Wednesday, May 11, 2011

"ಇರುಳಲ್ಲಿ ಕಂಡ ಬಾವಿಗೆ ಹಗಲಲ್ಲಿ ಬೀಳದಿರಿ!!"

ಅದೊಂದು ಜ್ಞಾನದ,ಸಾಹಿತ್ಯದ 
ತಿಳಿನೀರು ಇದೆಯೆಂದು 
ಭ್ರಮೆ ಹುಟ್ಟಿಸುವ ಬಾವಿ!
ತಳವೇ ಕಾಣದ ಬಾವಿ!
ಆಳದಲ್ಲಿರುವ ಸುಳಿಗಳ 
ಸುಳಿವೇ  ಇಲ್ಲ!!!
ಅದಕೋ ರಕ್ಕಸ ದಾಹ!
ಜ್ಞಾನದ ನೀರಿಗಾಗಿ ಬಂದ 
ಹಾದಿ  ಹೋಕರನ್ನೇ
ದ್ರವ್ಯದ ನೀರಿಗಾಗಿ ಬೇಡುತ್ತಿತ್ತು!
ನನ್ನ ನೀರು ಇಂಗಿದೆ!
ನಿಮ್ಮಲ್ಲಿರುವ ನೀರು ನನ್ನಲ್ಲಿ ಹಾಕಿ!
ನನ್ನಲ್ಲೂ ನೀರು ಉಕ್ಕಿ ,
ನಾನೂ ತುಂಬಿದಾಗ 
ನಿಮ್ಮ ನೀರು ನಿಮಗೇ 
ಕೊಟ್ಟುಬಿಡುತ್ತೇನೆ!
ಮತ್ತೆ ,ಮತ್ತೆ ನೀರಿಗಾಗಿ ಬೇಡುವುದನ್ನು 
ಬಿಟ್ಟು ಬಿಡುತ್ತೇನೆ!
ಎನ್ನುತ್ತಾ ಗಾಳ ಹಾಕುತ್ತದೆ!
ನೀರು ಹಾಕಿ ಮೋಸ ಹೋದವರು 
ನೀರಿಗಾಗಿ ಕಾಯುತ್ತಲೇ ಇದ್ದಾರೆ!
ಆದರೆ ,ಈ ತಳವೇ ಇರದ 
ದುರಾಸೆಯ ಬಾವಿ 
ತುಂಬುವುದು ಎಂದು?
ನೀರರಸಿ  ಬಂದವರಿಂದಲೇ ಇದು
ನೀರು ಕೇಳುತ್ತಲಿದೆ!
ಅಮಾಯಕರು  ಪಾಪ ,
ಇದರ  ತುಂಬದ ಹೊಟ್ಟೆಗೆ
ನೀರು  ಸುರಿಯುತ್ತಲೇ ಇದ್ದಾರೆ!
ಇರುಳು ಕಂಡ ಬಾವಿಗೆ ,
ಹಗಲೇ ಬೀಳುತ್ತಿದ್ದಾರೆ!

31 comments:

  1. ಡಾಕ್ಟ್ರೆ.............

    ಭಾವಾರ್ತ ತುಂಬ ಚೆನ್ನಾಗಿ ಮೂಡಿ ಬಂದಿದೆ....
    ಇನ್ನಷ್ಟು ಕವನಗಳು ಬರಲಿ...

    ಬಹಳ ದಿನ ಬ್ಲಾಗ್ ಖಾಲಿ ಇಡಬೇಡಿ...

    ಪ್ರೀತಿಯಿಂದ...

    ReplyDelete
  2. ಡಾಕ್ಟರ್ ಸಾರ್ ನಿಮ್ಮ ಕವಿತೆ ಒಳ್ಳೆಯ ಔಷಧಿ ತರ ಇದೆ. ಆ ಬಾವಿಗೆ ಸದ್ಬುದ್ದಿ ಬರಲಿ , ಜ್ಞಾನದ ನೀರು ಅರಸಿ ಬರುವ ಜನರಿಗೆ ನಿರಾಸೆ ಆಗದಿರಲಿ. ಕವಿತೆ ಇಷ್ಟ ಆಯ್ತು.ಥ್ಯಾಂಕ್ಸ್.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. ಪ್ರಕಾಶಣ್ಣ;ನಿಮ್ಮ ಪ್ರೀತಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  4. ಬಾಲೂ ಸರ್;ಜನ ಅಮಾಯಕರು!ಅವರ ಒಳ್ಳೆಯ ತನವನ್ನು ದುರುಪಯೋಗ ಪಡಿಸಿಕೊಳ್ಳುವವರಿಂದ ದೂರವಿರುವುದನ್ನು ಕಲಿಯಬೇಕು.ಹೀಗೇ ಮುಂದುವರಿದರೆ ಯಾರೂ ಯಾರನ್ನೂ ನಂಬದ ಪರಿಸ್ಥಿತಿ ಬರಬಹುದು!ಒಳ್ಳೆಯತನ ಉಳಿಯಲಿ.ಮೋಸ ಮಾಡುವವರನ್ನು ದೂರವಿಡಿ.

    ReplyDelete
  5. saar.....

    soopar.....

    wonderful...

    towel ge kallu kaTTi hoDitaaralla....

    haagide kavana...

    chennaagide.........

    ReplyDelete
  6. ದಿನಕರ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಂಬಿದವರಿಂದ ಮೋಸ ಹೋಗುವುದು ನಿಜಕ್ಕೂ ಅತೀವ ನೋವು ಕೊಡುವ ಸಂಗತಿ.ಯಾರನ್ನೂ ಯಾರೂ ಮೋಸ ಮಾಡದ ಕಾಲ ಬರಲಿ ಎನ್ನುವ ಹಾರೈಕೆ ನನ್ನದು.

    ReplyDelete
  7. ಡಾಕ್ಟ್ರೇ,
    ನಿಮ್ಮ ಕವನದಲ್ಲಿರುವ ಭಾವಿ ಸಹಜವಾಗಿ ಎಲ್ಲರಿಗೂ ಉಪಕಾರವನ್ನು ನೀಡುವಂತದ್ದು. ಆದ್ರೆ ಇಲ್ಲಿ ಉಲ್ಟಾ ಆಗಿದೆಯಲ್ಲ. ಅದಕ್ಕೆ ಒಳ್ಳೆಯಬುದ್ದಿ ಬರಲಿ...ಕವನದ ಮೂಲಕ ವಿಭಿನ್ನವಾದ ವಿಚಾರ ಹೇಳಲು ಪ್ರಯತ್ನಿಸಿದ್ದೀರಿ..ಚೆನ್ನಾಗಿದೆ.
    ಧನ್ಯವಾದಗಳು.

    ReplyDelete
  8. ಶಿವು;ಮನುಷ್ಯನ ದುರಾಸೆ ತಳವೇ ಇರದ ಬಾವಿಯಂತಲ್ಲವೇ?ಇಂತಹವರಿಗೆ ಆ ಭಗವಂತನು ಸದ್ಬುದ್ಧಿ ಕೊಡಲಿ.

    ReplyDelete
  9. ಈ ತಳವೇ ಇರದ
    ದುರಾಸೆಯ ಬಾವಿ
    ತುಂಬುವುದು ಎಂದು?
    ನೀರರಸಿ ಬಂದವರಿಂದಲೇ ಇದು
    ನೀರು ಕೇಳುತ್ತಲಿದೆ!
    ಅಮಾಯಕರು ಪಾಪ ,
    ಇದರ ತುಂಬದ ಹೊಟ್ಟೆಗೆ
    ನೀರು ಸುರಿಯುತ್ತಲೇ ಇದ್ದಾರೆ!.....
    ಆಹಾ..ಎಂಥ ಸಾಲುಗಳು,ಚೆನ್ನಾಗಿ ಬರೆದಿದ್ದೀರಿ ಡಾಕ್ಟ್ರೇ.

    ReplyDelete
  10. ಸಾರ್ .. ಚನ್ನಾಗಿದೆ ..

    ಭಾವ ಚನ್ನಾಗಿ ಮೂಡಿ ಬಂದಿದೆ

    ನನಗೆ ಓದಿದಾಗ ತಕ್ಷಣ ತಲೆಗೆ ಹೊಳೆದದ್ದು "ಸ್ಟಾಕ್ ಮಾರ್ಕೆಟ್ " ಅನ್ನೋ ತಳ ಇಲ್ಲದ ಬಾವಿ :-)

    ReplyDelete
  11. ನಾಗರಾಜ್ ಭಟ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  12. ಭಾಶೇ ಯವರೇ;ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  13. ದೀಪಕ್ ವಸ್ತಾರೆ;ಪ್ರತಿಕ್ರಿಯೆಗೆ ಧನ್ಯವಾದಗಳು.ಅವರವರ ಭಾವಕ್ಕೆ ತಕ್ಕಂತೆ ಅವರವರ ಅನಿಸಿಕೆ!ಅಲ್ಲವೇ?

    ReplyDelete
  14. ಮಹೇಶ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ .ನಮಸ್ಕಾರ.

    ReplyDelete
  15. duraaseya bhaaviyannu jnanada bhaaviyendukondevu jnaanakkaagi dravya suridevu...
    kaledukondiddu baree hanavalla hanadondige maanaveeya nambikegalannu!

    maarmika kavana.

    ReplyDelete
  16. Doctor,

    tumba arthagarbhita kavana

    tumba khushi aytu odi

    ReplyDelete
  17. ಡಾಕ್ಟ್ರೇ, ಸೂಚ್ಯವಾಗಿ ಅಂತರ್ಜಾಲದ ಅಪಾಯಗಳನ್ನು ತೆರೆದಿಟ್ಟಿದ್ದೀರಿ. ಇಲ್ಲಿ ನಿಮ್ಮದು ಕಹಿ ಗುಳಿಗೆಗೆ ಸಕ್ಕರೆ ಲೇಪಿಸುವ ವೃತ್ತಿ ಸಹಜ ಪ್ರಯತ್ನ. ಭಾಷೆ ಬಲು ಮುದ್ದಾಗಿ ಮನಸಿಗೆ ತಟ್ಟುತ್ತದೆ. ನಮ್ಮಂತ ಯುವ (!) ಜನಾಂಗಕ್ಕೆ ಕಂಪ್ಯೂಟರ್ ವ್ಯಾಮೋಹದ ಅರಿವು ಮೂಡಿಸುವ ನಿಮ್ಮ ಈ ಪ್ರಯತ್ನಕ್ಕೆ, ನಮ್ಮ ಸಲಾಮ್!

    ReplyDelete
  18. ಸೀತಾರಾಂ ಸರ್;ನಿಮ್ಮ ನೋವಿನಲ್ಲಿ ನಾನೂ ಸಹಭಾಗಿ.ಈ ರೀತಿಯ ಕಹಿ ಅನುಭವಗಳು ಯಾರಿಗೂ ಆಗದಿರಲಿ ಎನ್ನುವುದೇ ನನ್ನ ಹಾರೈಕೆ.

    ReplyDelete
  19. ಗುರು ಸರ್;ನಿಮ್ಮ ನೋವು ನನಗೆ ಅರ್ಥವಾಗುತ್ತದೆ.ಅರ್ಥವಾಗಬೇಕಾದವರಿಗೆ ಅರ್ಥವಾಗಿ ಇಂಥಾ ಅನರ್ಥಗಳು ಇನ್ನಷ್ಟು ನಡೆಯದಿರಲಿ.

    ReplyDelete
  20. ಬದರಿ ಸರ್;ನಿಮ್ಮದು ಅದ್ಭುತ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.ಬರುತ್ತಿರಿ .ನಮಸ್ಕಾರ.

    ReplyDelete
  21. ಕೊಳಲಿನಲ್ಲಿ ಯಾಕೋ ಇ೦ದು ನೋವು ತು೦ಬಿದ ರಾಗ ಕೇಳಿಸಿತು. ಮೋಸದ ವ್ಯಾಪಾರವನ್ನು ಸೂಚ್ಯವಾಗಿ ಹೊಮ್ಮಿಸಿದ್ದೀರಿ. ಅಭಿನ೦ದನೆಗಳು ಸರ್.

    ಅನ೦ತ್

    ReplyDelete
  22. ತುಂಬಾ ಅರ್ಥಗರ್ಭಿತವಾದ ಕವನ... ಆದರೆ ನೀವು ಯಾವ ವಿಷಯವನ್ನು ಮನದಲ್ಲಿಟ್ಟುಕೊಂಡು ಇದನ್ನು ರಚಿಸಿದಿರಿ ಎಂದು ತಿಳಿದುಕೊಳ್ಳುವ ಕುತೂಹಲ ಉಂಟಾಯಿತು..

    ReplyDelete
  23. ಅನಂತ್ ಸರ್;ಬ್ಲಾಗ್ ಲೋಕದಲ್ಲಿ ನಡೆಯುತ್ತಿರುವ ಕೆಲ ವಿದ್ಯಮಾನಗಳು ಮನಸ್ಸಿಗೆ ಬೇಸರ ಉಂಟುಮಾಡಿವೆ.ಇದರ ಬಗ್ಗೆಯೇ ಕವನ ಬರೆಯುವಂತೆ ಸ್ನೇಹಿತರೊಬ್ಬರ ಸವಾಲಿನ ಫಲ ಶ್ರುತಿ ಈ ಕವನ.ಮುಂದಿನ ದಿನಗಳಲ್ಲಿ ಕೊಳಲಿನಲ್ಲಿ ಮನಕ್ಕೆ ಮುದ ನೀಡುವ ರಾಗಗಳೂ ಬರಲಿವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  24. ಪ್ರದೀಪ್ ರಾವ್;ಮೇಲಿನ ಪ್ರತಿಕ್ರಿಯೆ ನಿಮ್ಮ ಪ್ರಶ್ನೆಗೆ ಉತ್ತರ ನೀಡಿದೆ ಎಂದುಕೊಂಡಿದ್ದೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  25. sir thumba chennagiruva saalugalu....
    mosa hoguvavaru iruva tanaka mosa maaduvavaru kuda iruttare...

    ReplyDelete
  26. GIRISH;Thank you for your kind comments.

    ReplyDelete
  27. Gurugale,
    aa Baavi tumbi nammantavara baayaarike tanisuva kaala baruvudendu kayabahude???

    channaagide chati etu!!!

    ReplyDelete
  28. ತಳ ತು೦ಬದ ಭಾವಿಯ ಮೂಲಕ ಮಾನವನ ದುರಾಸೆಯನ್ನು ತೆರೆದಿಟ್ಟಿದ್ದೀರಿ. ಉತ್ತಮ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.

    ReplyDelete

Note: Only a member of this blog may post a comment.