Monday, April 18, 2011

"ಸಂತೋಷವೇ ........ಪೂಜೆ,ಪ್ರಾರ್ಥನೆ ,ಧ್ಯಾನ !!!"

ನಮ್ಮ ದಿನ ನಿತ್ಯದ ಜೀವನ ,ಸಣ್ಣ ಸಣ್ಣ ಸಂಗತಿಗಳಿಂದ ತುಂಬಿದೆ.ನೀವು ಯಾವುದೇ ಸಣ್ಣ ಕೆಲಸವನ್ನು ಉಲ್ಲಾಸದಿಂದ ಉತ್ಸಾಹದಿಂದ ಆಸ್ಥೆಯಿಂದ ಮಾಡಿದ್ದೇ ಆದರೆ,ಆ ಸಣ್ಣ ಸಣ್ಣ ಸಂಗತಿಗಳೇ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತರ ಬಲ್ಲವು.ನೀವು ಊಟ ಮಾಡುವುದಾಗಿರಲಿ,ನೆಲ ಒರೆಸುವುದಾಗಿರಲಿ,ಯಾವುದೇ ದಿನ ನಿತ್ಯದ ಕೆಲಸವಾಗಿರಲೀ ,ಅದನ್ನೇ ಸಂತೋಷದಿಂದ ಮಾಡಿದರೆ ಅದೇ ಪ್ರಾರ್ಥನೆಯಾಗುತ್ತದೆ!!ನಿಮ್ಮ ಪ್ರೀತಿ ಪಾತ್ರರಿಗೆ ನೀವು ಸಂತಸದಿಂದ ಅಡಿಗೆ ಮಾಡಿದರೆ ಅದೇ ಧ್ಯಾನವಾಗುತ್ತದೆ !! 

ಸಣ್ಣ ಸಣ್ಣ ಕೆಲಸ ಕಾರ್ಯಗಳಲ್ಲೂ ,ಸಂತಸ ಮತ್ತು ನೆಮ್ಮದಿಯನ್ನು ಕಾಣುವುದೇ ಅರ್ಥ ಪೂರ್ಣ ಜೀವನದ ಗುಟ್ಟು!! ನೀವು ಮಾಡುವ ಪ್ರತಿ ಕೆಲಸದಲ್ಲೂ ನಿಮ್ಮನ್ನು ನೀವು ಸಂತೋಷದಿಂದ ತೊಡಗಿಸಿ ಕೊಳ್ಳುವುದೇ ದೇವರ ಪೂಜೆಯಾಗುತ್ತದೆ.ನಿಮ್ಮ ಜೀವನದ ಕರಾಳ ರಾತ್ರಿ ಮುಗಿದು,ಸಂತಸದ ಸೂರ್ಯೋದಯವಾಗಲಿ!!!
LET  EVERY WORK OF YOUR'S BE  A CULTIVATION  OF HAPPINESS!!! AND CULMINATE IN HAPPINESS !!!
(ಓಶೋ ಪ್ರವಚನ ಒಂದರ ಭಾವಾನುವಾದ)

24 comments:

  1. ಮೂರ್ತಿ ಸರ್ ನಮಸ್ತೆ.
    ಎಲ್ಲೋ ಓದಿದ್ದ ಒಂದು ಸಾಲು ಇವತ್ತಿಗೂ ನೆನಪಿದೆ..!
    "Small Things Makes Big Differences"
    ನಿಮ್ಮ ಲೇಖನ ಹಾಗೂ ಮೇಲಿನ ಸಾಲು ಎರಡು ತುಂಬಾ ಅರ್ಥಪೂರ್ಣ..
    ಹಾಗೂ ನೀವು ಹೇಳಿದ Eckhart Tolle ಅವರ Stillness Speaks ಓದುತ್ತಿದ್ದೇನೆ.
    ನಿಜಕ್ಕೂ ಅದ್ಭುತವಾದ ಪುಸ್ತಕ..
    ಇಂತಹ ಲೇಖನಗಳು ಇನ್ನಷ್ಟು ಬರಲಿ ಎಂದು ಆಶಯ.. :)
    ಧನ್ಯವಾದಗಳು.

    ReplyDelete
  2. ಅನಿಲ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಾವು ಇಂಗ್ಲೀಷಿನಲ್ಲಿ ಓದಿ ಇಷ್ಟಪಟ್ಟ ಬರಹಗಳನ್ನು ಕನ್ನಡದಲ್ಲಿ ಎಲ್ಲರೊಂದಿಗೆ ಹಂಚಿಕೊಳ್ಳಬೇಕಿನಿಸುತ್ತದೆ.ನಿಮ್ಮಿಂದಲೂ ನೀವು ಈಗ ಓದುತ್ತಿರುವ ಅದ್ಭುತ ಪುಸ್ತಕದ ಲೇಖನಗಳ ಕನ್ನಡ ಭಾವಾನುವಾದ ನಿಮ್ಮ ಬ್ಲಾಗಿನಲ್ಲಿ ಬರಲಿ.

    ReplyDelete
  3. ಮೂರ್ತಿ ಸರ್,

    ನಿಮ್ಮ ಲೇಖನದ ಮೂಲಕ ಹೇಳುತ್ತಿರುವ ವಿಷಯಕ್ಕೆ ನಿಮ್ಮ ಲೇಖನವೇ ಒಂದು ಜ್ವಲಂತ ಉದಾಹರಣೆ... ... ನೀವು ಚಿಕ್ಕದಾಗಿ ಬರೆದಿರುವ ಈ ಚೊಕ್ಕವಾದ ಲೇಖನ ಎಷ್ಟು ಅರ್ಥಪೂರ್ಣವಾಗಿದೆಹಾಗೂ ಎಷ್ಟು ಆಳವಾದ ವಿಷಯಗಳನ್ನು ಹೊಂದಿದೆ ನೋಡಿ.....ಉತ್ತಮ ಬರಹ.....ಧನ್ಯವಾದಗಳು ..

    ReplyDelete
  4. ಅಶೋಕ್ ಸರ್; ನಿಜವಾದ ಆನಂದದಲ್ಲಿರುವವನು ಆತ್ಮದ ವೈರಿಗಳಾದ ಕೋಪ,ದ್ವೇಷ,ಅಸೂಯೆಗಳಲ್ಲದೆ ಪರಿಶುದ್ಧ ಮನ ಹೊಂದಿರುತ್ತಾನೆ.ಪರಿಶುದ್ಧ ಮನವೇ ಪೂಜೆಯಲ್ಲವೇ? ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. kelasa ondu duty aagabaradu.adaralli involve aadaga ,adaralliya majave bere.capsule taraha ero ee lekhana kelasada sukha needali.

    ReplyDelete
  6. Hemachandra; ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಎಂಥಾ ವಿಷಯವನ್ನೇಳಿದಿರಿ ಸರ್... ನಿಮ್ಮ ಮಾತು ನೂರಕ್ಕೆ ನೂರು ಸತ್ಯ... ಮಾಡುವ ಕೆಲಸದಲ್ಲಿ ಶ್ರದ್ಧೆಯೆಂಬ ಪೂಜೆಯಿದ್ದರೆ ಅದೇ ತೃಪ್ತಿ ನೀಡುತ್ತೆ... ಧನ್ಯವಾದಗಳು

    ReplyDelete
  8. "ನೀವು ಮಾಡುವ ಪ್ರತಿ ಕೆಲಸದಲ್ಲೂ ನಿಮ್ಮನ್ನು ನೀವು ಸಂತೋಷದಿಂದ ತೊಡಗಿಸಿ ಕೊಳ್ಳುವುದೇ ದೇವರ ಪೂಜೆಯಾಗುತ್ತದೆ." ಈದಿನ ಒಂದು ಅತ್ಯುತ್ತಮ ಹಿತವಚನವನ್ನು ಕೇಳಿದಂತಾಯಿತು. ಧನ್ಯವಾದಗಳು.

    ReplyDelete
  9. ಮನಸು ಮೇಡಂ,ಮಹೇಶ್ ಸರ್,ಸುನಾತ್ ಸರ್,ವಸಂತ್;ಪ್ರತಿಕ್ರಿಯೆಗೆ ನಿಮ್ಮೆಲ್ಲರಿಗೂ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  10. Wonderful lines Doctor.. really a thing learn & adopt in life.

    ReplyDelete
  11. ಬಹಳ ಉತ್ತಮವಾದ ವಿಚಾರವನ್ನು ತಿಳಿಸಿದ್ದೀರಿ ಸರ್. ಧನ್ಯವಾದಗಳು.

    ReplyDelete
  12. ಪ್ರದೀಪ್ ರಾವ್ ಮತ್ತು ಪ್ರಭಾಮಣಿ ನಾಗರಾಜ್;ವಿಚಾರಗಳು ಉತ್ತಮ.ಅಳವಡಿಸಿಕೊಳ್ಳುವುದು ಕಷ್ಟ.ಆದರೆ ಖಂಡಿತಾ ಅಸಾಧ್ಯವಲ್ಲ ಎನ್ನುವುದು ನನ್ನ ಅಭಿಪ್ರಾಯ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  13. ಧನ್ಯವಾದಗಳು ಸೀತಾರಾಂ ಸರ್.ನಮಸ್ಕಾರ.

    ReplyDelete
  14. Namma annadaata sir m v avaru idanne taane heliddu..

    ReplyDelete
  15. sir nimma arthapoornavaada lekhanakkaagi dhanyavaadagalu.

    ReplyDelete
  16. ವಿಚಲಿತ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  17. ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. ಚಿಕ್ಕದಾಗಿ, ಚೊಕ್ಕವಾಗಿದೆ, ಧನ್ಯವಾದ

    ReplyDelete
  19. This post is so insprirational doctor. thanks

    ReplyDelete
  20. ವಿಚಾರಗಳು ಉತ್ತಮ.ಅಳವಡಿಸಿಕೊಳ್ಳುವುದು ಕಷ್ಟ.ಆದರೆ ಖಂಡಿತಾ ಅಸಾಧ್ಯವಲ್ಲ ಎನ್ನುವುದು ನಿಜ...ನೂರಕ್ಕೆ ನೂರರಷ್ಟು ಸತ್ಯ..
    ಉತ್ತಮ ಬರೆಹ..ಚೆನ್ನಾಗಿದೆ.

    ReplyDelete
  21. "ಯಜ್ಞ ಎಂದರೆ ಶ್ರೇಷ್ಠತಮವಾದ ಕರ್ಮ" ಎಂಬುದು ವೇದದ ಮಾತು. ನಿಜವಾಗಲೂ ಸರಳವಾಗಿ ಚಿಕ್ಕದಾಗಿ ನೀವು ವಿಚಾರವನ್ನು ತಿಳಿಸಿದ್ದೀರಿ."ಪ್ರೀತಿ ಪಾತ್ರರಿಗೆ ನೀವು ಸಂತಸದಿಂದ ಅಡಿಗೆ ಮಾಡಿದರೆ ಅದೇ ಧ್ಯಾನವಾಗುತ್ತದೆ" ಕಸ ಗುಡಿಸುವ ಕೆಲಸವನ್ನೇ ಅಚ್ಚುಕಟ್ಟಾಗಿ ಮಾಡಿದರೆ ಅದು ಪೂಜೆಯಾಗುತ್ತದೆಂಬ ನಿಮ್ಮ ಮಾತು ಸತ್ಯ. ನಿಮಗೆ ಧನ್ಯವಾದಗಳು.

    ReplyDelete

Note: Only a member of this blog may post a comment.