Sunday, April 17, 2011

" ಈ ಕ್ಷಣದಲ್ಲಿ ........ಸಂತಸದಿಂದಿರಿ!!"

ನಮ್ಮೆಲ್ಲಾ ತೊಂದರೆಗಳಿಗೆ ನಮ್ಮ ಮನಸ್ಸು ಈ ಕ್ಷಣದಲ್ಲಿ
ಇಲ್ಲದೆ ಇರುವುದೇ ಕಾರಣ ಎಂಬುದು ಹಲವಾರು
ಆಧ್ಯಾತ್ಮಿಕ ಗುರುಗಳ ಅಭಿಪ್ರಾಯ..................

ಈ ಕ್ಷಣಕ್ಕೆ ಏನೂ ತೊಂದರೆ ಇಲ್ಲದಿದ್ದರೂ ,ಮನಸ್ಸು 
ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನೋ,
ಯಾರೋ ಮಾಡಿದ ಅವಮಾನವನ್ನೋ ನೆನೆ ನೆನೆದು 
ಕುದಿಯುತ್ತಿರುತ್ತದೆ...................ಈ ಕ್ಷಣದಲ್ಲಿ!

ಅಂದರೆ ,ಯಾವುದೂ ಚಿಂತೆ ಇಲ್ಲದೆ ಆರಾಮವಾಗಿ
ಇರಬೇಕಾದ ಮನಸ್ಸು ಬೇಡದ ಯಾವುದೋ ವಿಷಯದ 
ಬಗ್ಗೆ ಪ್ರಕ್ಷುಬ್ಧ ಗೊಂಡು,ಈಗಿನ ಕ್ಷಣವನ್ನು ಹಾಳುಮಾಡುತ್ತಿರುವುದು
ನಮ್ಮ ಗಮನಕ್ಕೆ ಬರುವುದೇ ಇಲ್ಲ!

ಈಗಿನ ಕ್ಷಣದಲ್ಲಿ ಏನೂ ಚಿಂತೆ ಇಲ್ಲದಿದ್ದರೂ,ಕೆಲವೊಮ್ಮೆ 
ನಮ್ಮ ಮನಸ್ಸು ಭವಿಷ್ಯದ ಬಗ್ಗೆಯೂ ಋಣಾತ್ಮಕ 
ಚಿಂತನೆಯಲ್ಲೇ ತೊಡಗಿಸಿಕೊಂಡು ಕೊರಗುತ್ತದೆ.
ನಾನು ಪರೀಕ್ಷೆಯಲ್ಲಿ ಪಾಸಾಗದಿದ್ದರೆ?
ನನಗೆ ಏನಾದರೂ ಅಪಘಾತವಾಗಿ ಬಿಟ್ಟರೆ?
ನಾನು  ಬ್ಯಾಂಕ್ ಲೋನ್ ತೀರಿಸಲಾಗದಿದ್ದರೆ?ನನ್ನ ಖಾಯಿಲೆ 
ವಾಸಿಯಾಗದಿದ್ದರೆ? ಇತ್ಯಾದಿ ,ಇತ್ಯಾದಿ................

ಹಿಂದೆ ನಡೆದ ವಿಷಯದ ಬಗ್ಗೆಯೋ,ಭವಿಷ್ಯದ ಬಗ್ಗೆ 
ಚಿಂತೆಯೋ,ಒಟ್ಟಿನಲ್ಲಿ ಕೊರಗುತ್ತಿರುವುದೇ ಒಂದು 
ಅಭ್ಯಾಸವಾಗಿಬಿಡುವಸಾಧ್ಯತೆ ಇರುವುದರಿಂದ ,ಅರೆ 
ಇದೇನಿದು ನನ್ನ ಜೀವನದಲ್ಲಿಖುಷಿಯೇ ಇಲ್ಲವಲ್ಲಾ !
ಬದುಕು ಎಂದರೆ ಇಷ್ಟೇನಾ!!?ಎನಿಸಬಹುದು.

ಈ  ಕ್ಷಣದಲ್ಲಿ ಮನಸ್ಸು ಏನನ್ನೋ ನೆನೆದು ಚಿಂತಾ ಮಗ್ನ
ವಾಗಿರುವುದರಿಂದ,ಈಗ ಮಾಡುತ್ತಿರುವ ಕೆಲಸವನ್ನು
ಗಮನವಿಟ್ಟು,ಸಂತಸದಿಂದ ಮಾಡುವುದು ಸಾಧ್ಯವಾಗುವುದಿಲ್ಲ!
ಸರಿಯಾಗಿ ಮಾಡದ ಕರ್ಮದ ಫಲವೂ ಸರಿಯಾಗಿ ಇರುವುದಿಲ್ಲ!
ಈ ಕೆಟ್ಟ ಕರ್ಮ ಫಲದ ಬಗ್ಗೆ ಮತ್ತೆ ಮುಂದೊಂದು ದಿನ 
ನೆನೆ ನೆನೆದು ಕೊರಗುತ್ತೇವೆ....................!!!

ಈ ವಿಷವೃತ್ತದಿಂದ ಹೊರ ಬರುವುದು ಹೇಗೆ?
ಈ ಕ್ಷಣದಲ್ಲಿ ನನ್ನ ಮನಸ್ಸು ಸಂತೋಷದಿಂದ ಇದೆಯೇ ,
ಅಥವಾ ಸಂತಸ ಹಾಳು ಮಾಡುವಂತಹ ವಿಷಯದ ಬಗ್ಗೆ 
ಚಿಂತೆ ಮಾಡುತ್ತಲೋ,ಮನಸ್ಸು ನೋಯುವಂತಹ
ವಿಷಯದ ಬಗ್ಗೆ ಯಾರೊಡನೆಯೋಮಾತಾಡುತ್ತಲೋ,ಚರ್ಚೆ
ಮಾಡುತ್ತಲೋ ಇದ್ದೇನೆಯೇ ಅಥವಾ ಅಂತಹ ದೃಶ್ಯಗಳನ್ನು 
 ಟಿ.ವಿ.ಯಲ್ಲಿ ನೋಡುತ್ತಿದ್ದೆನೆಯೇ  ಎಂದು ಆಗಾಗ ಚೆಕ್
ಮಾಡಿಕೊಳ್ಳುವುದೇ ಮಾರ್ಗ.ಇದು ಇಂದಿನ AASTHAA 
ಚಾನೆಲ್ ನಲ್ಲಿ ಬಂದ Awakening with Bramhakumaari's
ಎನ್ನುವ ಕಾರ್ಯ ಕ್ರಮ ದಲ್ಲಿ Sister Shivani  ಹೇಳಿದ ಮಾತು.

ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ತಿಳಿಸಿ.........

23 comments:

  1. ನೂರಕ್ಕೆ ನೂರರಷ್ಟು ಸತ್ಯ..
    ಈ ಕ್ಷಣವನ್ನು ಸ೦ತಸದಾಯಕವಾಗಿ ಕಳೆದರೆ ಮು೦ದಿನ ಕ್ಷಣ ತ೦ತಾನೆ ಸ೦ತಸದಾಯಕವಾಗಿ ಇರುತ್ತದೆ..!

    ವ೦ದನೆಗಳು.

    ReplyDelete
  2. ಡಾಕ್ಟ್ರೆ..

    ಯಾಕೋ ನನ್ನ ಅನಾರೋಗ್ಯದ ಕುರಿತು ಮನಸ್ಸು ಬೇಸರವಾಗಿತ್ತು..
    ಮುದುಡಿತ್ತು..
    ನಿಮ್ಮ ಲೇಖನ ಸಕಾಲಿಕವಾಗಿ ಸಿಕ್ಕಿತು..
    ನಿಜ ..
    ನಾವು ಈಕ್ಷಣದಲ್ಲಿ ಸಂತಸವಾಗಿರಬೇಕು...

    ತುಂಬಾ ಅಗತ್ಯವಾದ ವಿಚಾರವನ್ನು ಬಹಳ ಸರಳವಾಗಿ ತಿಳಿಸಿಕೊಟ್ಟಿದ್ದೀರಿ..

    ನಮಗೆ ಗೊತ್ತಿರುವ ವಿಷಯವಾದರೂ..
    ಶಂಖದಿಂದ ಬಂದರೆ ಮಾತ್ರ ತೀರ್ಥವಲ್ಲವೇ..


    ನಿಜಕ್ಕೂ ಉಪಯೋಗಕಾರಿ..

    ಧನ್ಯವಾದಗಳು..

    ReplyDelete
  3. chinnadantha maatu sir...

    yOga class ge serabeku endukonDidde..
    sakaalikavaagi bantu nimma lekhana..

    ReplyDelete
  4. ಖಂಡಿತ ಸತ್ಯ.. ಆಧ್ಯಾತ್ಮಿಕವಾಗಿ, ಆರ್ಥಿಕವಾಗಿ, ಭಾವನಾತ್ಮಕವಾಗಿ ಯಾವ ದೃಷ್ಟಿಕೋನದಿಂದ ನೋಡಿದರೂ ಈ ಮಾತು ಸರಿದೂಗುತ್ತದೆ!

    ReplyDelete
  5. Sir, This what i remember when i read your post and i think its relevant put here;
    A young man who worried about his final exams and future plans- means he was killing his NOW in the worry of FUTURE- at that time one STATEMENT helped him come out of it.

    He become one among 'Big Four' famous medical professors organized 'Jhon Hopkins School of Medicine'. He become 'Father of modern medicine' and honored with 'Knighted' and his name is
    'Sir William Osler'.

    The statement which triggered all these to happen was said by a essayist and historian 'Thomas Carlyle' and the statement is:

    "Our main business is not to see what lies DIMLY at a distance, but to do what lies CLEARLY at hand".

    Thank you
    Reference: Dale Carnegie's-'How to stop worrying and start living'

    ReplyDelete
  6. Nija sir,

    present moment is important than future.

    olleya vichaara

    ReplyDelete
  7. chukki chittaara madame;present is the only moment we have!Even in the future we will live in that present moment!!

    ReplyDelete
  8. ಪ್ರಕಾಶಣ್ಣ;ಅನಾರೋಗ್ಯವಿದ್ದಾಗ ಸಂತಸದಲ್ಲಿರುವುದು ಕಷ್ಟವಾಗಬಹುದು.ಆದರೆ ಅನಾರ್ರೋಗ್ಯದ ಬಗ್ಗೆ ಅನಾವಶ್ಯಕ ಚಿಂತೆಯನ್ನು ತಡೆದು ಈ ಕ್ಷಣದಲ್ಲಿ ಏನು ಬರುತ್ತದೋ ಅದನ್ನು ಸ್ವೀಕರಿಸುವುದನ್ನು ಕಲಿಯುವುದು better option.ಅಲ್ಲವೇ? ಧನ್ಯವಾದಗಳು.

    ReplyDelete
  9. ದಿನಕರ್;ಎಲ್ಲವೂ ಗೊತ್ತಿದೆ.ಆದರೆ ಅದನ್ನು ಅಳವಡಿಸಿಕೊಂಡು ಬಾಳನ್ನು ಹಸನು ಮಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ.ಅದೇ ಜಾಣತನ.ಅಲ್ಲವೇ?

    ReplyDelete
  10. NRK;Thank you for reminding Sir William Osler's great words.DALE CARNEGIE has mentioned about this in his first chapter 'LIVE IN A DAY TIGHT COMPARTMENT' in his classic book you have mentioned.

    ReplyDelete
  11. Guru sir;The paradox is,even in the future we will be living in the present at that particular moment!so we have only present to live.And let us be composed and peaceful in the present.The future will take care of itself.Regards.

    ReplyDelete
  12. ಪ್ರದೀಪ್ ರಾವ್;ಹೆಚ್ಚಿನ ಮಾಹಿತಿಗಾಗಿ ECKHARDT TOLLE ಯವರ 'ದಿ ಪವರ್ ಆಫ್ ನೌ' ಮತ್ತು ಅವರ ಇತರ ಪುಸ್ತಕಗಳನ್ನೂ ಓದಬಹುದು.ಧನ್ಯವಾದಗಳು.ನಮಸ್ಕಾರ.

    ReplyDelete
  13. ಸಾರ್,
    ಅಸಂತೋಷದ - ಅನಾರೋಗ್ಯದ ಕ್ಷಣಗಳಿಗೆ ಜಾರುತ್ತಿರುವ ಮನಸುಗಳಿಗೆ ಸೂಕ್ತ ಚಿಕಿತ್ಸೆ ನೀಡಿರುವ ನಿಮಗೆ ಕೃತಜ್ಞತೆಗಳು.

    ReplyDelete
  14. ಡಾಕ್ಟ್ರೇ,

    ಸತ್ಯವಾದ ಮಾತು. ಮನಸ್ಸನ್ನು ಚಂಚಲಗೊಳಿಸದೆ ಸುಮ್ಮನಿದ್ದುಬಿಟ್ಟರೆ ಆಯ್ತು..ಉಪಯುಕ್ತ ವಿಚಾರವನ್ನು ತಿಳಿಸಿದ್ದಕ್ಕೆ ಥ್ಯಾಂಕ್ಸ್.

    ReplyDelete
  15. Murthy sir,

    tumbaa upakyukta baraha....

    Ninne ninnege, naale naalege, indu nammde chinte yethake ??? alve ?

    nan blog kade banni...

    ReplyDelete
  16. doctor sir, your words are true. but human mind is like monkey it will spring to branches of past. and irony is we remember people and the unpleasantness caused by them and not the joy we had got from them.

    ReplyDelete
  17. "Enjoy the moment " is the universal word for healthy and successful life . but body lives like as the worries of future is always hidden in every ones mind .. with proper consultation though changes happens and person seems to be happy but at one point of time again he worries .. that's life ..and many are now acquainted to live with it ..

    true lines .. known to all but needs a proper medium to understand ..
    nice article to put up ...

    ReplyDelete
  18. nija sir nimma maatu... oLLe lekhana kottiddeeri thank you

    ReplyDelete
  19. Sir,
    ಅಂತ ಪರಿಸ್ಥಿತಿ ಯಲ್ಲಿ ನಮ್ಮನ್ನು ನಾವು ಯಾವುದಾದರು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು,
    ನನಗೂ ಈ ಥರದ ಸನ್ನಿವೇಶಗಳು ತುಂಬಾ ಬಂದಿವೆ, ಅಂತ ಸಮಯದಲ್ಲಿ ಕೆಲವೊಮ್ಮೆ ಪುಸ್ತಕಗಳು ಅಥವಾ ತೋಟದಲ್ಲಿ ಏನಾದರು ಕೆಲಸ ಆ ಆಲೋಚನೆಗಳನ್ನು ಮರೆಸಿ ಬಿಡುತ್ತಿದ್ದವು...

    ReplyDelete
  20. @N.R.Bhat@shivu@Ashok@Umesh desai @sridhar@Mnanasu madame @gireesh ; ಲೇಖನ ಓದಿ ಸೂಕ್ತ ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.ಪ್ರತ್ಯೇಕವಾಗಿ ಉತ್ತರಿಸಲಾಗುತ್ತಿಲ್ಲ. ಕ್ಷಮೆ ಇರಲಿ.ನಮಸ್ಕಾರ.

    ReplyDelete
  21. ಮೊದಲಿಗೆ ನನ್ನ ಪದ್ಯದ ಬ್ಲಾಗಿಗೆ ಬಂದು ಆಶೀರ್ವಾದದ ಕಮಿಂಟ್ ಹಾಕಿದ್ದಕ್ಕಾಗಿ ಧನ್ಯವಾದ ಡಾಕ್ಟ್ರೇ.

    ನನ್ನ ಈಗಿನ ಡೋಲಾಯಮಾನ ಮನಸ್ಸನ್ನು ನೋಡಿಯೇ, ನೀವು ಈ ಲೇಖನ ಹಾಕಿದ್ದೀರೇನೋ ಅನಿಸಿತು! ಒಳ್ಳೆಯ ಮನೋಚಿಕಿತ್ಸಕ ಲೇಖನ.

    ಹಾಗೆ ನನ್ನ ಬರಹಗಳ ಬ್ಲಾಗಿಗೂ ಬನ್ನಿ:
    www.badari-notes.blogspot.com

    ReplyDelete
  22. Thanks Badari.If what I write is of little help to some one then it is worth while writing.I VISITED YOUR OTHER BLOG.NICE WRITE UP. REGARDS.

    ReplyDelete

Note: Only a member of this blog may post a comment.