Saturday, April 2, 2011

" ನೀ ಮಲಗಿದ್ದರೆ ......ಮ್ಯಾಚ್ ಗೆಲ್ತೀವಿ !!!

ಇವತ್ತು ವಿಶ್ವ ಕಪ್ ಕ್ರಿಕೆಟ್ಟಿನ ಫೈನಲ್ ಪಂದ್ಯ.ಇಡೀ ದೇಶಕ್ಕೇ ಕ್ರಿಕೆಟ್ಟಿನ ಸಮೂಹ ಸನ್ನಿ ಹಿಡಿದಿದೆ.ಪ್ರತಿಯೊಬ್ಬರಿಗೂ ತಾವೇ ಪಂದ್ಯ ಆಡುತ್ತಿರುವಷ್ಟು ಸಂಭ್ರಮ!ಎಲ್ಲರಿಗೂ ಈಗ ಕ್ರಿಕೆಟ್ ಹುಚ್ಚು!ಆದರೆ ಕೆಲವರಿಗೆ ಕ್ರಿಕೆಟ್ ಎಂದರೆ ಅತಿರೇಕದ ಪ್ರೀತಿ!!ಅಂಥವರಲ್ಲಿ ನಮ್ಮ ರಂಗಣ್ಣನೂ ಒಬ್ಬರು .ಕ್ರಿಕೆಟ್ಟೆಂದರೆ ಅವರಿಗೆ ಉಸಿರಿದ್ದ ಹಾಗೆ.ಆ ಒಂದು ಉತ್ಕಟ ಕ್ರಿಕೆಟ್ ಪ್ರೀತಿಯ ಜೊತೆ ಜೊತೆಗೇ ಅವರದೇ ಆದ ನಂಬಿಕೆಗಳೂ ಅಂಟಿಕೊಂಡಿವೆ.ಮೊನ್ನೆ ಪಾಕಿಸ್ತಾನ್ ವಿರುದ್ಧದ ಸೆಮಿ ಫೈನಲ್ ಪಂದ್ಯದ ದಿನ ಅವರ  ಮನೆಯಲ್ಲಿ ಆರಾಮವಾಗಿ ತಲೆಯ ಅಡಿ ಒಂದು ದಿಂಬು ಇಟ್ಟುಕೊಂಡು , ನೆಲದ ಮೇಲೆ ಮಲಗಿ ಟಿ.ವಿ.ಯಲ್ಲಿ ಮ್ಯಾಚ್ ವೀಕ್ಷಣೆ ಮಾಡುತ್ತಿದ್ದೆ.ರಂಗಣ್ಣ ತಮ್ಮ  ಲಕ್ಕಿ ಡ್ರೆಸ್ ಧರಿಸಿಕೊಂಡು ಸೋಫಾ ಖಾಲಿ ಇದ್ದರೂ ,ಸೋಫಾದ ಹಿಂದೆ ಒಂದು ಪ್ಲ್ಯಾಸ್ಟಿಕ್ ಸ್ಟೂಲ್ ಹಾಕಿಕೊಂಡು (ಅದು ಅವರ ಲಕ್ಕಿ ಸೀಟಂತೆ !)ಕುಳಿತು ಮ್ಯಾಚ್ ನೋಡುತ್ತಿದ್ದರು .ನಾನು ಮಲಗಿಕೊಂಡುಮ್ಯಾಚ್ ನೋಡುತ್ತಿದ್ದಾಗ ಸೆಹ್ವಾಗ್ ಬೌಂಡರಿ ಮೇಲೆ ಬೌಂಡರಿ ಬಾರಿಸ ತೊಡಗಿದ.ನೀರು ಕುಡಿಯೋಣವೆಂದು ನಾನು ಎದ್ದು ಕುಳಿತೆ.ನನ್ನ ದುರಾದೃಷ್ಟಕ್ಕೆ ಸೆಹ್ವಾಗ್ ಔಟಾಗಿ ಬಿಡಬೇಕೇ!!ನನ್ನ ಗ್ರಹಚಾರ ನೆಟ್ಟಗಿರಲಿಲ್ಲ !!"ನೀನು ಎದ್ದದ್ದಕ್ಕೇ ಸೆಹ್ವಾಗ್ ಔಟಾಗಿದ್ದು,ಮಲಗು, ಮಲಗು "ಎಂದರು  ರಂಗಣ್ಣ!! ಮ್ಯಾಚ್ ಇಡೀ ನಾನು ಅದೇ ರೀತಿ 'ಶ್ರೀ ರಂಗ ಪಟ್ಟಣದ ರಂಗನಾಥನ' ಪೋಸ್ ನಲ್ಲಿ ಮಲಗಿಯೇ ಇರಬೇಕಾಯಿತು!!ಮಧ್ಯದಲ್ಲಿ ಲ್ಯಾಂಡ್ ಲೈನಿಗೆ ಫೋನ್ ಬಂತು ಎಂದು ರಂಗಣ್ಣ ತಮ್ಮ ಲಕ್ಕಿ ಸೀಟು ಬಿಟ್ಟು ಎದ್ದು ಹೋಗಬೇಕಾಯಿತು.ಎದ್ದು ಹೋದ ತಕ್ಷಣ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮೇಲೆ ಮೇಲೆ ಔಟಾದರು."ಥೂ !!!ನಾನು ಈ ಸೀಟು ಬಿಟ್ಟಿದ್ದಕ್ಕೇ ಮಾರಾಯ ವಿಕೆಟುಗಳು ಹೀಗೆ ಬಿದ್ದಿದ್ದು'ಎಂದು ಫೋನ್ ಮಾಡಿದವರಿಗೆ ಹಿಡಿ ಶಾಪ ಹಾಕಿ,ತಮ್ಮ ಲಕ್ಕಿ ಸೀಟಿನ ಮೇಲೆ ಕುಳಿತರು.ಮ್ಯಾಚ್ ಮುಗಿಯುವವರೆಗೂ ತಮ್ಮ  ಲಕ್ಕಿ ಸೀಟ್ ಬಿಟ್ಟಿದ್ದರೆ ಕೇಳಿ!ಕೊನೆಗೂ ಟೀಮ್ ಇಂಡಿಯಾಗೆ ಜಯ ಸಿಕ್ಕಿದಾಗಲೇ ರಂಗಣ್ಣ ನೆಮ್ಮದಿಯ ನಿಟ್ಟುಸಿರು ಹಾಗೂ ತಮ್ಮ ಲಕ್ಕಿ ಸೀಟ್ ಬಿಟ್ಟಿದ್ದು!!! ನಿಮಗೂ ಈ ರೀತಿಯ ಅನುಭವಗಳಾಗಿವೆಯೇ?ನಮ್ಮೆಲ್ಲರೊಡನೆ ನೀವೂ ಹಂಚಿಕೊಳ್ಳಿ.ನಮಸ್ಕಾರ.

30 comments:

  1. ಲಕ್ಕಿ ಸೀಟ್ ರ೦ಗಣ್ಣನ ಅವಸ್ಥೆ ಚೆನ್ನಾಗಿದೆ. ಇವತ್ತೂ ಮಲಗಿಬಿಡಿ, ಮ್ಯಾಚ್ ಮುಗೀವರೆಗೆ ಏಳಬೇಡಿ, ಯಾರೂ ಔಟ್ ಆಗೋದು ಬೇಡ, ಸಚಿನ್ ಸೆ೦ಚ್ಯುರಿ ಮೇಲೆ ಸೆ೦ಚ್ಯುರಿ ಬಾರಿಸಲಿ. ಹಹಹ ....

    ReplyDelete
  2. ಪರಾಂಜಪೆ ಸರ್;ತಕ್ಷಣದ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಭವಿಷ್ಯವಾಣಿ ನಿಜವಾಗುವುದಾದರೆ ಇವತ್ತೂ ಮ್ಯಾಚ್ ಇಡೀ ನಾನು ಮಲಗಲು ಸಿದ್ಧ.ಹ..ಹ...ಹ.

    ReplyDelete
  3. hahaha...chennagide RangaNNana lekkachaara....
    naanu lucky colour dress hakondu match nodthini haage sriranganathana tara.....

    ReplyDelete
  4. ತುಂಬಾ ಚೆನ್ನಾಗಿದೆ..ಇಂದಿನ ಮ್ಯಾಚನ್ನು ನಮ್ಮಲ್ಲಿ ಎಲ್ಲರೂ ಮಲಗಿಕೊಂಡೇ ನೋಡಿದರೆ ಒಳ್ಳೆಯದೇ ಹೇಗೆ?..ಎಂದು ನಿಮ್ಮ ರಂಗಣ್ಣನನ್ನು ಕೇಳಿ ತಿಳಿಸಿ...ನಾನಂತೂ ಸಿದ್ಧ!

    ReplyDelete
  5. ಮಹೇಶ್ ಸರ್;ಕೆಲವರ ನಂಬಿಕೆಯ ಬಲವೇ ಹಾಗೇ.ಆ ನಂಬಿಕೆಯನ್ನು ಬಲಪಡಿಸುವಂತೆ ಘಟನೆಗಳೂ ಹಾಗೇ ನಡೆಯುತ್ತವೆ.ಒಟ್ಟಿನಲ್ಲಿ ನಂಬಿಕೆಯಲ್ಲಿ ಬಲವಿದೆ ಎಂದೇ ನನ್ನ ನಂಬಿಕೆ!

    ReplyDelete
  6. ಭಟ್ ಸರ್;ಯಾವ ಸ್ಥಿತಿ ಯಲ್ಲಿ ನೀವಿದ್ದರೆ ನಮ್ಮ ಟೀಮಿಗೆ ಅನುಕೂಲವೋ ನೀವು ಆ ಸ್ಥಿತಿಯಲ್ಲೇ ಇರಿ.ಇದು ರಂಗಣ್ಣ ನವರ ಅಭಿಪ್ರಾಯವೂ ಹೌದು.ಒಟ್ಟಿನಲ್ಲಿ ನಮ್ಮ ಟೀಂ ಗೆದ್ದರೆ ಸಾಕು.ಧನ್ಯವಾದಗಳು.

    ReplyDelete
  7. Nannadu ide dourbaaghya Dr. Sir. Nanu nodirada match nalli india geluvu saadhiside. Stithaprajnate belesikollodakke idu ondu avakasha ankondu bittideeni...

    ananth

    ReplyDelete
  8. ಅನಂತ್ ಸರ್;ಇದೊಳ್ಳೆ ಕಥೆ ಆಯಿತಲ್ಲ!ಮ್ಯಾಚೆ ನೋಡದೆ ಇರೋದು ಹೇಗೆ!

    ReplyDelete
  9. ನಾನಂತೂ ಮ್ಯಾಚನ್ನ ಅಷ್ಟು ಸೀರಿಯಸ್ಸಾಗಿ ನೋಡುವುದಿಲ್ಲ!!! ನನ್ನ ಡ್ಯೂಟಿ ಮುಗಿಸಿ ಈಗ ನೋಡಲು ಕುಳಿತೆ!!! ಮೊಬೈಲ್ ಇಂಟರ್ ನೆಟ್ ನಲ್ಲಿ ಆಗಾಗ ಸ್ಕೋರ್ ನೋಡ್ತಿದ್ದೆ!!

    ReplyDelete
  10. ಸುಬ್ರಮಣ್ಯ;we have won the world cup.CHAKDE INDIA!

    ReplyDelete
  11. krishnamurthy sir ravare lakki seet prasanga sogasaagide.aa shikshege nivu olagaagiddira...!?!hego antu INDIA GE jaya sikkitalla,shree ranganaathana krupe....!!

    ReplyDelete
  12. lucky seat kathe vyathe chennagide,even Aamir khan weared the same dress while watching final which he weared against Pakistan..

    ReplyDelete
  13. ತುಂಬಾ ಚೆನ್ನಾಗಿದೆ ಲಕ್ಕಿ ಸೀಟ್ ರ೦ಗಣ್ಣನ ಅವಸ್ಥೆ :)

    ReplyDelete
  14. ಕಲಾವತಿ ಮೇಡಂ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರೆಯಲಿ.ನಮಸ್ಕಾರ.

    ReplyDelete
  15. ಗಿರೀಶ್;ಪ್ರತಿಯೊಬ್ಬರಿಗೂ ಅವರಿಗೇ ಅರಿವಿಲ್ಲದಂತೆ ಇಂತಹ ಹಲವಾರು ನಂಬಿಕೆ ಗಳಿರುತ್ತವೆ.ಇಂತಹ ಕೋಟಿ ಕೋಟಿ ನಂಬಿಕೆಗಳ ಬಲದಿಂದ ಆಸಾಧ್ಯವಾದದ್ದೂ ಸಾಧ್ಯವಾಗಬಹುದೇನೋ!ಯಾರಿಗೆ ಗೊತ್ತು? our world in essence is a world of energy!Faith and beliefs are strong forces of energy which make the impossible possible!We just don't know!!

    ReplyDelete
  16. ಮಹಾಬಲಗಿರಿ ಭಟ್ಟರೇ;ಲಕ್ಕಿ ರಂಗಣ್ಣ ನಂತಹವರ ಕೋಟಿ ಕೋಟಿ ಜನರ ನಂಬಿಕೆಯ ಬಲದಿಂದಲೇ ನಾವು ಗೆಲ್ಲಲು ಸಾಧ್ಯವಾಯಿತೇನೋ!ಯಾರಿಗೆ ಗೊತ್ತು? ಬಲವಾದ ನಂಬಿಕೆಯ ಬಲವನ್ನಂತೂ ಅಲ್ಲಗೆಳೆಯುವಂತಿಲ್ಲ.ಅಲ್ಲವೇ?

    ReplyDelete
  17. ಚೆನ್ನಾಗಿದೆ ಕೃಷ್ಣಮೂರ್ತಿಯವರೇ, ನಿಮ್ಮ ಲಕ್ಕಿ ಸೀಟಿನ ಕಥೆ.. ನಿಜವಾಗಿಯೂ ಹೀಗೆ ಬಹಳ ಜನ ಇರುತ್ತಾರೆ. ಅದರಲ್ಲೂ ನಾನೂ ಒಬ್ಬ.. ನಾನು ಕ್ರಿಕೆಟ್ ಮ್ಯಾಚಿನ ಮೇಲೆ ಬೆಟ್ಟಿಂಗ್ ಮಾಡಿದಾಗ ಯಾವಾಗಲೂ ಸೋಲುವುದು ಖಂಡಿತ.. ಇದು ವರ್ಷ ವರ್ಷಾಂತರಗಳಿಂದ ಬಂದ ಪರಂಪರೆಯಾಗಿಬಿಟ್ಟಿದೆ.. ನಾನು ಗೆಲ್ಲುವುದೆಂದು ಬೆಟ್ಟಿಂಗ್ ಕಟ್ಟಿದ್ದ ಒಂದೇ ಒಂದು ತಂಡ ಇಲ್ಲಿವರೆಗೂ ಗೆದ್ದಿಲ್ಲ.. ಈ ಬಾರಿಯೂ ನಾನು ಆಸ್ಟ್ರೇಲಿಯಾ, ಪಾಕಿಸ್ತಾನ, ಶ್ರೀಲಂಕಾ ಎಲ್ಲಾ ತಂಡಗಳ ಮೇಲೂ ಬೆಟ್ಟಿಂಗ್ ಕಟ್ಟಿದ್ದೆ! ಪರಂಪರೆ ಮುರಿಯದಂತೆ ಅವರೆಲ್ಲರೂ ಸೋತಿದ್ದಾರೆ! ಬೆಟ್ಟಿಂಗ್ ಸೋತು ನಮ್ಮ ಟೀಮನ್ನು ಗೆಲ್ಲಿಸಿದ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವೆ ನಾನು!
    ನಿಮ್ಮ ಬ್ಲಾಗಿಗೆ ಮೊದಲ ಭೇಟಿ.. Follower ಆಗಿದ್ದೇನೆ.. :)

    ReplyDelete
  18. ಪ್ರದೀಪ್ ರಾವ್;ನಿಮ್ಮ ಅನುಭವ ತುಂಬಾ ಚೆನ್ನಾಗಿದೆ.ನೀವು ಸೋತು ಗೆದ್ದವರು!ನನ್ನ ಬ್ಲಾಗಿಗೆ ನಿಮಗೆ ಸ್ವಾಗತ.ನಮ್ಮ ಬ್ಲಾಗಿನ ಬಾಂಧವ್ಯ ಚಿರಾಯುವಾಗಲಿ.ಬರುತ್ತಿರಿ.ಧನ್ಯವಾದಗಳು.

    ReplyDelete
  19. ಹಹಹ ಡಾಕ್ಟರ್ ಟಿ.ಡಿ.ಕೆ. ಇದು ನಮಗೆ ೧೯೮೩ ರಲ್ಲೇ ಅನುಭವವಾಗಿದೆ... ನಮ್ಮ ಒಬ್ಬ ಸ್ನೇಹಿತನಿಗೆ ರೇಡಿಯ ಹಾಕೋಕೇ ಬಿಡ್ತಿರ್ಲಿಲ್ಲ...ಅವನು ರೇಡಿಯೋ ಹಾಕಿದ್ರೆ ವಿಕೆಟ್ ಬೀಳೋದು...ಅವನಿಗೆ ಫೈನಲ್ ನಲ್ಲಿ ಡಿಮ್ಯಾಂಡೋ ಡಿಮ್ಯಾಂಡು...ವೆಸ್ಟ್ ಇಂಡೀಸ್ ವಿಕೆಟ್ ಬೀಳಿಸ್ಬೇಕಿತ್ತಲ್ಲ...ಆದ್ರೆ ಪ್ರಾಬ್ಲಂ..ಆಗಿದ್ದು...ರಿಚರ್ಡ್ಸ್ ಅವನು ಎಷ್ಟು ಸರ್ತಿ ಆನ್ ಆಫ್ ಮಾಡಿದ್ರೂ ಔಟ್ ಆಗ್ಲಿಲ್ಲ....ಹಹಹಹ ಅವನನ್ನ ಡೈನಿಂಗ್ ಹಾಲಲ್ಲಿ ನಿಮ್ಮೂರಿಂದ ಫೋನ್ ಬಮ್ದಿದೆಯಂತೆ ಅಂತ ಕಳುಹಿಸಿಬಿಟ್ವಿ...ಅವನು ಬರೋಹೊತ್ತಿಗೆ ರಿಚರ್ಡ್ಸ ವಿಕೆಟ್ ಬಿದ್ದಿತ್ತು...ಹಹಹಹ್.....ಚನ್ನಾಗಿದೆ ನಿಮ್ಮ ಅನುಭವ...

    ReplyDelete
  20. ಅಜಾದ್ ಸರ್;ನಿಮ್ಮ ಅನುಭವ ಕೂಡ ಸೊಗಸಾಗಿದೆ.ಧನ್ಯವಾದಗಳು.

    ReplyDelete
  21. ಡಾಕ್ಟ್ರೆ.. ಅಕ್ಷರಶಃ ನಿಜ ..
    ನಾನು ಯಾವಾಗ್ಲಾದ್ರು ಒಮ್ಮೆ ಫುಲ್ ಮ್ಯಾಚ್ ನೋಡಿದ್ರೆ ಸೋಲೋದು ಗ್ಯಾರಂಟೀ ....
    ಹಾಗಾಗಿ , ಸೆಮಿ ಹಾಗು ಫೈನಲ್ ಪಂದ್ಯಗಳಿಗೆ ಆರ್ಡರ್ ಆಗಿತ್ತು.. ನೋಡುದು ಬೇಡ ಅಂತ.

    ಇದು ಒಂದು ತರಹದ "ಮ್ಯಾಚ್ ವಾಸ್ತು " ಅಂತ ಇಟ್ಕೋಳಿ....

    ಬರಹ ಚನ್ನಾಗಿದೆ.. ಯುಗಾದಿ ಶುಭಾಶಯಗಳು

    ReplyDelete
  22. ಹ ಹ ಹ , ಇದೊಂತರ ಮಜಾ ಸರ್.ನಿಮ್ಮ ಅನುಭವ ಚೆನ್ನಾಗಿದೆ. ಬೆಟ್ಟಿಂಗ್ ಕಟ್ಟಿ ದುಡ್ಡು ಮಾಡೋಕೆ ಹೊರಟವರೂ ಸಹ ಹೀಗೆ ಆಡ್ತಾರೆ.ನನ್ನ ಅನುಭವ ನೋಡಿ!!! ನನ್ನ ಸ್ನೇಹಿತ ಸಹ ಹೀಗೆ ಒಮ್ಮೆ ನನಗೆ ಹೇಳಿದ್ದ ಲೋ ಬಾಲೂ ದಯಮಾಡಿ ಆಟಾ ಮುಗಿಯುವ ವರೆಗೂ ನೀ ಕುಳಿತಿರುವ ಕುರ್ಚಿ ಬಿಟ್ಟು ಎದ್ದೇಳಬೇಡ. ಅಂತಾ!!!, ಏನ್ಮಾಡ್ಲಿ ನೇಚರ್ ಕಾಲ್ ಕರೆಯ ಮೇರೆಗೆ ಅವನ ಮಾತನ್ನು ಲೆಕ್ಕಿಸದೆ ಕುರ್ಚಿಬಿಟ್ಟು ತೆರಳಿದೆ. ಕಾಕತಾಳಿಯ ಅವತ್ತು ನಮ್ಮ ದೇಶ ಕ್ರಿಕೆಟ್ ನಲ್ಲಿ ಸೋತಿತು. ನನ್ನ ಗೆಳೆಯ ಬೆಟ್ಟಿಂಗ್ ನಲ್ಲಿ ದುಡ್ಡು ಸೋತುಬಿಟ್ಟ!!! ನನಗೆ ಹಿಡಿಶಾಪ ಹಾಕಿ ಪಾವನ ಗೊಳಿಸಿದ.ನಿಮಗೆ ಹಾಗು ನಿಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  23. ದೀಪಕ್;ನಿಮ್ಮ ಮ್ಯಾಚ್ ವಾಸ್ತು ಅನುಭವ ಚೆನ್ನಾಗಿದೆ.ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.ನಮಸ್ಕಾರ.

    ReplyDelete
  24. ಬಾಲೂ ಸರ್;ನಿಮ್ಮ ಅನುಭವವೂ ಮಜವಾಗಿದೆ.ಒಂದಲ್ಲ ಒಂದು ಸಲ ಎಲ್ಲರಿಗೂ ಇಂತಹ ಅನುಭವಗಳಾಗಿರುತ್ತವೆ.ಅಲ್ಲವೇ?ನಿಮಗೂ,ನಿಮ್ಮ ಕುಟುಂಬದವರಿಗೂ ಹೊಸ ವರ್ಷದ ಶುಭಾಶಯಗಳು.ನಮಸ್ಕಾರ.

    ReplyDelete
  25. Sir, kelavu dina barade iddiddakke sorry

    Enthaha match, kannu tumbi hoyitu

    nimma barahavanna match gedda mele odida hagaytu

    innu mele regular agi odtene

    ReplyDelete
  26. ಗುರು ಸರ್;ನಿಮ್ಮಂತಹ ಗೆಳೆಯರಿಗಾಗಿಯೇ ಈ ಬ್ಲಾಗ್.ನೀವೆಲ್ಲಾ ಓದಿ ಖುಶಿ ಪಟ್ಟರೇನೆ ಅದರ ಸಾರ್ಥಕತೆ.ಬರುತ್ತಿರಿ.ಇದು ನಿಮ್ಮ'ಮನೆ'.ನಮಸ್ಕಾರ.

    ReplyDelete
  27. ಕೃಷ್ಣಮೂರ್ತಿಯವರೆ...

    ಎಂಥೆಂಥಹ ಅನುಭವಗಳು...!

    ಈ ಕ್ರಿಕೆಟ್ ನನಗೂ ಅಂಥಹ ಫಜೀತಿ ತಂದಿಟ್ಟಿತ್ತು...

    ನಾವು ಕಾಲೇಜಿಗೆ ಹೋಗುವಾಗ ಆಸ್ಟ್ರೇಲಿಯಾದಲ್ಲಿ ಒಂದು ಟೂರ್ನಮೇಂಟ್...
    ನಾವು ಗೆಳೆಯರೆಲ್ಲ ಕಾಮೆಂಟ್ರಿ ಕೇಳುತ್ತಿದ್ದೇವು..

    ಮಧ್ಯದಲ್ಲಿ ನಾನು ಟಾಯ್ಲೆಟ್ಟಿಗೆ ಹೋಗಬೇಕಾಯಿತು..

    ನಾನು ಟಾಯ್ಲೆಟ್ಟಿನ ಒಳಗೆ ಹೋದ ನಂತರ ರವಿಶಾಸ್ತ್ರಿ ಬ್ಯಾಟಿಂಗ್ ಮಾಡ್ತಿದ್ದ...

    ನನ್ನ ಗೆಳೆಯರು
    "ಪುಣ್ಯಾತ್ಮಾ..
    ನೀ ಅಲ್ಲೇ ಇರು..."
    ಅಂತ ಸುಮಾರು ಮುಕ್ಕಾಲು ಗಂಟೆ ಅಲ್ಲೇ ಕೂಡಿ ಹಾಕಿದ್ದರು !!

    ರವಿ ಶಾಸ್ತ್ರಿ ತುಂಬಾ ಸ್ಲೋ ಬ್ಯಾಟಿಂಗು... ಹ್ಹಾ.. ಹ್ಹಾ.. !

    ಹಳೆಯ ನೆನಪು ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸು....

    ReplyDelete
  28. ಹ್ಹ ಹ್ಹ ಹ್ಹ ...ಚೆನ್ನಾಗಿದೆ ....

    ಮೊನ್ನೆ ಮ್ಯಾಚ್ ನೋಡುತ್ತಾ ಇರುವಾಗ ಸಚಿನ್ ಔಟ್ ಆದ ತಕ್ಷಣ ನನ್ wife ಹೇಳಿದಳು.....ಟಿ.ವಿ. off ಮಾಡಿ ಸ್ವಲ್ಪ ಹೊತ್ತು ಸುಮ್ಮನೆ ಇರಿ...ಇಲ್ಲಾ ಅಂದ್ರೆ ಇನ್ನೂ ಬೇಗ ಬೇಗ ವಿಕೆಟ್ಗಳು ಹೋಗ್ತಾವೆ ಅಂತ.....

    ReplyDelete
  29. ha ha ha.. ditto situation happend in my office..

    For india pak match, our company made all arrangements to watch it in office. one fellow sit on one chair suddenly sehwag got out. later no one sat on that chair :D

    ReplyDelete

Note: Only a member of this blog may post a comment.