Thursday, November 11, 2010

"ಬಾಯಿಯಲ್ಲಿ .........ಅದೇನದು ...?"

ನಾನು ಬಳ್ಳಾರಿಯಲ್ಲಿ 1995 ರಲ್ಲಿ  E.N.T.ಮಾಡುತ್ತಿದ್ದಾಗ ,ನನ್ನ ಸಹಪಾಟಿ ಸುರೇಶನಿಗೆ ಸದಾ ಬಾಯಿಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡಿರುವ ಅಭ್ಯಾಸವಿತ್ತು.ರಜನೀ ಕಾಂತ್ ಸಿನಿಮಾದಲ್ಲಿ ಬಾಯಲ್ಲಿ ಸಿಗರೇಟೊಂದನ್ನು ಕಚ್ಚಿಕೊಂಡು ಅತ್ತಿಂದಿತ್ತ ಹೊರಳಿಸಿ ಮಾತನಾಡುವಂತೆ ,ಬಾಯಲ್ಲಿ  ಗುಂಡು ಪಿನ್ನನ್ನು ಆಚೀಚೆ  ಹೊರಳಿಸುತ್ತಾ ವಿಚಿತ್ರ ದನಿಯಲ್ಲಿ ಮಾತಾಡುತ್ತಿದ್ದ.ನಾನು ಸಾಕಷ್ಟು ಸಲ ಎಚ್ಚರಿಸಿದರೂ ,ಪಿನ್ನು ಕಚ್ಚಿಕೊಂಡೇ' ಏನೂ ಆಗೋಲ್ಲಾ ಬಿಡಿಸಾರ್.ರೂಢಿ ಆಗಿದೆ.ನೀವು ಎಲ್ಲಾದಕ್ಕೂಸುಮ್ನೆ ಹೆದರುತ್ತೀರಾ'ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ.ನಾನು ಹೇಳುವಷ್ಟು ಹೇಳಿ ಸುಮ್ಮನಾದೆ.

ಒಮ್ಮೆ ಹೀಗೇ ,ಬಾಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡು ಮಾತಾಡುತ್ತಿದ್ದಾಗ ,ಪಿನ್ನು ನಾಲಿಗೆ ಮೇಲೆ ಕುಳಿತು ಉಸಿರಾಟದ ನಾಳದ ಕಡೆಗೆ ಪ್ರಯಾಣ ಬೆಳೆಸಿತು.ಯಾವುದೇ ಹೊರವಸ್ತು ಉಸಿರಾಟದ ನಾಳದೊಳಗೆ ಹೊಕ್ಕರೆ ,ಉಸಿರಾಟಕ್ಕೆ ವಿಪರೀತ ತೊಂದರೆ ಯಾಗುತ್ತದೆ.ಇದನ್ನು ವೈದ್ಯಕೀಯ ಭಾಷೆಯಲ್ಲಿ stridor ಎನ್ನುತ್ತೇವೆ.ನಮ್ಮ ಪ್ರೊಫೆಸರ್ ವಿಪರೀತ ಸಿಟ್ಟಿನ ಮನುಷ್ಯ.ವಿಷಯ ತಿಳಿದು ಸುರೇಶನಿಗೆ 'ಯಕ್ಕಾ ಮಕ್ಕಾ 'ಬೈದರು.ಮಿಕ್ಕ P.G.Students ಗೂ ಮುಖಕ್ಕೆ ಮಂಗಳಾರತಿ ಆಯಿತು.ಸುರೇಶನನ್ನು ಆಪರೇಶನ್ ಥೀಯೆಟರ್ ಗೆ ಕರೆದು ಕೊಂಡು ಹೋಗಿ ,Bronchoscopy  ಎನ್ನುವ proceedure ಮಾಡಿ ಪಿನ್ನು ತೆಗೆದಿದ್ದಾಯಿತು. ನಾವೆಲ್ಲಾ ಸುರೇಶನಿಗೆ ಆಗಾಗ 'ಪಿನ್ನು ಬೇಕಾ ಸುರೇಶಾ?,ಎಂದು  ಅವನನ್ನು  ರೇಗಿಸುವುದನ್ನು ಮಾತ್ರ ಬಿಡಲಿಲ್ಲ.

ಮತ್ತೆ ಕೆಲವರಿಗೆ ಪೆನ್ನಿನ ಕ್ಯಾಪನ್ನೋ ,ಕಡ್ಡಿಯನ್ನೋ, ಕಚ್ಚಿಕೊಂಡಿರುವ ಅಭ್ಯಾಸ ಸಾಮಾನ್ಯ.ಅನೇಕ ಸಲ ಬಸ್ಸಿನಲ್ಲಿ ಹೋಗುವಾಗ ಕಡ್ಡಿಯನ್ನು ಬಾಯಿಯಿಂದ ತೆಗೆಯಲು ಹೇಳಿ 'ನಿಮಗ್ಯಾಕ್ರೀ .......,ನಿಮ್ಮ ಕೆಲಸ ನೋಡ್ರೀ!'ಎಂದು ಬೈಸಿಕೊಂಡಿದ್ದೇನೆ.  ಹಾಳಾದ್ದು .......!  ನೋಡಿಕೊಂಡು ಸುಮ್ಮನೆ ಇರಲಾಗುವುದಿಲ್ಲವಲ್ಲಾ .......!   ನಾನು ದಾಂಡೇಲಿಯ ಬಳಿ ಅಂಬಿಕಾನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಆರನೇ ತರಗತಿಯ ಹುಡುಗನೊಬ್ಬ ರೆನಾಲ್ಡ್ ಪೆನ್ನಿನ ಕ್ಯಾಪನ್ನು ಬಾಯಲ್ಲಿ ಇಟ್ಟು ಕೊಂಡಿದ್ದಾಗ  ಅಕಸ್ಮಾತ್ತಾಗಿ ಅದು ಒಳ ಹೋಗಿ ಉಸಿರಾಟದ ನಾಳದಲ್ಲಿ ಸಿಕ್ಕಿಕೊಂಡು ,ಆಸ್ಪತ್ರೆಗೆಸಾಗಿಸುವಷ್ಟರಲ್ಲಿಯೇ
ಸಾವನ್ನು ಅಪ್ಪಿದ ದಾರುಣ ಘಟನೆಯೊಂದು ನಡೆಯಿತು.

ಹೇಳುತ್ತಾ ಹೋದರೆ, ನೂರಾರು ಘಟನೆಗಳು ನೆನಪಿಗೆ ಬರುತ್ತವೆ.ಮತ್ತೆ ಎಂದಾದರೂ ಅವುಗಳನ್ನು ದಾಖಲಿಸುತ್ತೇನೆ. ಇವತ್ತಿಗೆ ಇಷ್ಟು ಸಾಕು.ಇಂತಹ ಅಭ್ಯಾಸವಿರುವ ಯಾರಾದರೂ ನಿಮಗೆ  ಕಂಡರೆ ಅದನ್ನು ಬಿಡುವಂತೆ ಅವರಿಗೆ  ಹೇಳುವುದನ್ನು  ಮಾತ್ರ ಮರೆಯಬೇಡಿ.ನಮಸ್ಕಾರ.

17 comments:

  1. ha ha...olle kathe.. :-)nange yaaradru kandre khandita heluttini sir.. :-)

    ReplyDelete
  2. doctor sir, wiriting from office ur posts are not only informative but are full of "entertainmement" too. the old post about mothers and child care was really superb.

    ReplyDelete
  3. doctor ur articles ae thought provoking also lead to interesting study of human nature.

    ReplyDelete
  4. ಡಾಕ್ಟ್ರೇ

    ಗುಂಡು ಪಿನ್ನಿನ ಕತೆ ಯಾತನಾಮಯ ಹೌದು ಸರ್. ಈ ಪೋಸ್ಟನ್ನು ಪ್ರಿಂಟ್ ತೆಗೆದು ನಮ್ಮ ಆಫೀಸಿನ ನೋಟೀಸ್ ಬೋರ್ಡ್ಗೆ ಸಿಕ್ಕಿಸಿದ್ದೀನಿ. ಬುದ್ದಿವಾದ ಹೇಳಿದ್ದಕ್ಕಾಗಿ ಥ್ಯಾಂಕ್ಸ್...

    ಅಂದ ಹಾಗೇ ’ನನ್ನ ಕೂಸೇ’ ಕವನ ಸ್ವಲ್ಪ ಬದಲಾವಣೆಯಾಗಿದೆ. ಓದಿ ಕಮೆಂಟ್ ಹಾಕಿ..

    http://badari-poems.blogspot.com/2010/11/blog-post.html

    ReplyDelete
  5. ಉತ್ತಮ ಬರಹ. ಮುಂದುವರಿಸಿ

    ReplyDelete
  6. ಕೃಷ್ಣಮೂರ್ತಿ ಸರ್,

    ಗುಂಡುಪಿನ್ ಕತೆ ಹೇಳಿದ ರೀತಿ ಮಜವಾಗಿತ್ತು ..

    ವಂದನೆಗಳು

    ReplyDelete
  7. ಜಾಗರೂಕಗೊಳಿಸುವ ಈ ಲೇಖನಕ್ಕಾಗಿ ಧನ್ಯವಾದಗಳು.

    ReplyDelete
  8. ಸರ್..ನಮಸ್ತೆ..
    ನಿಮ್ಮ ಲೇಖನಗಳು ಚೆನ್ನಾಗಿವೆ. ಸಾಧ್ಯವಾದರೆ ನಮ್ಮ ಪತ್ರಿಕೆಗೂ ಬರರೆಯಿರಿ. ಪತ್ರಿಕೆಯ ಲಿಂಕ್
    http://hosadigantha.in/epaper.php
    ಮೇಲ್ hosasuppliment@gmail.com

    ReplyDelete
  9. NEEVU NEEDUTTIRUVA TILUVALIKEGE DHANYAVADAGALU.
    BAYOLAGE HORAVASTUGALANNU HAKIKOLLUVA DURABHYASAKKE KADIVANA HAKALU/HAKISALU KHANDITA PRAYITNISUTTEVE

    ReplyDelete
  10. sir,

    aagaaga nanna kathe ide..... nimma post odi nenapaayitu.... mundina saari baayige haakikoLLuvaaga nimma nenapaagatte...

    thank you sir...

    ReplyDelete
  11. ಕೃಷ್ಣಮೂರ್ತಿಯವರೆ...

    ಇಂಥಹ ದುರಭ್ಯಾಸಗಳು ಎಂಥಹ ಗಂಭೀರ ಸ್ಥಿತಿಯನ್ನು ತಂದಿಡುಬಿಡುತ್ತವೆ ಅಲ್ಲವೆ?

    ನನ್ನ ಆತ್ಮೀಯ ಗೆಳೆಯ "ನಾಗು"ವಿಗೆ ಪೇನ್ಸಿಲ್ ತುದಿಯನ್ನು ಜಗಿಯುವ ಚಟವಿತ್ತು...

    ಅದನ್ನು ಹೇಗೋ ಹೇಗೊ ಬಿಡಿಸಿ ಹಾಕಿದೆವು...

    ಅವನಿಗೆ ಗೊತ್ತಿಲ್ಲದ ಹಾಗೆ "ಹಾಗಲಕಾಯಿ ರಸವನ್ನೂ ಹಚ್ಚಿದ್ದೇವು..

    ನಮ್ಮಲ್ಲಿ "ತುರುಕೆ ಗಿಡ " ಅಂತ ಸಿಗುತ್ತದೆ...
    ಅದನ್ನು ಮುಟ್ಟಿದರೆ ಸಾಕು ದಿನವಿಡಿ ತುರಿಸುತ್ತಿರುತ್ತದೆ...

    ಅದನ್ನೂ ಅವನ ಪೇನ್ಸಿಲ್ಲಿಗೆ ಸವರಿದ್ದೇವು..

    ಹ್ಹಾ.. ಹ್ಹಾ....ಹಾ.. !

    ಡಾಕ್ಟ್ರೆ ಇನ್ನಷ್ಟು ನೆನಪಿನ ಬುತ್ತಿ ಹೊರಗೆ ಬರಲಿ...

    ReplyDelete
  12. khandita ಸಾರ್.. ಉತ್ತಮ ಬರಹ.. anda haage uguru kacchorigoo yeccharike kodla?

    ReplyDelete
  13. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.@ರವಿಕಾಂತ್ ಗೋರೆ:ಉಗುರು ಕಚ್ಚುವುದು ಅನಾರೋಗ್ಯಕರ ದುರಾಭ್ಯಾಸವಾದರೂ ನನಗೆ ತಿಳಿದ ಮಟ್ಟಿಗೆ ಅದರಿಂದ ಪ್ರಾಣಾಪಾಯವಿಲ್ಲ.ಉಗುರು ಕಚ್ಚುವುದು ಆತಂಕದ ಸಂಕೇತ.ಆ ಅಭ್ಯಾಸವನ್ನು ಬಿಟ್ಟರೆ ಆತಂಕ ಕಮ್ಮಿಯಾಗಬಹುದೇನೋ!ಆದರೆ ಎಚ್ಚರಿಕೆ ಕೊಡುವಾಗ ನಿಮಗೇನೂ ಅಪಾಯವಾಗದಂತೆ ಎಚ್ಚರಿಕೆ ವಹಿಸಿ :-D

    ReplyDelete
  14. ಹೌದು ಚಿಕ್ಕಂದಿನ ಕೆಲವು ಅಭ್ಯಾಸ ದಿಂದ ಗೊತ್ತಿಲ್ಲದಂತೆ ಕೆಲವು ಅಭ್ಯಾಸಗಳು ದೊಡ್ದವರಾಗಿದ್ರೂ ಬಿಡಲು ಕೆಲವರಿಗೆ ಆಗೋಲ್ಲ .ನೀವು ಹೇಳಿದ್ದಷ್ಟೇ ಅಲ್ಲಾ ನನ್ನ ಸ್ನೇಹಿತ ಒಬ್ಬ ಯಾವ ಅಂಗಡಿಗೆ ಹೋದರೂ ಉಪ್ಪು ಅಕ್ಕಿ ತೆಗೆದು ಮುಕ್ಕುತ್ತಾನೆ. ಬೆಂಕಿ ಕಡ್ಡಿಯಂತೂ ಅವನ ಹಲ್ಲುಗಳ ಜೊತೆ ಆಟ ಆಡುತ್ತಿರುತ್ತದೆ.ಇನ್ನು ಕೆಲವರು ತಮ್ಮ ಕೈ ಬೆರಳಿನ ಉಗುರನ್ನು ಹಲ್ಲಿನಿಂದ ಕಡಿಯುತ್ತಿರುತ್ತಾರೆ.ಲೇಖನ ಚೆನ್ನಾಗಿದೆ. ಜೈ ಹೋ.

    ReplyDelete
  15. ದುರಭ್ಯಾಸಗಳ ಅಪಾಯದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.

    ReplyDelete
  16. ಸ್ವಾಮೀ, ಒಳ್ಳೆಯ ಅನುಭವಗಳನ್ನು ನಮ್ಮುಪಕಾರಕ್ಕೆ ಲೇಖನರೂಪದಲ್ಲಿ, ತಾಳ್ಮೆಯಿಂದ ಬರೆಯುತ್ತಿದ್ದೀರಿ, ತಮಗೆ ಎಲ್ಲರಪರವಾಗಿ ಅನಂತ ಕೃತಜ್ಞತೆಗಳು.

    ReplyDelete

Note: Only a member of this blog may post a comment.