Saturday, October 2, 2010

"ಮತ್ತೆ ಹುಟ್ಟಿ ಬಾ ----ಬಾಪೂ"

ಬಾಪೂ----------ಇಂದು,
ನ್ಯಾಯಕ್ಕಾಗಿ,ನೀತಿಗಾಗಿ, 
ನಮ್ಮೆಲ್ಲರ ಸ್ವಾತಂತ್ರ್ಯಕ್ಕಾಗಿ ,
ಹೋರಾಡಿದ ನಿನ್ನ 
ಜನುಮ ದಿನ !
ಎಲ್ಲದಕ್ಕೂ  ನಿನ್ನ 
ಹೆಸರು ಹೇಳಿಕೊಂಡು ,
ತಕ್ಕಡಿ ಹಿಡಿದು ಕುಳಿತಿದ್ದಾರೆ 
ತಲೆಗೆ ಟೋಪಿ ಇಟ್ಟ  ಜನ!
ತಕ್ಕಡಿ ಕೆಳಗೆ ನೋಡು !
ಮೋಸ ಬಯಲಾಗುತ್ತೆ !
ನಿನ್ನ ಹೆಸರಿನ ಹಿಂದೆ ,
ಏನೆಲ್ಲಾ ದಂಧೆ
ನಡೆಯುತ್ತೆ ಅನ್ನೋದು 
ನಿನಗೇ ಗೊತ್ತಾಗುತ್ತೆ!
ನಿನ್ನ ರಾಮ ರಾಜ್ಯದ ಕನಸ 
ನನಸಾಗಿಸಲಾದರೂ-----,
ಸತ್ಯ ಅಹಿಂಸೆ ನ್ಯಾಯ ನೀತಿಗಳ 
ಅನುಷ್ಠಾನ ಗೊಳಿಸಲಾದರೂ,
ಮತ್ತೊಮ್ಮೆ ಹುಟ್ಟಿಬಾ ಬಾಪೂ!

15 comments:

  1. ಗಾಂಧೀಜಿಯನ್ನು ಚೆನ್ನಾಗಿ ನೆನೆಸಿದ್ದೀರ....
    ಚೆಂದದ ಕವನ....

    ReplyDelete
  2. sir,
    gaandhijiya nenapina jotege shashtriji yavarannu nenasikoLLoNa..... chennaagide sir.... nimma aashaya, kavana...

    ReplyDelete
  3. ಕೃಷ್ಣಮೂರ್ತಿಯವರೆ,
    ಗಾಂಧೀಜಿಯ ಸ್ಮರಣೆ ಇಂದಿನ ಅಗತ್ಯವಾಗಿದೆ. ಧನ್ಯವಾದಗಳು.

    ReplyDelete
  4. mareyutiha nannanta yuvakarige gandijiyavara adarsha tatvagalu indina dinadalli tumba avasyakavagide sir.... samchadallina ketta asegalu rajakaranigalinda swachcha golisalu gandijiyavara adarshagalu avasyaka mattu prastuta sir...

    nimmondige nanu omme devaralli pratisutte sir matte huttibarali omme baapu....

    ReplyDelete
  5. ಸರ್,

    ಗಾಂಧಿ ಜಯಂತಿ ನಾವು ಹೀಗೆ ಬೇಡಿಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಅದಕ್ಕೆ ಬೇಸರವಾಗುತ್ತಿದೆ..ಗಾಂಧಿ ನೆನಪಿಗಾಗಿ ಕವನ ಕೊಟ್ಟಿದ್ದಕ್ಕೆ ಥ್ಯಾಂಕ್ಸ್.

    ReplyDelete
  6. ಕೃಷ್ಣಮೂರ್ತಿಯವರೆ...

    ಗಾಂಧಿಯವರು ವಿಶ್ವ ಮಾನವ...

    ಚಂದದ ಕವಿತೆಗೆ ಅಭಿನಂದನೆಗಳು...

    ReplyDelete
  7. ಸರ್,

    ಬಹುಷಃ ಗಾಂಧೀಜಿ ಮರಳಿ ಬಂದರೆ ಈಗೀನ ಸ್ಥಿತಿ ನೋಡಿ, ತಾವು ಯಾವುದಕ್ಕೋಸರ ಹೋರಾಟ ಮಾಡಿದ್ದು ಎನ್ನುವ ಕೋರಗಿನಲ್ಲೇ ಮತ್ತೆ ವಾಪಸ್ ಹೋಗುತ್ತಾರೆ..

    ಒಳ್ಳೆಯ ಕವನ..

    ಗಾಂಧೀ ಜಯಂತಿ ಶುಭಾಶಯಗಳು

    ReplyDelete
  8. gandhi jayanthi shubhashayagalu.ganghi ondu maratada saragiruva eedinagalli nimma kavana sakalika.dhanyavadagalu.

    ReplyDelete
  9. ಗಾಂಧೀ ಜಯಂತಿ ಶುಭಾಶಯಗಳು

    ReplyDelete
  10. ಇ೦ದಿನ ನಮ್ಮ ಪರಿಸ್ಥಿತಿಗೆ ಪರಿಹಾರ ರೂಪವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಗಾ೦ಧೀಜಿಯವರ ನಿಸ್ವಾರ್ಥ ಸೇವಾಮನೋಭಾವ ಹುಟ್ಟಲೇ ಬೇಕು. ಕವನ ಚೆನ್ನಾಗಿದೆ ಸರ್.

    ReplyDelete
  11. ಡಾಕ್ಟರ್ ಸಾಹೇಬರೆ ಒಂದು ವೇಳೆ ನಿಮ್ಮ ಕರೆ ಆಲಿಸಿ ಬಾಪೂ ಮತ್ತೆ ಬಂದರೆ ಎನ್ನುವ ಭೀತಿ ಹಲವರಿಗಿದೆ

    ReplyDelete
  12. ಚೆಂದದ ಕವನ! ಬಾಪು ಇಂದು ಹುಟ್ಟಿ ಬಂದರೆ ಇಂದಿನ ಭ್ರಷ್ಟಾಚಾರ ನೋಡಿ ಓಡಿ ಹೋಗುತ್ತಾರೆ

    ReplyDelete
  13. ಚೆಂದದ ಕವನ! ಬಾಪು ಇದ್ದಿದ್ದರೆ ಬ್ರಿಟಿಷರನ್ನು ಓಡಿಸಿ ತಪ್ಪು ಮಾಡಿದೆ ಎಂದು ವ್ಯಥೆ ಪಡುತ್ತಿದ್ದರು.

    ReplyDelete
  14. Sir,

    Tumbaa chennagide sir,Arthapurna kavana.

    ReplyDelete

Note: Only a member of this blog may post a comment.