟೇಶನ್ ನಲ್ಲಿ ಕೆಲಸ ಮಾಡುತ್ತಿದ್ದ.ಹತ್ತು ವರುಷಗಳ ನಂತರ ದನಿಯ ಮೇಲೆ ನನ್ನನ್ನು ಗುರುತು ಹಿಡಿದು ಅವನು ಉಪಕಾರ ಸ್ಮರಿಸಿದ ರೀತಿ ಅಪರೂಪದ್ದಾಗಿತ್ತು.ಅದಕ್ಕೆಂದೇ ನನ್ನ ಅನುಭವವನ್ನು ಬ್ಲಾಗಿಗರೊಂದಿಗೆ ಹಂಚಿಕೊಂಡಿದ್ದೇನೆ.ಎಲ್ಲರಿಗೂ ನಮಸ್ಕಾರಗಳು.

    ReplyDelete
  14. ಕೃಷ್ಣಮೂರ್ತಿ ಸರ್,

    ಉಪಕಾರ ಮಾಡಿದವರನ್ನು ನೆನೆವ ಈ ಪರಿ ಇಷ್ಟವಾಯ್ತು..

    ವೈದ್ಯ ವೃತ್ತಿಗೆ ಒಂದು ನಮನ

    ReplyDelete
  15. ಒಳ್ಳೆತನ ಇನ್ನು ಇದೆ ಅನ್ನೋಕೆ ಉದಾಹರಣೆ ...

    ReplyDelete
  16. ವೈದ್ಯೋ ನಾರಾಯಣೋ ಹರಿ !! ಮಾತು ಅನ್ವರ್ಥ ವಾಗಿದೆ.ನಿಮ್ಮ ವೃತ್ತಿಗೆ ಸಂದ ಗೌರವ.ನನಗೆ ನಿಮ್ಮ ಬಗ್ಗ್ವ ಹೆಮ್ಮೆ ಯಾಗಿದೆ. ನಿಮ್ಮ ಕೀರ್ತಿ ಬೆಳಗಲಿ.

    ReplyDelete
  17. krishna murthy sir, nimm dhodda gunake avaru vandu chikka kruthadaney sallisidare,,nimm seve atyutama seve ....:)

    ReplyDelete
  18. ಡಾಕ್ಟ್ರೇ,

    ಬದುಕಿನಲ್ಲಿ ಒಳ್ಳೆಯದನ್ನು ಹೀಗೂ ಉಂಟು ಮಾತ್ರವಲ್ಲ ಇನ್ನೂ ಹೇಗೋಗೋ ಉಂಟು. ಇಂತವೇ ಅಲ್ಲವೇ ಸರ್ ಬದುಕಿನ ಸವಿನೆನಪುಗಳು!...ನಿಮಗೆ ಅಭಿನಂದನೆಗಳು.

    ReplyDelete
  19. ನಿಮ್ಮ ನಿಸ್ವಾರ್ಥ ಸೇವೆಗೆ ಸ೦ದ ಗೌರವ ಸರ್, ನಿಜಕ್ಕೂ ನೀವು ಅನನ್ಯರು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು.

    ReplyDelete
  20. ನನ್ನ ಲೇಖನವನ್ನು ನಲ್ಮೆಯಿಂದ ಓದಿ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.ಹೊಸದಾಗಿ ಬ್ಲಾಗಿಗೆ ಬಂದಿರುವ,ನನ್ನೊಳಗಿನ ಕನಸು,ಮಂಜು ಮತ್ತು ಗೋಪಾಲ್ ಕುಲಕರ್ಣಿ ಅವರಿಗೆ ಸ್ವಾಗತ.ಎಲ್ಲರಿಗೂ ನನ್ನ ನಮಸ್ಕಾರಗಳು.

    ReplyDelete
  21. | ವೈದ್ಯೋ ನಾರಾಯಣೋ ಹರಿಃ ||--ಇದು ಸುಮ್ಮನೇ ಬಂದ ಉಕ್ತಿಯೇ ? ಪ್ರತೀ ಸಂಸ್ಕೃತದ ವ್ಯಾಖ್ಯೆಗೆ ಒಂದೊಂದು ಸಂದರ್ಭ ಮತ್ತು ಪ್ರಸ್ತುತಿ ಇದೆ, ಲೇಖನ ಬಹಳ ಹಿಡಿಸಿತು, ಧನ್ಯವಾದಗಳು

    ReplyDelete
  22. ಇಂದಿಗೂ ಜನರಲ್ಲಿ ಪ್ರೀತಿ-ವಿಶ್ವಾಸ-ನಂಬಿಕೆ-ಕೃತಜ್ಞತೆ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ... :-)

    ReplyDelete
  23. ನನಗೂ ಡಾಕ್ಟರ್ ಆಗುವ ಆಸೆಯಾಯ್ತು. ಒಮ್ಮೊಮ್ಮೆ ಇಂತಹ ಘಟನೆ ಕೇಳಿ ಖುಶಿಯಾಗುತ್ತೆ

    ReplyDelete
  24. ನಿಜ ಸರ್, ನಿಮ್ಮಂತ ವೈದ್ಯರನ್ನು ಸದಾ ನೆನಪಿಸಿಕೊಳ್ಳುವ ಜನರು ಇರುತ್ತಾರೆ. ತುಂಬಾ ಭಾವ ತುಂಬಿ ಬರೆದಿದ್ದೀರಿ....

    ReplyDelete
  25. there is always a deep feeling inside which is soothing when we help others especially without any expectations. it is also true that it comes back to us in some form or the other. even after knowing this, we many times don't help the needy!

    ReplyDelete
  26. ನಲ್ಮೆಯಿಂದ ಓದಿ ಪ್ರತಿಕ್ರಿಯೆ ನೀಡಿರುವ ವಿ.ಆರ್.ಭಟ್ ಸರ್ ,ಹರೀಶ್,ರಾಘವೇಂದ್ರ ಶರ್ಮ,ಮನಸು ಮೇಡಂ ಮತ್ತು ಕೃಷ್ಣಭಟ್,ಇವರಿಗೆಲ್ಲಾ ಹೃತ್ಪೂರ್ವಕ ಅಭಿನಂದನೆಗಳು.

    ReplyDelete
  27. ಇಂಥ ಸಂದರ್ಭಗಳೇ ಅಲ್ಲವೇ ನಮ್ಮ ಜೀವನ ಚೈತನ್ಯವನ್ನ ಹಿಡಿದು ಜಗ್ಗಿ ಮುನ್ನೆಡೆಸುವುದು.

    ಮಾನವೀಯತೆಯ ಮುಖ ತೋರಿದ ಡಾಕ್ಟರಿಗೆ ಧನ್ಯವಾದಗಳು.

    ReplyDelete
  28. Dr.ಡಿ.ಟಿ.ಕೆ. ನಿಮ್ಮ ಆತ್ಮೀಯ ಮನೋಧರ್ಮ ಒಂದೇ ಸಾಕು ಆತನಿಗೆ ಆ ಮಾತನ್ನು ಆಡಲು ಪ್ರೇರೇಪಿಸಲು...ಇನ್ನು ನಿಮ್ಮ ವೃತ್ತಿಧರ್ಮ ನಿಮ್ಮನ್ನು ಅದನ್ನು ಗುರುತಿಸಲು ಸ್ವಲ್ಪ ತಡಮಾಡಿಸಿತು..ಆದರೆ ಇಲ್ಲಿ ಆ ಪರಸ್ಪರ ಭಾವಗಳು ಮುಖ್ಯ...ನಿಮ್ಮ ಅಸಮಯ ವಾದರೂ ಸೇವಾ ಮನೋಭಾವ ತೋರಿದ ರೀತಿ ಮತ್ತು ಅದನ್ನು ಅನುಭವಿಸಿದ ಆತನ ಕೃತಜ್ಞತಾ ಭಾವ...ಹೌದು ಧರ್ಮ ಇದೆ ಭೂಮಿಯ ಮೇಲೆ ಎಂದರೆ ಕಾರಣ ಇಂತಹ ಮಾನವೀಯ ಗುಣಗಳೇ...ನಿಮ್ಮ ಮನೋಭಾವಕ್ಕೆ ಮತ್ತೆ ನಿಮ್ಮ ವೃತ್ತಿಗೆ ಒಂದು ಸಲಾಂ...

    ReplyDelete
  29. Murthy Sir,

    Madhura nenapu allave, ivaagalu olleyatanakke bele ide embudu nijavaitu, aadre ellaru upakara smarane maaduvudilla annodu saha nija..

    ReplyDelete
  30. enthaha ondu kshana balina sanjeeniniyaguvuadu.
    ennadaroo badukabeku emba aase chiguruva bhava.

    ReplyDelete
  31. ನಲ್ಮೆಯಿಂದ ಓದಿ ಪ್ರತಿಕ್ರಿಯೆ ನೀಡಿದ ಪಂಚ್ ಲೈನ್ ,ವಸಂತ್,ಜಲನಯನ,ಅಶೋಕ್ ಮತ್ತು ಹೇಮಚಂದ್ರ ರವರಿಗೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  32. An Accident took 10 years to become a melting moment.sir,hopefully you have experienced another reminsceble moment.
    I am so touched. thank u :-)

    ReplyDelete
  33. ಕೃಷ್ಣಮೂರ್ತಿ ಸರ್,

    ನೀವು ಅವರಿಗೆ ಮಾಡಿದ ಉಪಕಾರ ನಿಮಗೆ ನಂತರ ಪ್ರತ್ಯುಪಕಾರವಾಗಿ ವಾಪಸ್ ಬಂತು. ನಿಮ್ಮ ಅನುಭವ "ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ, ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದಕ್ಕೆ ಕಟ್ಟಿಹುದು ಬುತ್ತಿ.. " ಎಂಬ ಸರ್ವಜ್ಞ ವಾಣಿಯನ್ನು ನಿರೂಪಿಸಿದೆ. ಧನ್ಯವಾದಗಳು.

    -ಉಮೇಶ್

    ReplyDelete

Note: Only a member of this blog may post a comment.